Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ !!
- ವಿಶೇಷ ಸಮಾಚಾರ - ಸಂದರ್ಶನ

ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ !!

ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ ನಾಟಕಗಳಾಗಲಿ ಧಾರವಾಹಿಗಳಾಗಲಿ ಸಿನಿಮಾಗಳಾಗಲಿ ಅಥವಾ ಇನ್ನಿತರ ಯಾವುದೇ ಕ್ರಿಯಾಶೀಲ ಉದ್ಯಮದ ಭಾಗವಾಗಿರಲಿ ಅಲ್ಲಿ ರೈಟರ್ ಇಲ್ಲ ಎಂದರೆ ಅಂತಹ ಪ್ರಾಜೆಕ್ಟ್ ತನ್ನ ಯಶಸ್ಸನ್ನ ಗಳಿಸಲಾಗದು ಅನ್ನೋದು ಸಾರ್ವಕಾಲಿಕ ಸತ್ಯ, ಸಮಾಜವನ್ನು ತಿದ್ದುವ ಕೆಲಸ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುವ ಕೆಲಸ ದುಷ್ಟರನ್ನು ಸರಿ ದಾರಿಗೆ ತರುವ ಕೆಲಸ ಸಾಧಕರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವ ಕೆಲಸ ಯುವಕ ಯುವತಿಯರಿಗೆ ಪ್ರೋತ್ಸಾಹಿಸುವ ಕೆಲಸ ಇಂತಹ ಹಲವಾರು ಪ್ರೇರಣಾದಾಯಕ ಕೆಲಸಗಳನ್ನು ಮನೋರಂಜನೆಯ ಮೂಲಕ ಅಥವಾ ಇನ್ನಿತರ […]

ರೈಟರ್ ಎಲ್ಲವನ್ನು ನಿರ್ಧರಿಸಬಲ್ಲ

ನಾಟಕಗಳಾಗಲಿ ಧಾರವಾಹಿಗಳಾಗಲಿ ಸಿನಿಮಾಗಳಾಗಲಿ ಅಥವಾ ಇನ್ನಿತರ ಯಾವುದೇ ಕ್ರಿಯಾಶೀಲ ಉದ್ಯಮದ ಭಾಗವಾಗಿರಲಿ ಅಲ್ಲಿ ರೈಟರ್ ಇಲ್ಲ ಎಂದರೆ ಅಂತಹ ಪ್ರಾಜೆಕ್ಟ್ ತನ್ನ ಯಶಸ್ಸನ್ನ ಗಳಿಸಲಾಗದು ಅನ್ನೋದು ಸಾರ್ವಕಾಲಿಕ ಸತ್ಯ,

ಸಮಾಜವನ್ನು ತಿದ್ದುವ ಕೆಲಸ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುವ ಕೆಲಸ ದುಷ್ಟರನ್ನು ಸರಿ ದಾರಿಗೆ ತರುವ ಕೆಲಸ ಸಾಧಕರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುವ ಕೆಲಸ ಯುವಕ ಯುವತಿಯರಿಗೆ ಪ್ರೋತ್ಸಾಹಿಸುವ ಕೆಲಸ ಇಂತಹ ಹಲವಾರು ಪ್ರೇರಣಾದಾಯಕ ಕೆಲಸಗಳನ್ನು ಮನೋರಂಜನೆಯ ಮೂಲಕ ಅಥವಾ ಇನ್ನಿತರ ಸಣ್ಣಪುಟ್ಟ ಕಥೆಗಳ ಮೂಲಕ ಬದಲಾವಣೆ ತರುವ ಕೆಲಸವಿದೆಯಲ್ಲ ಅದು ನಿಜವಾದ ಪುಣ್ಯದ ಕೆಲಸ,

ಇಂತದ್ದೊಂದು ಅಪರೂಪದ ಅವಿಸ್ಮರಣೀಯ ಕೆಲಸ ಮಾಡುವಂತಹ ವರ್ಗವೇ ಬರಹಗಾರರ ವರ್ಗ ಅದು ರೈಟರ್ ಗಳ ವರ್ಗ ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಬಹುದು.

ಎಲ್ಲರೂ ಪ್ರಯತ್ನವನ್ನು ಮಾಡಿದರೆ ಎಲ್ಲವನ್ನು ಮಾಡಬಹುದು ಆದರೆ, ಎಲ್ಲರೂ ಬರಹಗಾರರಾಗೋದಕ್ಕೆ ಸಾಧ್ಯವಿಲ್ಲ ಅದಕ್ಕೆ ಸ್ವತ: ಶಾರದಾ ಮಾತೆಯ ದಿವ್ಯ ಕೃಪೆ ಇರಬೇಕು,

ಬರಹಗಾರನೊಬ್ಬ ಮನಸ್ಸು ಮಾಡಿದರೆ ಏನನ್ನು ಬೇಕಾದರೂ, ತಾನು ಬರೆಯುವ ಕಥೆಗಳ ಮೂಲಕ ಪಾತ್ರಗಳ ಮೂಲಕ ಸೃಷ್ಟಿಸಬಲ್ಲ ಹಾಗೆ ಜಾದು ಕೂಡ ಮಾಡಬಲ್ಲ,
ಅಷ್ಟೇ ಯಾಕೆ ಆತನೇ ಎಲ್ಲವೂ ಆಗಬಲ್ಲ.

1934ರಲ್ಲಿ ಬಂದಂತಹ ಸತಿ ಸುಲೋಚನಾ ಚಿತ್ರದ ಮುನ್ನ ಇದ್ದಂತಹ ಹಾಗೂ ಇವತ್ತಿಗೂ ಇರುವ ಬರಹಗಾರರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು.

ಸತಿ ಸುಲೋಚನಾ ಆಗಿದ್ದು ಬರಹಗಾರರಿಂದ,
ಬಂಗಾರದ ಮನುಷ್ಯ ಆಗಿದ್ದು ಬರಹಗಾರರಿಂದ,
ನಾಗರಹಾವು ಆಗಿದ್ದು ಬರಹಗಾರರಿಂದ,
ಮುಂಗಾರು ಮಳೆ ಆಗಿದ್ದು ಬರಹಗಾರರಿಂದ,
ಟಗರು ಆಗಿದ್ದು ಬರಹಗಾರರಿಂದ,
ಕೆಜಿಎಫ್ ಕಾನ್ತಾರೆ ಸೇರಿ ಎಲ್ಲ ಚಿತ್ರಗಳು ಆಗಿದ್ದು ಬರಹಗಾರರಿಂದಲೇ,
ಬರಹಗಾರನೊಬ್ಬ ಮನಸ್ಸು ಮಾಡಿದರೆ ಅದ್ಭುತವಾದದ್ದನ್ನು ಸೃಷ್ಟಿಸಬಲ್ಲ ಎಂತದ್ದೇ ಮಹಾಯುದ್ಧ ಬಂದರು ಗೆಲ್ಲುತ್ತೇವೆ ಎಂಬ ಹಠವನ್ನ ಮನಸ್ಸಲ್ಲಿ ತುಂಬಿಸಬಲ್ಲ ಪ್ರಪಂಚದ ಎಲ್ಲ ಬರಹಗಾರರಲ್ಲೂ ಇಂಥದ್ದೊಂದು ಸ್ಪಾರ್ಕ್ ಇದ್ದೇ ಇರುತ್ತದೆ.

ರೈಟರ್ಸ್ ಯಾವತ್ತೂ ರೈಟ್

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.