ಕೌಂತೇಯ ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ
ಅಚ್ಯುತ ಕುಮಾರ್. ತ್ರಿಬಲ್ ಸ್ಟಾರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಾಗೂ ನಿವೃತ್ತಿಯ ಹಂತದಲ್ಲಿರುವ
ಪೊಲೀಸ್ ಅಧಿಕಾರಿಯ ಜೀವನದಲ್ಲಿ ನಡೆಯುವ ಕುತೂಹಲದ ಘಟ್ಟವನ್ನು,ತುಂಬಾ ಇಂಟ್ರೆಸ್ಟಿಂಗ್ ಆಗಿ ಹೇಳಲಾಗಿದೆ.ಎಂದು ಇಂದು ನಡೆದ ಕೌಂತೇಯ ಪತ್ರಿಕಾ ಗೋಷ್ಠಿಯಲ್ಲಿ ನಟ ಅಚ್ಯುತ್ ಕುಮಾರ್ ಹೇಳಿಕೊಂಡರು.

ಇಂಡಸ್ಟ್ರಿಗೆ ಬಂದಾಗಿನಿಂದಲೂ ಇಲ್ಲಿಯ ತನಕ ನಾಯಕ ನಟನಾಗಿಯೇ ಕೆಲಸ ಮಾಡಿರೋ ನನಗೆ,ನಿರ್ದೇಶಕ ಚಂದ್ರಹಾಸ ನನ್ನನ್ನ ವಿಲನ್ ಆಗಿ ಕಲ್ಪನೆ ಮಾಡಿ ಕಥೆ ಮಾಡಿದ್ದೆ ನನಗೆ ತುಂಬಾ ಮಜವಾದ ಪಾತ್ರ ಅನ್ನಿಸ್ತಿದೆ,
ಮನೋರಂಜನ್ ವಿಲನ್ ಆಗಿ ಯಾಕ್ ಮಾಡಬಾರದು ಅನ್ನೋ ಪ್ರಶ್ನೆ ನಾನು ಹಾಕಿಕೊಂಡಿದ್ದೆ,
ಫೈನಲಿ ಕಲಾವಿದರು ಎಲ್ಲ ತರಹದ ಪಾತ್ರಕ್ಕೆ ಒಗ್ಗುವುದನ್ನು ಕಲಿಯಬೇಕು ಅನ್ನೋದು ಮನು ಮಾತಾಗಿತ್ತು..

ಇನ್ನು ಕೌಂತೇಯ ಚಿತ್ರದ ನಿರ್ದೇಶಕ ಚಂದ್ರಹಾಸ ಮಾತನಾಡಿ, ಇದೊಂದು ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಚಿತ್ರ, ಕಥೆ ಚಿತ್ರಕಥೆ ಸಂಭಾಷಣೆಯಲ್ಲಿ ಬಿಗಿಯಾದ ಹಿಡಿತ ಇರುವುದರಿಂದ ನೋಡುಗರಿಗೆ ಯಾವುದೇ ಕಾರಣಕ್ಕೂ ಚಿತ್ರದ ಮೂಲವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ ಎಂದರು.

ಬಹಳ ದಿನಗಳ ನಂತರ ಕ್ಯಾಮೆರಾ ಕಣ್ಣಿಗೆ ಬಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್, ಕಲಾವಿದರಿಗೆ ಅಪರೂಪದ ಪಾತ್ರಗಳು ಸಿಗುವುದು ತುಂಬಾ ಅಪರೂಪ, ಅಂತಹದರಲ್ಲಿ ಸವಾಲಿನ ಪಾತ್ರ ಮಾಡಲು ಸಿಕ್ಕಾಗ,ನಾವು ಅಷ್ಟೇ ಪ್ರಾಮಾಣಿಕವಾಗಿ ಮಾಡಿದಾಗ ಕಥೆ ಬರೆದ ನಿರ್ದೇಶಕರಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂಬುದು ಪ್ರಿಯಾಂಕಾ ತಿಮ್ಮೇಶ್ ಮಾತಾಗಿತ್ತು, ಹಾಗೆ ಇನ್ನೊಂದು ವಿಶೇಷ ಪಾತ್ರದಲ್ಲಿ ನಟಿ ನೀತು ವನಜಾಕ್ಷಿ ಕೂಡ ಇದ್ದಾರೆ.ಇನ್ನು ಮುಂದಿನ ದಿನಗಳಲ್ಲಿ ಕೌಂತೇಯ ಚಿತ್ರದ ಮತ್ತಷ್ಟು ಅಪ್ಡೇಟ್ಗಳು ಸಿಗಲಿವೇ ಎಂಬುದು ಚಿತ್ರತಂಡದ ಅಭಿಪ್ರಾಯವಾಗಿತ್ತು
ರವೀ ಸಾಸನೂರ್

