ಉಷಾ ಭಂಡಾರಿ ಯವರನ್ನು ಮಾತನಾಡಿಸುವುದಕ್ಕೂ ಮುಂಚೆ ದೀಕ್ಷಿತ್ ಶೆಟ್ಟಿ ಮಾಡುವ ಕೆಲಸ ಬಂಡಾರಿಯವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು,
ದೀಕ್ಷಿತ್ ಶೆಟ್ಟಿ ಭಂಡಾರಿ ಅವರ ಮಾನಸ ಪುತ್ರ ಎಂದರೆ ತಪ್ಪಿಲ್ಲ, ರಂಗಭೂಮಿ ಕಿರುತೆರೆ ಹಾಗೂ ಸಿನಿಮಾ ನಟಿ ಉಷಾ ಭಂಡಾರಿ ಅವರು ನಡೆಸುತ್ತಿದ್ದ ನಟನೆಯ ಕ್ಲಾಸಿಗೆ ಹೋಗುತ್ತಿದ್ದ ದೀಕ್ಷಿತ್ ಶೆಟ್ಟಿ ಸಮಯ ಕಳೆದಂತೆ ಆತ ನಿಧಾನವಾಗಿ ಉಷಾ ಭಂಡಾರಿಯವರ ಮನೆಯ ಖಾಯಂ ಸದಸ್ಯನಾಗಿ ಬಿಟ್ಟ, ಉಷಾ ಭಂಡಾರಿ ಅವರ ಪ್ರಕಾರ ದೀಕ್ಷಿತ್ ಶೆಟ್ಟಿ, ಮಗನು ಹೌದು ಹಾಗೂ ಅವರ ವಿದ್ಯಾರ್ಥಿಯು ಹೌದು, ದೀಕ್ಷಿತ್ ನಿರ್ಮಾಣ ಮಾಡಿರುವ ವಿಡಿಯೋ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ಅಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಶಬಂಡಾರಿಯವರು ಮಾತನಾಡುತ್ತ ಕನ್ನಡ ಚಿತ್ರರಂಗದ ಅಭಿಮಾನಿ ದೇವರುಗಳ ಹೃದಯ ಶ್ರೀಮಂತಿಕೆಯ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ದೀಕ್ಷಿತ್ ಶೆಟ್ಟಿ ವೇದಿಕೆ ಮೇಲೆ ಹೇಳಿದ ಮಾತುಗಳು, ಅದರಲ್ಲೂ ಅಂಡರ್ ಲೈನ್ ಮಾಡಿ ಹೇಳುವುದಾದರೆ,
ಹದಿಮೂರು ವರ್ಷಗಳ ಹಿಂದೆ, ತಾನು ಇಂಡಸ್ಟ್ರಿಗೆ ಬಂದಾಗಲೇ ಕ್ಲಾರಿಟಿ ಇತ್ತು,ಆದರೆ ನಾನು ಆಕ್ಟರ್ ಆಗ್ಬೇಕು ಅಂತಾ ಕನಸು ಇದ್ದಿದ್ದರಿಂದ ಅದಕ್ಕೆ ತಕ್ಕಂತೆ ನಾನು ತುಂಬಾ ನಟನೆಯಲ್ಲಿ ಬ್ಯುಸಿ ಆದೆ, ರಂಗಭೂಮಿಗಾಗಿ ದುಡಿದೆ ಹಾಗೆ ಕಿರುತೆರೆಯಲ್ಲಿ ನಟಿಸುತ್ತಾ ತುಂಬಾ ಜನಪ್ರಿಯತೆ ಕೂಡ ನಾನು ಪಡೆದುಕೊಂಡೆ, ಸಧ್ಯ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳಲ್ಲಿ ನಟಿಸ್ತಾ ಇರೋ ನನಗೆ ಕನ್ನಡದಲ್ಲಿ ಅತ್ಯಂತ ಶ್ರೇಷ್ಠ ಸಿನಿಮಾಗಳನ್ನು ನಿರ್ಮಾಣ ಮಾಡುವಾಸೆ ಹಾಗೆ ಅವುಗಳಲ್ಲಿ ನಟನೆ ಮಾಡುವುದು ಕೂಡ ನನ್ನ ಆಸೆ, ಯಾಕೆಂದರೆ
ನಾನೊಬ್ಬ ಕನ್ನಡಿಗೆ,ಕನ್ನಡ ಭಾಷೆ ಮೇಲೆ ಅತಿಯಾದ ಪ್ರೀತಿ ಗೌರವ ಇದೇ.
ವಿಡಿಯೋ ಟ್ರೈಲರ್ ಲಾಂಚ್ ಇವೆಂಟ್ನ ನಡುವೆ ನಾಯಕ ನಿರ್ಮಾಪಕ ದೀಕ್ಷಿತ್ ಶೆಟ್ಟಿ ಮತ್ತು ಇನ್ನೊಬ್ಬ ಕಲಾವಿದ ಸಿದ್ದು ಮೂಲಿಮನಿ ಇಬ್ಬರು ಸೇರಿ ಕಾಂಬಿನೇಷನ್ ನಲ್ಲಿ ಮಾಡಿದ ನಿರೂಪಣೆ ಸೊಗಸಾಗಿತ್ತು. ಅವರಿಬ್ಬರ ಮಾತುಗಳಲ್ಲಿ ಕನ್ನಡ ಸಿನಿಮಾಗಳ ತಯಾರಿಕೆ ಪ್ರೇಕ್ಷಕರು ಥಿಯೇಟರಿಗೆ ಬರುತ್ತಿರುವ ಬಗ್ಗೆ ಹಾಗೂ ಥಿಯೇಟರ್ ನಲ್ಲಿ ಕೆಲಸ ಮಾಡುವ ಎಲ್ಲ ತರಹದ ಕುಶಲಕರ್ಮಿಗಳ ಬದುಕಿಗೆ ಹತ್ತಿರವಾಗುವಂತಹ ಮಾತಾಡಿದ್ದು ಎಲ್ಲರ ಮನಮುಟ್ಟುವಂತಿತ್ತು.
ನಟನಾಗಿ ಸ್ವಲ್ಪ ಹಣ ಮಾಡಿ ನಿಧಾನವಾಗಿ ಸಿನಿಮಾ ನಿರ್ಮಾಣ ಮಾಡಬಹುದಿತ್ತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೀಕ್ಷಿತ್ ಶೆಟ್ಟಿ,
ನಾನು ಇಂಡಸ್ಟ್ರಿಗೆ ಬಂದಾಗ ನನಗೆ ಯಾರೂ ಗಾಡ್ ಫಾದರ್ ಇರ್ಲಿಲ್ಲ,ಅಂತಹ ಹಣದ ಸಪೋರ್ಟ್ ಯಾರಿಂದನು ನನಗೆ ಸಿಕ್ಕಿಲ್ಲ..ನನಗೆ ಪ್ಲಾನ್ B ಇಲ್ಲ,ನನಗೆ ಗೊತ್ತಿರೋದು ಸಿನಿಮಾ ಮಾತ್ರ,ರಂಗಭೂಮಿ, ಕಿರುತೆರೆ,ಸಿನಿಮಾ ನನಗೆ ಹಣ ಹೆಸರು ಎಲ್ಲವನ್ನೂ ಕೊಟ್ಟಿದೆ,ಹೀಗಾಗಿತೆಲುಗು,ತಮಿಳು,
ಮಲಯಾಳಂ ಹೀಗೆ ಎಲ್ಲ ಭಾಷೆಗಳಲ್ಲಿ ನಟನೆ ಮಾಡ್ತಾ ಇದ್ದೀನಿ,ಬ್ಯುಸಿ ಆಗಿದ್ದೀನಿ,ಆದ್ರೂ ಕನ್ನಡ ನನ್ನ ಮಾತೃಭಾಷೆ, ಹೀಗಾಗಿ ಕನ್ನಡ ಸಿನ್ಮಾ ನಿರ್ಮಾಣ ಮಾಡಿದೆ.. ನಮ್ಮ ವಿಡಿಯೋ ಚಿತ್ರದಲ್ಲಿ ನಟಿಸಿದ ಎಲ್ಲಕಲಾವಿದರು ನಟಿಸುತ್ತಲೇ..
ನಮ್ಮ ಜೊತೆ ನಿರ್ಮಾಣದ ಪ್ರತಿ ಹಂತದಲ್ಲೂ ಕೆಲಸ ಮಾಡಿದ್ದಾರೆ ಎಂದು ಎಲ್ಲರ ಸಹಾಯ ನೆನೆದರು, ಇನ್ನು ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ,ಮೂಲತಹ ನಾನೊಬ್ಬ ರಂಗಭೂಮಿ ಕೆಲಸಗಾರ ಹಾಗೆ ಒಬ್ಬ ಬರಹಗಾರ, ನನ್ನ ನಿರ್ದೇಶನದ ಬ್ಲಿಂಕ್ ಚಿತ್ರಕ್ಕೆ ಸಿಕ್ಕಂತಹ ಪ್ರತಿಕ್ರಿಯೆಯಿಂದ ನಾನು ಮತ್ತೆ ಕೆಲಸ ಮಾಡಲು ಸಹಾಯವಾಯಿತು ಅದರ ನಂತರ ನಾನು ಮಾಡಿದ್ದು Z5 ಗಾಗಿ ಜೆರಾಕ್ಸ್ ಎಂಬ Web Series ಅದರ ನಂತರ ಶುರುವಾಗಿದ್ದೆ ದೀಕ್ಷಿತ್ ಶೆಟ್ಟಿ ನಿರ್ಮಾಣದ ವಿಡಿಯೋ ಚಿತ್ರ.
ಇದೊಂದು ಬ್ಲಾಗರ್ ಜೀವನಶೈಲಿಯನ್ನ ಆಧರಿಸಿದ ಚಿತ್ರ, ಇದರ ಟೈಟಲ್ ಆಗಿ vlag ಅಂತ ಇಡಬೇಕು ಅಂತ ಪ್ಲಾನ್ ಮಾಡಿದ್ದೆ
ನಮ್ಮ ಅಮ್ಮನಿಗೆ Vlog ಟೈಟಲ್ ಇಷ್ಟ ಆಗಲಿಲ್ಲ,
So Video ಅಂತಾ ಟೈಟಲ್ ಇಟ್ಟೆ..ರಿಯಲ್ ಇನ್ಸಿಡೆಂಟ್ ಕನೆಕ್ಟ್ ಆಗತ್ತೆ,ಫೌಂಡ್ ಫೂಟೇಜ್ ಇಟ್ಕೊಂಡು ಇಂತ ಪ್ರಯತ್ನ ಮಾಡೋದು ಬಹಳ ರಿಸ್ಕ್ ಫ್ಯಾಕ್ಟರ್,ಇಲ್ಲಿ ಟ್ರೈ ಮಾಡಿದ್ದೀವಿ ಎಂದು ತಾವು ಮಾಡಿದ ಕಂಟೆಂಟ್ ಮೇಲೆ ತಮಗಿರುವ ನಂಬಿಕೆಯ ಭರವಸೆಗಳ ಬಗ್ಗೆ ಮಾತನಾಡಿ ಎಲ್ಲರು, ವಿಡಿಯೋ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ಕೇಳಿಕೊಂಡರು.
ರವೀ ಸಾಸನೂರ್ MasterNews365.Com

