Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ವೇದ – ಪುರಾಣ – ಶಾಸ್ತ್ರ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ವೇದ – ಪುರಾಣ – ಶಾಸ್ತ್ರ

ಪ್ರಪಂಚ ಹೆಂಗ ಮಾಡಬೇಕು ಅಂತ ನಿಜಗುಣರು ಹೇಳುತ್ತಾರೆ – “ನಂಬು ಜ್ಞಾನವನೇ ಕರ್ಮವೆಂಬ ಜಾಲದುಳು ಸಿಲ್ಕಿ ಹಂಬಲಿಸದಿರು ಮುಕ್ತಿಯಂ ಬಯಸಿ ಮನುಜಾಆಗಮ, ಪುರಾಣ ವೇದ ಪದಗಳು ವಿಧಿಸಿದಯಾಗದಾನ ಜಪನೀತಿ ಯೋಗ ಪೂಜಾದಿಗಳುಈಗ ಜ್ಞಾನೋದಯ ಮಾತ್ರ ವಾಗಲದರೊಳು ಕೋಟಿ ಭಾಗೆಯೊಂದಕ್ಕೆ ಸಮಾನಾಗುತ್ತಿರುವದರಿಂದ “ ಈಗ 28 ಆಗಮಗಳು ಅದಾವು. 18 ಪುರಾಣಗಳು ಅದಾವು. ಆರು ಶಾಸ್ತ್ರಗಳು ಅದಾವು. ಇವೆಲ್ಲ ಹೇಳಿ ಭಾರಿ ಶಾಣೆ ಪಂಡಿತ ಅನ್ನಿಸಿಕೊಳ್ಳಬಹುದು. ನಮಗೆ ಜರಾ ಜ್ಞಾನಾದ್ರ … ಒಂದು ಕೂದಲು ಎಳಿ ನೂರು ಭಾಗ […]

ಪ್ರಪಂಚ ಹೆಂಗ ಮಾಡಬೇಕು ಅಂತ ನಿಜಗುಣರು ಹೇಳುತ್ತಾರೆ –

“ನಂಬು ಜ್ಞಾನವನೇ ಕರ್ಮವೆಂಬ ಜಾಲದುಳು ಸಿಲ್ಕಿ ಹಂಬಲಿಸದಿರು ಮುಕ್ತಿಯಂ ಬಯಸಿ ಮನುಜಾ
ಆಗಮ, ಪುರಾಣ ವೇದ ಪದಗಳು ವಿಧಿಸಿದ
ಯಾಗದಾನ ಜಪನೀತಿ ಯೋಗ ಪೂಜಾದಿಗಳು
ಈಗ ಜ್ಞಾನೋದಯ ಮಾತ್ರ ವಾಗಲದರೊಳು ಕೋಟಿ ಭಾಗೆಯೊಂದಕ್ಕೆ ಸಮಾನಾಗುತ್ತಿರುವದರಿಂದ “

  ಈಗ 28 ಆಗಮಗಳು ಅದಾವು. 18 ಪುರಾಣಗಳು ಅದಾವು. ಆರು ಶಾಸ್ತ್ರಗಳು ಅದಾವು. ಇವೆಲ್ಲ ಹೇಳಿ ಭಾರಿ ಶಾಣೆ ಪಂಡಿತ ಅನ್ನಿಸಿಕೊಳ್ಳಬಹುದು. ನಮಗೆ ಜರಾ ಜ್ಞಾನಾದ್ರ ... ಒಂದು ಕೂದಲು ಎಳಿ ನೂರು ಭಾಗ ಸೀಳಿದರ  ಒಂದು ಭಾಗ ಎಷ್ಟು ಸೂಕ್ಷ್ಮ ಐತಿ ಅಷ್ಟಕ್ಕೂ ಇವು ಸರಿ ಆಗೋದಿಲ್ಲ ಜ್ಞಾನಕ. ಹಂಗ ಜ್ಞಾನ ಮಾಡಿಕೊಂಡರೆ ಆ ಸಂಸಾರ ಏನು ಮಾಡೋದಿಲ್ಲ ನಮಗ. ಅದನ್ನ ನಾವು ಹಚ್ಚಿಕೊಂಡರೆ ಅದು ನಮಗೆ ದುಃಖ ಮಾಡುತ್ತದೆ. ಏನ ಬೇಕಾದ್ದು ಬರ್ತದ ಹೋಗಬೇಕಾಗಿದ್ದು ಹೋಗ್ತದ. ನಾವು ಇಲ್ಲಿ ಬರಾಗ ಏನೂ ತಂದಿಲ್ಲ, ಹೋಗಾಗೂ ಏನೂ ಒಯ್ಯುವುದಿಲ್ಲ. "

  "ಬರದೇ ಸಿರಿಯನ್ನು ಬಯಸಿ ಬಳಲಿ ಬಾಯಾರದಿರೋ ಮರುಳೆ ಪೂರ್ವದೊಳು ಶಿವನಲ್ಲಿ ಬೇಡಿ ತರದೆ . " 
  ಯಾರ್ದರ ಸಂಪತ್ತು ನೋಡಿ, ಯಾರದರ ಕಾರು ಅಂತಸ್ತು ನೋಡಿ, ನಮಗಿರಲಿ ಅಂತ ಬಳಲಿ ಸಾಯಬ್ಯಾಡ. ಪೂರ್ವದಲ್ಲಿ ಶಿವನ ಬೇಡಿ ತರಲಾರದೆ ನಾವು ಹಿಂದೆ ದಾನ, ಧರ್ಮ, ಪರೋಪಕಾರ ಮಾಡಿದ್ರ ಈ ಜನ್ಮದಾಗ ಶ್ರೀಮಂತರ ಉದರ ದೊಳಗ ಜನನವಾಗುತ್ತದೆ. ಒಳ್ಳೆಯ ಜ್ಞಾನ ಬರುತ್ತದೆ. ಮತ್ತು ಒಳ್ಳೆಯ ಮಕ್ಕಳು ಹುಟ್ಟುತ್ತವೆ . ಒಳ್ಳೆಯ ಹೆಂಡತಿ ಸಿಗುತ್ತಾಳೆ. "

“ದೊರೆಗಳೆಲ್ಲರೂ ಮೊದಲು ಪುಣ್ಯಗಳ ಮಾಡದಲೇ ಸಿರಿಯನ್ನುಂಬರೇ, ಬಡವರಘವೇಸಗದೆ ತಿರುದು ತಿಂಬರೆ “

  ಈ ದೊರೆಗಳೆಲ್ಲ ಆಳತಾರ, ರಾಜಕೀಯ ಮಾಡ್ತಾರ ಅವ್ರು ಬಡತನ ಊಣಬೇಕಾಗಿತ್ತು. ಆದರೆ ಅವರು ಪುಣ್ಯ ಮಾಡ್ಯಾರ ಅದಕ್ಕೆ ರಾಜಕೀಯ ಮಾಡ್ತಾರ , ನಮ್ಮನ್ನು ಆಳುತ್ತಾರ. "

  " ತಿಳಿದು ತಿಂದರೆ ಶಿವಗೆ ಪಕ್ಷಪಾತಗಳುಂಟೆ ?
   ಬರಿ ಆ ಚೀಲದೊಳು ಕೈ ಇಕ್ಕಲೇನಹುದು ? "

   "ಎಷ್ಟೋ ಜನ ತಿರಕೊಂಡು ಅಂದ್ರೆ ಭಿಕ್ಷೆ ಬೇಡಿಕೊಂಡು ತಿಂತಾರ, ಅವರನ್ನು ಶಿವನೇ ಹುಟ್ಟಿಸ್ಯಾನ , ಇವರನ್ನು ಶಿವನೇ ಹುಟ್ಟಿಶಾನು ..  ಇದರಲ್ಲಿ ಏನು ಪಕ್ಷಪಾತ ಐತೇನು ?ಬರಿಯ ಚೀಲದೊಳು ಕ್ಕೆ ಇಕ್ಕತೇನಹುದು. "

" ನಾವು ಹಿಂದೆ ಎಲ್ಲಾ ಖಾಲಿ ಮಾಡಿ ಬಿಟ್ಟಿ ವಿ . ಯಾರು ಉಂಡ್ರು ಸೇರಿಲ್ಲ ಉಟ್ರು ಸೇರಿಲ್ಲ . ನಾವು ಕಾಯಾ, ವಾಚಾ,ಮನಸಾ ಪರಿಶುದ್ಧವಾಗಿ ಉಳಿಸಿಕೊಂಡಿಲ್ಲ . ಇನ್ನೊಬ್ಬರ ತರಹ ಆಗಬೇಕೆಂದರೆ ಹೇಗೆ ಸಿಗುತ್ತದೆ. ಅದಕ್ಕೆ ನಾವು ಏನು ಕಟ್ಕೊಂಡು ಬಂದಿವಿ ಅದನ್ನು ಉಂಡು ಹೋಗಬೇಕಾಗಿದೆ.

ಮುಂದುವರಿಯುತ್ತದೆ …

H R ಬಾಗವಾನ ಲೇಖಕರು


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.