Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಪ್ರೀತಂ ಗುಬ್ಬಿ ಈಸ್ ಬ್ಯಾಕ್….!!
- ವಿಶೇಷ ಸಮಾಚಾರ - ಸಿನಿಮಾ

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!!

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!! ಸಿನಿಮಾಗೆ ಕಥೆಗಾರ ಎಷ್ಟು ಮುಖ್ಯವಾಗುತ್ತಾನೆ ?? ಯಾವುದೇ ನಾಟಕವಾಗಲಿ ಯಾವುದೇ ಧಾರವಾಹಿಯಾಗಲಿ ಯಾವುದೇ ಡಾಕ್ಯುಮೆಂಟರಿ ಆಗಲಿ ಯಾವುದೇ ಒಂದು ಸಿನಿಮಾವಾಗಲಿ ಅಥವಾ ಯಾವುದೇ ಒಂದು ಕಂಟೆಂಟ್ ಕಥಾ ರೂಪದಲ್ಲಿ ಪ್ರೇಕ್ಷಕರಿಗೆ ನೋಡುವಂತಾಗಬೇಕಾದರೆ ಒಬ್ಬ ಕಥೆಗಾರ ಅತ್ಯಂತ ಶ್ರೇಷ್ಠ ಮಟ್ಟದ ಪಾತ್ರವನ್ನು ವಹಿಸುತ್ತಾನೆ. ಕಥೆ ಇಲ್ಲದೆ ಏನೂ ಇಲ್ಲ, ಎಲ್ಲ ವಿಷಯಗಳಿಗೂ ಒಂದು ಕಥೆ ಅದಕ್ಕೆ ಪೂರಕವಾಗಿ ಇರಲೇಬೇಕು, ಅಂದಾಗ ಮಾತ್ರ ನೋಡುಗನಿಗೆ ಕೇಳುಗನಿಗೆ ಮತ್ತು ಅದನ್ನು ಗ್ರಹಿಸುವವನಿಗೆ ಆ ವಿಷಯದ ಮೇಲೆ […]

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!!


ಸಿನಿಮಾಗೆ ಕಥೆಗಾರ ಎಷ್ಟು ಮುಖ್ಯವಾಗುತ್ತಾನೆ ??

ಯಾವುದೇ ನಾಟಕವಾಗಲಿ ಯಾವುದೇ ಧಾರವಾಹಿಯಾಗಲಿ ಯಾವುದೇ ಡಾಕ್ಯುಮೆಂಟರಿ ಆಗಲಿ ಯಾವುದೇ ಒಂದು ಸಿನಿಮಾವಾಗಲಿ ಅಥವಾ ಯಾವುದೇ ಒಂದು ಕಂಟೆಂಟ್ ಕಥಾ ರೂಪದಲ್ಲಿ ಪ್ರೇಕ್ಷಕರಿಗೆ ನೋಡುವಂತಾಗಬೇಕಾದರೆ ಒಬ್ಬ ಕಥೆಗಾರ ಅತ್ಯಂತ ಶ್ರೇಷ್ಠ ಮಟ್ಟದ ಪಾತ್ರವನ್ನು ವಹಿಸುತ್ತಾನೆ.

ಕಥೆ ಇಲ್ಲದೆ ಏನೂ ಇಲ್ಲ, ಎಲ್ಲ ವಿಷಯಗಳಿಗೂ ಒಂದು ಕಥೆ ಅದಕ್ಕೆ ಪೂರಕವಾಗಿ ಇರಲೇಬೇಕು, ಅಂದಾಗ ಮಾತ್ರ ನೋಡುಗನಿಗೆ ಕೇಳುಗನಿಗೆ ಮತ್ತು ಅದನ್ನು ಗ್ರಹಿಸುವವನಿಗೆ ಆ ವಿಷಯದ ಮೇಲೆ ಒಂದು ಹಿಡಿತ ಬರುತ್ತದೆ.

ಇತ್ತೀಚಿಗಷ್ಟೇ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿಗಳಲ್ಲೊಂದಾದ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ಹೆಮ್ಮೆಯ ಕನ್ನಡಿಗ,ಹಿರಿಯ ನಟ ಅನಂತನಾಗ್ ರವರು ಮಾತನಾಡುವಾಗ, ತಾವು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಕಾರಣ ಒಳ್ಳೆಯ ಕಥೆಗಳು ಬರುತ್ತಿಲ್ಲ ಎಂದು.

ಕಾಲಘಟ್ಟಗಳನ್ನು ಮೀರಿ ಯಾವಾಗಲೂ ಪ್ರಸ್ತುತವೆನಿಸುವ ಮನೋರಂಜನ ವಿಭಾಗದ ಹಲವು ಆಯಾಮಗಳಿಗೆ, ಬರಹಗಾರರು ಕಥೆಗಾರರು ಚಿತ್ರಕಥೆ ರಚಿಸುವವರು ಸಂಭಾಷಣೆಗಾರರು ಸದಾ ಶ್ರೇಷ್ಠ ಮಟ್ಟದಲ್ಲಿ ಚಾಲ್ತಿಯಲ್ಲಿದ್ದಾಗಲೇ, ಆಯಾ ಪ್ರಾಜೆಕ್ಟ್ ಗಳಿಗೆ ಆಯಾ ಪ್ರೋಗ್ರಾಮ್ ಗಳಿಗೆ ಒಂದು ಘನತೆ ಬರುತ್ತದೆ.

ರೈಟರ್ಸ್ ಇಲ್ಲ ಅಂದ್ರೆ, ಸಂಪೂರ್ಣ
ಮನೋರಂಜನೆ ವಿಭಾಗವೇ ಖಾರ ಉಪ್ಪು ಸಿಹಿ ಇಲ್ಲದ ಸಪ್ಪೆ ಊಟವಾಗಿ, ಯಾರು ಚಿನ್ನದಂತಹ ಒಂದು ಪದಾರ್ಥವಾಗಿ ಉಳಿದುಬಿಡುತ್ತದೆ.

ಕಥೆಗಾರರ ಬಗ್ಗೆ, ಬರಹಗಾರರ ಬಗ್ಗೆ, ಇಷ್ಟೊಂದು ವಿವರವಾಗಿ ಬರೆಯಲು ಕಾರಣ,

ಅತ್ಯುತ್ತಮ ಕಥೆಗಾರರು, ನಿರ್ದೇಶಕರು ಎನಿಸಿಕೊಂಡ ಪ್ರತಿಭಾವಂತ ತಂತ್ರಜ್ಞರು ಮತ್ತೆ ಮತ್ತೆ ಕಥೆ ಬರೆದು ಸಿನಿಮಾ ಮಾಡಲು ಶುರು ಮಾಡಿದಾಗ ಮಾತ್ರ.

ನಾನೊಬ್ಬ ರೈಟರ್ ಆಗಿ, ನಾನೊಬ್ಬ ನಿರ್ದೇಶಕನಾಗಿ ನನಗೆ ಯಾವಾಗಲೂ ಸಂತೋಷವಾಗೋದು, ಒಬ್ಬ ಕಥೆಗಾರ ಒಬ್ಬ ಬರಹಗಾರ ಹೊಸದೊಂದು ಕಥೆ ಮತ್ತು ನಿರ್ದೇಶನದೊಂದಿಗೆಯಬಂದಾಗ, ಇಂದು ನನಗೆ ಅಂತದ್ದೊಂದು ಖುಷಿಯಾಗಿದೆ.

ಚಂದನವನದ ಇತಿಹಾಸದ ಪುಟಗಳಲ್ಲಿ ಇಪ್ಪತ್ತು ವರ್ಷಗಳು ಕಳೆದರೂ ಇನ್ನೂ ಹಸಿರಾಗಿರುವ,ಮುಂಗಾರು ಮಳೆ ಎಂಬ,ಅದ್ಭುತ ಚಿತ್ರದ ಕಥೆ ಬರೆಯುವ ಮೂಲಕ, ಒಬ್ಬ ಕಥೆಗಾರನಾಗಿ ಎಂಟ್ರಿ ಕೊಟ್ಟು , ಕೆಲವು ಸಿನಿಮಾಗಳಿಗೆ ಕಥೆ ಚಿತ್ರಕಥೆ ಬರೆದು ನಂತರ “ಹಾಗೇ ಸುಮ್ಮನೆ” ಮೂಲಕ “ಬಾನ ದಾರಿಯಲ್ಲಿ* ಚಿತ್ರದ ತನಕ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ, ಸೆನ್ಸಿಬಲ್ ರೈಟರ್ ಕಮ್ ನಿರ್ದೇಶಕ ಪ್ರೀತಂ ಗುಬ್ಬಿ,”My ಬೇಬಿ” ಯೊಂದಿಗೆ ಮರಳಿದ್ದಾರೆ.

ನಿಧಿ ಫಿಲಂಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ,
ಸುಮುಖ ಮತ್ತು ಇಶಾ ಲಂಕೇಶ್ ಮುಖ್ಯಭೂಮಿಕೆಯಲ್ಲಿ, ಪ್ರೀತಮ್ ಗುಬ್ಬಿ ತಮ್ಮ ನಿರ್ದೇಶನದ, ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ ಚಿತ್ರದ ಹೆಸರು “ಮೈ ಬೇಬಿ”

ಯುವ ಪ್ರೇಮಿಗಳ ರೋಮ್ಯಾಂಟಿಕ್ ಕಥೆಯೊಂದಿಗೆ, ಬಂದಿರುವ ನಿರ್ದೇಶಕ ಪ್ರೀತಂ ಗುಬ್ಬಿ ಮತ್ತೊಂದು ತಾಜಾ ಪ್ರೀತಿಯನ್ನ ನೋಡುಗರಿಗೆ ಗುಣ ಬಡಿಸಲಿದ್ದಾರೆ ಎಂಬ ಭರವಸೆ ನಮಗಿದೆ.

ಈ ಕೃಷ್ಣಪ್ಪ ನಿರ್ಮಾಣದಲ್ಲಿ,
ಯೋಗರಾಜ್ ಭಟ್ ನಿರ್ದೇಶನದ “ಮನದ ಕಡಲು” ಚಿತ್ರದಲ್ಲಿ ನಟಿಸಿ ಎಲ್ಲಾ ಹೆಂಗಳೆಯರ ಮನ ಗೆದ್ದಿದ್ದ ಸುಮುಖ ಎಂಬ ಸುರಸುಂದರಾಂಗ “My ಬೇಬಿ” ಯ ನಾಯಕ.

ರವೀ ಸಾಸನೂರ್
MasterNews365.Com


“ಪ್ರೀತಮ್ ಗುಬ್ಬಿ”
Love takes you places, quite literally. Presenting My Baby, a refreshing, young romantic drama from Preetham Gubbi, with Sumukha and Esha in the lead.

#mybabyfilm #preethamgubbi #sumukha #eshalankesh #nidhifilmsproductions

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.