Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *ರಾಮಾಯಣ* – “ರಿವ್ಯೂ ” ಮಾಡುವ “ಯೋಗ್ಯತೆ” ನನಗಿಲ್ಲ
- ಸಿನಿಮಾ

*ರಾಮಾಯಣ* – “ರಿವ್ಯೂ ” ಮಾಡುವ “ಯೋಗ್ಯತೆ” ನನಗಿಲ್ಲ

ರಾಮಾಯಣ – ರಿವ್ಯೂ ಮಾಡುವ ಯೋಗ್ಯತೆ ನನಗಿಲ್ಲ ನಮ್ಮೆಲ್ಲರ ರಕ್ತದ ಕಣಕಣದಲ್ಲಿರುವ, ರಾಮಾಯಣ ಎಂಬ ಮಹಾಕಾವ್ಯವನ್ನು ರಿವ್ಯೂ ಮಾಡುವ ಯೋಗ್ಯತೆ ನನಗಿಲ್ಲ,ಇದನ್ನು ನಾನು ಘಂಟಾಘೋಷವಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿ ನಿಂತು ಹೇಳಲು ನಾನು ಸಿದ್ಧನಿದ್ದೇನೆ. ಪ್ರೇಕ್ಷಕರ ಮನಸ್ಸನ್ನು ಸೆಳೆಯುವ,ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುವ,ಧಾರಾವಾಹಿಯನ್ನ ರಿವ್ಯೂ ಮಾಡಬಲ್ಲೆ ,,ಸಿನಿಮಾ ವನ್ನ ರಿವ್ಯೂ ಮಾಡಬಲ್ಲೆ,,ಅಷ್ಟೇ ಯಾಕೆ ಒಂದು ಪುಸ್ತಕ,ಒಂದು ನಾಟಕ,ಒಬ್ಬ ವ್ಯಕ್ತಿಯ ಮೇಲು ರಿವ್ಯೂ ಮಾಡಬಲ್ಲೆ, ಆದರೆ ನಮ್ಮ ಮಣ್ಣಿನ, ನಮ್ಮ ಅಸ್ಮಿತೆಯ, ನಮ್ಮೆಲ್ಲರ ಅಸ್ತಿತ್ವದ, ಒಂದು ಮಹಾಕಾವ್ಯ ವಾಗಿರುವ, “ರಾಮಾಯಣ […]

ರಾಮಾಯಣ – ರಿವ್ಯೂ ಮಾಡುವ ಯೋಗ್ಯತೆ ನನಗಿಲ್ಲ

ನಮ್ಮೆಲ್ಲರ ರಕ್ತದ ಕಣಕಣದಲ್ಲಿರುವ, ರಾಮಾಯಣ ಎಂಬ ಮಹಾಕಾವ್ಯವನ್ನು ರಿವ್ಯೂ ಮಾಡುವ ಯೋಗ್ಯತೆ ನನಗಿಲ್ಲ,
ಇದನ್ನು ನಾನು ಘಂಟಾಘೋಷವಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿ ನಿಂತು ಹೇಳಲು ನಾನು ಸಿದ್ಧನಿದ್ದೇನೆ.

ಪ್ರೇಕ್ಷಕರ ಮನಸ್ಸನ್ನು ಸೆಳೆಯುವ,ಪ್ರೇಕ್ಷಕರಿಗೆ ಮನೋರಂಜನೆಯನ್ನು ನೀಡುವ,
ಧಾರಾವಾಹಿಯನ್ನ ರಿವ್ಯೂ ಮಾಡಬಲ್ಲೆ ,,
ಸಿನಿಮಾ ವನ್ನ ರಿವ್ಯೂ ಮಾಡಬಲ್ಲೆ,,
ಅಷ್ಟೇ ಯಾಕೆ ಒಂದು ಪುಸ್ತಕ,ಒಂದು ನಾಟಕ,ಒಬ್ಬ ವ್ಯಕ್ತಿಯ ಮೇಲು ರಿವ್ಯೂ ಮಾಡಬಲ್ಲೆ,

ಆದರೆ ನಮ್ಮ ಮಣ್ಣಿನ, ನಮ್ಮ ಅಸ್ಮಿತೆಯ, ನಮ್ಮೆಲ್ಲರ ಅಸ್ತಿತ್ವದ, ಒಂದು ಮಹಾಕಾವ್ಯ ವಾಗಿರುವ, “ರಾಮಾಯಣ ಎನ್ನುವಂತಹ” ಚಿತ್ರವನ್ನ ಅಥವಾ ಪುಸ್ತಕವನ್ನು ಅಥವಾ ಗ್ರಂಥವನ್ನು ರಿವ್ಯೂ ರೂಪದಲ್ಲಿ ಬರೆಯುವ ಅಥವಾ ಮಾತನಾಡುವ ಯೋಗ್ಯತೆ ನನಗಿಲ್ಲ.

ರಾಮಾಯಣ ಚಿತ್ರವನ್ನು ನೋಡಿ ಬಂದ ನಂತರ ಕೆಲವರು ಬರೆಯುವ ರಿವ್ಯೂ ಬಗ್ಗೆಯಾಗಲಿ, ಅಥವಾ ರಿವ್ಯೂ ತರಹದ ವಿಡಿಯೋ ಮಾಡಿ ಹಾಕುವರ ಬಗ್ಗೆ ಆಗಲಿ ನಾನು ಮಾತನಾಡುವುದಿಲ್ಲ ಅದು ಅವರವರ ದೃಷ್ಟಿಕೋನ.

ಕಳೆದ ನಾಲ್ಕು ವರ್ಷಗಳ ಮಾಧ್ಯಮ ವೃತ್ತಿಯಲ್ಲಿ ನಾನು,
ಬಹಳಷ್ಟು ಸಿನಿಮಾಗಳ ಬಗ್ಗೆ ರಿವ್ಯೂ ಬರೆದಿದ್ದೇನೆ ವಿಡಿಯೋ ರೂಪದ ರವಿಯು ಕೂಡ ಕೊಟ್ಟಿದ್ದೇನೆ, ಅದ್ಯಾಕೋ ಗೊತ್ತಿಲ್ಲ ರಾಮಾಯಣ ಚಿತ್ರದ ರಿವ್ಯೂ ನಾನು ಮಾಡಲಾರೆ.

ರಾಮಾಯಣ ಚಿತ್ರದ ಬಗ್ಗೆ ಏನು ಅಂತ ರಿವ್ಯೂ ಬರೀಬೇಕು ??

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಿಗೂ ರಾಮ ಯಾರು ಅಂತ ಗೊತ್ತು, ಸೀತಾ ಮಾತೆ ಏನು ಅಂತ ಗೊತ್ತು, ರಾವಣನ ಆರ್ಭಟ ಗೊತ್ತು, ಅಷ್ಟೇ ಯಾಕೆ ರಾಮಾಯಣದ ಸಂಪೂರ್ಣ ಕಥೆಯೇ ಗೊತ್ತು ಆದರೂ ಕೂಡ, ನೀವೆಲ್ಲರೂ ರಾಮಾಯಣ ಚಿತ್ರವನ್ನು ಯಾಕೆ ನೋಡಬೇಕು ಅಂದ್ರೆ !!

90ರ ಕಾಲಘಟ್ಟದಲ್ಲಿ ರಮಾನಂದ್ ಸಾಗರ್ ರಂತಹ ದಿಗ್ಗಜರು ಮಾಡಿದ ರಾಮಾಯಣವನ್ನು ನಾವು ನೋಡಿದ್ದೇವೆ,
ಆನಂತರ ಬಂದಂತಹ ರಾಮಾಯಣದ ಮತ್ತಷ್ಟು ಕಂಟೆಂಟ್ ಗಳನ್ನು ಸಹ ನಾವು ನೋಡಿದ್ದೇವೆ,

ಆದರೆ ಈಗ ಬಂದಿರುವ “ರಾಮಾಯಣ” ಈಗಿನ ಯುವ ಪೀಳಿಗೆಯ ಬದುಕಿನ ಶೈಲಿಗೆ, ಗಟ್ಟಿಯಾಗಿ ಹಿಡಿಯಬಲ್ಲ ಒಂದು ಮಹಾನ್ ಅಸ್ತ್ರವಾಗಲಿದೆ ಎಂಬುದು ನನ್ನ ಅನಿಸಿಕೆ.

ರಾಮನಿಗೂ,ರಾಮಾಯಣಕ್ಕೂ ನಮ್ಮ ಕರ್ನಾಟಕದೊಂದಿಗೆ ಅದೆಷ್ಟು ಗಟ್ಟಿಯಾದ ಭಾವನಾತ್ಮಕ ಸಂಬಂಧ ಹೊಂದಿದೆ ಎಂಬುದನ್ನು, ನೀವೆಲ್ಲರೂ ಕಿಷ್ಕಿಂಧೆಯ ಮೂಲಕ ನಮ್ಮ ಹನುಮನ ಮೂಲಕ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ.

ಹಿಂದೂ ಧರ್ಮದ ಎರಡು ಪರಮ ಪವಿತ್ರ ಗ್ರಂಥವಾದ ಹಾಗೂ ಬಿಡುಗಡೆಯಾಗಿರುವ “ರಾಮಾಯಣ” ಎಂಬ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ಇಡೀ ಪ್ರಪಂಚಕ್ಕೆ ತೋರಿಸಲು ಹೊರಟಿರುವ ಕೆಲಸದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ರವರ ಪಾಲು ಇದೆ ಎಂಬುದು, ಕನ್ನಡಿಗರಾದ ನಮಗೆ ಮತ್ತಷ್ಟು ಹುರುಪು ಹಿರಿಮೆ ಗರಿಮೆ ತಂದುಕೊಟ್ಟಿದೆ ಎಂಬುದನ್ನು ನಾನು ತುಂಬಾ ಆತ್ಮ ಸಂತೋಷದಿಂದ ಹೇಳುತ್ತಿದ್ದೇನೆ.

ರಾಮಾಯಣ ಎನ್ನುವಂತಹ ಒಂದು ಮಹಾ ಕಾವ್ಯವನ್ನು ಸಿನಿಮಾವಾಗುವಲ್ಲಿ ದಿಟ್ಟ ಹೆಜ್ಜೆ ಇಟ್ಟಂತಹ ನಿರ್ಮಾಪಕ ನಮಿತ್ ಮಲ್ಹೋತ್ರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಕೂಡ ಇದ್ದಾರೆ ಹಾಗೂ ಈ ಇಬ್ಬರ ಜಂಟಿ ನಿರ್ಮಾಣದಲ್ಲಿ ಬಂದ ರಾಮಾಯಣ ಹಾಗೂ ಅದರಲ್ಲಿ ನಮ್ ಯಶ್ ಮಾಡಿದ ರಾವಣ ಪಾತ್ರ ನೋಡಿ ನನಗೆ ಖುಷಿ ಆಯ್ತು.

ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ರಾಮಾಯಣ ಪ್ರೆಸ್ ಮೀಟ್ ನಲ್ಲಿ ರಾಮನ ಪಾತ್ರ ಮಾಡಿದ್ದ ರಣಬೀರ ಕಪೂರ್ ತಾನೆಷ್ಟು ಶ್ರದ್ಧೆ ಭಕ್ತಿಯಿಂದ ರಾಮನ ಪಾತ್ರವನ್ನು ಮಾಡಿದ್ದೆ ಎಂಬುದರ ಬಗ್ಗೆ ಮಾತನಾಡಿದ್ದ ಮಾತು ನೆನಪಿಸಿಕೊಂಡರೆ, ಅದು ನಿಜ ಎನಿಸುತ್ತದೆ,

ಇದ್ದರೆ ಬದುಕಿದರೆ ಕರ್ತವ್ಯ ಪಾಲನೆ ಎಂಬ ವಿಚಾರ ಬಂದರೆ ಹೇಗಿರಬೇಕು ಎಂಬುದನ್ನ ರಾಮ ನಮಗೆ ಕಲಿಸಿಕೊಡುತ್ತಾನೆ, ರಾಮನ ಪಾತ್ರದಲ್ಲಿ ನಟಿಸಿದ ರಣಬೀರ್ ಕಪೂರ್ ನ್ಯಾಯ ಸಲ್ಲಿಸಿದ್ದಾನೆ.

ಅದರ ಜೊತೆ ಜೊತೆಗೆ ಇನ್ನುಳಿದಂತೆ ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ,ದಶರತನಾಗಿ ಅರುಣ್ ಗೋವಿಲ್ ಸೇರಿದಂತೆ ರಾಮಾಯಣ ಚಿತ್ರದಲ್ಲಿ ಮಾಡಿದ ಎಲ್ಲ ಪಾತ್ರಗಳು ಕಣ್ಮುಂದೆ ಬಂದಾಗ ರಾಮಾಯಣದಂತಹ ಮಹಾಕಾವ್ಯದ ಜೊತೆಗೆ ನಾವು ನೀವೆಲ್ಲರೂ ಹೆಜ್ಜೆ ಹಾಕುವ ಅನುಭವ ಗ್ಯಾರಂಟಿ ಆಗುತ್ತದೆ.

ಈಗಿನ ಯುವ ಸಮೂಹಕ್ಕೆ ಓಹೋ ರಾವಣ ಹೀಗಿದ್ನ ,ಅಷ್ಟು ಭಯಂಕರನಾ,ಅಷ್ಟು ದೊಡ್ಡ ತಪಸ್ವಿಯಾ, ಪರಮ ಶಿವಭಕ್ತನಾ?
ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಮಾಡಿ ತೋರಿಸಿರುವ ರಾಕಿಂಗ್ ಸ್ಟಾರ್ ಯಶ್ ರವರಿಗೆ ದೊಡ್ಡದೊಂದು ಸೆಲ್ಯೂಟ್.

ಯಾಕೆ ಒಂದೊಳ್ಳೆಯ ಕಥೆ ಒಂದು ಒಳ್ಳೆಯ ಕಾದಂಬರಿ ಒಂದೊಳ್ಳೆಯ ಯೋಚನೆ ಸಿನಿಮಾ ಆಗಬೇಕಾದರೆ ಸಮಯ ಕೇಳುತ್ತದೆ ಸಮಯ ತೆಗೆದುಕೊಳ್ಳುತ್ತದೆ ಅನ್ನೋದಕ್ಕೆ ಅತಿ ದೊಡ್ಡ ಸಾಕ್ಷಿಯಂತೆ ನಿಂತಿದೆ ರಾಮಾಯಣ ಎಂಬ ಮಹಾನ್ ದೃಶ್ಯ ಕಾವ್ಯ.

ರಾಮಾಯಣದಂತಹ ಮಹಾನ್ ದೃಶ್ಯಕಾವ್ಯವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ನಿರ್ದೇಶನ ಮಾಡಿರುವ ನಿದ್ದೆ ಬಾರಿ ನಿಜವಾಗಿಯೂ ಒಬ್ಬ ಮಹಾನ್ ಸಂತನಂತೆ ತಮ್ಮ ಕೆಲಸದ ಮೂಲಕ ಕಾಣುತ್ತಾರೆ.

ಚಿತ್ರ ಶುರುವಾದ ಮೊದಲ ಪ್ರೇಮ್ ನಿಂದ ಕೊನೆಯ ಪ್ರೇಮ್ ತನಕವು ಎಲ್ಲವೂ ಅದ್ಭುತ ಪರಮಾದ್ಬುತ.ಸಂಪೂರ್ಣ ಚಿತ್ರಕ್ಕೆ ಕೆಲಸ ಮಾಡಿದ ಎಲ್ಲ ತಂತ್ರಜ್ಞರ ಕೆಲಸ ಒಂದು ದೊಡ್ಡ ಅಸ್ತಿತ್ವದಂತೆ ನೋಡುಗರ ಕಣ್ಣಿಗೆ ಕಾಣುತ್ತದೆ.

ಸಿನಿಮಾ ಉತ್ಸಾಹಿಗಳು ತಮ್ಮ ಇಷ್ಟದ ನಟರ ನಟಿಯರ ಚಿತ್ರವನ್ನ,ಟಿಕೆಟ್ ದರ ಎಷ್ಟೇ ದುಬಾರಿ ಇದ್ದರೂ ಹೇಗೆ ನೋಡಿ ಸೆಲೆಬ್ರೇಟ್ ಮಾಡುತ್ತಿರೋ ಅಂಥವರಲ್ಲಿ ನನ್ನದೊಂದು ಮನವಿ.

ರಾಮಾಯಣವನ್ನು ಒಮ್ಮೆಯಲ್ಲ ಎರಡು ಬಾರಿ ನೋಡಿ, ಮೊದಲನೆಯ ಸಲ ಚಿತ್ರವನ್ನ ನೋಡ್ತಾ ನೀವು ರಾಮಾಯಣ ಕಾಲಘಟ್ಟಕ್ಕೆ ಚಲಿಸಿ ಬರುತ್ತಿರಿ,


ಎರಡನೇ ಸಾರಿ ಚಿತ್ರ ನೋಡುವಾಗ ರಾಮಾಯಣವನ್ನು ಹಾಗೂ ಪ್ರತಿ ಪಾತ್ರವನ್ನು ಅನುಭವಿಸಿ ಬರುತ್ತಿರಿ ಎಂಬ ನಂಬಿಕೆ ನನಗಿದೆ.

ರಾಮಾಯಣ ನಮ್ಮದು,ಶ್ರೀರಾಮ ನಮ್ಮವ,ಸೀತಮ್ಮ ನಮ್ಮವರು, ಅಷ್ಟೇ ಯಾಕೆ ರಾವಣನು ನಮ್ಮವ,ತಪ್ಪದೇ ನೋಡಿ “ರಾಮಾಯಣ” ಎಂಬ ಮಹಾ ದೃಶ್ಯಕಾವ್ಯ

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.