ಹಾಡುವಾಗ ಅವರ ಮ್ಯಾಗ ಹಾಡು ಹಂಗಿರಬೇಕು. ಅದರಲ್ಲಿ ತತ್ವನು ಅಡಗಿರಬೇಕು. ಹುಚ್ಚು ಹುಚ್ಚರೆ ಯಾವುದೋ ಪದ ಹಾಡುವ ಹಂಗಿಲ್ಲ. ಅದಕ್ಕ ಅನುಸಾರವಾಗಿ ಹೋಗಬೇಕು. ಇಲ್ಲಂದ್ರೆ ಕೂಡಿದ ಜನ ಕೇಳುವುದಿಲ್ಲ. ಅದಕ್ಕನುಸಾರವಾಗಿ ಬಿಡಿಸಿ ಹೇಳಬೇಕ್ರಿ 'ಮೊದಲು ಮೂವರು ಅಂದ್ರ ಯಾರು? ಮತ್ತ ಏಳೆಂಟು ಗೆಳತಿಯರು ಯಾರು ? ಅದನ್ನು ಬಿಡಿಸಿ ಹೇಳಬೇಕ್ರಿ ಅದರ ಅರ್ಥ ಹಿಂಗದ -
ಮೊದಲಿಗೆ ಮೂವರು ಕೂಡಿ, ಮೂವರು ಅಂತಂದ್ರೆ - ಕಾಯ ವಾಚ ಮನಸ್ಸು ಇವು ಮೂರು ಕೂಡಿಕೊಂಡು ಮಾಯೆ ಮಂದಿರ ಮದನದೊಳು , ಅಂದ್ರೆ ಮೋಹವೆಂಬ ಮಂದಿರದೊಳಗೆ ಮುದದಿ ಮಾತಾಡಿ ತದಿ ಗೇಕೋಗೆ ಹಾದರ ಮಾಡಿ, ನಾ ಯಾಕ ಬಂದೀನಿ ? ನಾ ಮಾಡು ಕೆಲಸ ಏನು? ನಾ ಏನು ಮಾಡಬೇಕು ?ಎನ್ನುವುದನ್ನು ಮರೆತು ವಿಷಯಕ್ಕೆ ಅಂದರೆ ವಾಸನೆಗೆ ಬೆನ್ನು ಹತ್ತಿ ಬಿಟ್ಟಿವಿ.
ಬದುಕಿನ ಎಚ್ಚರ ನಿನಗಿಲ್ಲ ಕೋಡಿ ಅಂದ್ರೆ ನಾವು ಬಂದು ಏನು ಮಾಡಬೇಕು ಅಂತ ತಾಯಿ ಗರ್ಭದೊಳಗ ವಚನ ಕೊಟ್ಟಿವಿ . ಕುಕ್ಕುಟಾಸನ ಹಾಕಿ ಈ ಕಡೆ ಸರಿಯಾ ಕ ಜಾಗಿಲ್ಲ ಆ ಕಡೆ ಸರಿಯಾಕ್ಕ ಜಾಗಿಲ್ಲ. ಭಗವಂತ ನಮಗೆ ಎಂಥಾ ಜಾಗದಾಗ ಹಾಕಿದನಪ್ಪ. ನಾ ಬಹಳ ತಪ್ಪು ಮಾಡಿನಿ, ನಿನ್ನ ನಾಮನು ನುಡಿತೀನಿ, ನಿನ್ನ ಸೇವಾನು ಮಾಡ್ತೀನಿ, ನನಗೆ ಕಡೆಗೆ ಹಾಕು ಅಂತ ನಾಮಸ್ಮರಣೆ ಮಾಡಿದಾಗ ಭಗವಂತ ನಮ್ಮನ್ನು ಹೊರಗೆ ಹಾಕ್ಯಾನ. ಪ್ರಸೂತಿ ಕಾಲಕ್ಕೆ ವಾಯುವಿನ ಹೊಡೆತಕ್ಕೆ ಸೀದಾ ಕುಂತ ಕೂಸು ತಲೆ ಕೆಳಕ್ಕೆ ಆಗಿ ನೆಲಕ್ಕೆ ಬಿದ್ದಾಗ ನೆಲಕ್ಕೆ ಬಿದ್ದಾಗ ಸ್ಮೃತಿ ತಪ್ಪಿ ಮೂರ್ಚೆ ಹೋಗಿ ಬಿದ್ದದ . ಅವಾಗ ಅಲ್ಲೇ ಮುಂದು ಕುಂತವರು ಕಿವಿ ಊದಿ ಬಿಟ್ಟಾರ. ಪ್ರಜ್ಞ ಹೀನನಾಗಿ ಬಿಟ್ಟು ಹಿಂದಿನದೆಲ್ಲ ಮರೆತು ಮುಂದೆ ಲೌಕಿಕ ನಂಬಿ ನೆಚ್ಚಿಕೊಂಡು ಹೊಂಟದ .
ಮಾಯ ಮದನ ಮಂದಿರದೊಳ್ ಮುದದಿ ಮಾತಾಡಿ ಹದಗೆಟ್ಟು ಹಾದರ ಮಾಡಿದಿ ಅಂದ್ರ ... ಹದಗೆಟ್ಟು ವಿಷಯ ವಾಸನಕ್ಕ ಬೆನ್ನ ಹತ್ತೀದಿ. ಬದುಕಿನೆಚ್ಚರ ನಿನಗಿಲ್ಲ ಕೋಡಿ, ನಾವು ಎಲ್ಲಿಗೆ ಹೋಗಬೇಕಾಗಿತ್ತು ? ನಾವು ಏನ್ ಭಾಷಾ ಕೊಟ್ಟಿವಿ ? ನಾವು ಎಲ್ಲಿಗೆ ಮುಟ್ಟಬೇಕಾಗಿದ ?ಅನ್ನೋದ ಮರೆತುಬಿಟ್ಟದ .
ಏಳೆಂಟು ಗೆಳತಿಯರು ಜತ್ತ ಅಂದ್ರ ಏಳು ಸಪ್ತ ವ್ಯಸನಗಳು ಅದಾವು 8 ಮದಗಳು ಇವೆಲ್ಲ ನಮಗೆ ಬೆನ್ಹತ್ಯೆವು .
ಸಪ್ತ ವ್ಯಸನಗಳು –
1.ತನುವ್ಯಸನ
2.ಮನವ್ಯಸನ
3.ಧನವ್ಯಸನ
4.ರಾಜವ್ಯಸನ
5.ಸ್ತ್ರೀ ವ್ಯಸನ
6.ಉತ್ಸಾಹ ವ್ಯಸನ
7.ಸೇವಕವ್ಯಸನ
ಅಷ್ಟಮದಗಳು –
1.ಛಲಮದ
2.ಕುಲಮದ
3.ದನಮಧ
4.ರೂಪ ಮದ
5.ಯವ್ವನ ಮದ
6.ವಿದ್ಯಾ ಮದ
7.ತಪಸ್ಸು ಮದ
8. ರಾಜ್ಯಮದ
ಏಳೆಂಟು ಗೆಳೆಯರು ಜತ್ತ, ಹಳ್ಳಿ ಸುಳ್ಯಾರು ತಿರುಗಿದಂಗ ತಿರುಗತೀರಿ ಎತ್ತ ಅಂದ್ರ –
ವಾಸನಿಗೆ ಬೆನ್ನು ಹತ್ತಿ ಎಲ್ಲಿ ಬೇಕು ಅಲ್ಲಿ ತಿರುಗತ್ತಿವಿ ನಾವು . ಅಂದಂಗ ಅಜ್ಞಾನದಾಗ ಕತ್ತಲಂದ್ರು ಗೊತ್ತಿಲ್ಲ,ಬೆಳಕ ಅಂದ್ರೂ ಗೊತ್ತಿಲ್ಲ, ಪಾಪ ಅನ್ನೋದು ಗೊತ್ತಿಲ್ಲ, ಪುಣ್ಯ ಅನ್ನೋದು ಗೊತ್ತಿಲ್ಲ, ನನ್ನವರು , ನಿನ್ನವರು, ಅನ್ನೋದು ಗೊತ್ತಿಲ್ಲ.
ಹಾಳು ಗುಡಿಯೊಳು ಬಂದು ಬೀಳುವ ಕತ್ತೆ . ಈ ದೇಹ ಎಂಬುದು ಹಾಳುಗುಡಿ ಇದ್ದಾಂಗ . ಈ ಗುಡಿಯಾಗ ಬಂದು ಬಿದ್ದರೆ ಇದು ತಿಳಿದುಕೊಳ್ಳುವುದು ಹೆಂಗ ? 48 ಲಕ್ಷ ಜೀವ ರಾಶಿಗಳು ಅದಾವು ನಮ್ಮ ಕರ್ಮಕ್ಕೆ ಅನುಸಾರವಾಗಿ ದೇವರು ನಮಗೆ ಎಲ್ಲಿ ಒಗೀತಾನ ಮತ್ತ ಅಲ್ಲಿಯೇ ಹುಟ್ಟಿ ಬರಬೇಕು. ಅದಕ್ಕ ಹಾಳುಗುಡಿಯೊಳಗ ಬಂದು ಬೀಳುವ ಕತ್ತೆ ಮುದುಕ್ಯಾದಿ ಮುರುಕ ನಿನಗ್ಯಾಕ .
ಸಿರಿಹೋಯ್ತು ತಲಿ ಬೆಳ್ಳಗಾಯಿತು ಕಣ್ಣು ಮಬ್ಬಾದು ಕಿವಿ ಕೇಳಲಾರದಂಗಾತು ಕೂದಲು ಬೆಳ್ಳಗಾಗು ತಾಕತ್ತು ಹೋಯಿತು ಎದ್ದು ಅಡ್ಡಾಡಕ್ಕೆ ಬರಲಾರದಂಗಾಯ್ತು, ಆದರೂ ಬುದ್ದಿ ಬರಲಿಲ್ಲ.
ಹಿರಿಯರು ಹೇಳುತ್ತಾರೆ – ದುಡುಕಬೇಡ, ಪಾಪ ಮಾಡಬೇಡ, ಒಳ್ಳೆಯದನ್ನೇ ಮಾಡು, ವಾಚಿಕ ದೋಷ ಮಾಡಬೇಡ, ತ್ರಿಕರಣ ಶುದ್ಧ ಇರಬೇಕು, ದೇಹದಿಂದ ಕೆಡಬಾರದು, ಬಾಯಿಯಿಂದ ಕೆಡಬಾರದು, ಮನಸ್ಸಿನಿಂದ ಕೆಡಬಾರದು, ವಾಣಿಯಿಂದ ಒಬ್ಬರಿಗೆ ಬೈದರಿ ಅಂದ್ರೆ ಪಾಪ ಬರುತ್ತದೆ. ಬರ್ರಿ ಅಂದ್ರೆ ಪುಣ್ಯ ಬರುತ್ತದೆ. ಅದ ಯಾರಿಗಾದರೂ ಹೊಡೆದರೆ ಪಾಪ ಬರುತ್ತದೆ. ಇವೆರಡೂ ಹೊರಗೆ ಕಾಣಿಸುತ್ತದ. ಆದರೆ ಮನಸ್ಸಿನಿಂದ ಗೊತ್ತಾಗುವುದಿಲ್ಲ . ಆದ್ರ ಮನಸ್ಸಿನ್ಯಾಗಾಗುವುದು ಅವಂಗ ಗೊತ್ತು.ಅಂದ್ರೆ ಆತ್ಮಕ್ಕೆ ಗೊತ್ತು. ಅದಕ್ಕ ಮನಸ್ಸಿನಿಂದಲೂ ಕೆಡಬಾರದು. ಇವು ತ್ರಿಕರ್ಣಗಳು. ಮೊದಲು ಇವು ಶುದ್ಧವಾಗಿರಬೇಕು.
ಅದಕ್ಕ ಸಿರಿಹೋಯಿತು, ತಲೆ ಬೆಳ್ಳಗಾಯಿತು, ಬುದ್ಧಿ ಬರಲಿಲ್ಲ. ಹಿರಿ – ಕಿರಿಯರು ಹೇಳಲಾಗಿ ಅಂದ್ರೆ –
ಯಾರು ಹೇಳಿದರು ಅವನಿಗೆ ಖಬರ್ ಇರುವುದಿಲ್ಲ. ಜನ ಹರನಿಗೆ ಗುರಿಯಾದರೂ ಜನ ಹಿಂದೆ ಮುಂದೆ ಮಾತಾಡ್ತಾರೆ. ಜನ ಹರನಿಗೆ ಗುರಿಯಾಗಿ ಶಿಶುನಾಳ ಈಶಾನ ಜೋಡುಗಾಯಿ ಹೊಡೆಸುವ ಮುದುಕಿ ಆ ಗುರುಪಾದಕ ಹೊಂದಿ ಗುರು ಹೇಳಿದಂಗ ಕೇಳಿ ತಿಳಿದುಕೊಂಡರೆ ಜನ್ಮ ಸಾರ್ಥಕ ಆಗ್ತದ ಇಲ್ಲಾಂದ್ರೆ , ಈ ಜನ್ಮ ವ್ಯರ್ಥದ ಅಂತ ಮಹಾತ್ಮರು ಹೇಳ್ಯಾರ.
ನಾಳಿನ ಸಂಚಿಕೆಯಲ್ಲಿ – ಬಳಗಾನೂರಕ್ಕೆ ಹೋದಾಗಿನ ಘಟನೆ ಓದಿ ಆನಂದಿಸಿ ಹಾಗೂ ಅಭಿಪ್ರಾಯವನ್ನು ಸೂಚಿಸಿ.
ಮುಂದುವರಿಯುತ್ತದೆ ….

