Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರಾಶಿಯನ್ನು ಸಂಗ್ರಹಿಸುವ ಮೂಡ…..!!!!
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ರಾಶಿಯನ್ನು ಸಂಗ್ರಹಿಸುವ ಮೂಡ…..!!!!

ಬೆಟ್ಟದ ತುದಿಯೊಳಗಿರ್ಪ ಪ್ರಾಣಿಗಳಿಗೆ ಅನ್ನ ಇವರು ಕಾರ್ಯಕ್ರಮಗಳು ಶ್ರಾವಣ ಮಾಸದ ತುಂಬಾ ಅದನ್ನು ಬಿಟ್ಟರೆ ನವರಾತ್ರಿ ಅಂದರೆ ದಸರಾ ಸಮಯಕ್ಕೆ 9 ದಿನ ಪುರಾಣ ಹೇಳುತ್ತಾರೆ. ಅದು ಕೂಡ ಹುಲಿಗೆಮ್ಮ ದೇವಿ ಗುಡ್ಡದ ಹಾಗೆ ಇರುತ್ತದೆ ಅಲ್ಲಿ ದೇವಿಯತ್ರಾರಾಯಣ ಗ್ರಂಥ ಪಾರಾಯಣ ನಡೆಯುತ್ತದೆ. ಅಲ್ಲದೆ ಅಲ್ಲದೆ ಶ್ರೀ ಶಂಕರಾನಂದ ಅವಧೂತರ ಮಠ ಅದ, ಕೂಡಲಸಂಗಮನಾಥನ ಮಠದ, ಗ್ರಾಮ ದೇವತೆ ಜಾತ್ರೆ, ಹಳ್ಳೂರು ಗ್ರಾಮದಲ್ಲಿನ ಹಲವಾರು ದಿನ ಜಾತ್ರಾ ಕಾರ್ಯಕ್ರಮಗಳು ಜರುಗುತ್ತವೆ. ಒಂದು ವರ್ಷದೊಳಗ ಏನೆಂದರೂ ನಾಲ್ಕೈದು ಕಾರ್ಯಕ್ರಮಗಳು […]

ಬೆಟ್ಟದ ತುದಿಯೊಳಗಿರ್ಪ ಪ್ರಾಣಿಗಳಿಗೆ ಅನ್ನ

ಇವರು ಕಾರ್ಯಕ್ರಮಗಳು ಶ್ರಾವಣ ಮಾಸದ ತುಂಬಾ ಅದನ್ನು ಬಿಟ್ಟರೆ ನವರಾತ್ರಿ ಅಂದರೆ ದಸರಾ ಸಮಯಕ್ಕೆ 9 ದಿನ ಪುರಾಣ ಹೇಳುತ್ತಾರೆ. ಅದು ಕೂಡ ಹುಲಿಗೆಮ್ಮ ದೇವಿ ಗುಡ್ಡದ ಹಾಗೆ ಇರುತ್ತದೆ ಅಲ್ಲಿ ದೇವಿಯತ್ರಾರಾಯಣ ಗ್ರಂಥ ಪಾರಾಯಣ ನಡೆಯುತ್ತದೆ. ಅಲ್ಲದೆ ಅಲ್ಲದೆ ಶ್ರೀ ಶಂಕರಾನಂದ ಅವಧೂತರ ಮಠ ಅದ, ಕೂಡಲಸಂಗಮನಾಥನ ಮಠದ, ಗ್ರಾಮ ದೇವತೆ ಜಾತ್ರೆ, ಹಳ್ಳೂರು ಗ್ರಾಮದಲ್ಲಿನ ಹಲವಾರು ದಿನ ಜಾತ್ರಾ ಕಾರ್ಯಕ್ರಮಗಳು ಜರುಗುತ್ತವೆ. ಒಂದು ವರ್ಷದೊಳಗ ಏನೆಂದರೂ ನಾಲ್ಕೈದು ಕಾರ್ಯಕ್ರಮಗಳು ನಡೆಯುತ್ತವೆ. ಗ್ರಾಮದೇವತೆ ಜಾತ್ರೆಯ ಒಳಗಂತೂ ನಿರಂತರ ಐದು ದಿವಸ ಮನರಂಜನ ಕಾರ್ಯಕ್ರಮಗಳು ಜರುಗುತ್ತವೆ. ಇವರ ಬಗ್ಗೆ ಹಲವರಲ್ಲಿ ಅಸೂಯೆ ತಾಂಡವವಾಡುತ್ತದೆ. ಹೀನ ಕುಲದವನು ಜ್ಞಾನದೊಳಗೆ ಇಷ್ಟ ಎತ್ತರಕ್ಕೆ ಬೆಳೆದು ಎಲ್ಲಾ ಹಳ್ಳಿ ಮಂದಿ ಜೊತೆ ಸಂಪರ್ಕ ಪ್ರೀತಿ ಪ್ರೇಮ, ವಿಶ್ವಾಸ, ಗೌರವ ಗಳಿಸಿಕೊಂಡಾನಲ್ಲ ಎಂಬ ಹೊಟ್ಟೆಯುರಿ ಬಹಳ ಜನರಿಗೆ ಇದೆ.

ಆದರೆ ಬಸಪ್ಪ ಶರಣರನ್ನು ನೋಡಿದರೆ ಇವರು ಯಾರಿಗೂ ಕೇಡು ಬಗೆದವರೆಲ್ಲ ಎಂದು ಅನ್ನಿಸುತ್ತದೆ. ನನ್ನಿಷ್ಟಕ್ಕೆ ನೀ ಇರು, ನನ್ನಷ್ಟಕ್ಕೆ ನಾನಿರುವೆ ಅನ್ನುವ ಸ್ವಭಾವದವರು. ದುಷ್ಟರನ್ನು ಕಂಡರೆ ಮಾರುದ್ದ ದೂರು ಸರಿದು ಬಿಡುವ ವ್ಯಕ್ತಿತ್ವ ಅವರದ್ದು. ಇವರು ಒಂದು ತರಹ ನೋಡಿದರೆ ಎಲೆ ಮರೆಯ ಕಾಯಿಯಂತೆ. ಕೆಟ್ಟ ಆಲೋಚನೆ ಕೆಟ್ಟ ಶಬ್ದಗಳಿಂದ ಅಂತೂ ದೂರ, ಅತಿ ದೂರ. ಅಲ್ಲಿನ ಜನರ ಅಭಿಪ್ರಾಯವೂ ಈ ಮೇಲ್ಕಾಣಿಸಿದಂತೆ ಇದೆ. ಶತಮಾನಗಳಿಂದ ನಡೆದು ಬಂದ ಈ ಜಾತಿ ವ್ಯವಸ್ಥೆಯು ಇವರಿಗೆ ಮುಂದೆ ಬರಲು ಬಿಡದೆ ಸದಾ ಪ್ರೇತದಂತೆ ಬೆಂಬತ್ತಿ ಕಾಡುತ್ತಿದೆ.

ಹಲವರ ಅಭಿಪ್ರಾಯದಂತೆ ದೇವಿಯ ಗ್ರಂಥ ಪಾರಾಯಣ ಮಾಡಬೇಕೆಂದರೆ ಅಂಗದ ಮೇಲೆ ಲಿಂಗಧಾರಣೆ ಮಾಡಿಕೊಂಡು ಕಾಯಾ, ವಾಚಾ, ಮನಸಾ ತ್ರೀಕರ್ಣ ಪರಿಶುದ್ಧರಾಗಿ ಗುರುಬೋಧಿಯನ್ನು ಪಡೆದಿರಬೇಕು. ಅಂದ್ರೆ ಗುರುವಿನ ಹೊಂದಿದ ಮೇಲೆ ಆ ಗ್ರಂಥ ಮುಟ್ಟಬೇಕೆಂಬ ನಂಬಿಕೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪವಿತ್ರತೆಯಿಂದ ಆ ಗ್ರಂಥವನ್ನು ಓದಬೇಕು. ಗುರುವಿನ ಅಪ್ಪಣೆ ಪಡೆಯದೆ ಓದೋ ಹಾಗಿಲ್ಲ. ಇದಕ್ಕೆ ಮುಖ್ಯವಾಗಿ ಗುರುವು ಬೇಕೇ ಬೇಕು. ಅದನ್ನು ಓದಿ ನಾ ಗುರು ಪುತ್ರ ಆಗಬೇಕೆಂದರೆ ಗುರುವಿನ ಒಲವು ಇಲ್ಲದವನಿಗೆ ದೇವಿ ಮಹಾತ್ಮೆ ಪೂರ್ಣ ಅರ್ಥವಾಗಲಾರದು ಅಂತಾರೆ.

ಸಪ್ಪಂಡಿಯವರ ಪದ :

ಏತಕ್ಕ ಚಿಂತಿಯನ್ನು ಮಾಡುವಿ ಮೂಡಾ ವಿಶ್ವ
ನಾಥನೇ ಪೋಷಿಪನು ಯೋಚಿಸಬೇಡ II ಪll

ಅರ್ಥ – ಎಲವೋ ಮೂರ್ಖನೆ ಏಕೆ ಚಿಂತೆಯನ್ನು ಮಾಡಿ ಕೊರಗುವೆ, ಜಗತ್ತಿಗೆ ಒಡೆಯನಾದ ಭಗವಂತನೇ ನಮ್ಮೆಲ್ಲರನ್ನು ಪೋಷಿಸುವಾಗ –

ಯಾರು ನಮಗಾಗುವ ಸಹಾಯವಿಲ್ಲ ವೆಂದು
ಹಾರೈಸಿ ಸುಮ್ಮನೆ ಬಳಲುವಿಯಲ್ಲ
ಮೂರು ಲೋಕಗಳನ್ನು ಪಾಲಿಸಬಲ್ಲ ನಮ್ಮ
ಮುರಾರಿ ನಿನ್ನೋರ್ವನ ಮರೆಯುವುದಿಲ್ಲ ll ೧ ll

ಅರ್ಥ – ನಮಗೆ ಯಾರು ಸಹಾಯಕರಿಲ್ಲವೆಂದು ನಿರೀಕ್ಷೆ ಸುಮ್ಮನೆ ಬಳಲಿದರೆ ಏನು ಪ್ರಯೋಜನ ? ಮೂರು ಲೋಕ (ಸ್ವರ್ಗ ಭೂಮಿ ಪಾತಾಳ)ಗಳನ್ನು ಕಾಪಾಡುವ ಕಾಮನವೈರಿ (ಶಿವ) ನಿನ್ನನ್ನು ಎಂದಿಗೂ ಮರೆಯೋದಿಲ್ಲ.

ಮಕ್ಕಳು ಮರಿಗೆ ಮುಂದೆ ದಾರಿ ಏನು ? ಎಂದು
ದುಃಖದೊಳು ಕೊರಗಿ ಸಾಯುವೆ ನೀನು
ಮಕ್ಕಳು ಗರ್ಭ ದೊಳಗಿರುವಾಗ ತಾನು ತುತ್ತ
ನಿಕ್ಕಿ ಸಾಕಿದೀಶನೀನಾಗಿಲ್ಲವೇನು ? II೨ Il

ಅರ್ಥ – ಮಕ್ಕಳು ಮರಿಗೆ ಮುಂದೆ ದಾರಿ ಏನು ? ಎಂದು ಚಿಂತಿಸುತ್ತಾ ಕೊರಗಿ ಕೊರಗಿ ಸಾಯುವಿಯಲ್ಲ. ನಿನ್ನ ಮಕ್ಕಳು ತಾಯಿಯ ಉದರದಲ್ಲಿದ್ದಾಗ ಅವರಿಗೆ ತುತ್ತನ್ನು (ಅನ್ನವನ್ನು) ಇಕ್ಕಿದವರಾರು ? ದೇವನಲ್ಲವೇ ?ಅದೇ ದೇವನೇ ಈಗ ನಿನ್ನ ಸಲುಹಿಲ್ಲವೇನು ?

ಬೆಟ್ಟದ ತುದಿಯೊಳಗಿರ್ಪ ಪ್ರಾಣಿಗಳಿಗೆ ಅನ್ನ
ವಿಟ್ಟು ಸಾಕುವೀಶನೆ ದಿಕ್ಕನ್ನು ತೊಳಗೆ
ನಿಷ್ಠೆಯಿಂದ ನಂಬಿದೆ ತತ್ವಪದಗಳಿಗೆ ತಾನೇ
ಕಟ್ಟಿ ತಂದು ಕೊಡುವ ತನ್ನಯ ಬಳಿಗೆ II ೩ II

ಅರ್ಥ -ಬೆಟ್ಟದಾಗ ಓಡಾಡುವ ಪ್ರಾಣಿಗಳಿಗೆ ಅನ್ನ ಕೊಟ್ಟು ಸಾಕಿ ಸಲುಹಿದವರಾರು ? ಭಗವಂತ ಅಲ್ಲವೇನು ? ಅವನೇ ನಮಗೆ ದಾರಿ ತೋರಿಸುವವನು, ಅಂತ ಶ್ರದ್ಧೆಯಿಂದ ನಂಬಿದರೆ ಅನ್ನವನ್ನು ಭಗವಂತ ನಮಗೆ ಇದ್ದಲ್ಲಿಯೇ ಕ್ಷಣಾರ್ಧದಲ್ಲಿ ಪೂರೈಸುತ್ತಾನೆ.

ಆಸೆಯಿಂದಿರುವೆ ನಾಳೆಗುಂಬೆನೆಂದು ಧಾನ್ಯ
ರಾಶಿಯನೇ ಮಾಡಿ ಹೋಗುವುದು ಸಂದು
ಏಸುಕಾಲವಿರಲಾರನೇ ಮುಂದಕ್ಕೆಂದು ಮೇವ
ನಶಿಸದೆ ಬಾಳುವುದು ತಿಳಿನಿಂದು II ೪ II

ಅರ್ಥ –

ಆಸೆಬರುಕನಾಗಿ ನಾಳೆ ಉಣತೀನಿ ಅಂತ ಭಾವಿಸಿ ಧಾನ್ಯದ ರಾಶಿಯನ್ನು ಸಂಗ್ರಹಿಸುವ ಮೂಡ ಮನುಷ್ಯನೇ ನೀನು ಎಷ್ಟು ದಿನ ಬಾಳುತಿ ? ಅಂಬೋದು ನಿನಗೆ ಗೊತ್ತಾಯ್ತೇನು ? ಆಕಳು ಎತ್ತುಗಳು ನಾಳೆಗಂತ ತಮ್ಮ ಮೇವನ್ನು ಸಂಗ್ರಹಿಸಿಟ್ಟಿದ್ದು ಎಲ್ಲಾದರೂ ನೋಡಿ ಏನು ?ಅದನ್ನು ತಿಳಿದು ನೀ ಬಾಳಬೇಕು.

ಪಕ್ಷಿಗಳಿತ್ತತ್ತಲೈದಿ ಮೀಯುವಂತೆ ಸರ್ವ
ವೃಕ್ಷಂಗಳೇನೈದಿ ಮೇಯುವವೆ ಮುಂತೆ
ಪಕ್ಷಿ ವೃಕ್ಷಾದಿಗಳ ಪೋಷಿಸುವಂತೆ ನಿನ್ನ
ರಕ್ಷಿಪನು ಗುರುಸಿದ್ದನೆಲೊ ಬ್ರಾಂತೇ ll ೫ II

ಅರ್ಥ – ಎಲ್ಲೋ ಸುತ್ತಾಡಿ ಪಕ್ಷಿಗಳು ಆಹಾರ ಪಡಿತಾವ. ಆದರೆ ಗಿಡಮರಗಳು ಎಲ್ಲಿಯೂ ಹೋಗದೆ ನಿಂತಲ್ಲೇ ಆಹಾರ ಪಡಿತಾವ. ಪಕ್ಷಿಗಳನ್ನು ಕಾಪಾಡುವಂತೆ ಭಗವಂತ ನಿನ್ನನ್ನು ಕಾಯುತ್ತಾನೆ. ಎಲವೊ ಹುಚ್ಚು ಮನುಜ ನಿನಗೂ ಕಾಯುತ್ತಾನೆ. ಯಾಕ್ ಚಿಂತಿ ಮಾಡುತ್ತಿ ಅಂತ ಈ ಪದ್ಯದ ಸಾರ ಉಣಗೊಳಿಸುತ್ತಾ, ಕಡಕೋಳರ ಪದವನ್ನು ಹಾಗೂ ಪುರಂದರದಾಸರ ಪದವನ್ನು ಹಾಡಿ ಆನಂದಿಸುತ್ತಾರೆ.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.