Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಲೈಫ್ ಈಸ್ ಬ್ಯೂಟಿಫುಲ್
- ಸಿನಿಮಾ - ಸೀರಿಯಲ್

ಲೈಫ್ ಈಸ್ ಬ್ಯೂಟಿಫುಲ್

ಶುಕ್ರವಾರ ಬಂದರೆ ಸಾಕು,ಅದರಲ್ಲೂ ಬೆಳಗಿನ 10.30ರ ಒಂದು ಶೋ,ಅಸಂಖ್ಯಾತ ಕಲಾವಿದರಿಗೆ,ಅಸಂಖ್ಯಾತ ತಂತ್ರಜ್ಞರಿಗೆ ಒಂದು ಲೈಫ್ ಟರ್ನಿಂಗ್ ಪಾಯಿಂಟ್ ಆಗಿ ಅವರವರ ಜೀವನವನ್ನು ಚೇಂಜ್ ಮಾಡುತ್ತದೆ,ಅಲ್ಲಿಂದ ಜೀವನ ಹೊಸಜೀವನ ವಾಗಿ ಬದಲಾಗುತ್ತದೆ ಹಾಗೇ ಹೊಸದೊಂದು ಅವಕಾಶ,ಮತ್ತೊಂದು ಹೊಸದೊಂದು ಕನಸು ಚಿಗುರೊಡೆಯುತ್ತದೆ,ಅಲ್ಲಿಂದ ಉದ್ಯಮದಲ್ಲಿ ಒಂದಷ್ಟು ಹೊಸ ಚಿತ್ರಗಳ ಚಟುವಟಿಕೆಗಳು ಆರಂಭವಾಗುತ್ತವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ,ಮೈ ಆಟೋಗ್ರಾಫ್ ಚಿತ್ರದಲ್ಲಿನ ಹಾಡುಸವಿಸವಿ ನೆನಪು ಸಾವಿರ ನೆನಪು,ಸಾವಿರ ಕಾಲಕು ಸವಿಯದ ನೆನಪು, ಈ ಅದ್ಬುತ ಹಾಡನ್ನು ನೆನಪಿಸಿಕೊಳ್ಳಲು ಕಾರಣ.ಕನ್ನಡದ ಪ್ರತಿಭಾವಂತ ನಟ […]

ಶುಕ್ರವಾರ ಬಂದರೆ ಸಾಕು,ಅದರಲ್ಲೂ ಬೆಳಗಿನ 10.30ರ ಒಂದು ಶೋ,ಅಸಂಖ್ಯಾತ ಕಲಾವಿದರಿಗೆ,ಅಸಂಖ್ಯಾತ ತಂತ್ರಜ್ಞರಿಗೆ ಒಂದು ಲೈಫ್ ಟರ್ನಿಂಗ್ ಪಾಯಿಂಟ್ ಆಗಿ ಅವರವರ ಜೀವನವನ್ನು ಚೇಂಜ್ ಮಾಡುತ್ತದೆ,ಅಲ್ಲಿಂದ ಜೀವನ ಹೊಸಜೀವನ ವಾಗಿ ಬದಲಾಗುತ್ತದೆ ಹಾಗೇ ಹೊಸದೊಂದು ಅವಕಾಶ,ಮತ್ತೊಂದು ಹೊಸದೊಂದು ಕನಸು ಚಿಗುರೊಡೆಯುತ್ತದೆ,ಅಲ್ಲಿಂದ ಉದ್ಯಮದಲ್ಲಿ ಒಂದಷ್ಟು ಹೊಸ ಚಿತ್ರಗಳ ಚಟುವಟಿಕೆಗಳು ಆರಂಭವಾಗುತ್ತವೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ,ಮೈ ಆಟೋಗ್ರಾಫ್ ಚಿತ್ರದಲ್ಲಿನ ಹಾಡುಸವಿಸವಿ ನೆನಪು ಸಾವಿರ ನೆನಪು,ಸಾವಿರ ಕಾಲಕು ಸವಿಯದ ನೆನಪು, ಈ ಅದ್ಬುತ ಹಾಡನ್ನು ನೆನಪಿಸಿಕೊಳ್ಳಲು ಕಾರಣ.ಕನ್ನಡದ ಪ್ರತಿಭಾವಂತ ನಟ ಪ್ರಭು ಮುಂಡ್ಕೂರ್ಮತ್ತು ಸ್ವಾತಿ ಮುಪ್ಪಾಲ ಜೊತೆಯಾಗಿ ಕಾಣಿಸಿಕೊಂಡಿರುವ,’ಹೊಸ ಜೀವನ’ ಚಿತ್ರದ ಮೊದಲ ಸುಮಧುರ ಗೀತೆ “ಏನೇನೋ ಹಂಬಲ…” ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ.
ತುಂಬಾ ಸೆನ್ಸಿಬಲ್ ಆದಂತಹ ಸಾಹಿತ್ಯವನ್ನು ಅಷ್ಟೇ ಮಧುರವಾಗಿ ಹಾಡಿದ ಗಾಯಕರು, ಹಾಡು ಕೇಳಿದ ಎಲ್ಲರೂ ಹಾಗೇ ಒಮ್ಮೆ ತಮ್ಮ ಹೈಸ್ಕೂಲ್ ದಿನಗಳನ್ನು ನೆನಪು ಮಾಡಿಕೊಂಡು, ಒಮ್ಮೆ ಫ್ಲ್ಯಾಷ್ ಬ್ಯಾಕ್ ಗೇ ಹೋಗಿ ಬಂದರು ತಪ್ಪಿಲ್ಲ.

ರಂಗಾಯಣ ರಘು, ಪ್ರಭು ಮುಂಡ್ಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಹೊಸ ಜೀವನ’ ಚಿತ್ರದ ಮೊದಲ ಸುಮಧುರ ಗೀತೆ “ಏನೇನೋ ಹಂಬಲ…” ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಸ್ಯಾಂಡಲ್‌ವುಡ್‌ನ ನೆಚ್ಚಿನ ನಟ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಡಿನ ಬಿಡುಗಡೆ ಬಗ್ಗೆ ಸಂತಸ ಹಂಚಿಕೊಂಡಿರುವ ಚಿತ್ರತಂಡ, “ಕನಸೊಂದು ತನ್ನ ಮೊದಲ ಇಂಪಾದ ರಾಗವನ್ನು ಕಂಡುಕೊಂಡಿದೆ. ಎಷ್ಟೋ ಹೃದಯಗಳು ಜೊತೆಯಾಗಿ ಸಾಗಿದ ಈ ಸುಂದರ ಪಯಣದ ಫಲವೇ ಈ ಹಾಡು. ನಮ್ಮ ಈ ಆರಂಭದ ಭಾಗವಾಗಿದ್ದಕ್ಕಾಗಿ ಶ್ರೀಮುರಳಿ ಸರ್‌ಗೆ ಧನ್ಯವಾದಗಳು. ಸಾವಿರ ನಿರೀಕ್ಷೆಗಳೊಂದಿಗೆ ಈ ಹಾಡನ್ನು ನಿಮ್ಮ ಮುಂದೆ ತಂದಿದ್ದೇವೆ, ಕೇಳಿ ಆನಂದಿಸಿ” ಎಂದು ಭಾವನಾತ್ಮಕವಾಗಿ ತಿಳಿಸಿದೆ.

ಸ್ನೇಹ, ಪ್ರೀತಿ, ಜೀವನದ ನಿತ್ಯ ಹೋರಾಟ ಹಾಗೂ ಮೌಲ್ಯಗಳನ್ನಿಟ್ಟುಕೊಂಡು ಭಾವನಾತ್ಮಕ ಕಥಾಹಂದರವನ್ನು ಸಿದ್ಧಪಡಿಸಲಾಗಿದೆ. ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಮೋಹನ್ ಕುಮಾರ್ ಹನುಮಯ್ಯ ಅವರು ‘ಹೊಸ ಜೀವನ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ಅರ್ಜುನ್ ಪ್ರೊಡಕ್ಷನ್ ಹಾಗೂ ಚಿರು ಪ್ರೊಡಕ್ಷನ್ ಲಾಂಛನದಲ್ಲಿ ಜಿ.ಎಸ್. ಸಂಜೀವ್ ಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರ ಅಭಿನಯದ 400ನೇ ಮೈಲಿಗಲ್ಲಿನ ಸಿನಿಮಾ ಇದಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

ಚಿತ್ರದಲ್ಲಿ ಪ್ರಭು ಮುಂಡ್ಕೂರ್ ಜೊತೆಗೆ ಸ್ವಾತಿ ಮುಪ್ಪಾಲ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್ ಹಾಗೂ ಉದಯ್ ಆಚಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದ್ದು, ಸುಮುಖ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್ ಗೌಡ ಅವರ ಸಂಕಲನ ಹಾಗೂ ರಾಜ್ ಕಾಂತ್ ಎಸ್ ಕೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರಕ್ಕೆ ಪ್ರತಾಪ್ ಎಂ.ಆರ್. ಸಂಭಾಷಣೆ ಬರೆದಿದ್ದು, ಸದ್ಯ ಬಿಡುಗಡೆಯಾಗಿರುವ ಮೆಲೋಡಿ ಹಾಡು ಕೇಳುಗರ ಗಮನ ಸೆಳೆದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.