ರಂಗಭೂಮಿ ಚಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಗಮನ ಸೆಳೆದಿರುವಂತಹ ನಟ ದೀಕ್ಷಿತ್ ಶೆಟ್ಟಿ, ಇತ್ತೀಚಿಗಷ್ಟೇ ದೀಕ್ಷಿತ್ ಶೆಟ್ಟಿ ಅವರನ್ನು ಮಾತನಾಡುವಂತಹ ಸಂದರ್ಭದಲ್ಲಿ, ನಿಮ್ಮ ವಿಡಿಯೋ ಚಿತ್ರದ ಜೊತೆಗೆ ನೀವು ಮಾಡುತ್ತಿರುವಂತಹ ಪ್ರಾಜೆಕ್ಟ್ ಯಾವವು ಯಾವೆಲ್ಲ ಹಂತದಲ್ಲಿವೆ ಎಂದು ಕೇಳಿದಾಗ, ದೀಕ್ಷಿತ್ ಶೆಟ್ಟಿ ತುಂಬಾ ಕಾತುರದಿಂದ ಹೇಳಿದಂತಹ ಮಾತು, ಕೆಬಿಎಂ ನಿರ್ಮಾಣದಲ್ಲಿ ಬರುತ್ತಿರುವಂತಹ ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರದ ಬಗ್ಗೆ.
ಸ್ಯಾಂಡಲ್ವುಡ್ ನಲ್ಲಿ ಗೂಗ್ಲಿ ಮಾಸ್ಟರ್ ಎಂದೇ ಖ್ಯಾತಿಯನ್ನು ಪಡೆದಿರುವಂತಹ, ನಿರ್ದೇಶಕ ಪವನ್ ಒಡೆಯರ್ ರವರ ಡ್ರೀಮ್ ಪ್ರಾಜೆಕ್ಟ್ ಬೇಲ್.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಯಲ್ಲಿ ಬೇಲ್ ಚಿತ್ರವನ್ನು ಮಾಡುತ್ತಿದ್ದಾರೆ ಎಂದು ಘೋಷಣೆಯಾದ ದಿನದಿಂದಲೇ ಚಿತ್ರಕ್ಕೊಂದು ವೇಗ ಸಿಕ್ಕಿದೆ ಚಿತ್ರಕ್ಕೊಂದು ಎನರ್ಜಿ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಡಿಜಿಟಲ್ ಮಾಧ್ಯಮದಲ್ಲಿ ಈಗಾಗಲೇ ಬಿಡುಗಡೆಯಾಗಿರುವಂತಹ ಬೇಲ್ ಚಿತ್ರದ ಪೋಸ್ಟರ್ ಸೇರಿ ಇನ್ನಿತರ ಕಂಟೆಂಟ್ ಗಳನ್ನು ನೋಡಿದಾಗ, ಪ್ರೇಕ್ಷಕರು ಥ್ರಿಲ್ ಆಗಿದ್ದು ನಿಜ ಅಷ್ಟೇ ಸಿನಿಮಾಗಾಗಿ ಕಾಯುತ್ತಿರುವುದು ಸಹ ನಿಜ.
ಇತ್ತೀಚಿಗೆ ಪವನ್ ಒಡೆಯರ್ ಬರೆದಿರುವಂತಹ ಚೆಲುವೆ ಕೇಳೆ ಚೆಲುವೆ ಎಂಬ ರೋಮ್ಯಾಂಟಿಕ್ ಹಾಡೊಂದು ಬಿಡುಗಡೆಯಾಗಿದ್ದು,ಈ ಹಾಡಿನಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ, ಹಾಡನ್ನು ನೋಡಿದಾಗ ಸ್ಪೆಷಲ್ ಡಾನ್ಸ್ ಪರ್ಫಾರ್ಮೆನ್ಸ್ ಮಾತ್ರ ಅದ್ಭುತ, ಇನ್ನೂ ಹಾಡಿನ ಮಧ್ಯೆ ಬರುವಂತಹ ಕ್ರಿಕೆಟ್ ಮೈದಾನದ ಸನ್ನಿವೇಶ ಅಲ್ಲಿ ಕಾಣಿಸಿಕೊಳ್ಳುವ ನಿರ್ದೇಶಕ ಪವನ್ ಒಡೆಯರ್, ಇವೆಲ್ಲವೂ ಕಮರ್ಷಿಯಲ್ ಟಚ್ ಕೊಟ್ಟಿವೆ. ಬೇಲ್ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿಶಿವಣ್ಣನ ‘ಬೇಲ್’ ಚಿತ್ರದಿಂದ ‘ಚೆಲುವೆ ಕೇಳೇ ಚೆಲುವೆ’ ರೊಮ್ಯಾಂಟಿಕ್ ಹಾಡು ರಿಲೀಸ್: ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ!

‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಬೇಲ್’ ಚಿತ್ರದಿಂದ ಮೊದಲ ರೊಮ್ಯಾಂಟಿಕ್ ಮೆಲೋಡಿ ‘ಚೆಲುವೆ ಕೇಳೇ ಚೆಲುವೆ’ ಬಿಡುಗಡೆಯಾಗಿದ್ದು, ಸಂಗೀತ ಪ್ರೇಮಿಗಳ ಮನಗೆದ್ದಿದೆ. ಈ ಇಂಪಾದ ಗೀತೆಯಲ್ಲಿ ಯುವ ಪ್ರತಿಭೆಗಳಾದ ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರ ಮುದ್ದಾದ ಕೆಮಿಸ್ಟ್ರಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಸ್ವತಃ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ.ಎಸ್. ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಶಿವಣ್ಣ ತಮ್ಮ ಪವರ್‌ಫುಲ್ ಲುಕ್ ಹಾಗೂ ಖಡಕ್ ಡೈಲಾಗ್‌ಗಳ ಮೂಲಕ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದರು. ಮಾಸ್ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಪವನ್ ಒಡೆಯರ್ ಅವರೇ ಹೊತ್ತುಕೊಂಡಿದ್ದಾರೆ.
‘ಟಾಕ್ಸಿಕ್’ ಮತ್ತು ‘ಜನ ನಾಯಗನ್’ ಚಿತ್ರಗಳನ್ನು ನಿರ್ಮಿಸಿದ್ದ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ಅತ್ಯಂತ ಅದ್ಧೂರಿ ಬಜೆಟ್‌ನಲ್ಲಿ ‘ಬೇಲ್’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಜೊತೆಗೆ ಮಲಯಾಳಂನ ಖ್ಯಾತ ನಟ ಜಯರಾಮ್, ಸಾಯಿಕುಮಾರ್, ‘ಲೂಸ್ ಮಾದ’ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಜತೆಯಾಗಿದೆ. ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು ‘ಬೇಲ್’ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ.

