ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ರೇಣುಕಾಂಬ ಚಿತ್ರಮಂದಿರದಲ್ಲಿFuel ಚಿತ್ರದ ಮುಹೂರ್ತ ನಡೆದಿದ್ದು,
ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಯೋಗರಾಜ್,
From Two Wheelar To Flight ನಮಗೆ ಫ್ಯೂಲ್ ಬೇಕೇ ಬೇಕು, ಆದರೆ ಇವಲ್ ವಿಚಾರಕ್ಕೂ ಎಷ್ಟು ಮಾಫಿಯ ನಡೆಯುತ್ತದೆ, ಶಿವಲಿಸುತ್ತಾ ಎಷ್ಟು ಕರಾಳ ದಂಧೆ ಇದೇ ಎನ್ನುವುದರ ಮೇಲೆ ಚಿತ್ರದ ಕಂಟೆಂಟ್ ಕ್ಯಾರಿಯಾಗುತ್ತದೆ.
ತಮ್ಮ ಬದುಕಿನ 20 ವರ್ಷಗಳ ಕಾಲ ಪೆಟ್ರೋಲಿಯಂ ಗೆ ಸಂಬಂಧಪಟ್ಟಂತಹ ಕೆಲಸವನ್ನು ಮಾಡಿರುವ ನಿರ್ದೇಶಕ ದೇವರಾಜ್ ಇಲ್ಲಿಯ ತನಕ ಐದು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದು ಸಿವಿಲ್ ಅವರ ನಿರ್ದೇಶನದ 6ನೇ ಚಿತ್ರವಾಗಿದೆ.
1994 To 2014 ತನಕ ನಾನು ಕೆಲಸ ಮಾಡಿದ್ದು ಪೆಟ್ರೋಲಿಯಂ Dept ನಲ್ಲಿ..ಪ್ರತಿ ಪೆಟ್ರೋಲ್ ಬಂಕ್ ನಲ್ಲಿಯೂ ಇದೇ ಗ್ಯಾಂಬಲಿಂಗ್ ನಡೆಯತ್ತೆ.ಗ್ರಾಹಕರ ಜೊತೆ ನಡೆಯುವ ಮೋಸದ ಬಗ್ಗೆ Fuel ಕಥೇಲಿ ಹೇಳಿದ್ದೀನಿ.

ಸಿನ್ಮಾ ಆದ್ಮೇಲೆ ಬಹುಶಃ ನನಗೆ ಬೆದರಿಕೆ ಕರೆಗಳು ಬರಬಹುದು,ಆದರೆ ಸರ್ಕಾರದ ಕಡೆಯಿಂದ ನನಗೆ ತೊಂದರೆ ಆಗಲ್ಲ,ಬದಲಾಗಿ ಸರ್ಕಾರವೇ ನನಗೆ ಸಪೋರ್ಟ್ ಮಾಡುತ್ತೆ
ಅನ್ನೋ ನಂಬಿಕೆ ಇದೆ.Fuel ಮೇಲೆ ದೊಡ್ಡ ಮಾಫಿಯಾ ನಡೀತಾ ಇದೇ,ಅದನ್ನು ಇಲ್ಲಿ ತೋರಿಸ್ತಾ ಇದೀವಿ..
ನನ್ನ ಮಾತೃ ಭಾಷೆ ಕನ್ನಡ ಅಲ್ಲಾ,ಆದ್ರುವೆ ನಿರ್ದೇಶಕನಾಗಿ
ಇಲ್ಲಿ ತನಕ ನಾನು ಮಾಡಿರೋ ಎಲ್ಲ ಚಿತ್ರಗಳು ಕನ್ನಡದಲ್ಲೇ ಮಾಡಿದ್ದೀನಿ,ಮುಂದೆಯೂ ಕೂಡಾ ಕನ್ನಡ ಚಿತ್ರಗಳನ್ನೇ ಮಾಡ್ತೀನಿ,ಬೇರೆ ಭಾಷೆ ಚಿತ್ರ ಮಾಡಲ್ಲ ಎನ್ನುವುದರ ಮೂಲಕ ಕನ್ನಡ ಅಭಿಮಾನವನ್ನು ಮರೆದರು.
ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದ ಉಗ್ರಂ ರವಿ,ತಮಗೆ
ಬೇರೆ ಚಿತ್ರದ ಶೂಟಿಂಗ್ ಇತ್ತು,ಆದ್ರೂನು ನಾನು ಇವತ್ತು ಬಂದಿದೀನಿ ಕಾರಣ ಯೋಗರಾಜ್ ನನಗೆ ಸ್ನೇಹಿತರು ಮತ್ತು ತುಂಬಾ ಒಳ್ಳೆಯ
ನಿರ್ದೇಶಕ, ಈ ವೇದಿಕೆ ಮೇಲೆ ನನಗೆ ಗೊತ್ತಾಯ್ತು ನನಗೂ ಇದರಲ್ಲಿ ಒಂದು ಪಾತ್ರ ಇದೆ ಅಂತಾ, ಸಾಮಾನ್ಯವಾಗಿ ಹೊಸ ನಿರ್ದೇಶಕರು ಅಥವಾ ಕೆಲವು ಸಿನಿಮಾಗಳನ್ನು ಮಾಡಿದ ನಿರ್ದೇಶಕರು ಸಮಾಜದಲ್ಲಿ ನಡೆಯುವ ಕಹಿ ಘಟನೆಗಳ ಮೇಲೆ, ಸಮಾಜಕ್ಕೆ ಸವಾಲುಂಟುವಂತಹ ಕಥೆಗಳ ಮೇಲೆ ಸಿನಿಮಾ ಮಾಡುವ ಪ್ರಕ್ರಿಯೆ ಶುರುವಾಗಿದೆ, ಅದಕ್ಕೆ ಮತ್ತೊಂದು ಬೆಸ್ಟ್ ಉದಾಹರಣೆ ನಮ್ಮ ನಿರ್ದೇಶಕ ಯೋಗರಾಜ್,ಇನ್ನೂ ಚಿತ್ರದ ಪ್ರಮುಖ ಪಾತ್ರಧಾರಿ,ರಘುವೀರ ಮಾತನಾಡಿ, ಶಿವನ್ ಚಿತ್ರದಲ್ಲಿ
ನಾನೊಬ್ಬ ಪತ್ರಕರ್ತನಾಗಿ ಪಾತ್ರ ಮಾಡಿದ್ದೇನೆ.ಜಗತ್ತಿನಲ್ಲಿ ಮಾಡೋದಕ್ಕೆ ತುಂಬಾ ಕೆಲಸ ಇವೆ,ಅದರಲ್ಲಿ ಪತ್ರಕರ್ತರು ತೆಗೆದುಕೊಳ್ಳುವ ರಿಸ್ಕ್ ಅವ್ರು ತೆಗೆದುಕೊಳ್ಳುವ ಗಂಭೀರ ಸ್ವರೂಪದ ಆಧಾರದ ಮೇಲೆ,ಸುದ್ದಿಗಳು ಎಲ್ಲರನ್ನೂ ಎಚ್ಚರ ಮಾಡ್ತಾವೆ.Fuel ಕಥೇಲಿ ಒಬ್ಬ ಪತ್ರಕರ್ತ ಏನೆಲ್ಲ ಸಾಹಸ ಮಾಡುತ್ತಾನೆ ಅನ್ನೋದು ನನ್ನ ಪಾತ್ರದ ಮೇಲೆ ಕ್ಯಾರಿ ಆಗತ್ತೆ.
Fuel ಚಿತ್ರದಲ್ಲಿ ಸಾಮಾನ್ಯ ಹಾಗೆ ಅಸಾಮಾನ್ಯ ನಾಗರಿಕರು ಇದ್ದಾರೆ,ಪೆಟ್ರೋಲಿಯಂ ಕರಾಳ ದಂಧೆಯ ಛಾಯೆ ಇದೇ,ರಾಜಕಾರಣಿಗಳ ಪಾತ್ರವು ಇದೆ, ಸರ್ಕಾರದ ಕೆಲವು ಅಂಶ ತುಂಬಾ ಅಥೆಂಟಿಕ್ ಆಗಿ ಹೇಳಲಾಗಿದೆ ಅನ್ನೋದು ರಘುವೀರ್ ಮಾತಾಗಿತ್ತು.
ಮುಹೂರ್ತದ ನಂತರ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ತಂತ್ರಜ್ಞರು ಹಾಗೂ ಇನ್ನಿತರ ಕಲಾವಿದರು ಹಾಗೂ ನಿರ್ಮಾಪಕರಾದ ನೀಲಕಂಠ ಮತ್ತು ಸುಪ್ರೀತ್ ಕಬ್ಬಾಳ್ ಭಾಗಿಯಾಗಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಮಾಡುವ ಉದ್ದೇಶದಿಂದ ಬಂದಿದ್ದೇವೆ ನಮ್ಮನ್ನ ಹರಸಿ ಎಂದರು.
ರವೀ ಸಾಸನೂರ್ MasterNews365

