Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮಿಸ್ಟರ್ ಜಾಕ್ ಟೀಸರ್ ಲಾಂಚ್
- ವಿಶೇಷ ಸಮಾಚಾರ - ಸಿನಿಮಾ

ಮಿಸ್ಟರ್ ಜಾಕ್ ಟೀಸರ್ ಲಾಂಚ್

ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಬರ್ತಾ ಇರೋ ಚಿತ್ರ,ಮಿಸ್ಟರ್ ಜಾಕ್ ಮಿಸ್ಟರ್ ಜಾನಕಿರಾಮ,ಗುರುನಂದನ್,ಸ್ಯಾಂಡಲ್ವುಡ್ ಕಂಡ ಒಬ್ಬ ಡಿಫರೆಂಟ್ ಆದ ನಟ,ಒಂದ್ಕಡೆ ನಾಯಕನಾಗಿ ಮಿಂಚಿದರೆ,ಇನ್ನೊಂದು ಕಡೆ ಒಳ್ಳೆಯ ಪೋಷಕ ನಟನಾಗಿ ಆಕ್ಟ್ ಮಾಡ್ತಾರೆ,ಮತ್ತೊಮ್ಮೆ ಒಳ್ಳೆಯ ಕಾಮಿಡಿ ಪಾತ್ರದ ಮೂಲಕ ಸೂಪರ್ ಆಗಿ ನಟಿಸಿ ಸ್ಕೋರ್ ಮಾಡ್ತಾರೆ,ಒಟ್ಟಾಗಿ ಹೇಳುವುದಾದರೆ ಗುರುನಂದನ್ ಅಪ್ಪಟ ಪ್ರತಿಭಾವಂತ ಕಲಾವಿದ ಅಂದ್ರೆ ತಪ್ಪಿಲ್ಲ. Rank Starಗುರುನಂದನ್ ಈಗ ಜಾನಕಿರಾಮ,ನಾನೊಬ್ಬ ಒಳ್ಳೆ ಸ್ಟಾಂಡ್ ಅಪ್ ಕಾಮಿಡಿಯನ್, ಆತನ ಬದುಕು ಹೇಗಿರತ್ತೆ, ಪ್ರೀತಿ,ಪ್ರೇಮ್,ಪ್ರಣಯ ಮತ್ತು ಮದ್ವೆ ಇದೆಲ್ಲವೂ ಜಾನಕಿರಾಮನ […]

ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಬರ್ತಾ ಇರೋ ಚಿತ್ರ,ಮಿಸ್ಟರ್ ಜಾಕ್

ಮಿಸ್ಟರ್ ಜಾನಕಿರಾಮ,
ಗುರುನಂದನ್,ಸ್ಯಾಂಡಲ್ವುಡ್ ಕಂಡ ಒಬ್ಬ ಡಿಫರೆಂಟ್ ಆದ ನಟ,
ಒಂದ್ಕಡೆ ನಾಯಕನಾಗಿ ಮಿಂಚಿದರೆ,ಇನ್ನೊಂದು ಕಡೆ ಒಳ್ಳೆಯ ಪೋಷಕ ನಟನಾಗಿ ಆಕ್ಟ್ ಮಾಡ್ತಾರೆ,ಮತ್ತೊಮ್ಮೆ ಒಳ್ಳೆಯ ಕಾಮಿಡಿ ಪಾತ್ರದ ಮೂಲಕ ಸೂಪರ್ ಆಗಿ ನಟಿಸಿ ಸ್ಕೋರ್ ಮಾಡ್ತಾರೆ,ಒಟ್ಟಾಗಿ ಹೇಳುವುದಾದರೆ ಗುರುನಂದನ್ ಅಪ್ಪಟ ಪ್ರತಿಭಾವಂತ ಕಲಾವಿದ ಅಂದ್ರೆ ತಪ್ಪಿಲ್ಲ.

Rank Star
ಗುರುನಂದನ್ ಈಗ ಜಾನಕಿರಾಮ,
ನಾನೊಬ್ಬ ಒಳ್ಳೆ ಸ್ಟಾಂಡ್ ಅಪ್ ಕಾಮಿಡಿಯನ್, ಆತನ ಬದುಕು ಹೇಗಿರತ್ತೆ, ಪ್ರೀತಿ,ಪ್ರೇಮ್,ಪ್ರಣಯ ಮತ್ತು ಮದ್ವೆ ಇದೆಲ್ಲವೂ ಜಾನಕಿರಾಮನ ಲೈಫಲ್ಲಿ ಹೇಗೆಲ್ಲ ಅವುಗಳನ್ನು ಫೇಸ್ ಮಾಡ್ತಾನೆ ಅನ್ನೋದು ನನ್ನ ಆಶಯ,
ಇದರಲ್ಲಿ ನಾನೊಬ್ಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಪಾತ್ರ ಮಾಡಿದ್ದು ಖುಷಿ,ಹಾಗೆ ನನಗೆ ಗಂಗಾವತಿ ಪ್ರಾಣೇಶ್ ನನ್ನ ಫೇವರೆಟ್ ಎಂದರು.

ಇನ್ನು ತಪಸ್ವಿನಿ ಪೂಣಚ್ಚ,ನನ್ನ ಪಾತ್ರ ಎಲ್ಲರಿಗೂ ಕನೆಕ್ಟ್ ಆಗತ್ತೆ,ನಿಮ್ಮ ಮನೆಯ ಹೆಣ್ಮಗಳು ಅಂತಾ ಫೀಲ್ ಆಗತ್ತೆ ಅನ್ನೋ ಭರವಸೆ ಬರತ್ತೆ ಅನ್ನೋದರ ಜೊತೆಗೆ ತಾವು ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ನಟಿಸಿದ್ದು, ಸ್ಕೂಲ್ ಟೀಚರ್ ಆಗಿ ಮಾಡಿದ ಖುಷಿ ಬೇರೆ,ಎನ್ನುತ್ತಿದ್ದಂತೆ ಅಲ್ಲಿಯೇ ಇದ್ದ ಕೆಲವರು ಕೇಳಿದ ಪ್ರಶ್ನೆ ಸಖತ್ ಆಗಿತ್ತು,ಇಷ್ಟು ಚೆನ್ನಾಗಿರೋ ಟೀಚರ್ ಕ್ಲಾಸ್ ರೂಮ್ ಗೆ ಹೋದ್ರೆ ಮಕ್ಕಳು ಪಾಠ ಕಲಿತಾರಾ ಎಂದಾಗ,ನಕ್ಕು ನಕ್ಕು ಸುಮ್ಮನಾದರು ನಾಯಕಿ ಮಣಿ..

ಚಿತ್ರದ ನಿರ್ದೇಶಕ ಸುಮಂತ್ ಗೌಡ ಮಾತನಾಡಿ, ಮಿಸ್ಟರ್ ಜಾಕ್ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ ಸ್ಪೆಷಲಿ ಚಿತ್ರದಲ್ಲಿಲವ್,ಎಮೋಷನ್,ಕಾಮಿಡಿ,ಹಾಗೆ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಇದೆ,ನೋಡುಗರಿಗೆ ಹೊಸ ಫೀಲ್ ಕೊಡತ್ತೆ ಅನ್ನೋ ಭರವಸೆ ಇದೇ ಎಂದರು.

ಮಿತ್ರ..
ಒಬ್ಬ ನಿರ್ದೇಶಕ ತಾನು ಮಾಡುವ ಮೊದಲ ಪ್ರಯತ್ನ ತುಂಬಾ ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು ಮಾಡುವ ಪ್ರಕ್ರಿಯೆ ಇದ್ದರೆ ಚೆಂದ ಅನ್ನಿಸತ್ತೆ,
ಸುಮಂತ್ ಗೌಡ ಕೂಡಾ ಅದೇ ದಿಕ್ಕಿನಲ್ಲಿ ಕೆಲಸ ಮಾಡಿದ್ದು ನಮ್ಮಿಂದ ಕೆಲಸ ಕೆಲಸ ತೆಗೆಸಿ ಒಳ್ಳೆಯ ಪ್ರಾಜೆಕ್ಟ್ ಮಾಡಿದ್ದು ನಮಗೆ ಸಂಭ್ರಮ ಅಂದ್ರು ಮಿತ್ರ.

ಕಿರುತೆರೆ ಮತ್ತು ಬೆಳ್ಳಿತೆರೆ ಮೇಲೆ ನೋಡುಗರನ್ನು,ತಮ್ಮ ವಿಭಿನ್ನ ಮ್ಯಾನರಿಸಂ ನಿಂದ ಹಿಡಿದಿಟ್ಟುಕೊಳ್ಳುವ ಶಕ್ತಿ ಇರೋ ನಟ ಅದು ಅರವಿಂದ್.
ಗುರುನಂದನ್ ಬಗ್ಗೆ ನಾನು ಹೇಳಿದ್ದ ಮಾತು,ಕಂಡ ಕನಸು ನಿಜಾ ಆಗಿದ್ದು ಗುರು ಜರ್ನಿ ನೋಡಿದಾಗ ನಿಜಾ ಅನ್ನಿಸ್ತು,ತುಂಬಾ ಅದ್ಬುತವಾದ ಕಥೆ ಅಂತಾ ಇಲ್ಲವೇ ಇಲ್ಲ,
ಈಗಾಗಲೇ ಕನ್ನಡದಲ್ಲಿ ಬಂದ ಬಹಳ ಚಿತ್ರಗಳಲ್ಲಿ ಒಳ್ಳೆಯ ಮೆಸೇಜ್ ಕೊಟ್ಟಿದ್ದಾರೆ,ಮಿಸ್ಟರ್ ಜಾಕ್ ಒಂದೊಳ್ಳೆ ಚಿತ್ರ ಆಗುವುದರಲ್ಲಿ ಡೌಟ್ ಇಲ್ಲ..


ಗುರುನಂದನ್ ನನ್ನ ಜಿಲ್ಲೆಯವರು,ತುಂಬಾ ಭರವಸೆಯ ನಟ,ಆದ್ರೂ ಅವ್ರ ಜತೆ ಕೆಲಸ ಮಾಡೋದಕ್ಕೆ ಆಗಿರಲಿಲ್ಲ,ಅಕ್ಟೋಬರ್ ನಲ್ಲಿ ಬರುವ ಮಿಸ್ಟರ್ ಜಾಕ್ ಸಲುವಾಗಿ ನಾನು ಕಾಯ್ತಾ ಇದ್ದೀನಿ ಅಂದಿದ್ದು ಗುರುನಂದನ್ ಮೇಲಿನ ಪ್ರೀತಿ ತೋರಿಸ್ತು.ಎನ್ನುವುದರ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದು ಧರ್ಮಣ್ಣ ಕಡೂರು

ಕಾರ್ಯಕ್ರಮದಲ್ಲಿ ನಟಿ ಸುಶ್ಮಿತಾ,ನಟ ಅನಂತು ಮತ್ತು ಚಿತ್ರದ ಸಂಪೂರ್ಣ ತಂಡ ಇದ್ದು ಮಿಸ್ಟರ್ ಜಾಕ್ ಗೆ ಮತ್ತಷ್ಟು ಎನರ್ಜಿ ಕೊಡ್ತು..

ಮಿಸ್ಟರ್ ಜಾಕ್ ಸೆಪ್ಟೆಂಬರ್ 11ಕ್ಕೇ ರಿಲೀಸ್ ಆಗ್ತಾ ಇದೆ.

ರವೀ ಸಾಸನೂರ್
MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.