Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸಿಟಿ ಲೈಟ್ಸ್ Film Review
- ರಿವ್ಯೂ - ಸಿನಿಮಾ

ಸಿಟಿ ಲೈಟ್ಸ್ Film Review

ಬೆಳಕು ಇದ್ದಾಗ ಜನರು,ಜಗತ್ತು ತುಂಬಾ ಚೆನ್ನಾಗ್ ಕಾಣತ್ತೆ,ಆದರೆ ಅದೇ ಬೆಳಕು ಹೋದಾಗ ,ಕತ್ತಲೆಯಾದಾಗ ಬೆಂಗಳೂರು ಸಿಟಿಯಲ್ಲಿ ಏನಾಗತ್ತೆ ?? ಬೆಂಗಳೂರು ಎಂಬ ಮಾಯನಗರಿ,ಅದರಲ್ಲೂ ಮೆಜೆಸ್ಟಿಕ್ ಎಂಬ ಕರಾಳ ದುನಿಯಾ,ಮೆಜೆಸ್ಟಿಕ್ ಸುತ್ತ ಮುತ್ತಲು ನಡೆಯುವಂತಹ ಘನ ಘೋರ ದಂದೆಗಳು,ಅದರಲ್ಲೂ ವಿಶೇಷವಾಗಿ ಬೇರೆ ಊರಿನಿಂದ ಬರುವಂತಹ ಮುಗ್ಧ ಜನರ ಬದುಕು ಭವಣೆ ಶುರುವಾಗುವುದೇ ಮೆಜೆಸ್ಟಿಕ್ ಎಂಬ ಅಂಗಳದಿಂದ. ತಾವಿದ್ದ ಊರು,ತಾವಿದ್ದ ಜಾಗ, ತಾವಿದ್ದ ಹಳ್ಳಿ, ತಾವಿದ್ದ ಪುಟ್ಟ ಪ್ರಪಂಚದಿಂದ, ಬೆಂಗಳೂರಿಗೆ ಹೋದರೆ ತುಂಬಾ ಚೆನ್ನಾಗಿ ಬದುಕಬಹುದು ಎಂಬ ಮಾತು ಕಿವಿಗೆ […]

ಬೆಳಕು ಇದ್ದಾಗ ಜನರು,ಜಗತ್ತು ತುಂಬಾ ಚೆನ್ನಾಗ್ ಕಾಣತ್ತೆ,ಆದರೆ ಅದೇ ಬೆಳಕು ಹೋದಾಗ ,
ಕತ್ತಲೆಯಾದಾಗ ಬೆಂಗಳೂರು ಸಿಟಿಯಲ್ಲಿ ಏನಾಗತ್ತೆ ??

ಬೆಂಗಳೂರು ಎಂಬ ಮಾಯನಗರಿ,ಅದರಲ್ಲೂ ಮೆಜೆಸ್ಟಿಕ್ ಎಂಬ ಕರಾಳ ದುನಿಯಾ,ಮೆಜೆಸ್ಟಿಕ್ ಸುತ್ತ ಮುತ್ತಲು ನಡೆಯುವಂತಹ ಘನ ಘೋರ ದಂದೆಗಳು,
ಅದರಲ್ಲೂ ವಿಶೇಷವಾಗಿ ಬೇರೆ ಊರಿನಿಂದ ಬರುವಂತಹ ಮುಗ್ಧ ಜನರ ಬದುಕು ಭವಣೆ ಶುರುವಾಗುವುದೇ ಮೆಜೆಸ್ಟಿಕ್ ಎಂಬ ಅಂಗಳದಿಂದ.

ತಾವಿದ್ದ ಊರು,ತಾವಿದ್ದ ಜಾಗ, ತಾವಿದ್ದ ಹಳ್ಳಿ, ತಾವಿದ್ದ ಪುಟ್ಟ ಪ್ರಪಂಚದಿಂದ, ಬೆಂಗಳೂರಿಗೆ ಹೋದರೆ ತುಂಬಾ ಚೆನ್ನಾಗಿ ಬದುಕಬಹುದು ಎಂಬ ಮಾತು ಕಿವಿಗೆ ಬೀಳುತ್ತಿದ್ದಂತೆ, ಬದುಕನ್ನ ಕಟ್ಟಿಕೊಳ್ಳಬೇಕು, ಒಂದಷ್ಟು ಹಣ ಮಾಡಬೇಕು,ಸ್ವಲ್ಪ ಶ್ರೀಮಂತಿಕೆಯ ಜೀವನ ನಡೆಸಬೇಕು ಎಂಬ, ಕನಸುಗಳನ್ನು ಹೊತ್ತು
ಬೆಂಗಳೂರು ಎಂಬ ಸಿಟಿಗೆ ಬರುವಂತಹ, ಜವಾಬ್ ದಾರಿ ದೀಪಗಳ ಕಥೆಯೇ,ಸಿಟಿ ಲೈಟ್ಸ್.

ಸಿಟಿ ಲೈಟ್ಸ್ ಎಂಬ ಶೀರ್ಷಿಕೆ ಅನಾವರಣ ಅದಾಗಿನಿಂದಲೂ,
ಚಿತ್ರ ಬಿಡುಗಡೆಯ ಹಿಂದಿನ ದಿನದ ತನಕವೂ, ಸಿಟಿ ಲೈಟ್ಸ್ ನಮ್ಮ ನಿಮ್ಮೆಲ್ಲರ ಕಣ್ಣೆದುರಿಗೆ ನಡೆಯುವಂತಹ ಕಥೆ ಎಂದು ಸಾರಿ ಸಾರಿ ಹೇಳಿದ್ದರು ನಿರ್ದೇಶಕ ವಿಜಯಕುಮಾರ್,
ಚಿತ್ರ ನೋಡಿ ಹೊರಬಂದ ನಂತರ ನನಗೆ ಅಷ್ಟೇ ಅಲ್ಲ ಎಲ್ಲರಿಗೂ ಅನಿಸಿದ್ದು ಕೂಡ ಅದೇ.

ಬೇರೆ ಬೇರೆ ಜಾಗಗಳಿಂದ, ಬೇರೆ ಬೇರೆ ಹಳ್ಳಿಗಳಿಂದ, ಭಿನ್ನ ವಿಭಿನ್ನವಾದಂತಹ ಆಲೋಚನೆಯೊಂದಿಗೆ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರು ಸಿಟಿಗೆ ಬರುವಂತಹ ಹುಡುಗ ಮತ್ತು ಹುಡುಗಿಯ ಕಥೆ ಸಿಟಿ ಲೈಟ್ಸ್.

ತಂದೆ ತಾಯಿ ಇಲ್ಲದ ಅನಾಥ,ಮಾವನನ್ನು ಹೆತ್ತವರ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಶಿವು ( ವಿನಯ್ ರಾಜಕುಮಾರ್ ),ಮಾವ ತೀರಿಹೋದ ನಂತರ,
ಕೆಲಸವನ್ನು ಹುಡುಕಿಕೊಂಡು ಬೆಂಗಳೂರು ಎಂಬ ಮಾಯಾನಗರಿಯತ್ತ ಬರುವ ಶಿವು ಟ್ರ್ಯಾಕ್ ಒಂದು ಕಡೆಯಾದರೆ,

ತನ್ನ ಹೆತ್ತವರನ್ನು ಕಳೆದುಕೊಂಡು,
ಕಳೆದು ಹೋದ,ತನ್ನ ಮುಗ್ಧ ಸಹೋದರನನ್ನ ಹುಡುಕಿಕೊಂಡು ಬರುವ ಮೋನಿಷಾ ( ಮೋನಿಷಾ ವಿಜಯ್ ಕುಮಾರ್ ) ಇನ್ನೊಂದಡೆ.

ಒಬ್ಬರಿಗೊಬ್ಬರು ಪರಿಚಯವಿಲ್ಲದ,ಕಾಲ ಕ್ರಮೇಣ ಪರಿಚಿತರಾಗುವ,
ಈ ಇಬ್ಬರು ಬೆಂಗಳೂರು ಸಿಟಿಯಲ್ಲಿ,ವಿಕೃತ,
ಕಾಮುಕ,ದುಷ್ಟ, ಸೈಕೊಗಳ, ಕೆಟ್ಟ ಪರಿಸ್ಥಿತಿಯಲ್ಲಿ ಅನುಭವಿಸುವ ಬದುಕಿನ ಮಹಾ ಹೋರಾಟವೇ ಚಿತ್ರದ ಪ್ರಮುಖ ಕಥಾವಸ್ತು.

ವೇಶ್ಯಾವಾಟಿಕೆ ಹೇಗೆ ನಡೆಯತ್ತೆ,ಅಮಾಯಕ ಹೆಣ್ಣು ಮಕ್ಕಳನ್ನು ಹೇಗೆ ಟ್ರಾಪ್ ಮಾಡುತ್ತಾರೆ ಮತ್ತು ಮಾಡಲಾಗುತ್ತದೆ,ಇಂತಹ ನರಕದಲ್ಲಿ ಬಿದ್ದ ಹೆಣ್ಣುಮಕ್ಕಳ ಕಥೆಯೇನು ? ಎಂಬಂತಹ ಕರಾಳ ಸತ್ಯದ ವಿಷಯವನ್ನು ಬ್ಯಾಕ್ಡ್ರಾಪ್ ನಲ್ಲಿ ಇಟ್ಟುಕೊಂಡು ಮೂವ್ ಆಗುವ ಈ ಕಥೆಯಲ್ಲಿ,
ಅಮ್ಮಾಜಿಯಾಗಿ ಕಾಣಿಸಿಕೊಂಡಿರುವ ( ಉಮಾಶ್ರೀ ) ಯವರ ಪಾತ್ರ ತುಂಬಾ ಇಂಪ್ಯಾಕ್ಟ್ ಆಗಿ ನೋಡುಗರ ಮನಸ್ಸಲ್ಲಿ ಒಂದು ಜಾಗ ಮಾಡಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ,ಅಮ್ಮಾಜಿ ಪಾತ್ರದ ಬಗ್ಗೆ ಇನ್ನೊಂಚೂರು ಹೇಳಿ ಬಿಟ್ಟರೆ ಕಥೆ ಹೇಳಿದಂತಾಗುತ್ತದೆ.

ಕನ್ನಡದ ಇಬ್ಬರು ಸೂಪರ್ ಸ್ಟಾರ್ ಗಳ ಕುರಿತ ವಿಷ್ಯ,ಚಿತ್ರ ನೋಡುವ ನೋಡುಗರಿಗೆ ಸಖತ್ ಥ್ರಿಲ್ ಕೊಡತ್ತೆ,

ಇಂತಹ ಕೆಟ್ಟ ಪರಿಸ್ಥಿತಿಯ ಭಾಗವೆಂಬಂತೆ ಚಿತ್ರದಲ್ಲಿ,ಪುನೀತ್
ಎಂ ಎಲ್ ಎ,ವೀರ,ಪೊಲೀಸ್ ಸೇರಿ ಬರುವಂತಹ ಕೆಲವು ಪಾತ್ರಗಳು ಹೇಗೆಲ್ಲ ಸಿಟಿಗೆ ಬರುವಂತಹ ಕೆಲವು ಅಮಾಯಕರ ಬದುಕಿನಲ್ಲಿ,ತಾವೇ ನಿರ್ಣಯ ತೆಗೆದುಕೊಂಡು ಆಟ ಆಡಿಸುತ್ತಾರೆ ಎಂಬುದನ್ನು,ಮುಖಕ್ಕೆ ಹೊಡೆದಂತೆ ತುಂಬಾ ಕಲ್ಟ್ ಆಗೇ ತೋರಿಸಿದ್ದಾರೆ ನಿರ್ದೇಶಕ ವಿಜಯಕುಮಾರ್.

ಅಷ್ಟಕ್ಕೂ ಈ ವೇಶ್ಯಾವಾಟಿಕೆ ಧಂಧೆ ಹಿನ್ನಲೆ ಏನು ?

ಚಿತ್ರದಲ್ಲಿ ಶಿವು ನಾಯಕಿ ಮೋನಿಷಾಳನ್ನು ಮಗುವಂತೆ ಪ್ರೀತಿಸಿ,ಕ್ಲೈಮ್ಯಾಕ್ಸ್ ನಲ್ಲಿ ಯಾಕೆ ಶಿವತಾಂಡವ ಆಡುತ್ತಾನೆ ??

ಅಮ್ಮಾಜಿ ಹೇಳುವ ಸಂಭಾಷಣೆಗಳು,ಮಾಡುವ ಕೆಲಸ ನೋಡುಗರ ಮೈ ಜುಮ್ ಎನ್ನುವಂತೆ ಮಾಡಲು ಕಾರಣಗಳೇನು ??

ಅಷ್ಟಕ್ಕೂ ಚಿತ್ರ ಮುಗಿಯುವ ಹೊತ್ತಿಗೆ,ಶಿವು ಮತ್ತು ಮೋನಿಷಾ ಬೆಳಕನ್ನು ಕಂಡು ಕೊಳ್ಳುತ್ತಾರೋ ಅಥ್ವಾ ಬೆಳಕನ್ನು ಹುಡುಕುತ್ತಲೇ,ತಮ್ಮ ಹೋರಾಟವನ್ನು ನಡೆಸುತ್ತಾರೆ ಅನ್ನೋದೇ ಇಂಟ್ರೆಸ್ಟಿಂಗ್ ಆದ ವಿಷ್ಯ,ಇದನ್ನು ನೀವು ಥಿಯೇಟರ್ನಲ್ಲಿ ನೋಡಿದ್ರೆ ಆ ಮಜಾ ಸಿಗತ್ತೆ.

ಚಿತ್ರ ನೋಡಿ ಶಿವರಾಜ್ ಕುಮಾರ್ ಹೇಳಿದಂತೆ,
ಶಿವನಾಗಿ ದೊಡ್ಮನೆ ದೊಡ್ಡ ಮೊಮ್ಮಗ ವಿನಯ್ ರಾಜಕುಮಾರ್ ಚೆನ್ನಾಗ್ ನಟಿಸಿದ್ದಾರೆ,ಕೆಲವೊಂದು ದೃಶ್ಯಗಳಲ್ಲಿ ಮತ್ತು ಹಾಡಿನ ತುಣುಕುಗಳಲ್ಲಿ ನೀಡುವ ಕ್ಯೂಟ್ ರಿಯಾಕ್ಷನ್ ಎಲ್ಲರಿಗೂ ಕನೆಕ್ಟ್ ಆಗತ್ತೆ,

ಮೋನಿಷಾ ತುಂಬಾ ಸರಳವಾಗಿ ನಟನೆ ಮಾಡಿದ್ದಾರೆ ಎಂಬ ಭಾವ ಬರುತ್ತದೆ,ಮೊದಲ ಚಿತ್ರ ಮಾಡುವ ಯಾವುದೇ ನಾಯಕಿಗೆ ಆಗಲಿ,ಪಾತ್ರವನ್ನು ಜೀವಿಸುವಂತಹ ಮತ್ತು ಪಾತ್ರಕ್ಕೆ ಎಷ್ಟು ಸಾಧ್ಯವೂ ಅಷ್ಟು ಪ್ರಾಮಾಣಿಕ ಜೀವ ತುಂಬುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂಬಂತೆ,ನಾಯಕಿ ಮೋನಿಷಾ ಇಷ್ಟವಾಗುತ್ತಾರೆ.

ಉಮಾಶ್ರೀಯವರಂತೂ ಸಿಂಪ್ಲಿ ಸೂಪರ್ಬ್ ಹಾಗೆ ಪುನೀತ್ ಕೂಡಾ ತನ್ನ ಕಲ್ಟ್ ಸ್ವಾಗ್ ನಿಂದ ನೋಡುಗರಲ್ಲಿ ಕಿಚ್ಚು ಹತ್ತಿಸುತ್ತಾರೆ.

ಎಂದಿನಂತೆ ಚರಣ್ ರಾಜ್ ಸಂಗೀತ ಕಾಡುವಂತಿದೆ,ಚಿತ್ರ ಬಿಡುಗಡೆ ಆಗುವುದಕ್ಕೂ ಮುಂಚೆನೇ ನಮಗೆ ಅನಿಸಿದಂತೆ ಹಾಡುಗಳೆಲ್ಲವೂ ಒಳ್ಳೇ ಆಲ್ಬಮ್ ಆಗಿವೆ,
ಮಾಸ್ತಿ ರೈಟಿಂಗ್ ವೇರಿ ಸೆನ್ಸಿಬಲ್,ಯಾವ ದೃಶ್ಯಕ್ಕೆ ಎಷ್ಟು ಮಾತು ಬೇಕು ಅಷ್ಟೇ ಬರೆದಿದ್ದಾರೆ,ಅದು ತುಂಬಾ ಕಡೆ ಸ್ಪಷ್ಟವಾಗಿ ಕಾಣತ್ತೆ ಹಾಗೆಶಿವಸೇನಾ ನೈಸ್ ಕಲ್ಟ್ ಕ್ಲಾಸಿಕ್ ಶೈಲಿಯಲ್ಲೇ ಛಾಯಾಗ್ರಹಣ ಮಾಡಿ ತೋರಿದ್ದಾರೆ.

ಸಲಗ ಮತ್ತು ಭೀಮ ನಂತರ ತಮ್ಮ ಮೂರನೇ ಚಿತ್ರಕ್ಕೆ,ನಿರ್ದೇಶನದ ಕ್ಯಾಪ್ ತೊಟ್ಟಿದ್ದ ವಿಜಯ್ ಕುಮಾರ್,ಎಲ್ಲ ಕಡೆ ಹೇಳಿದಂತೆ,ಕೊಟ್ಟ ಮಾತಿನಂತೆ, ಬೆಂಗಳೂರಲ್ಲಿ,ಅದು ಮೆಜೆಸ್ಟಿಕ್ ನಲ್ಲಿ ಬೆಳಕು ಆರಿದ ಮೇಲೆ ರಾತ್ರಿ ನಡೆಯುವ ಅಸಲಿ ಕಥೆಗಳನ್ನು,ತಮ್ಮ ಸಿಟಿ ಲೈಟ್ಸ್ ನಲ್ಲಿ ತೋರಿಸಿದ್ದಾರೆ ಎಂದರೆ ತಪ್ಪಿಲ್ಲ.

ಸಿಟಿ ಲೈಟ್ಸ್ ಒಮ್ಮೆ ನೋಡಬಹುದು


ರವೀ ಸಾಸನೂರ್
MasterNews365.Com

ರೇಟಿಂಗ್: 3.5 / 5

ಚಿತ್ರ : ಸಿಟಿ ಲೈಟ್ಸ್

ನಿರ್ದೇಶನ : ವಿಜಯ್ ಕುಮಾರ್

ಸಂಗೀತ : ಚರಣ್ ರಾಜ್

ಛಾಯಾಗ್ರಹಣ : ಶಿವಸೇನಾ

ಕಲಾವಿದರು : ವಿನಯ್ ರಾಜಕುಮಾರ್, ಮೋನಿಷಾ ವಿಜಯ್ ಕುಮಾರ್,ಉಮಾಶ್ರೀ,ಪುನೀತ್ ಸೇರಿ ಇನ್ನೂ ಮುಂತಾದವರು

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.