ಗೆಳೆಯ ಅಂದ್ರೆ ಹಿಂಗಿರಬೇಕು……!!
ರೇಟಿಂಗ್ : 3.5 / 5
ಚಿತ್ರ : ಚಂದ್ರಹಾಸ
ಕಲಾವಿದರು : ಹರೀಶ್ ಹಿರಿಯೂರು,ನಿಂಗರಾಜು ಮಂಡ್ಯ,ಛಾಯಶ್ರೀ,ಸಂತೋಷ್ ಕೇರಿ,ಸೂರ್ಯಕಲಾ,ಜ್ಯೋತಿ ಲಕ್ಷ್ಮಣ ಹಾಗೂ ಮುಂತಾದವರು.
ನಿರ್ದೇಶಕ : ಆನಂದ್ ಕಳಕಬಂಡಿ
ಸಂಗೀತ : ಪೂರ್ಣಚಂದ್ರ ತೇಜಸ್ವಿ
ನಿರ್ಮಾಣ : ಅಮರಶ್ರೀ ಫಿಲಂಸ್
ಇಬ್ಬರು ಆತ್ಮೀಯ ಗೆಳೆಯರು, ಅವರಿಬ್ಬರ ನಡುವೆ ಪ್ರೀತಿ, ಬಾಂಧವ್ಯ, ಪರಸ್ಪರ ಕಾಳಜಿ, ತ್ಯಾಗ ಇದ್ಯಾವುದಕ್ಕೂ ಕಡಿಮೆ ಇರಲಿಲ್ಲ.
ಇಂತಹ ಕಂಟೆಂಟ್ ಮೇಲೆ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಥೆಗಳು ಹಿಂದೆಯೂ ಬಂದಿವೆ,ಇಂದಿಗೂ ಬರ್ತಾ ಇವೆ, ಮುಂದೆಯೂ ಸಹ ಬರುತ್ತವೆ ಕಾರಣ ಮೇಲೆ ನಮೂದಿಸಿದ ಎಲ್ಲ ವಿಷಯಗಳು ಯಾವತ್ತಿಗೂ ಎವರ್ಗ್ರೀನ್.
ಗೆಳೆತನದ ವಿಚಾರವಾಗಿ, ತಾಯಿ ತಂದೆಯ ವಿಚಾರವಾಗಿ, ಪ್ರೀತಿ ಪ್ರೇಮದ ವಿಚಾರವಾಗಿ ಎಷ್ಟೇ ಕಥೆಗಳು ಬಂದರು,ಹೊಸದಾಗಿ ಸಿನಿಮಾ ಮಾಡುವ ನಿರ್ದೇಶಕರು ಆಯಾ ಕಥೆ, ಅವುಗಳ ನಿರೂಪಣೆ ಮತ್ತು ಟ್ರೀಟ್ಮೆಂಟ್ ವಿಚಾರದಲ್ಲಿ ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದು ಇಡಬಹುದು ಇಂಥದ್ದೇ ಒಂದು ಪ್ರಯತ್ನ ಆಗಿದ್ದು,ಈ ವಾರ ತೆರೆಗೆ ಬಂದಿರುವ ಆನಂದ್ ಕಳಕಬಂಡಿ ನಿರ್ದೇಶನದ ಚಂದ್ರಹಾಸ ಅನ್ನೋ ಶುದ್ಧ ಉತ್ತರ ಕರ್ನಾಟಕದ ಚಿತ್ರ.
ಚಿತ್ರದ ನಾಯಕ ಸೋಮಶೇಖರ್ ( ಹರೀಶ್ ಹಿರಿಯೂರು ) ಒಬ್ಬ ಸೋಮಾರಿ, ಜವಾಬ್ದಾರಿ ಮನುಷ್ಯ, ಪಾನಿಪುರಿ ತಿನ್ನುತ್ತಾನೆ ಕೊಡಲು ಕೊಡಲು ಹಣವಿಲ್ಲ,ನಾನು ಓಡಿಸುವ ಗಾಡಿಯ ಪೆಟ್ರೋಲ್ ಖಾಲಿ ಆಗುತ್ತದೆ,ಪೆಟ್ರೋಲ್ ಗೆ ದುಡ್ಡಿಲ್ಲ,ಮನೆಯ ಒಂದು ಸಮಸ್ಯೆಗೆ ಬೇರೊಬ್ಬರ ಬಳಿ ಬಡ್ಡಿಗೆ ಹಣ ತರುತ್ತಾನೆ,ಅದನ್ನು ವಾಪಸ್ ಕೊಡಲು ಹಣವಿಲ್ಲ, ಇಂತಹ ಬಹಳಷ್ಟು ಸಮಯದಲ್ಲಿ ಸೋಮನಿಗೆ ಸಹಾಯ ಮಾಡುವ ಗೆಳೆಯ ಸದಾ ಹಸನ್ಮುಖಿ ಚಂದ್ರ ( ನಿಂಗರಾಜು ಮಂಡ್ಯ ) ಸೋಮನಿಗೆ ಗೊತ್ತಾಗದಂತೆ ಸಹಾಯ ಮಾಡುತ್ತಲೆ ಇರುತ್ತಾನೆ.
ಸ್ನೇಹಕ್ಕೆ ಸ್ನೇಹ ,ಪ್ರೀತಿಗೆ ಪ್ರೀತಿ,ಪ್ರಾಣಕ್ಕೆ ಪ್ರಾಣ ಕೊಡುವ ಹಾಗೂ ಜೀವನದಲ್ಲಿ ಬುದ್ಧಿ ಹೇಳುವ ಚಂದ್ರ ಇದ್ದರು ಸಹ,
ಸೋಮಶೇಖರ್ ತನ್ನ ಶೈಕ್ಷಣಿಕ ಪರೀಕ್ಷೆಯಲ್ಲಿಯೂ ಫೇಲ್ ಹಾಗೆ ಪ್ರೀತಿಸಿ ಮದುವೆಯಾದ ಮಾವನ ಮಗಳು ಶ್ರೀದೇವಿ ( ಛಾಯಶ್ರೀ ) ಜೊತೆ ಸಂಸಾರ ಮಾಡುವರೆದರಲ್ಲಿಯೂ ಫೇಲ್.
ಇದರ ನಡುವೆ ಗಂಡ ಸತ್ತಿದ್ದರು ಸಹ ತಾಯಿಯ ಮನೆಯಲ್ಲಿದ್ದುಕೊಂಡು, ಅಮ್ಮ ಮತ್ತು ತಮ್ಮನನ್ನು ತನ್ನ ಶಕ್ತಿಗನುಸಾರ ಚೆನ್ನಾಗಿ ನೋಡಿಕೊಳ್ಳುವ ಅಕ್ಕ,ಇನ್ನೊಂದಡೆ ಮಗನ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿರುವ ಅಮ್ಮ.
ತನ್ನ ಬದುಕಿನ ಎಷ್ಟೋ ಅಮೂಲ್ಯವಾದ ವರ್ಷಗಳನ್ನು,ಸೋಮಾರಿ ಹಾಗೆ ಬೇಜವಾಬ್ದಾರಿಯಿಂದ ಕಳೆದ
ಸೋಮಶೇಖರ್ ನ ಜೀವನದಲ್ಲಿ ಒಂದು ದುರಂತ ನಡೆಯುತ್ತದೆ,ಆತನಿಗೆ ಹಣದ ಅವಶ್ಯಕತೆ ಬೀಳುತ್ತದೆ,ಹಣ ದುಡಿಯಲು ಸೋಮ ಸಾಕಷ್ಟು ಕಷ್ಟಪಟ್ಟು ಕೆಲಸವನ್ನು ಮಾಡುತ್ತಾನೆ.
ಇದರ ನಡುವೆ ಸೋಮನ ಇನ್ನೊಬ್ಬ ಗೆಳೆಯ ( ಸಂತೋಷ್ ಕೇರಿ ) ಮೂಲಕ ಕ್ರಿಕೆಟ್ ಬೆಟ್ಟಿಂಗ್ ಎಂಬ ದಂಧೆಗೆ ಬೀಳುತ್ತಾನೆ,ಹಣವನ್ನು ಸಹ ಮಾಡುತ್ತಾನೆ.
ಆದರೆ ಸೋಮನ ಉಸಿರಿಗೆ ಉಸಿರಾಗಿ ನಿಂತಿದ್ದ ಗೆಳೆಯ ಚಂದ್ರ,ಸೋಮನನ್ನು ಬಿಟ್ಟು ಬೇರೆ ಕಡೆ ಹೋಗಿಬಿಡುತ್ತಾನೆ,
ಸೋಮ ಎಷ್ಟೇ ಹುಡುಕಿದರು ಆತ ಸಿಗುವುದಿಲ್ಲ,
ಎಲ್ಲಿ ಹೋದ ಎಂಬುದು ಗೊತ್ತಿಲ್ಲ,ಇಂತದೊಂದು ಮನ ಮುಟ್ಟುವ ಕಥೆಯೊಂದಿಗೆ “ಚಂಡ್ರಹಾಸ” ಟ್ರಾವೆಲ್ ಆಗುತ್ತದೆ.
ಅಷ್ಟಕ್ಕೂ ಸೋಮನ ಜೀವನದಲ್ಲಿ ನಡೆದ ದುರಂತವೇನು ??
ಗೆಳೆಯ ಚಂದ್ರ ನಿಗೂಢವಾಗಿ,ಹೋದದ್ದು ಎಲ್ಲಿ ಮತ್ತು ಯಾಕೆ ??
ಸೋಮ ಅಂದುಕೊಂಡಂತೆ ತನ್ನ ಜೀವನ ನಡೆಸಿದನಾ ??
ಅನ್ನೋದೇ ಚಂದ್ರಹಾಸ ಚಿತ್ರದ ಪ್ರಮುಖ ಹೈಲೈಟ್.
ಒಂದೊಳ್ಳೆಯ ಕಥೆಯನ್ನು ಸಿನಿಮಾ ಮಾಡಿದ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲುತ್ತದೆ ಹಾಗೆ ನಟನೆಯಲ್ಲಿ ಸೋಮ ಮತ್ತು ಚಂದ್ರನ ಪಾತ್ರಗಳು ಸೂಪರ್,ಹರೀಶ್ ಹಿರಿಯೂರು ಮತ್ತು ನಿಂಗರಾಜು ಮಂಡ್ಯ ತುಂಬಾ ಇಷ್ಟವಾಗುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಯವರ ಸಂಗೀತ ಎಂದಿನಂತೆ ಮಸ್ತ್,
ಆನಂದ್ ಕಳಕಬಂಡಿ ನಿರ್ದೇಶನ ಓಕೇ ಎನ್ನಬಹುದು.
ಚಿತ್ರವನ್ನು ಒಮ್ಮೆ ನೋಡಬಹುದು
ರೇಟಿಂಗ್ 3.5 / 5
ರವೀ ಸಾಸನೂರ್
MasterNews365.Com

