Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಶಿವಲಿಂಗ – ಗುರುಲಿಂಗ – ಜಂಗಮಲಿಂಗ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಶಿವಲಿಂಗ – ಗುರುಲಿಂಗ – ಜಂಗಮಲಿಂಗ

ಮತ್ತ ಬರೇ ಜಂಗಮರ ವಂಶಧಾನ ಹುಟ್ಟಿಕೊಂಡು ಮಳಕಾಲಿಗೆ ಗಂಟಿ ಕಟ್ಟಿಕೊಂಡು ಮನೀ ಮನೀ ಹಿಟ್ವೀಗಿ ಅಡ್ಡಾಡ್ತರಲ್ಲ ಅವ್ರು ಜಂಗಮಲಿಲ್ಲ ಅಂತ ಅವದಾತರು ಹೇಳ್ಯಾರ. ಲಿಂಗದ ನೆಲೆ ತಿಳಿದವನೇ ಲಿಂಗಾಯತ .. ನಾವು ಲಿಂಗಾಯತರು. ಆಚಾರ್ಲಿಂಗ ಶಿವಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದ ಲಿಂಗ ಶಿವಲಿಂಗಕ್ಕರ ಇರಬೇಕು.ಇಲ್ಲ ಜಂಗಮ ಲಿಂಗಕ್ಕರ ಇರಬೇಕು.ಕೆಲವೊಬ್ಬರಿಗೆ ಸ್ಥಾನಮಾನವೇ ಗೊತ್ತಿಲ್ಲ. ಅದನ್ನು ಸುಮ್ಮನ ಹಾಕಿಕೊಂಡು ಅವರು ಲಿಂಗಾಯತರಲ್ಲ. ಅವರಿಗೆ ಲಿಂಗದ ಮೇಲೆ ಗೊತ್ತಿಲ್ಲಂತ ಅರ್ಥ. ಯಾರಿಗೆ ಈ ಮೂರು ಗೊತ್ತಿಲ್ಲ ಅವ ಶೂದ್ರ ಇದನ್ನು ಜ್ಞಾನ […]

ಮತ್ತ ಬರೇ ಜಂಗಮರ ವಂಶಧಾನ ಹುಟ್ಟಿಕೊಂಡು ಮಳಕಾಲಿಗೆ ಗಂಟಿ ಕಟ್ಟಿಕೊಂಡು ಮನೀ ಮನೀ ಹಿಟ್ವೀಗಿ ಅಡ್ಡಾಡ್ತರಲ್ಲ ಅವ್ರು ಜಂಗಮಲಿಲ್ಲ ಅಂತ ಅವದಾತರು ಹೇಳ್ಯಾರ. ಲಿಂಗದ ನೆಲೆ ತಿಳಿದವನೇ ಲಿಂಗಾಯತ .. ನಾವು ಲಿಂಗಾಯತರು.

ಆಚಾರ್ಲಿಂಗ ಶಿವಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದ ಲಿಂಗ ಶಿವಲಿಂಗಕ್ಕರ ಇರಬೇಕು.ಇಲ್ಲ ಜಂಗಮ ಲಿಂಗಕ್ಕರ ಇರಬೇಕು.ಕೆಲವೊಬ್ಬರಿಗೆ ಸ್ಥಾನಮಾನವೇ ಗೊತ್ತಿಲ್ಲ. ಅದನ್ನು ಸುಮ್ಮನ ಹಾಕಿಕೊಂಡು ಅವರು ಲಿಂಗಾಯತರಲ್ಲ. ಅವರಿಗೆ ಲಿಂಗದ ಮೇಲೆ ಗೊತ್ತಿಲ್ಲಂತ ಅರ್ಥ. ಯಾರಿಗೆ ಈ ಮೂರು ಗೊತ್ತಿಲ್ಲ ಅವ ಶೂದ್ರ ಇದನ್ನು ಜ್ಞಾನ ಸಂಕಲ್ಪದಾಗ ಬರದಾರ್ರಿ.

ತತ್ವ ಬಲ್ಲ ಶಿವಯೋಗಿಗೆ ತುರ್ತು ಪ್ರಸಾದ ನೀಡಲು ಕೈಲಾಸ ಒತ್ತಿ ಬಿತ್ತೆಂದು ಸರ್ವಜ್ಞ.ಯಾರು ತತ್ವ ಬಲ್ಲಂತಹ ಜ್ಞಾನಿಯಾದಾನ ಯಾರ ಹತ್ತಿರ ಜ್ಞಾನ ತುಂಬಿ ತುಳುಕಾಡುತ್ತದೆ ಅಂತವರಿಗೆ ತುರ್ತು ಪ್ರಸಾದ ನೀಡಿದರೆ ಕೈಲಾಸನ ಅವರ ಹೆಸರಿಲಿ ಒತ್ತಿ ಬೀಳುತ್ತದೆ ಅಂತ. ಅಷ್ಟು ಪುಣ್ಯ ಅವ್ನಲ್ಲಿ ಇರ್ತದಂತ ಹಂತವನಿಗೆ ಗುರು ಅನ್ನಬೇಕು. ಅಂತವನ ಸೇವಾ ಮಾಡಬೇಕು. ಅಂತವರ ಬಾಯಿಲೆ ಏನಾದರೂ ವಿಷಯಕೇಳಬೇಕು ಅವಾಗ ಕೇಳಿದವರು ಉದ್ಧಾರ ಆಗ್ತಾರಾ ಹೇಳಿದವರು ಉದ್ದಾರ ಆಗ್ತಾರೆ ಹೇಳುತ್ತೇನೆ ಅಂತ ಬರೆ ರೊಕ್ಕದ ಆಸೆಗಾಗಿ ಹೇಳಿದರೆ ಉಪಯೋಗವಿಲ್ಲ. ಅವರು ಶಿಷ್ಯ ಬಳಗಕ್ಕ ಮಾಡುವಂತಹ ಮೋಸ ನನಗೆ ಇಷ್ಟು ಶಿಷ್ಯರ ಅದಾರಂತ ದೊಡ್ಡ ಸ್ಥಾನ ಹೇಳಿಕೊಂಡು ಬಿಟ್ರೆ ಅದು ಅವರಿಗೂ ಗತಿ ಇಲ್ಲ ಅನ್ನ೦ಗ ಆಗ್ತದ.

ದೃಷ್ಟಾಂತ –

ಒಬ್ಬ ಗುರು ಒಬ್ಬ ಶಿಷ್ಯ ಗ ಉಪದೇಶ ಕೊಟ್ಟರಿ.ಗುರುವಿಗೂ ಪೂರ್ಣ ಗೊತ್ತಿಲ್ಲ ಇಬ್ಬರೂ ಅಜ್ಞಾನಿಗಳು. ಉಪದೇಶ ಕೊಡುವುದು ಮುಗಿದ ನಂತರ ಶಿಷ್ಯ ಅಂತಾನ –

ಯಪ್ಪಾ ಉಪದೇಶ ಅಂತು ಕೋಟ್ಯಪ್ಪ ಮತ್ತು ಪೂಜೆ ಮಾಡಿಕೊಳ್ಳುವುದು ಹೇಗೆ ಅಂತ ಕಳಿಸು ನನಗೆ ಅಂದ.

ಆಯ್ತು ನೀರು ತುಂಬಿಕೊಂಡು ಬಾ ಅಂದ. ಅದಕ್ಕೆ ಶಿಷ್ಯ ನೀರು ತುಂಬಿಕೊಂಡು ಬಂದ.

ಇನ್ನು ದೀಪ ಹಚ್ಚು ಅಂದ. ಆತ ದೀಪನು ಹಚ್ಚಿದ.

ನಾನೊಂದು ಆಸನ ಹಾಕಿಕೊಂಡು ಶಿಷ್ಯನಿಗೂ ಒಂದು ಆಸನ ಹಾಕಿಕೊಳ್ಳುವಂತೆ ಹೇಳಿದ.

ಇಬ್ಬರು ಆಸನ ಹಾಕಿಕೊಂಡು ಒಂದು ಕಡೆ ದೀಪನು ಹಚ್ಚಿ ಇಟ್ಟರು.

ಇನ್ನು ಮುಂದೆ ಮಾತನಾಡುವಂತಿಲ್ಲ ನಾ ಹ್ಯಾಂಗ್ ಮಾಡ್ತೀನಿ, ನೀನು ಹಂಗ ಮಾಡಬೇಕು ಅಂತ ಗುರು ಹೇಳಿದ.

ಅದಕ್ಕೆ ಶಿಷ್ಯ ಆಯ್ತು ಗುರುಗಳೇ ಎಂದ.

ಹತ್ತಿರಕ್ಕೆ ವಿಭೂತಿ ಕುಂಕುಮ ಎಲ್ಲಾ ಇಟ್ಟುಕೊಂಡು ಕುಳಿತರು. ಇವರು ವಿಭೂತಿ ಹಚ್ಚಿಕೊಂತ ಕುಂತಿದ್ರು ಹಿಂಗ ನೋಡೋದಕ್ಕ ಅಷ್ಟೊತ್ತಿಗೆ ದೀಪದ ಎಣ್ಣೆ ಕಡಿಮೆಯಾಗಿ ನಂದುವ ಸ್ಥಿತಿಗೆ ಬಂದಿತ್ತು. ದೀಪ ನೋಡಿದ ಗುರು ದೀಪಕ್ಕೆ ಎಣ್ಣೆ ಹಾಕುವಂತೆ ಶಿಷ್ಯನಿಗೆ ಸನ್ನೆ ಮಾಡಿದ. ಏಕೆಂದರೆ ಮೊದಲೇ ಕರಾರುವಕ್ಕಾಗಿ ಹೇಳಿದಂತೆ ಏನು ಮಾತನಾಡುವಂತಿಲ್ಲ. ಗುರುವಿನಂತೆ ಶಿಷ್ಯನು ಗುರುವಿಗೆ ಸನ್ನೆ ಮಾಡಿದ ದೀಪಕ್ಕೆ ಬೇಗ ಎಣ್ಣೆ ಹಾಕುವಂತೆ ತೀವ್ರತರವಾಗಿ ಗುರು ಸನ್ನೆ ಮಾಡಿದರೆ ಶಿಷ್ಯನು ಮತ್ತೆ ಹಾಗೆ ಸನ್ನೆ ಮಾಡಿದ. ಅವನು ಹಿಂಗ ಕೈ ಮಾಡಿದ ಇವನು ಹಿಂಗ ಕೈ ಮಾಡಿದ. ಕೊನೆಗೆ ಗುರು ಶಿಷ್ಯನನ್ನು ಕೊಡದೇ ಬಿಟ್ಟ. ಶಿಷ್ಯನು ಗುರುವಿಗೊಂದು ಹೊಡೆದು ಬಿಟ್ಟ. ಅವನನ್ನು ಎತ್ತಿ ಇವನು ಬಿಸಾಕಿದ. ಇವನನ್ನು ಎತ್ತಿ ಅವನು ಬಿಸಾಕಿದ. ಇಬ್ಬರೂ ಬಡಿದಾಡಿ ಹೊಯ್ಕೊಳಕ್ ಹತ್ತಿದರು. ಇದನ್ನು ಕೇಳಿ ಹೊರಗಿನ ಮಂದಿ ಓಡೋಡಿ ಬಂದು ಸೇರಿದರು.

ಇದನ್ನು ಕಂಡ ಜನ ಯಾಕೆ ಬಡದಾಡಕ್ ಹತ್ತೀರಿ ಅಂದ್ರು. ಅದಕ್ಕೆ ಗುರು ಹೇಳ್ತಾನ. ನೋಡ್ರಿ ಇವಾ ನನ್ನ ಶಿಷ್ಯ. ಗುರುಬೋಧೆ ಕೊಟ್ಟೀನಿ . ಇವ ನನ್ನ ಹೊಡಿಲಾಕ್ಕ ಹತ್ತ್ಯಾನ.ಶಿಷ್ಯಂದ – ನೋಡ್ರಿ ಬರೋಬ್ಬರಿ ನ್ಯಾಯ ಕೊಡ್ರಿ. ಇವ ನನ್ನ ಗುರುಬೋಧೆ ಕೊಟ್ಟಿದ್ದು ಖರೇನ .. ನನಗ ಪೂಜಾ ವಿಧಾನ ಕಲಿಸಿರಿ ಅಂದೆ.ಕಲಿಸಕ್ಕೆ ಕುಂತ ನಾ ಮಾಡಿದಂಗ ಮಾಡಂತ ನನಗೆ ಹೇಳಿದ. ನಡುವ ಮಾತನಾಡುವಂತಿಲ್ಲ ಅಂತನು ಹೇಳಿದ. ಮತ್ತು ಅವಂಗ್ ಕೈ ಮಾಡಿದ. ನಾನು ಹ0ಗೆ ಕೈಮಾಡಿ ಮತ್ತೆ ಹಿಂಗ್ ಕೈ ಮಾಡಿದ. ನಾನು ಹಿಂಗ ಕೈ ಮಾಡಿನ್ರಿ. ನನಗೆ ಕೈ ಮಾಡ್ಕೊಂತ ಒಂದು ಏಟು ಹೊಡೆದ.ನಾನು ಒಂದೇಟು ಹೊಡೆದೆ. ಅವನು ನನಗ ಎತ್ತಿ ಒಗದನ್ರಿ. ನಾನೂ ಅವನಿಗೆ ಎತ್ತುವಗದೆನ್ರಿ . ಇದರಾಗ ನನ್ನದೇನು ತಪ್ಪೈತಿ ?ನೀವೇ ಹೇಳ್ರಿ ಎಂದ ಶಿಷ್ಯ.

ಹಿಂಗ ಅಜ್ಞಾನಿ ಗುರು ಅವಿವೇಕ ಶಿಷ್ಯ. ಹಿಂಗ ಅದಕ್ಕೂ ಗೊತ್ತಿಲ್ಲ ಇದಕ್ಕೂ ಗೊತ್ತಿಲ್ಲ ಇಬ್ಬರೂ ಸುಮ್ಮನೆ ಹೊಡೆದಾಡಿಕೊಂಡು ಸತ್ತರು. ಯಾವುದಕ್ಕೂ ಜ್ಞಾನ ಬೇಕಾರಪ್ಪಾ … ಜ್ಞಾನ ಇಲ್ಲಂದ್ರ ಏನೂ ನಡೆಯುವುದಿಲ್ಲ .

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.