Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಾಯಿ ಕೊಡುವ ಪದ್ಧತಿ ಯಾತಕ ಬಂತು… ???
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕಾಯಿ ಕೊಡುವ ಪದ್ಧತಿ ಯಾತಕ ಬಂತು… ???

*ಭಜನಾ ಮಾಡಲಾಕ್ಕ ಬರ್ರಿ ಅಂತ ಕರೀಲಾಕ ಕಾಯಿ ಕೊಡುವುದೇತಕೆ? ಅದೊಂಥರಾ ಆಮಂತ್ರಣ ನೀಡಿದಾಂಗ . ಕಾಯಿ ಅವರು ಕೊಟ್ಟು ಹೋಗ್ತಾರ . ಅದ ಕಾಯಿ ತಗೊಂಡು ಹೋಗಿ ನಾವು ವಾಪಸ್ ಅವ್ರೀಗಿ ಮುಟ್ಟಿಸಬೇಕು. ಆ ಹೊತ್ತು ಒಯ್ಯಲಿಲ್ಲಂದ್ರು ಮರುದಿವಸ ಮುಂಜಾನೆ ಒಯ್ದರ ಮುಟ್ಟಿಸಬೇಕು. ಅದನ್ನು ಮುಳುಗಿಸುವ ಹಾಗಿಲ್ಲ. *ಕಾಯಿ ಕೊಡುವ ಪದ್ಧತಿ ಯಾತಕ್ಕ ಬಂತು?* ಕಾಯಿ ಅಂದ್ರ ದೇಹ. ಇದನ್ನು ಭಗವಂತ ನಮಗ ಕೊಟ್ಟು ಕಳುಹ್ಯಾನ. ಯಾಕಂದ್ರ ಇದನ್ನು ಒಂದು ಪದವಾಗ ನಿಜಗುಣರು ಹೇಳ್ಯಾರ್ರಿ- ನಿದ್ರೆಬಾರದಿದನ್ನ ಪರಭವ […]

*ಭಜನಾ ಮಾಡಲಾಕ್ಕ ಬರ್ರಿ ಅಂತ ಕರೀಲಾಕ ಕಾಯಿ ಕೊಡುವುದೇತಕೆ?

ಅದೊಂಥರಾ ಆಮಂತ್ರಣ ನೀಡಿದಾಂಗ . ಕಾಯಿ ಅವರು ಕೊಟ್ಟು ಹೋಗ್ತಾರ . ಅದ ಕಾಯಿ ತಗೊಂಡು ಹೋಗಿ ನಾವು ವಾಪಸ್ ಅವ್ರೀಗಿ ಮುಟ್ಟಿಸಬೇಕು. ಆ ಹೊತ್ತು ಒಯ್ಯಲಿಲ್ಲಂದ್ರು ಮರುದಿವಸ ಮುಂಜಾನೆ ಒಯ್ದರ ಮುಟ್ಟಿಸಬೇಕು. ಅದನ್ನು ಮುಳುಗಿಸುವ ಹಾಗಿಲ್ಲ.

*ಕಾಯಿ ಕೊಡುವ ಪದ್ಧತಿ ಯಾತಕ್ಕ ಬಂತು?
*

ಕಾಯಿ ಅಂದ್ರ ದೇಹ. ಇದನ್ನು ಭಗವಂತ ನಮಗ ಕೊಟ್ಟು ಕಳುಹ್ಯಾನ. ಯಾಕಂದ್ರ ಇದನ್ನು ಒಂದು ಪದವಾಗ ನಿಜಗುಣರು ಹೇಳ್ಯಾರ್ರಿ-

ನಿದ್ರೆಬಾರದಿದನ್ನ ಪರಭವ ದುಃಖ ಸ –
ಮುದ್ರವೆನಿಸುವ ಸಾಯಾಸವ ನೆನೆನೆನೆದು |I ಪll

ಸಾಪಾನುಗುಣದಿಂದೆ ಗಿಡ ಮರ ಕ್ರಿಮಿಗಳ
ರೂಪಾಗಿ ಕೀಟ ಪತಂಗಾದಿಯಾಗಿ
ಆ ಪಕ್ಷಿ ಕುಲವಾಗಿ ಮೃಗ ಜಾತಿಯಾಗಿ ಮೇ
ಲಾ ಪಶುವಾಗಿ ಬಹು ಬಾಧೆಗಲ ಸಿ.

ಎಷ್ಟು ನೋವು ಪಾಪಾನುಗುಣದಿಂದ ಮರ ಗಿಡ ಪಶು ಪಕ್ಷಿ ಎಲ್ಲಾ ಆಗಿವಿ,ಇಷ್ಟ ಆಗಿ ಪಾಪ ಪುಣ್ಯ ಎರಡು ಸಮ ಆದಾಗ ಮನುಷ್ಯ ಜನ್ಮ ಬಂದದ್ದು . ಈ ಮನುಷ್ಯ ಅನ್ನುವಂತಹ ಕಾಯಿ ಬಂದದ ಅಂದಮೇಲೆ ನಾವು ಯಾವುದಕ್ಕೆ ಉಪಯೋಗ ಮಾಡಬೇಕು ಇದರ ಹೆಂಗ ನಡಿಬೇಕು. ಭಗವಂತ ಇದನ್ನು ಕೊಟ್ಟು ಕಳಿಸೋಣ ಅಂದ್ರೆ ಈ ಕಾಯಿ ಸಾರ್ಥಕ ಆಗಬೇಕು. ಅದಕ್ಕ ನೋಡ್ರಿ ತಾಯಿ ಬಿತ್ತಲ್ಲ ಕಾಯಿ ಹೊಡಿತಾರೆ ಕಾಯಿ ಹೊಡಿತಾರೋ ಅಂದ್ರ ಈ ದೇಹ ಹೋಯ್ತು.

ಸಿದ್ಧಾರೂಢ ಆಶ್ರಮಕ್ಕೆ ಶಿಶುವಿನಾಳ ಶರೀಫರು ಹೋದರಂತೆ ಅಲ್ಲಿ ಕಾಯಿಕೊಟ್ಟು ಆಶೀರ್ವಾದ ಮಾಡಪ್ಪ ಅಂತ ಹೇಳಿದರು ಸಿದ್ಧಾರೂಢರು ಆಶ್ರಮದಾಗ ಕುಂತಿದ್ರು ಹೊರಗೊಂದು ಹೂವಿನ ತೋಟ ಅದರಾಗ ಒಬ್ಬ ಆಳು ಇಟ್ಟಿದ್ದರು. ಕಾಯಲಿಕ್ಕ . ಶರೀಫರು ತೋಟದಲ್ಲಿನ ಹೂವು ಹರಿಯೋದು ವಾಸನೆ ನೋಡುವುದು ಕೆಳಗೆ ಬಿಸಾಡೋದು ಮಾಡಕ್ಕ ಹತ್ತಿದ್ರು, ತೋಟದಲ್ಲಿ ಕೆಲಸ ಮಾಡುವವನಿಗೆ ಇದನ್ನು ಕಂಡು ಸಿಟ್ಟು ಬಂದಿತ್ತು.

ಅಲ್ರೀ ಶರಣರ ಈ ಹೂವ ದೇವರು ಪೂಜೆಗೆ ಹೋಗೋವೋ ನೀವು ಹಿಂಗ ಹರಿದು ಮೂಸಿ ಕೆಳಗೆ ಬಿಸಾಡಿದರೆ ಹೆಂಗಿದು ಅಂದ.
ಆರೋಡರು ಅಂತ ತಿಳಿದುಕೊಂಡಿದ್ನಪ್ಪ.

ಓಹೋ ನಿಮಗೆ ಹೂವಿನ ಮೇಲೆ ಇಷ್ಟು ಮೋಹ ಐತಿ ಅನ್ನೋದು ಗೊತ್ತಿದ್ದಿಲ್ಲ.

ಇದನ್ನು ಸಿದ್ದಾರೂಢರು ಕೇಳಿಸಿಕೊಂಡರು. ಹಂಗ ಹೊರಗೆ ಬಂದಾರ ಶರೀಫ ಹೂವು ಕಲ್ಪಿತ, ಹೂವು ಕಾಯಿ ಹಿಡಿಯಾಕ್ಕ ನಿಂತವನೂ ಕಲ್ಪಿತ. ಹೂ ಹರಿದವನೂ ಕಲ್ಪಿತ, ನಾ ನಿರ್ವಿಕಲ್ಪಿತ. ನಾ ಅದನ್ನು ಯಾವಾಗಲೂ ಕಲ್ಪನಾದೊಳಗ ತಗೊಂಡಿಲ್ಲ. ಅದನ್ನು ನೋಡಿ ಶರೀಫರು ಅಲ್ಲೇ ನಿಂತು ಪದ ಹಾಡಿದ್ರಂತೆ. ಸಾಧು ನೋಡಲು ಇವರು ಸಾದು ನೋಡಲು .

ಸಾಧು ನೋಡಲು ಇವನು ಸಾದು ನೋಡಲು
ಸಾಧು ನೋಡಲು ಇವನು ಸಾದು ನೋಡಲು
ಸಾಧು ನೋಡಲು ಇವನು ಸಾದು ನೋಡಲು
ಸಾಧು ನೋಡಲು ಇವನು ಸಾದು ನೋಡಲು II ಪ II

ಬೋಧಾನಂದದಿ ಮೆರೆವ ಮಹಾತ್ಮನು
ಬೋಧಾನಂದದಿ ಮೆರೆವ ಮಹಾತ್ಮನು
ವೇದತೀತ ನಾದತೀತ ವಾದನೀತ ಬೃಹ್ಮನೀತ
ವಾದನೀತ ಬೃಹ್ಮನೀತ , ವಾದನೀತ ಬೃಹ್ಮನೀತ II

ಸಾಧು ನೋಡಲು ಇವನು ಸಾಧು ನೋಡಲು ಸಾಧು ನೋಡಲು ಇವನು ಸಾಧು ನೋಡಲು ll ಪII

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.