Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಜಗ್ಗೇಶ್” ಹೇಳಿದ್ದು “ಕಠೋರ ಸತ್ಯ”
- ಸಿನಿಮಾ

“ಜಗ್ಗೇಶ್” ಹೇಳಿದ್ದು “ಕಠೋರ ಸತ್ಯ”

ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್ ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್ ಮಾಡಿ ಮಾತನಾಡಿದ ನವರಸ ನಾಯಕ ಜಗ್ಗೇಶ್,ಇದೊಂದು ಖುಷಿಯ ವಿಚಾರ,ಕಳೆದ 46 ವರ್ಷಗಳಿಂದ ನಮಗೆ ಅನ್ನ,ಆಶ್ರಯ,ಕೆಲಸ,ಹಣ ಎಲ್ಲವೂ ಕೊಟ್ಟಿದೆ, ನನ್ನ ಜೀವನದಲ್ಲಿ ನಾನು ಬಹಳಷ್ಟು ನಿರ್ದೇಶಕರನ್ನು ನೋಡಿದ್ದೇನೆ ಅಷ್ಟೇ ದೊಡ್ಡವರ ಜೊತೆಗೆ ಕೆಲಸ ಮಾಡಿದ್ದೇನೆ,ಆದ್ರೆ ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವಂತಹ ವ್ಯಕ್ತಿ ಉಪೇಂದ್ರ,ಭವಿಷ್ಯದಲ್ಲಿ ಉಪೇಂದ್ರ ಪ್ರತಿಭಾವಂತ ನಿರ್ದೇಶಕ ಆಗ್ತಾನೆ ಅನ್ನೋ ಫೀಲ್ ಆಗಿತ್ತು, ಅದು ನಿಜವಾಗಿದ್ದು ಕಂಡು ಖುಷಿ ಆಗ್ತಿದೆ. […]

ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್

ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್ ಮಾಡಿ ಮಾತನಾಡಿದ ನವರಸ ನಾಯಕ ಜಗ್ಗೇಶ್,
ಇದೊಂದು ಖುಷಿಯ ವಿಚಾರ,ಕಳೆದ 46 ವರ್ಷಗಳಿಂದ ನಮಗೆ ಅನ್ನ,ಆಶ್ರಯ,ಕೆಲಸ,ಹಣ ಎಲ್ಲವೂ ಕೊಟ್ಟಿದೆ, ನನ್ನ ಜೀವನದಲ್ಲಿ ನಾನು ಬಹಳಷ್ಟು ನಿರ್ದೇಶಕರನ್ನು ನೋಡಿದ್ದೇನೆ ಅಷ್ಟೇ ದೊಡ್ಡವರ ಜೊತೆಗೆ ಕೆಲಸ ಮಾಡಿದ್ದೇನೆ,ಆದ್ರೆ ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವಂತಹ ವ್ಯಕ್ತಿ ಉಪೇಂದ್ರ,ಭವಿಷ್ಯದಲ್ಲಿ ಉಪೇಂದ್ರ ಪ್ರತಿಭಾವಂತ ನಿರ್ದೇಶಕ ಆಗ್ತಾನೆ ಅನ್ನೋ ಫೀಲ್ ಆಗಿತ್ತು, ಅದು ನಿಜವಾಗಿದ್ದು ಕಂಡು ಖುಷಿ ಆಗ್ತಿದೆ.

“ತರ್ಲೆ ನನ್ಮಗ” ಚಿತ್ರೀಕರಣದ ಸಂಧರ್ಭ ನೆನೆದ ಜಗ್ಗೇಶ್,
ಉಪೇಂದ್ರ ಸಮಯಕ್ಕೆ ಕೊಟ್ಟ ಬೆಲೆ,ಸಮಯಕ್ಕೆ ಕೊಡ್ತಾ ಇದ್ದ ಬೆಲೆ, ಆತ ಸಿನಿಮಾ ಮೇಲೆ ಇಟ್ಟಿದ್ದ ಕೆಲಸದ ಮೇಲಿನ ಶ್ರಮ,ಶ್ರದ್ಧೆ,ಭಕ್ತಿಯ ಬಗ್ಗೆ ಮಾತನಾಡಿ,ಸಿನಿಮಾ ಪ್ರೀತಿಸುವ ಮನುಷ್ಯ ಅದೆಷ್ಟು ಶಿಸ್ತು,ಸಮಯ ಪ್ರಜ್ಞೆ, ಜವಾಬ್ದಾರಿ ಹೊಂದಿರಬೇಕು ಎಂಬುದನ್ನು ಸೂಕ್ಷ್ಮವಾಗಿ ವಿವರಿಸಿದರು.

ಮೇಘನಾ ರಾಜ್ ಸರ್ಜಾ ಬಗ್ಗೆ,ನಾಯಕಿ ಆಗಿ ಸಕ್ಸಸ್ ಆಗಿದ್ದು ನನಗೆ ಖುಷಿ ಇದೆ,ಎಷ್ಟೋ ವರ್ಷಗಳ ಹಿಂದಿನ ಮಾತು,ನಟ ಸುಂದರಾಜ್ ಮತ್ತು ನಾನು ಒಂದು ಚಿತ್ರೀಕರಣದಲ್ಲಿ ಇದ್ದಾಗ,ಪುಟ್ಟ ಮಗು ಸುಂದರಿ ಮೇಘನಾ ಬಂದಿದ್ರು,ಆಗ ಆಕೆಯನ್ನು ನೋಡಿ ನಾನು,ಸುಂದರನಿಗೆ ಹೇಳಿದ್ದೆ,ಮಗಳು ಹೀರೋಯಿನ್ ಆಗ್ತಾಳೆ ಅಂತಾ, ದೇವರ ಆಶೀರ್ವಾದ ಮೇಘನಾ ರಾಜ್ ಸರ್ಜಾ,ದೊಡ್ಡ ನಾಯಕಿಯಾಗಿ ಹೆಸರು ಮಾಡಿದ್ದಾಳೆ,ಶುಭವಾಗಲಿ ಎಂದರು.

ನನ್ನ ತಮ್ಮ ಕೋಮಲ್, ನನಗಿಂತ ತುಂಬಾ ಒಳ್ಳೆಯ ಕಲಾವಿದ,ನನಗಿಂತು ಬುದ್ಧಿವಂತ,ಕೋಮಲ್ ಹೃದಯದ ತುಂಬೆಲ್ಲ ಬರಿ ಸಿನ್ಮಾ ತುಂಬಿದೆ,ನಾನು ಆತನಿಗೆ ಯಾವಾಗಲೇ ಫೋನ್ ಮಾಡ್ಲಿ, ಆತ ಸಿನ್ಮಾ ನೋಡ್ತಾ ಇದೀನಿ ಅಂತಾನೆ ಹೇಳ್ತಾನೆ.ಅಂದ್ರೆ ಆತ ಅಷ್ಟು ಹುಚ್ಚು ಸಿನಿಮಾ ಪ್ರೇಮಿ, ಆತನಿಗೆ ಒಳ್ಳೆಯದೇ ಆಗತ್ತೆ ಎಂದರು.

ದಯವಿಟ್ಟು ಬಾಂಬ್ ಹಾಕೋದು,ಅಲ್ಲಿಂದ ಇಲ್ಲಿಗೆ,
ಇಲ್ಲಿಂದ ಅಲ್ಲಿಗೆ,ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂಬ ಎಚ್ಚರಿಕೆಯ ಸಂದೇಶ ಕೊಟ್ಟರು.

ಕೋಮಲ್ ಕುಮಾರ್ ಮಾಡ್ತಾ ಇರುವ, “ಸಂಗೀತ ಬಾರ್ & ರೆಸ್ಟೋರೆಂಟ್” ಚಿತ್ರದ ನಿರ್ದೇಶಕ ಸಂದೇಶ್ ಶೆಟ್ಟಿ ಕೂಡಾ ಒಳ್ಳೆಯ ಪ್ರತಿಭಾವಂತ ಎಂದು ಹೇಳಿ,ಚಿತ್ರಕ್ಕೆ ಬೆನ್ನು ತಟ್ಟಿದರು.

ಕೋಮಲ್ ಕುಮಾರ್ ಮಾತನಾಡಿ,
ನಾನಿವತ್ತು ಹಸಿರು ಬಟ್ಟೆಯಲ್ಲಿ ಬಂದಿದ್ದಕ್ಕೆ ಕಾರಣ ಏನಂದ್ರೆ, ನನ್ನನ್ನ ನಿರ್ದೇಶಕ ಚಿತ್ರದಲ್ಲಿ ಗ್ರೀನ್ ಆಗಿ ಟ್ರೀಟ್ ಮಾಡಿದ್ದು,ಆದರೆ ಹೆಣ್ಣುಮಕ್ಕಳನ್ನು ಎವರ್ಗ್ರೀನ್ ತರಹ ಟ್ರೀಟ್ ಮಾಡಿದ್ದು ಖುಷಿ ಆಯ್ತು ಎನ್ನುವುದರ ಮೂಲಕ ತಮಾಷೆ ಮಾತು ಆಡಿದರು.

ಕೇರಳದ ಕಾಸರಗೋಡಿನ ಧರ್ಮ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘನಾ ರಾಜ್ ಸರ್ಜಾ ಮಾತನಾಡಿ, ನಾನು ಹೀರೋಯಿನ್ ಆಗ್ತೀನಿ ಅಂತಾ ತುಂಬಾ ವರ್ಷಗಳ ಹಿಂದೆನೇ ಹೇಳಿದ್ದು ಜಗ್ಗೇಶ್ ಅಂಕಲ್ ಅನ್ನೋದರ ಮೂಲಕ,ಹೊಸದೊಂದು ವಿಷಯದ ಅಪ್ಡೇಟ್ ಕೊಟ್ಟರು,ಅದು ನಿಜವಾಗಿದೆ ನಾನು ಹೀರೋಯಿನ್ ಆದೇ,ಜಗ್ಗೇಶ್ ಅವ್ರ ತರಹವೇ ಕೋಮಲ್ ಕೂಡಾ ಜಾಲಿ ವ್ಯಕ್ತಿ ಅಂತಾ ನಾನು ಅಂದುಕೊಂಡಿದ್ದೇ,ಆದ್ರೆ ಶೂಟ್ ನಲ್ಲಿ ಆ ಅನುಭವ ಆಗಲಿಲ್ಲ,ಚಿತ್ರೀಕರಣ ಮುಗಿಸಿ ಮನೆಗೆ ಹೋದಮೇಲೆ ನನಗೆ ಗೊತ್ತಾಗಿದ್ದು,ಕೋಮಲ್ ಸರ್ ಕೊಟ್ಟ ಕಾಮಿಡಿ ಪಂಚ್ ಮಾತುಗಳ ಬಗ್ಗೆ ನೆನಪು ಮಾಡಿಕೊಂಡರು..

ಮತ್ತೊಬ್ಬ ನಟಿ ಅನುಷಾ ರೈ ಮಾತನಾಡಿ,
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಸಿಹಿ ಶುಭಾಶಯ ಎಂದು ಹೇಳುತ್ತಾ,ನವರಸ ನಾಯಕ ಜಗ್ಗೇಶ್ ರಂತಹ ಹಿರಿಯ ಕಲಾವಿದರ ಆಶೀರ್ವಾದ ನಮಗೆ ಸಿಕ್ಕಿದೆ,ಇದರಲ್ಲಿ ನನ್ನದು ಎರಡು ಶೇಡ್ ನ ಪಾತ್ರ,ಮೇಘನಾ ರಾಜ್ ಸರ್ಜಾ ರಂತಹ ಬ್ರಿಲಿಯಂಟ್ ನಟಿಯ ಜೊತೆಗೆ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ ಎಂದರು.

ನಿರ್ದೇಶಕ ಸಂದೇಶ ಶೆಟ್ಟಿ ಮಾತನಾಡಿ,ಕನಸು ಕಾಣೋದಕ್ಕೆ ಎಲ್ಲರಿಗೂ ಅವಕಾಶ ಇದೆ,adu ಸಾಕಾರ ಆಗೋದು ದೇವರ ಆಶೀರ್ವಾದದಿಂದ ಆಗಿದೆ,ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ರವರನ್ನು ಇಟ್ಕೊಂಡು ಒಂದು ಸಣ್ಣ ಕಂಟೆಂಟ್ ಶೂಟ್ ಮಾಡಿದ್ವಿ ಅದು ಸಖತ್ ವರ್ಕ್ ಆಯ್ತು.

ನಾವು ಕಂಡ ಕನಸಿಗೆ ನಿರ್ಮಾಪಕ ಹಾಕುವ ಹಣ,ನಮ್ಮೆಲ್ಲರ ಕನಸನ್ನ ನನಸು ಮಾಡೋ ಒಂದು ಶಕ್ತಿಯಂತಾಗಿ ಕಾಣತ್ತೆ.

ಇವತ್ತು ನಮ್ಮ ಚಿತ್ರದ ಟೀಸರ್ ಲಾಂಚ್ ಮಾಡೋದಕ್ಕೆ ತುಂಬಾ ಪ್ರೀತಿಯಿಂದ ಬಂದಿದ್ದು ನಮಗೆ ದೊಡ್ಡ ಸಹಾಯ ಆಗಿದ್ದು,ಜಗ್ಗೇಶ್ ರಂತಹ ಅನುಭವಿ ನಟರನ್ನು ನೋಡಿ ಬೆಳೆದವರು ನಾವು,ಹಾಗೇ ಕೋಮಲ್ ಕುಮಾರ್ ಕೂಡಾ ನಮಗೆ ದೊಡ್ಡ ಶಕ್ತಿಯಾಗಿ ಕಾಣುತ್ತಾರೆ,

ಮೇಘನಾ ರಾಜ್ ಸರ್ಜಾ ರಂತಹ ನಟಿ ಕೂಡಾ, ನಮ್ಮಂತಹ ಹೊಸ ತಂಡದ ಜೊತೆಗೆ ಬೆಂಬಲವಾಗಿ ನಿಂತಿದ್ದು ಮಾತ್ರ ಅಲ್ಲದೇ, ಸಿನಿಮಾದ ಅಪ್ಡೇಟ್ ಗಳ ತಾವಾಗೇ ವಿಚಾರಿಸುತ್ತಿದ್ದ ರೀತಿ ನಮಗೆ ಹೆಮ್ಮೆ ತರತ್ತೆ ಎಂದರು.

ಮತ್ತೊಬ್ಬ ಕಲಾವಿದೆ ನಟಿ ಅನುಷಾ ರೈ ಕೆಲಸದ ಬಗ್ಗೆ ಹೊಗಳಿದ ನಿರ್ದೇಶಕ,ಅನುಷಾ ರೈ ತುಂಬಾ ಒಳ್ಳೆಯ ನಟಿ,ಚಿತ್ರದಲ್ಲಿ ಅವ್ರ ಪಾತ್ರ ತುಂಬಾ ಒಳ್ಳೆಯ ಮೆಸೇಜ್ ಕೊಡತ್ತೆ ಎಂದಿದ್ದಾರೆ.

ಪ್ರಕಾಶ್ ತುಮ್ಮಿನಾಡು ಮಾತನಾಡಿ,
ನಾವು ಕಲಾವಿದರು, ಕೇಳುವ ಪ್ರತಿ ಕಥೆಯ ಪಾತ್ರವಾಗಬೇಕು,ಆಯಾ ಸಿನಿಮಾದಲ್ಲಿ ಕೆಲಸ ಮಾಡಬೇಕು ಅನ್ನೋ ಆಸೆ ಇರತ್ತೆ, ಅದು ನಿಜಾ ಆಗಿದ್ದು,ಈ ಚಿತ್ರದ ಮೂಲಕ ಅಷ್ಟೇ ಅಲ್ಲದೆ ಕೋಮಲ್ ಕುಮಾರ್ ರಂತಹ ಅನುಭವಿ ಹಿರಿಯ ನಟರು ನಮ್ಮಂತಹ ಹೊಸ ಕಲಾವಿದರಿಗೆ ಕೊಡುವ ಸ್ಪೇಸ್ ದೊಡ್ದದು ಹಾಗೆ ಸಧ್ಯದಲ್ಲಿಯೇ ನಾನು ಜಗ್ಗೇಶ್ ರವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ,ನಾನು ಕಾಯ್ತಾ ಇದ್ದೀನಿ ಎಂದರು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.