ತರಂಗಾಂತರಂಗ – ಪತ್ರಿಕಾ ಗೋಷ್ಠಿಯ ಹೈಲೈಟ್ಸ್
ಚಿತ್ರದ ಒಂದಷ್ಟು ಕಂಟೆಂಟ್ ನೋಡಿದ ನಂತರ ನಮಗೆಲ್ಲ ಅನ್ನಿಸಿದ್ದು,ಇದೊಂದು ಮಜವಾದ ಕಥೆ ಇರಬಹುದು ಎಂದು,ಅದರಲ್ಲೂ ವಿಜಯ್ ಪ್ರಕಾಶ್ ಹಾಡಿರುವ ಟ್ರೈ ಮಾಡಿ ಹಾಡು ಥ್ರಿಲ್ ಆಗಿದ್ದು ಎಂದಿನಂತೆ ವಿಪಿ ತಮ್ಮ ಮ್ಯಾಜಿಕಲ್ ಫ್ಲೇವರ್ ನ್ನ ಕ್ಯಾರಿ ಮಾಡಿದ್ದು ವಿಶೇಷ.
ನಿರ್ದೇಶಕ ಶ್ರೀಶಾ ಮಾತನಾಡಿ,ಇದೊಂದು ತುಂಬಾ ಇಂಟ್ರೆಸ್ಟಿಂಗ್ ಆದ ಕಥೆ,ಕರಾವಳಿ ಭಾಗದಲ್ಲಿ ಚಿತ್ರೀಕರಣ ಆಗಿದ್ದು,ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ, ಪ್ರಮೋದ್ ಶೆಟ್ಟಿ ಮತ್ತು ದಿನೇಶ್ ಮಂಗಳೂರು ಪಾತ್ರಗಳು ತುಂಬಾ ಇಂಟೆನ್ಸ್ ಆಗಿ ಮೂಡಿ ಬಂದಿವೆ.ನಾವಂದುಕೊಂಡ ರೀತಿಯಲ್ಲಿ ಶೂಟಿಂಗ್ ಆಗಿದ್ದು,
ಚಿತ್ರವನ್ನು ಸೆನ್ಸಾರ್ ಗೆ ಕಳಿಸಿದ್ದೀವಿ ಟೋಟಲ್ ಎರಡು ಗಂಟೆ ಹದಿನೈದು ನಿಮಿಷದ ಅವಧಿ ಹೊಂದಿದೆ.
ನಮ್ಮದು ಕರಾವಳಿ ಬೆಲ್ಟ್ ,ಎಣ್ಣೆ ಇಲ್ಲದೇ ನಮ್ಮ ರೂಟೀನ್ ಬದುಕು ಕಷ್ಟ.ಕರಾವಳಿಯ ಸಂಸ್ಕೃತಿ, ಸಂಪ್ರದಾಯ ಸೇರಿದಂತೆ ಮಾಡಿದ ಸಿನಿಮಾ,ನಿಮಗೆಲ್ಲ ಇಷ್ಟವಾಗುತ್ತೆ ಎಂದರು.
ನಾಯಕಿ ಯಶಸ್ವಿನಿ ಕೆ ಸ್ವಾಮಿ ಮಾತನಾಡಿ,
ಜನ್ಮ ಜನ್ಮಾಂತರದ ಕಥೆ ಹೇಳುವ ಸಿನಿಮಾ, ಟ್ರಾವೆಲ್ ಬೇಸ್ ಕಂಟೆಂಟ್ ಇದಾಗಿದ್ದು,ಶ್ರೀಶಾ ತುಂಬಾ ಒಳ್ಳೆಯ ಪ್ರತಿಭಾವಂತ ನಿರ್ದೇಶಕ,ನಿಜ ಜೀವನದಲ್ಲಿ ನಾನು ತುಂಬಾ ಕಮ್ಮಿ ಮಾತಾಡೋದು.ಆದರೆ ಪಾತ್ರದಲ್ಲಿ ಬೇರೆ ಶೇಡ್ ನೀಡಿದ್ದಾರೆ ನಿರ್ದೇಶಕರು ಎಂದರು,
ಸಿನಿಮಾದಲ್ಲಿ ನಾನಿರುವ ಜಾಗಕ್ಕೆ ನಾಯಕ ಬರ್ತಾರೆ, ಅಲ್ಲಿಂದ ಮುಂದಿನ ಡೆಸ್ಟಿನಿ ಏನು ಅನ್ನೋದು ಸಖತ್ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ.
ಚಿತ್ರದಲ್ಲಿ ನನ್ನ ಜೊತೆಗೆ,ಕನ್ನಡದ ಅಪ್ರತಿಮ ಪ್ರತಿಭಾವಂತ ನಟ ರಾಕೇಶ್ ನಟಿಸಿದ್ದರು,ಈಗ ರಾಕೇಶ್ ನಮ್ಮ ಜೊತೆಗಿಲ್ಲ ಎಂದು ಭಾವುಕರಾದರು ಯಶಸ್ವಿನಿ.
ಇದು ನಮ್ಮ ಸಂಗೀತ ನಿರ್ದೇಶನದ ನಾಲ್ಕನೆಯ ಚಿತ್ರ ಎಂದು ಮಾತು ಶುರು ಮಾಡಿದ ಸಹೋದರರಾದ
ಪ್ರದೀಪ್ ಮತ್ತು ಪ್ರವೀಣ್ ಮಾತನಾಡಿ,
ನಮ್ಮ ಸಿನಿ ಗ್ರಾಫ್ ನಲ್ಲಿ ಬಹಳಷ್ಟು ಕೆಲಸ ಮಾಡಿರ್ತಿವಿ ಆದರೆ ಕೆಲವು ಪ್ರಾಜೆಕ್ಟ್ ಗಳು ಎಲ್ಲರ ಮನಸ್ಸಲ್ಲಿ ಉಳಿಯುತ್ತವೆ,ಇದರಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲವೂ ಬೇರೆ ಬೇರೆ ಜಾನರಲ್ಲಿ ಮೂಡಿ ಬಂದಿದ್ದು,
ನಿರ್ದೇಶಕ ಶ್ರೀಶಾ ಎಷ್ಟು ಜಾಲಿ ಪರ್ಸನ್ ಅಂದ್ರೆ,ನಮ್ಮ ಹತ್ರ ಬಂದಾಗ,ಫುಲ್ ಫ್ರೀಡಂ ಕೊಟ್ಟು ನಿಮಗೆ ಏನ್ ಅನ್ನಿಸುತ್ತೋ ಅದನ್ನ ಟ್ಯೂನ್ ಮಾಡಿ ಅಂತಾ ಹೇಳಿ ನಂತರ ಅದನ್ನು ನಾಗಾರ್ಜುನ ಶರ್ಮಾ ಅವರಿಗೆ ಕಳಿಸಿದ್ದು ಎಲ್ಲವೂ ತುಂಬಾ ಮಜವಾದ ಪ್ರೋಸೆಸ್ ಆಗಿತ್ತು ಎಂದು ಹೇಳಿ,ಅದರಲ್ಲೂ ಒಂದು ಹಾಡು ಸಂಪೂರ್ಣವಾಗಿ ಬಹಳಷ್ಟು ಗಾಧೆ ಮಾತುಗಳ ಮೇಲೆ ಮಾಡಿದ್ದು,ಅದು ಚಿತ್ರ ನೋಡುವ ವೀಕ್ಷಕರಿಗೆ ಸೂಪರ್ ಮಜಾ ಕೊಡತ್ತೆ ಎಂಬ ಭರವಸೆ ಮಾತು ಹೇಳಿದರು.
ಕುಂದಾಪುರದ ಕಲಾವಿದ ಹಿರಿಯ,ನಟ ಪ್ರಭಾಕರ್ ಬ್ರಹ್ಮಾವರ ಮಾತನಾಡಿ,ಬೇರೊಂದು ಚಿತ್ರದ ಚಿತ್ರೀಕರಣದಲ್ಲಿ ನಾನಿದ್ದೆ,ಆ ಚಿತ್ರದ ಗೆಟಪ್ ಇಲ್ಲು ಕೂಡಾ ಕಂಟಿನ್ಯೂ ಆಗಿದೆ ಅನ್ನಬಹುದು,ನಮ್ಮ ಕುಂದಾಪುರ ಮತ್ತೊಂದು ಪ್ರತಿಭೆ ರಾಕೇಶ್ ನನಗೆ ನೆನಪಾದ,ಆತನೊಟ್ಟಿಗೆ ನಾನು ಕೂಡಾ ಜೋಡಿಯಾಗಿ ನಟಿಸಿದ್ದು ವಿಶೇಷ.
ತರಂಗಾಂತರಂಗ,ಜನ್ಮ ಜನ್ಮಾಂತರದ ಕಥೆ,ಆಗ ಬಂದಿತ್ತು ರಂಗಿತರಂಗ ಅದು ಕೂಡಾ ಸಖತ್ ಹೆಸರು ಮಾಡಿತ್ತು, ಅದೇ ರೀತಿಯಾಗಿ ನಮ್ಮ ಚಿತ್ರವು ಕೂಡಾ ಒಳ್ಳೆಯ ಹೆಸರು ಮಾಡಿ ಎಲ್ಲರಿಗೂ ರೀಚ್ ಆಗತ್ತೆ ಎಂದರು.
ನಿರ್ದೇಶಕ ಶ್ರೀಶಾ ಮತ್ತು ನಟ ಪ್ರಭಾಕರ್ ಬ್ರಹ್ಮಾವರ ಮಾತಲ್ಲಿ,ನಟ ಪ್ರಮೋದ ಶೆಟ್ಟಿ ಪಾತ್ರ ತುಂಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪುನರ್ಜನ್ಮದ ಮೇಲೆ ಆಧಾರಿತವಾದ ಈ ಕಥೆಗೆ ಒಳ್ಳೆಯ ಮೈಲೇಜ್ ಕೊಟ್ಟಿದ್ದಾರೆ ಎಂದರು.
ಇನ್ನೊಬ್ಬ
ನಾಯಕಿ ಅಶ್ವಿನಿ ಮಾತನಾಡಿ,ಇದರಲ್ಲಿ ನನ್ನದು ತುಂಬಾ ಒಳ್ಳೆಯ ಪಾತ್ರ,ಸಿನಿಮಾಗಳನ್ನು ಮಾಡಿದ್ದೆ ಆನಂತರ ಸೀರಿಯಲ್ ಗಳನ್ನೂ ಮಾಡಿದೆ,ಈಗ ಜೊತೆ ಜೊತೆಗೆ ಕೆಲವು ಸಿನಿಮಾಗಳನ್ನು ಮಾಡ್ತಾ ಇದ್ದೀನಿ,ಹಾಗೆ ಸಿಕ್ಕ ಅವಕಾಶ ತರಂಗಾಂತರಂಗ ಎಂದರು.

ಸಧ್ಯ ಕನ್ನಡ ಚಿತ್ರರಂಗದಲ್ಲಿ ತುಂಬಾ ಒಳ್ಳೆಯ ಚಿತ್ರಗಳು ಬಂದು ಯಶಸ್ವಿಯಾದ ಉದಾಹರಣೆ ಇವೆ ಎಂದು ಹೇಳಿ ಪ್ರೇಮದ ಊರಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು ನಿರ್ದೇಶಕ ಶ್ರೀಶಾ
ರವೀ ಸಾಸನೂರ್ MasterNews365.Com

