ಬೆಂಟ್ಲಿ ಚಿತ್ರದ ಬಿಡುಗಡೆ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ,ಕನ್ನಡದ ಹಿರಿಯ ನಟಿ ಶೃತಿಯವರು ಮಾತನಾಡಿ
ನಿರ್ಮಾಪಕ ಮತ್ತು ಹೀರೋ ಇಬ್ಬರು ನಮ್ಮ ಜೊತೆಗೆ ಇಲ್ಲೆ ಇದ್ದಿದ್ರೆ ಈ ಇವೆಂಟ್ ಬಹಳ ಜೋರಾಗಿ ನಡೀತಾ ಇತ್ತು,
ಒಬ್ಬ ಕಲಾವಿದೆಯಾಗಿ ನಾನು ಬೆಂಟ್ಲಿ ಚಿತ್ರದ ಪ್ರಚಾರಕ್ಕೆ ಬಂದಿದ್ದೀನಿ,ತುಂಬಾ ವಿಭಿನ್ನವಾದ ಪಾತ್ರ ನನ್ನದು,
ತುಂಬಾ ವರ್ಷ ಕಾಡುವ ಚಿತ್ರದ ಪಾತ್ರ ನಾನು ಮಾಡಿದ್ದೇನೆ.
ಚಿತ್ರ ಶುರುವಾಗಿ ಬಹಳ ವರ್ಷ ಆಯ್ತು.
ನಿರ್ಮಾಪಕರಾದ ಆನೇಕಲ್ ಬಾಲರಾಜ್ ಇಲ್ಲ,ಹೀರೋ ಸಂತೋಷ್ ಬಾಲರಾಜ್ ಇಬ್ಬರು ದೈಹಿಕವಾಗಿ ನಮ್ಮ ಜತೆ ಇಲ್ಲ,ಆದ್ರೂ ಬೆಂಟ್ಲಿ ಚಿತ್ರ ರಿಲೀಸ್ ಮಾಡುವುದರ ಮೂಲಕ ಆ ಇಬ್ಬರನ್ನು ಮತ್ತೆ ಜೀವಂತವಾಗಿ ಇಡುವ ಪ್ರಯತ್ನ ಅವ್ರ ಕುಟುಂಬದ ಒಬ್ಬ ಮಗಳಾಗಿ ಒಬ್ಬ ಅಕ್ಕನಾಗಿ ಶ್ವೇತಾ ಮಾಡ್ತಾ ಇದಾರೆ,ಜೊತೆಗೆ ಮಗನ ಸ್ಥಾನದಲ್ಲಿ ಅಳಿಯ ಅಶೋಕ ನಿಂತಿದ್ದಾರೆ, ಬೆಂಟ್ಲಿಯಂತಹ ಜೆನ್ವಿನ್ ಪ್ರಯತ್ನಕ್ಕೆ ಮಾಧ್ಯಮದವರು ಮತ್ತು ಪ್ರೇಕ್ಷಕರು ಕೈಜೋಡಿಸಬೇಕು ಎಂದು ಶೃತಿ ವಿನಂತಿಸಿಕೊಂಡರು..
ಸೆಪ್ಟೆಂಬರ್ 18ಕ್ಕೆ ರಿಲೀಸ್ ಆಗ್ತಾ ಇರುವ ಸಂತೋಷ್ ಬಾಲರಾಜ್ ನಾಯಕ ನಟನ ಬೆಂಟ್ಲಿ ಚಿತ್ರವನ್ನು
ಜೇಂಕಾರ ಭರತ್ ಹಂಚಿಕೆ ಮಾಡ್ತಾ ಇದ್ದು,ನಂತರ ಮಾತನಾಡಿದ ಭರತ್,ನಮ್ಮದು ಮತ್ತು ಸಂತೋಷ್ ಬಾಲರಾಜ್ ಅವರದು ಸುಮಾರು,ಮೂವತ್ತು ವರ್ಷದ ಗೆಳೆತನ ತುಂಬಾ ಆತ್ಮೀಯರು,ಆನೇಕಲ್ ಬಾಲರಾಜ್ ಮತ್ತು ನಮಗೆ ಸುಮಾರು
ನಲವತ್ತು ವರ್ಷದ ಬಾಂಧವ್ಯ ಎಂದು ಭಾವುಕರಾದರು, ಹಾಗೇ ಮಾತು ಮುಂದುವರೆಸಿ,
ಆನೇಕಲ್ ಬಾಲರಾಜ್ ಅವ್ರ ಕರಿಯಾ2 ಅಥವಾ ಗಣಪ ಎರಡು ಸಿನ್ಮಾ ಆಡಿಯೋ ರೈಟ್ಸ್ ನಾವು ತಗೊಳ್ಳಕ್ಕೆ ಆಗ್ಲಿಲ್ಲ.ಆ ಬೇಸರ ನಮಗಿದೆ,ಅಪ್ಪ ಇಲ್ಲ,ತಮ್ಮ ಇಲ್ಲ ಆದ್ರೂ ಇಬ್ಬರ ಆಬ್ಸೆಂಟ್ ನಲ್ಲಿ ಅವ್ರ ಮನೆಯ ಹೆಣ್ಮಗಳು ಶ್ವೇತಾ ಬೆಂಟ್ಲಿಯ ಕೆಲಸವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡಿದ್ದಾರೆ ಎಂದು ಶ್ವೇತಾ ಮತ್ತು ಅವ್ರ ಯಜಮಾನರು ಅಶೋಕ್ ರನ್ನು ಬೆಂಬಲಿಸಲು ಕೇಳಿಕೊಂಡರು.
ಅಪ್ಪ ಆನೇಕಲ್ ಬಾಲರಾಜ್ ಮತ್ತು ತಮ್ಮ ಸಂತೋಷ್ ಬಾಲರಾಜ್ ಇಬ್ಬರನ್ನು ಕಳೆದುಕೊಂಡಿರುವ ನೋವಿನಲ್ಲೂ ಮಾತು ಶುರುಮಾಡಿದ,ಶ್ವೇತಾ,ಪ್ರತಿ ಸಾರಿಯೂ ಸಂತೋಷ್ ಶೂಟಿಂಗ್ ಮುಗಿಸಿಕೊಂಡು ಬಂದಮೇಲೆ ತುಂಬಾ ಕ್ಲೋಸ್ ಆಗಿ ಮಾತಾಡ್ತಾ ಇದ್ದ,ತನ್ನ ಬಟ್ಟೆ ಮ್ಯಾಚಿಂಗ್ ವಿಚಾರವಾಗಿ ಕೇಳ್ತಾ ಇದ್ದ ಅಂತಹ ಸೆನ್ಸಿಬಲ್ ಬಾಂಡಿಂಗ್ ಇಟ್ಟುಕೊಂಡವನು ನನ್ನ ತಮ್ಮ,
ಅಪ್ಪನ ಕೊನೆ ಆಸೆ,ತಮ್ಮನ ಬೆಸ್ಟ್ ಚಿತ್ರ ಬೆಂಟ್ಲಿ ಗೆ ಸಪೋರ್ಟ್ ಮಾಡಿ ಅಂತಾ ಮಾತನಾಡುವಾಗ ಶ್ವೇತಾ ಕಣ್ಣಲ್ಲಿ ನೀರಿತ್ತು..
ನಂತರ ಮಾತಾಡಿದ ಶ್ವೇತಾರ ಪತಿ ಅಶೋಕ್ ಮಾತನಾಡಿ,
ಲೂಸ್ ಮಾದ ಯೋಗಿ,ಪ್ರಮೋದ್ ಶೆಟ್ಟಿ,ಉಗ್ರಂ ಮಂಜು ಸೇರಿ ಬಹಳ ಜನರ ಸಪೋರ್ಟ್ ಬಗ್ಗೆ ಭಾವುಕರಾಗಿ ಮಾತನಾಡಿ,
ನಮ್ಮ ಮಾವ ಆನೇಕಲ್ ಬಾಲರಾಜ್,ಬಾಮೈದ ಸಂತೋಷ್ ಬಾಲರಾಜ್ ಇಬ್ಬರು ನಮ್ಮ ಜತೆಗಿಲ್ಲ.ಮಗನನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಅನ್ನೋ ಆಸೆ ಇತ್ತು,ಅವ್ರ ಕನಸು ನನಸಾಗಲೇ ಇಲ್ಲ.
ಸಂತೋಷ್ ಬಾಲರಾಜ್ ತೀರಿ ಹೋಗುವಾಗ ಬೆಂಟ್ಲಿ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು,ಆದ್ರೆ ಅದೃಷ್ಟ ಅವನ ಕೈ ಹಿಡಿಯಲಿಲ್ಲ,ತುಂಬಾ ಕನಸು ಹೊತ್ತಿದ್ದ ಹುಡುಗ ಜತೆಗಿಲ್ಲ ಅನ್ನೋ ದುಃಖ ಯಾವಾಗಲೂ ಇರತ್ತೆ.,ಪ್ರದೀಪ್ ದೊಡ್ಡಯ್ಯ ತರಹದ ಆತ್ಮೀಯರ ಸಪೋರ್ಟ್ ಬೆಂಟ್ಲಿ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್.ಬೆಂಟ್ಲಿಯಲ್ಲಿ MLA ಪಾತ್ರದಲ್ಲಿ ನಮ್ಮ ಮಾವ ಕೂಡಾ ಇದ್ದಾರೆ ಎಂದು ನೆನಪಿಸಿಕೊಂಡರು.
ಬೆಂಟ್ಲಿ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವ,ನಟ ನಿರ್ದೇಶಕ,
ಪ್ರದೀಪ್ ದೊಡ್ಡಯ್ಯ,ಬೆಂಟ್ಲಿ ಅನ್ನೋದು ಒಂದು ಕಾರ್,ದರ್ಶನ್ ತೂಗುದೀಪ್ ಒಂದು ಕಡೆ ಹೇಳಿದ್ದ ಮಾತು,ಬೆಂಟ್ಲಿ ಕಾರ್ ತಗೋಬೇಕು ಅನ್ನೋ ಮಾತು ನೆನಪು ಮಾಡಿಕೊಂಡ ಪ್ರದೀಪ್ ದೊಡ್ಡಯ್ಯ.,ಸಂತೋಷ್ ಬಾಲರಾಜ್ ಮತ್ತು ನನ್ನ ಗೆಳೆತನ ಆಗಿದ್ದೆ ವಿಚಿತ್ರ, ಬೆಂಟ್ಲಿ ಸಂತೋಷ್ ನಟನೆಯ ಬೆಸ್ಟ್ ಸಿನಿಮಾ,ನೋ ಸ್ಮೋಕಿಂಗ್ ಆಡ್ ಗೇ ಧ್ವನಿ ಕೊಟ್ಟ ಹುಡುಗಿ ಬೆಂಟ್ಲಿ ಚಿತ್ರದ ನಾಯಕಿ.ಸಂತೋಷ್ ವಿಲನ್ ಪಾತ್ರ ಮಾಡಬೇಕು ಅನ್ನೋ ಆಸೆ ತುಂಬಾ ಜನಕ್ಕೆ ಇತ್ತು,ಆದ್ರೆ ಅದು ಆಗ್ಲಿಲ್ಲ ಎಂದರು.
ರವೀ ಸಾಸನೂರ್ MasterNews365

