Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕೋಟಿಗೊಬ್ಬನ ಸಿಂಹ ಘರ್ಜನೆ…!!!
- ಸಿನಿಮಾ

ಕೋಟಿಗೊಬ್ಬನ ಸಿಂಹ ಘರ್ಜನೆ…!!!

ಹುಟ್ಟಿದಾಗಿನಿಂದ ನಾಗರಹಾವು ಎನ್ನುವಂತಹ ಚಿತ್ರ ತೆರೆ ಕಾಣುವ ತನಕ, ಸಂಪತ್ ಕುಮಾರ್ ಆಗಿದ್ದ ವ್ಯಕ್ತಿ ಒಬ್ಬ ವಿಷ್ಣುವರ್ಧನ ಆಗಿ ರಾರಾರಿಜಿದ್ದು,ತೆರೆಯ ಮೇಲೆ ಸಿಂಹದಂತೆ ಗರ್ಜಿಸಿದ್ದು, ರಾಮಾಚಾರಿ ಪಾತ್ರದ ಮೂಲಕ ಹಿಡಿಯುವ ಸಮೂಹದ ಒಂದು ಶಕ್ತಿಯುತ ಅಸ್ತ್ರವಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ. ಅಭಿನಯದಲ್ಲಿ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ದಾದಾ, ಕನ್ನಡ ಚಿತ್ರರಂಗದ ಹಿರಿಯರ ಪಾಲಿಗೆ ಪ್ರೀತಿಯ ವಿಷ್ಣು,ಎಲ್ಲಾ ಸಹೋದ್ಯೋಗಿಗಳ ಪಾಲಿಗೆ ವಿಷ್ಣುವರ್ಧನ, ಚಿತ್ರರಂಗದಲ್ಲಿನ ಎಲ್ಲಾ ಕಿರಿಯರ ಪಾಲಿಗೆ ವಿಷ್ಣು ಸರ್ – […]

ಹುಟ್ಟಿದಾಗಿನಿಂದ ನಾಗರಹಾವು ಎನ್ನುವಂತಹ ಚಿತ್ರ ತೆರೆ ಕಾಣುವ ತನಕ, ಸಂಪತ್ ಕುಮಾರ್ ಆಗಿದ್ದ ವ್ಯಕ್ತಿ ಒಬ್ಬ ವಿಷ್ಣುವರ್ಧನ ಆಗಿ ರಾರಾರಿಜಿದ್ದು,ತೆರೆಯ ಮೇಲೆ ಸಿಂಹದಂತೆ ಗರ್ಜಿಸಿದ್ದು, ರಾಮಾಚಾರಿ ಪಾತ್ರದ ಮೂಲಕ ಹಿಡಿಯುವ ಸಮೂಹದ ಒಂದು ಶಕ್ತಿಯುತ ಅಸ್ತ್ರವಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ.

ಅಭಿನಯದಲ್ಲಿ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ದಾದಾ, ಕನ್ನಡ ಚಿತ್ರರಂಗದ ಹಿರಿಯರ ಪಾಲಿಗೆ ಪ್ರೀತಿಯ ವಿಷ್ಣು,
ಎಲ್ಲಾ ಸಹೋದ್ಯೋಗಿಗಳ ಪಾಲಿಗೆ ವಿಷ್ಣುವರ್ಧನ, ಚಿತ್ರರಂಗದಲ್ಲಿನ ಎಲ್ಲಾ ಕಿರಿಯರ ಪಾಲಿಗೆ ವಿಷ್ಣು ಸರ್ – ವಿಷ್ಣು ಅಂಕಲ್, ತಮ್ಮನ ಅತಿಯಾಗಿ ಪ್ರೀತಿಸುವವರ ಪಾಲಿಗೆ ಯಜಮಾನ ಅಂತಿಮವಾಗಿ ಹೇಳುವುದಾದರೆ ತಮ್ಮ ಚಿತ್ರಗಳನ್ನ ನೋಡಿ ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಹೊಡೆದು ಹುಟ್ಟುಹಬ್ಬ ಬಂದಾಗ ಮನೆ ಮುಂದೆ ಸಾಗರದಂತೆ ನಿಲ್ಲುವ, ನಿಲ್ಲುತ್ತಿದ್ದ ಸಿಂಹ ಪಡೆಯಂತಿರುವ ಪ್ರೀತಿಯ ಅಭಿಮಾನಿಗಳ ಪಾಲಿಗೆ ಇವರು ಕೋಟಿಗೊಬ್ಬ.

ಈ ಬರುವ ಸೆಪ್ಟೆಂಬರ್ 18ಕ್ಕೆ ಸಾಹಸಸಿಂಹ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ ರವರ ಹುಟ್ಟುಹಬ್ಬ,
ಪ್ರತಿವರ್ಷದಂತೆ ಅವರ ಅಭಿಮಾನಿಗಳು ತಾವಿದ್ದ ಜಾಗದಲ್ಲಿಯೇ ದಾದಾರನ್ನ ನೆನಪಿಸಿಕೊಂಡು, ಅವರಿರುವ ಭಾವಚಿತ್ರಕ್ಕೆ ಹೂಹಾರವನ್ನ ಹಾಕಿ, ಅಲ್ಲಿ ನೆರೆದಿರುವ ಎಲ್ಲರಿಗೂ ಸಿಹಿ ತಿನ್ನಿಸಿ, ಸಾಹಸಸಿಂಹ ನಟಿಸಿದ ಎಲ್ಲ ಚಿತ್ರಗಳ ಬಹುತೇಕ ಹಾಡುಗಳನ್ನು ಹಾಕಿ, ಆ ವತ್ತಿನ ದಿನವನ್ನ ಸಂಪೂರ್ಣ ಅರ್ಥಮಯವನ್ನಾಗಿಸುವುದು ಎಲ್ಲ ಹೃದಯವಂತ ಅಭಿಮಾನಿಗಳು ತಮ್ಮ ಕರ್ತವ್ಯದಂತೆ ಮಾಡಿಕೊಂಡು ಬಂದಿದ್ದಾರೆ ಮುಂದೆಯೂ ಸಹ ಮಾಡುತ್ತಾರೆ.

ಸಪ್ಟೆಂಬರ್ 18ರ ನಂತರ ಇದೇ ತಿಂಗಳು ಸೆಪ್ಟೆಂಬರ್ 27ರಂದು ಮತ್ತೊಂದು ಮಹಾ ಸಂಭ್ರಮ ದಾದಾರವರನ್ನ ಪ್ರೀತಿಸುವ,ಗೌರವಿಸುವ, ನೆನಪಿಸುವಂತಹ ಐತಿಹಾಸಿಕ ಕಾರ್ಯಕ್ರಮವನ್ನು ನಡೆಯಲಿದೆ, ಅದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದೊಂದಿಗೆ ಮಹಾ ಮೆರವಣಿಗೆ,
ಸೆಪ್ಟೆಂಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ 18 ಗಂಟೆಗಳ ಸಂಭ್ರಮ
ಕನ್ನಡ ಚಿತ್ರರಂಗದ ಮೇರುನಟ, ಅಭಿಮಾನಿಗಳ ಪ್ರೀತಿಯ ‘ಯಜಮಾನ’ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ವಿಷ್ಣು ಸೇನಾನಿಗಳು ಸಜ್ಜಾಗುತ್ತಿದ್ದಾರೆ.

ಸುಮಾರು ಒಂದು ಕೋಟಿಗೂ ಮಿಗಿಲಾದ ವೆಚ್ಚದಲ್ಲಿ, ಬರೋಬ್ಬರಿ 18 ಗಂಟೆಗಳ ಕಾಲ ನಡೆಯಲಿರುವ ಈ ಬೃಹತ್ ಮಹೋತ್ಸವಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ನೂರಾರು ಜನರ ಶ್ರಮ, ಸಾವಿರಾರು ಅಭಿಮಾನಿಗಳ ಸಹಕಾರ ಹಾಗೂ ತಿಂಗಳುಗಳ ಪೂರ್ವತಯಾರಿಯೊಂದಿಗೆ ಈ ಮಹೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ರೂಪಿಸಲಾಗುತ್ತಿದೆ.

ಮಹೋತ್ಸವದ ಮೊದಲ ಪ್ರಮುಖ ಆಕರ್ಷಣೆಯಾಗಿ ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜದ ಮೆರವಣಿಗೆ ನಡೆಯಲಿದೆ.

ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ. ಇದು ಅಮೃತ ಮಹೋತ್ಸವದ ಅತ್ಯಂತ ವಿಶೇಷ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಲಿದೆ.

ಮೆರವಣಿಗೆಯ ನಂತರ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಸಂಭ್ರಮ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ.

“ಆ ದಿನ ವಿಷ್ಣು ಸೇನಾನಿಗಳು ಕೇವಲ ಒಂದು ಕಾರ್ಯಕ್ರಮವನ್ನು ಮಾಡುವುದಿಲ್ಲ. ಒಬ್ಬ ಮಹಾನ್ ಕಲಾವಿದನ ಮೇಲಿನ ಅಭಿಮಾನ ಹೇಗಿರುತ್ತದೆ ಎಂಬುದನ್ನು ಇಡೀ ನಾಡಿಗೆ ತೋರಿಸಲಿದ್ದಾರೆ. ಈ ಅಮೃತ ಮಹೋತ್ಸವ ಅಭಿಮಾನಿಗಳ ಪಾಲಿಗೆ ಒಂದು ಐತಿಹಾಸಿಕ ಕ್ಷಣವಾಗಬೇಕು ಎಂಬ ಕನಸಿನಿಂದ ಪ್ರತಿಯೊಂದು ಹೆಜ್ಜೆಯನ್ನೂ ರೂಪಿಸುತ್ತಿದ್ದೇವೆ” ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ

ದಿನಾಂಕ: ಸೆಪ್ಟೆಂಬರ್ 27
ಸಮಯ: ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ
ಮೆರವಣಿಗೆ: ಟೌನ್ ಹಾಲ್‌ನಿಂದ ನಾಯಂಡಹಳ್ಳಿವರೆಗೆ
ಮುಖ್ಯ ಕಾರ್ಯಕ್ರಮದ ಸ್ಥಳ: ನಂದಿ ಲಿಂಕ್ ಗ್ರೌಂಡ್, ನಾಯಂಡಹಳ್ಳಿ, ಬೆಂಗಳೂರು

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.