“ಯಾಕಪ್ಪ ಏನು ಬೇಕಪ್ಪ
ನಿನ್ನ ಮನಸ್ಸಪ್ಪ ಮುಂದೆ ನೆನಸಪ್ಪ
ಕನಸಿನ ಪರಿ ಈ ಸಂಸಾರಪ್ಪ
ನಿನ್ನ ಮನಸ್ಸಿಗೆ ಬಂದಾರ ನೆಚ್ಚಪ್ಪ “
ಇದು ಕನಸಿನ ಪರಿ ಸಂಸಾರ ಕಣ್ಣು ತೆರೆದರೆ ಕಾಣಿಸ್ತಾ ಇದೆ ಕಣ್ಣು ಮುಚ್ಚಿದರೆ ಕಾಣುವುದಿಲ್ಲ ಕಣ್ಣು ಮುಚ್ಚಿದರೆ ಕನಸು ಬೀಳುತ್ತದೆ ಕಣ್ಣು ಬಿಚ್ಚಿದರೆ ಜಗತ್ತು ಕಾಣುತ್ತದೆ ಕಣ್ಣು ಮುಚ್ಚಿದರೆ ಸ್ವಪ್ನ ಕಾಣುತ್ತದೆ ಇದು ಒಂದು ಕನಸಿನ ಪರಿ ಸಂಸಾರ ಇದನ್ನ ನೆಚ್ಚ ಬ್ಯಾಡ್ರಿ ಇದನ್ನ ನಂಬ ಬ್ಯಾಡ್ರಿ ಅಂತ ಆ ಶರಣ ಹೇಳಿದ ಅದಕ್ಕೆ ಪ್ರಪಂಚ ಏನು ಮಾಡಿಲ್ಲ ಹೆಂಡ್ರು ಮಕ್ಕಳು ಏನು ಕಷ್ಟ ಕೊಟ್ಟಿಲ್ಲ ಹಂಗಾದ್ರೆ ಕಷ್ಟ ಕೊಟ್ಟಿದ್ದೇನು ಅದು ನಮ್ಮ ದುರಾಸೆ ಅತಿ ಆಸೆ ಪರಮ ದುಃಖಕ್ಕೆ ಮೂಲ ಅಂತ ಬಲ್ಲವರು ಹೇಳ್ಯಾರು ಈ ಜಗತ್ತಿಲ್ಲ ಭಗವಂತನ ಸ್ವತ್ತು ಬಂದ್ರು ಅವನದೇ ಹೋದರೂ ಅವನದೇ ನಮ್ಮದು ಅಂತ ಅನ್ನಕ್ಕ ಇಲ್ಲಿ ಏನಾಯ್ತು ಇಲ್ಲಿ ಯಾವುದನ್ನು ಹಚ್ಚಿಕೊಳ್ಳಲಿಲ್ಲಂದ್ರ ನಮಗೆ ದುಃಖವೇ ಆಗುವುದಿಲ್ಲ.
ಆ ಭಗವಂತ ನಮಗೆ ಏನು ಕೊಡಬೇಕು ಏನಿಲ್ಲ ಎಲ್ಲಾ ಮುಂಚೆ ನಿರ್ಧಾರ ಮಾಡಿ ನಮಗ ಈ ಜಗತ್ತಿನಾಗ ಕಳಿಸಿಕೊಟ್ಟಾನ ಇದಕ್ಕ ಆಧಾರ ಏನಂದರೆ ತಾಯಿಯ ಉದರದಲ್ಲಿ ಹುಟ್ಟಿದ ತಕ್ಷಣ ನಮಗಾಗಿ ತಾಯಿಯ ಮೊಲೆಯೊಳಗೆ ಹಾಲುಕೊಟ್ಟಾನ ಮಗುವಿಗೆ ಎಷ್ಟು ಬೇಕು ಅಷ್ಟು ಹಾಲು ಅಲ್ಲಿ ಅದಾವು ಕೂಸು ಆ ಮೊಳೆ ಹಾಲು ಬಿಡುವುದರಾಗ ಧನ ಧಾನ್ಯಗಳನ್ನು ನಮ್ಮ ಮುಂದೆ ಇಟ್ಟಾನ ಅಂದ್ರೆ ಅಂದಮ್ಯಾಗ ಇಲ್ಲಿಗೆ ನಾವೇನು ತಂದಿವಿ ಏನೂ ಇಲ್ಲ ಬದುಕಲು ನಮಗೇನು ಬೇಕು ಎಲ್ಲಾ ವ್ಯವಸ್ಥೆ ಮೊದಲೇ ಮಾಡಿ ಇಟ್ಟಾನ ಮತ್ತೆ ನಮ್ಮಿಂದ ಏನು ಆಗೇದ ಮತ್ತು ಎಲ್ಲಾ ಕೊಡವ ಅವನೇ ಇದೆಲ್ಲ ಅವನ ಸ್ವತ್ತು ಅದಕ್ಕೆ ಪ್ರಪಂಚ ಏನೂ ಮಾಡಿಲ್ಲ ಮಾಡಿದ್ರ ಹೆಂಗ್ ಮಾಡಬೇಕು ಅಂದ್ರೆ ತಿಳಿದು ಸಂಸಾರ ಮಾಡಬೇಕು.
ನಮ್ಮಿಂದ ಇನ್ನೊಬ್ಬರಿಗೆ ದುಃಖ ಆಗಬಾರದು ಇನ್ನೊಬ್ಬರಿಗೆ ನೋವು ಆಗಬಾರದು ಮತ್ತೆ ದುಡಿತ ಧೋಳ ದೀಕವದು ನಿಂದೆ ಒಬ್ಬರಿಗೆ ನಿಂದ ಮಾಡಿದೆವು ಅಂದ್ರೆ ಪಾಪ ಬಂತು ಅಂತ ತಿಳಿಯಿರಿ. ಕೊಡೋದು ಅದಲ್ಲ ಪಡೆದು ಪಾಪ ಕೇಳಬ್ಯಾಡ್ರಿ. ಹುಣಸಿ ಪುಣ್ಯ ಕೇಳಬೇಡಿ ಯಾರಿಗಾದರೂ ಹೊಡೆದರೆ ಪಾಪ ಬಂತ ಅನ್ನೋದು ಯಾರಿಗಾದರೂ ಊಟ ಮಾಡಿಸಿದರ ನಿಮಗೆ ಪುಣ್ಯ ಬಂತು ಅಂತ ತಿಳಿಬೇಕು ಹೇಗೆ ತಿಳಿದು ಪ್ರಪಂಚ ಮಾಡಬೇಕು
ನಾನು ಹಿಂಗ ಬಿಡಿಸಿ ಹೇಳಿದ್ದಕ್ಕೆ ನನ್ನ ಬಗ್ಗೆ ಆಚರಣೆ ಇಂತಹ ಸಮಾಜಗಳು ಬಸಪ್ಪ ಶರಣರ ಜೊತೆ ಎಲ್ಲಿ ಬೇಕೆಂದರಲ್ಲಿ ಆದ ನಿದರ್ಶನಗಳು ಹಲವಾರು ಅನುಭವದಲ್ಲಿ ವಾದ ವಿವಾದಗಳಿಗಾಗಿ ನನ್ನ ಮುಂದೆ ಯಾರೂ ತಡವಿಲ್ಲ ಅದೆಲ್ಲವೂ ಆ ದೇವರು ಕೃಪೆ ಎಂದು ನಗುಮಗದಿಂದ ಸಂಪೂರ್ಣ ಆತ್ಮಸಾಕ್ಷಿಯಾಗಿ ನುಡಿಯುವವರು.
ಮುಂದುವರಿಯುವುದು …..
ಓದುಗ ಪ್ರಭುಗಳೆ ನಾಳೆ ಇದೇ ತರಹದ ಮತ್ತೊಂದು ಸಂವಾದದ ಘಟನೆ -
ಕಡಕೋಳಕ್ಕೆ ಹೋದಾಗಿನ ಘಟನೆಯನು ಓದಲು ಸಿದ್ಧರಾಗಿರಿ. ಓದುಗ ಪ್ರಭುಗಳಲ್ಲಿ ಇನ್ನೊಂದು ಮನವಿ ಓದಿ ಆದ ನಂತರ ಸಾಧ್ಯವಾದರೆ ಒಂಚೂರು ಕಮೆಂಟ್ ಇದ್ರ ಹಾಕೀಪಾ …..

