Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಾಮನ್ ಮ್ಯಾನ್ –ಮುಖ್ಯಮಂತ್ರಿ ಆದಾಗ… !!
- ಸಿನಿಮಾ

ಕಾಮನ್ ಮ್ಯಾನ್ –ಮುಖ್ಯಮಂತ್ರಿ ಆದಾಗ… !!

ಚಂದನವನದಲ್ಲಿ ಬಹಳಷ್ಟು ಚಂದದ ಚಿತ್ರಗಳು ಬಂದಿವೆ ಬರುತ್ತಿವೆ ಹಾಗೆ ಮುಂದೆಯೂ ಕೂಡ ಬರುತ್ತವೆ ಎಂಬುದು ನನಗೆ ಗ್ಯಾರಂಟಿ.ಒಂದು ಕಥೆ ಒಂದೊಳ್ಳೆ ಚಿತ್ರವಾಗಬೇಕೆಂದರೆ ಅದಕ್ಕೆ ಬೇಕಾಗುವ ಪ್ರಮುಖ ಅಂಶವಾದರೂ ಏನು ಎಂದು ಸಂಶೋಧನ ಮಾಡಲು ಹೊರಟರೆ ತಕ್ಷಣ ನಮಗೆಲ್ಲ ಸಿಗುವಂತದ್ದು,ಒಂದೊಳ್ಳೆ ಕಥೆಗೆ ತಕ್ಕದಾದ ಚಿತ್ರಕಥೆ ಸರಿಹೊಂದುವ ಸಂಭಾಷಣೆ ಹಾಗೂ ಅದನ್ನ ಅಷ್ಟೇ ಕರಾರುವಕ್ಕಾಗಿ ಇಂಪ್ರೆಸ್ಟಿವ್ ಆಗಿ ತೋರಿಸುವ ನಿರ್ದೇಶಕ ಬೇಕಾಗುತ್ತದೆ ಎಂಬುದು,ತುಂಬಾ ದೊಡ್ಡ ಕೋರ್ ಪಾಯಿಂಟ್. ಅದರಲ್ಲೂ ಚಿತ್ರ ನಿರ್ದೇಶಕರ ವಿಚಾರವಾಗಿ ಮಾತನಾಡಲು ಹೊರಟರೆ ಕನ್ನಡ ಸೇರಿ ಪ್ರಪಂಚದಾದ್ಯಂತ […]

ಚಂದನವನದಲ್ಲಿ ಬಹಳಷ್ಟು ಚಂದದ ಚಿತ್ರಗಳು ಬಂದಿವೆ ಬರುತ್ತಿವೆ ಹಾಗೆ ಮುಂದೆಯೂ ಕೂಡ ಬರುತ್ತವೆ ಎಂಬುದು ನನಗೆ ಗ್ಯಾರಂಟಿ.
ಒಂದು ಕಥೆ ಒಂದೊಳ್ಳೆ ಚಿತ್ರವಾಗಬೇಕೆಂದರೆ ಅದಕ್ಕೆ ಬೇಕಾಗುವ ಪ್ರಮುಖ ಅಂಶವಾದರೂ ಏನು ಎಂದು ಸಂಶೋಧನ ಮಾಡಲು ಹೊರಟರೆ ತಕ್ಷಣ ನಮಗೆಲ್ಲ ಸಿಗುವಂತದ್ದು,
ಒಂದೊಳ್ಳೆ ಕಥೆಗೆ ತಕ್ಕದಾದ ಚಿತ್ರಕಥೆ ಸರಿಹೊಂದುವ ಸಂಭಾಷಣೆ ಹಾಗೂ ಅದನ್ನ ಅಷ್ಟೇ ಕರಾರುವಕ್ಕಾಗಿ ಇಂಪ್ರೆಸ್ಟಿವ್ ಆಗಿ ತೋರಿಸುವ ನಿರ್ದೇಶಕ ಬೇಕಾಗುತ್ತದೆ ಎಂಬುದು,
ತುಂಬಾ ದೊಡ್ಡ ಕೋರ್ ಪಾಯಿಂಟ್.

ಅದರಲ್ಲೂ ಚಿತ್ರ ನಿರ್ದೇಶಕರ ವಿಚಾರವಾಗಿ ಮಾತನಾಡಲು ಹೊರಟರೆ ಕನ್ನಡ ಸೇರಿ ಪ್ರಪಂಚದಾದ್ಯಂತ ಇರುವಂತಹ ಎಲ್ಲ ಭಾಷೆಯ ಚಿತ್ರ ನಿರ್ದೇಶಕರನ್ನು ನಾವು ನಿನಗೆಲೇ ಬೇಕು ಕಾರಣ ಅವರಿಲ್ಲದೆ ಚಿತ್ರಗಳು ಇಲ್ಲ ಮನೋರಂಜನೇಯೆ ಇಲ್ಲ.

ಒಬ್ಬ ಕಥೆಗಾರ ಒಂದೊಳ್ಳೆಯ ಕಥೆಯನ್ನ ಬರೆಯಬಹುದು, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಅದಕ್ಕೆ ಬೇಕಾದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಬರೆದು ಚಿತ್ರಕಥೆಯನ್ನು ರೆಡಿ ಮಾಡಬಹುದು ಆದರೆ ಆತನಿಗೆ ನಿರ್ದೇಶನ ಗೊತ್ತಿಲ್ಲ ಅಂದ್ರೆ ಅಂತವರಿಗೆ ಒಬ್ಬ ಸೂಕ್ತ ನಿರ್ದೇಶಕ ಬೇಕಾಗುತ್ತದೆ ಆ ನಿರ್ದೇಶಕರಿಂದ ಒಬ್ಬ ನಿರ್ಮಾಪಕನ ಹುಡುಕಾಟ ನಂತರ ಕಲಾವಿದರು ಶೂಟಿಂಗ್ ರಿಲೀಸ್ ಇತ್ಯಾದಿ. ಇಷ್ಟೆಲ್ಲ ವಿಚಾರಗಳನ್ನು ನೋಡಿದಾಗ ನಿರ್ದೇಶಕ ಎಷ್ಟು ಮುಖ್ಯವಾಗುತ್ತಾನೆ ಅಲ್ಲವೇ ??

ಚಂದನವನ ಈಗಾಗಲೇ ಅತ್ಯಂತ ಪ್ರಬುದ್ಧ ಪ್ರತಿಭಾವಂತ ಚಿತ್ರ ನಿರ್ದೇಶಕರನ್ನ ಕಂಡಿದೆ ಹಾಗೂ ಅವರ ಚಿತ್ರಗಳನ್ನು ನೋಡಿದೆ,

ಕನ್ನಡದಲ್ಲಿ ಕೆಲವೊಂದ್ ನಿರ್ದೇಶಕರು ಬೆರಳಿಕೆಯಷ್ಟು ಸಿನಿಮಾ ನಿರ್ದೇಶನ ಮಾಡಿರಬಹುದು,
ಕೆಲವು ನಿರ್ದೇಶಕರು ಹತ್ತು ಸಿನಿಮಾ,ಕೆಲವರು 25 ಸಿನಿಮಾ, ಕೆಲವೇ ಕೆಲವು ನಿರ್ದೇಶಕರು ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರಬಹುದು,
ಅದರಲ್ಲೂ ಮುಂಚೂಣಿಯಲ್ಲಿ ಬರುವ ನಮ್ಮ ಹೆಮ್ಮೆಯ ನಿರ್ದೇಶಕರ ವಿಚಾರವನ್ನು ನಾವು ಮಾತನಾಡಿದಾಗ ದೊರೆ ಭಗವಾನ್, ಭಾರ್ಗವ, ಎಸ್ ನಾರಾಯಣ, ಓಂ ಪ್ರಕಾಶ್ ರಾವ್ ಸೇರಿ ಇನ್ನೊಂದಷ್ಟು ಹೆಸರುಗಳನ್ನ ನಾವಿಲ್ಲಿ ಗೌರವದಿಂದ ನೆನೆಯಬಹುದು.

ಇಂತಹ ದಿಗ್ಗಜ ಚಿತ್ರ ನಿರ್ದೇಶಕರ ಮದ್ಯೆ ಕನ್ನಡಿಗರ ಮನಸ್ಸನ್ನು ಗೆದ್ದ ಮತ್ತು ಕನ್ನಡ ಸೇರಿ ಬೇರೆ ಭಾಷೆಯಲ್ಲಿಯೂ ಸಹ ಚಿತ್ರ ನಿರ್ದೇಶನವನ್ನು ಮಾಡಿರುವಂತಹ, ಕನ್ನಡದ ನಿರ್ದೇಶಕನೆಂದೆ ಹೆಸರು ಪಡೆದಿರುವ ಓಂ ಸಾಯಿ ಪ್ರಕಾಶ್ ರವರ ಬಗ್ಗೆ ಮಾತನಾಡಲೇಬೇಕು.

ಓಂ ಸಾಯಿ ಪ್ರಕಾಶ್ ನಮ್ಮ ಹೆಮ್ಮೆ,ಕನ್ನಡ ಸೇರಿ ಇನ್ನಿತರ ಭಾಷೆಗಳಲ್ಲಿ ಇವರು ಮಾಡಿರುವ ಚಿತ್ರಗಳ ಸಂಖ್ಯೆ ನೂರು ದಾಟುತ್ತದೆ.

ಹೆಚ್ಚು ಕಡಿಮೆ 40 ವರ್ಷಗಳಿಂದ ಸಿನಿಮಾ ಉದ್ಯಮದಲ್ಲಿರುವ ಓಂ ಸಾಯಿ ಪ್ರಕಾಶ್ ಮಾಡಿದ ಬಹುತೇಕ ಚಿತ್ರಗಳು ಹಿಟ್.

ಅದರಲ್ಲೂ ಕೆಲವು ಸಿನಿಮಾಗಳ ಬಗ್ಗೆ ಪ್ರಸ್ತಾಪಿಸುವದಾದರೆ,
ಚಾಲೆಂಜ್ ಗೋಪಾಲಕೃಷ್ಣ, ಲಯನ್ ಜಗಪತಿ ರಾವ್,
ನೀಲಕಂಠ, ಪರೋಡಿ, ಅಣ್ಣ ತಂಗಿ, ತವರಿಗೆ ಬಾ ತಂಗಿ, ಮುಂತಾದವು.

ಸೃಜನಶೀಲ ಬರಹಗಾರರು ಮತ್ತು ನಿರ್ದೇಶಕರು ಎನಿಸಿಕೊಂಡಂತಹ ಯಾವುದೇ ಒಬ್ಬ ತಂತ್ರಜ್ಞ ಸುಮ್ಮನೆ ಕೂಡಲಾರ,
ಆದ ಕಾಣುವ ಪ್ರತಿ ಕನಸಲ್ಲೂ ಒಂದು ಹೊಸ ಕಥೆ ಇರುತ್ತದೆ ಒಂದು ಹೊಸ ಸಿನಿಮಾದ ರಚನೆ ಇರುತ್ತದೆ,

ಇತ್ತೀಚಿಗೆ ಓಂ ಸಾಯಿಪ್ರಕಾಶ್ ಮತ್ತೆ ತಮ್ಮ ನಿರ್ದೇಶನದ ಕ್ಯಾಪ್ ತೊಟ್ಟು ಹೊಸ ಮ್ಯಾಜಿಕ್ ನೊಂದಿಗೆ ಬಂದಿದ್ದಾರೆ, ಅದು ಕಾಮನ್ ಮ್ಯಾನ್ ಆಗಿ,
ಇದು ಓಂ ಸಾಯಿ ಪ್ರಕಾಶ್ ಅವರ 106ನೇ ಚಿತ್ರ..

ಇತ್ತೀಚೆಗೆ ನಗರದಲ್ಲಿ ನಡೆದ ಕಾಮನ್ ಮ್ಯಾನ್ ಚಿತ್ರದ ಪತ್ರಿಕಾಗೋಷ್ಠಿಯ ವಿವರ ಇಲ್ಲಿದೆ.

ನಾಲ್ವರು ಸೆಲಬ್ರಟಿಗಳಿಂದ ಕಾಮನ್ ಮ್ಯಾನ್ ಸಾಂಗ್ಸ್ ಲಾಂಚ್

ಕಾಮನ್ ಮ್ಯಾನ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ವಿನೋದ್ ಪ್ರಭಾಕರ್, ಉಮಾಶ್ರೀ, ಪ್ರಿಯಾಂಕ ಉಪೇಂದ್ರ, ರಮೇಶ್ ಭಟ್.

ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸುತ್ತಾನೆ, ಆತ ಎದುರಿಸುವ ಸವಾಲುಗಳೇನು ಎಂಬುದನ್ನು ಹೇಳುವ ಕಾಮನ್ ಮ್ಯಾನ್ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸೋಷಿಯಲ್ ವರ್ಕರ್ ಎನ್. ನರಸಿಂಹಮೂರ್ತಿ ಅವರು ಈ ಕಥೆ ಬರೆದು ಸುರಭಿ ಫಿಲಂಸ್ ಅಡಿ‌ ನಿರ್ಮಿಸಿದ್ದಾರೆ‌. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಪಂಚತಾರಾ ಹೋಟೆಲಿನಲ್ಲಿ ಈ ಚಿತ್ರದ 4 ವಿವಿಧ ಶೈಲಿಯ ಹಾಡುಗಳನ್ನು ಚಿತ್ರರಂಗದ ನಾಲ್ವರು ಸೆಲಬ್ರಟಿಗಳು ಬಿಡುಗಡೆ ಮಾಡಿದ್ದು ಅಂದಿನ ವಿಶೇಷವಾಗಿತ್ತು. ಹಿರಿಯ ನಟಿ, ವಿ.ಪ. ಸದಸ್ಯೆ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯನಟ ರಮೇಶ್ ಭಟ್, ನಟಿ ಪ್ರಿಯಾಂಕ ಉಪೇಂದ್ರ ಅವರುಗಳು 4 ಹಾಡುಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಇವತ್ತು ನಮಗಿಂತ, ಇಲ್ಲಿ ಬಂದ ಅತಿಥಿಗಳು ನಮ್ಮ ಚಿತ್ರದ ಬಗ್ಗೆ ಹೆಚ್ಚು ಮಾತಾಡಲಿ ಎಂದು ಹೇಳಿದರು.
ವೇದಿಕೆಯಲ್ಲಿ ಸಾಂಗ್ ಲಾಂಚ್ ಮಾಡಿದ ವಿ.ಪ. ಸದಸ್ಯೆ ಉಮಾಶ್ರೀ ಮಾತನಾಡಿ ಈ ಚಿತ್ರದ ಹೆಸರು ಕಾಮನ್ ಮ್ಯಾನ್, ಇಂಗ್ಲೀಷ್ ಹೆಸರು ಏಕೆ ಅಂತ ಕೇಳಬಹುದು, ಇವತ್ತು ನಮ್ಮ ಕನ್ನಡ ಚಿತ್ರಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಹೆಸರು ಮಾಡುತ್ತಿರುವಾಗ ಇಂಥ ಕಾಮನ್ ಟೈಟಲ್ ಇಡಲೇಬೇಕಾಗುತ್ತೆ. ಸಾಯಿಪ್ರಕಾಶ್ ಅವರು ನನ್ನ ಗುರುಗಳ ಥರ,
ಈ ಕಾರ್ಯಕ್ರಮಕ್ಕೆ ಅವರು ಕರೆದಾಗ ಇಲ್ಲ ಎನ್ನಲಾಗಲಿಲ್ಲ. ಒಂದು ಕಾಲದಲ್ಲಿ ನನ್ನ ಎನ್.ಎಸ್.ರಾವ್ ಕಾಂಬಿನೇಶನ್ ತುಂಬಾ ಜನಪ್ರಿಯವಾಗಿತ್ತು. ಪ್ರೇಕ್ಷಕರು ನಮ್ಮಿಬ್ಬರನ್ನೂ ನಿಜವಾದ ಗಂಡ, ಹೆಂಡತಿ ಅಂದುಕೊಂಡಿದ್ದರು‌. ಅವರು ತೀರಿಕೊಂಡಾಗ ಕೆಲವರು ಇನ್ನು ಉಮಾಶ್ರೀ ಕಥೆ ಮುಗಿದೇ ಹೋಯ್ತು ಅಂತ ಮಾತಾಡಿದ್ದರು. ಅದೇವೇಳೆ ನಾನು ವಿಧವೆಯಾಗಿ ನಟಿಸಿದ್ದ ಚಿತ್ರವೂ ರಿಲೀಸಾಯ್ತು. ಅಂಥಾ ಸಮಯದಲ್ಲಿ ಸಾಯಿಪ್ರಕಾಶ್ ಅವರು ನನಗೆ ಕರೆದು ಅವಕಾಶ ಕೊಟ್ಟರು ಎಂದು ನೆನಪಿಸಿಕೊಂಡರು.
ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ರಮೇಶ್ ಭಟ್ ಮಾತನಾಡಿ ನನಗೆ ಒಳ್ಳೆ ಸಾಂಗನ್ನೇ ಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ‌. ಅದನ್ನು ಮಟ್ಟ ಹಾಕುವದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಅವಕಾಶ ಕೊಟ್ಟ ಗುರುಗಳಿಗೆ ಧನ್ಯವಾದ ಎಂದರು. ನಟ ವಿನೋದ್ ಪ್ರಭಾಕರ್ ಮಾತನಾಡಿ ನನ್ನ ತಂದೆಯ ಜತೆ ಕೆಲಸ ಮಾಡಿದ ಎಲ್ಲರನ್ನೂ ಈ ವೇದಿಕೆಯಲ್ಲಿ ನೋಡಿ ಸಂತೋಷವಾಯಿತು ಎಂದರು. ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಈ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರ ಮೂಲಕ ಹೇಳಿದ್ದಾರ.
ಗೌರೀಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ.
ವಿನಯ ಚಂದ್ರ ಅವರ ಸಂಗೀತ, ಜೆ‌.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.
ಕಾಮನ್ ಮ್ಯಾನ್ ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಇತರರು ನಟಿಸಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.