ಬಿ ಬಿ ಇಂಗಳಗೇರಿ ಬಡೇಸಾಹೇಬರ ಮಹಿಮೆ ಬಗ್ಗೆ ಸ್ಮರಣೆ ಮಾಡುತ್ತಾ ಯಾರಾದರೂ ಬಡೇಸಾಬರ ಸಮಾಧಿ ಹತ್ತಿರ ನಿಂತು ಭಜನಾಪದ ಹಾಡುವಾಗ ಅವರ ಪದದ ಸಾಲುಗಳು ಮರೆತು ಹೋದವು ಅಂದ್ರೆ, ಪದ ಹಾಡುವವರು ಅವರ ಗದ್ದುಗೆಗೆ ಕಿವಿ ಹಚ್ಚಿ ಕೇಳಿದರೆ ಮರೆತು ಹೋದ ಆ ಪದದ ಸಾಲುಗಳು ನೆನಪಿಗೆ ಬರ್ತಾವು. ಆ ಶರಣರ ಪವಾಡಗಳು ಎಷ್ಟು ಅದ್ಭುತ ಎಂದು ಅಲ್ಲವೇನು ? ಎಂದು ಸ್ಮರಣೆ ಮಾಡುತ್ತಾರೆ.
ಬಡೇಸಾಹೇಬರು ಕಡ್ಲಿಮಟ್ಟಿ ಕಾಶಿಬಾಯಿ, ಶ್ರವಣಕುಮಾರನ ಪದಗಳನ್ನು ಬರೆದ ಮಹಾತ್ಮರು ಇವರು. ಇವರೇ ಬರೆದ ಹಾಡಿನ ಪದ ಆ ಹುಡುಗಿ ಹಣೆಬರದಾಗ ಹ್ಯಾಂಗ ಬರಿತಾನಂದ್ರ ತಂದಿಗಿ ಮಗಳಿಗೆ ಕೂಡ್ಲಿ ಅಂತ ಬರಿತಾನಂತೆ.
ತಿಂಥಣಿಯೊಳಗ ನಡೆದ ಘಟನೆ –
ತಿಂಥಣಿಯೊಳಗೆ ಕನ್ನಳ್ಳಿ ಸಿದ್ದಪ್ಪ ಅಂತ ಇದ್ದ ಆತ ವೃತ್ತಿಯಲ್ಲಿ ಒಬ್ಬ ಕಂಡಕ್ಟರ್ ಆಗಿದ್ದ ಅವನು ಭಜನಾ ಪದಗಳನ್ನು ಹಾಡುತ್ತಿದ್ದನು. ಈ ಹಾಡು ಬರೆದಾಗ ಅವ ತನ್ನ ನೌಕರಿನ ಬಿಟ್ಟುಬಿಟ್ಟಿದ್ದ . ಬರೇ ಭಜನಾಪದ ಹಾಡಿಕೊಂಡು ತಿರುಗುತ್ತಿದ್ದ . ಆತ ಒಂದು ದೃಷ್ಟಾಂತ ಹೇಳುತ್ತಿದ್ದ ಅದನ್ನ ಹೇಳ್ತೀನಿ ಕೇಳ್ರಿ -
"ಆರು ನಾನೆಂದು ವಿಚಾರಿಸು ಸಂ
ಸಾರವಿದನು ಕನಸೆಂದರಿ
ಮಾರ ಮರ್ಧನ ಶಂಭುಲಿಂಗನನೊಲಿಸಿ ಗಂ
ಭೀರ ಸುಖದೊಳಗಿರಂದರುಪುವ "
ಇದರ ಕುರಿತು ಬಸಪ್ಪ ಶರಣರ ಹಾಗೂ ಸಿದ್ದಪ್ಪ ಕಂಡಕ್ಟರ್ ಜೊತೆಗೆ ಸಂವಾದವಾಯಿತು. ಅದು ಏನಾಯ್ತು ಎಂದು ಹೀಗೆ ಹೇಳುತ್ತಾರೆ. ಕನ್ನೊಳ್ಳಿ ಸಿದ್ದಪ್ಪ ಹಾಡು ಹಾಡಕ ಬಂದ ಅಂದ್ರೆ ಸೀದಾ ಪ್ಯಟಗಿ ಮ್ಯಾಗ ಕುಂತು ಹಾಡೋಕೆ ಶುರು ಮಾಡಿದ ಅಂದ್ರೆ ಅವನ ಪದ ಕೇಳಕೊಂತ ನಾವು ಸುಮ್ಮನೆ ಕುಳಿತುಬಿಟ್ಟೆವು .
ಇದು ಭಾಗ್ಯ.. ಇದು ಭಾಗ್ಯ… ಇದು ಭಾಗ್ಯವಯ್ಯ…
ಪದುಮನಾಭನ ಭಜನಾ… ಅಂತ ಹಾಡಿಕೊಂತ ಅದನ್ನು ಬಿಡಿಸಿ ಬಿಡಿಸಿ ಹೇಳಾಂವ ಮುಂದೆ ಹಾಡಿಕೊಂಡು –

"ಯಾಕಪ್ಪ ಏನು ಬೇಕಪ್ಪ
ನಿನ್ನ ಮನಸಪ್ಪ ,ಮುಂದೆ ನೆನಸಪ್ಪ
ಕನಸಿನ ಪರಿ ಸಂಸಾರಪ್ಪ
ನಿನ್ನ ಮನಸ್ಸಿಗೆ ಬಂದರ ನೆಚ್ಚಪ್ಪ
ಪ್ರಪಂಚ ಅಂದ್ರೆ ಹ್ಯಾಂಗಪ್ಪ
ಅಂದ್ರೆ ಅದು ಒಂದು ಕನಸು ಇದ್ದಂಗ -
ಮುಂದುವರೆಯುತ್ತದೆ …..

