Wednesday, 23 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಪ್ರಮೋದ್ ಶೆಟ್ರ “ಬೆಟಾಲಿಯನ್”
- ಸಿನಿಮಾ

ಪ್ರಮೋದ್ ಶೆಟ್ರ “ಬೆಟಾಲಿಯನ್”

ಪ್ರಮೋದ್ ಶೆಟ್ಟಿ ಇದ್ದಲ್ಲಿ ಹಾಸ್ಯಕ್ಕೆ ,ಕಂಟೆಂಟ್ ಗೆ ಹಾಗೇ ಮನೋರಂಜನೆಗೆ ಕಮ್ಮಿ ಇರಲ್ಲ ಇದು ಪ್ರಮೋದ್ ಶೆಟ್ಟಿ ಅವರನ್ನು ಬಲ್ಲವರ ಮಾತು ಹಾಗೂ ಅವರ ಅಭಿಮಾನಿಗಳ ಮಾತು. ಚಿತ್ರ ಯಾವುದೇ ಆಗಿರಲಿ, ಯಾವುದೇ ಜಾನರ್ ನ ಕಥೆಯಾಗಿರಲಿ, ತಾವು ಮಾಡುವಂತಹ ಪಾತ್ರವನ್ನು ತುಂಬಾ ಲೀಲಾ ಜಾಲವಾಗಿ ಮಾಡುವುದಲ್ಲದೆ, ಆಯಾ ಚಿತ್ರ ತಂಡಗಳ ಜೊತೆಗೆ ಒಂದು ದೊಡ್ಡ ಶಕ್ತಿಯಂತೆ ನಿಂತು, ಚಿತ್ರಿಕರಣ ಶುರುವಾದ ದಿನದಿಂದ, ಚಿತ್ರೀಕರಣ ಮುಗಿದು ಬಿಡುಗಡೆಯಾಗುವ ತನಕ, ಚಿತ್ರತಂಡ ಹೊಸದಾಗಿರಲಿ ಅಥವಾ ಹಳೆಯದಾಗಿರಲಿ ಜೊತೆ ನಿಲ್ಲುವ […]

ಪ್ರಮೋದ್ ಶೆಟ್ಟಿ ಇದ್ದಲ್ಲಿ ಹಾಸ್ಯಕ್ಕೆ ,ಕಂಟೆಂಟ್ ಗೆ ಹಾಗೇ ಮನೋರಂಜನೆಗೆ ಕಮ್ಮಿ ಇರಲ್ಲ ಇದು ಪ್ರಮೋದ್ ಶೆಟ್ಟಿ ಅವರನ್ನು ಬಲ್ಲವರ ಮಾತು ಹಾಗೂ ಅವರ ಅಭಿಮಾನಿಗಳ ಮಾತು.

ಚಿತ್ರ ಯಾವುದೇ ಆಗಿರಲಿ, ಯಾವುದೇ ಜಾನರ್ ನ ಕಥೆಯಾಗಿರಲಿ, ತಾವು ಮಾಡುವಂತಹ ಪಾತ್ರವನ್ನು ತುಂಬಾ ಲೀಲಾ ಜಾಲವಾಗಿ ಮಾಡುವುದಲ್ಲದೆ, ಆಯಾ ಚಿತ್ರ ತಂಡಗಳ ಜೊತೆಗೆ ಒಂದು ದೊಡ್ಡ ಶಕ್ತಿಯಂತೆ ನಿಂತು, ಚಿತ್ರಿಕರಣ ಶುರುವಾದ ದಿನದಿಂದ, ಚಿತ್ರೀಕರಣ ಮುಗಿದು ಬಿಡುಗಡೆಯಾಗುವ ತನಕ, ಚಿತ್ರತಂಡ ಹೊಸದಾಗಿರಲಿ ಅಥವಾ ಹಳೆಯದಾಗಿರಲಿ ಜೊತೆ ನಿಲ್ಲುವ ಕಲಾವಿದರಲ್ಲಿ ಪ್ರಮೋದ್ ಶೆಟ್ಟಿ ಕೂಡ ಒಬ್ಬರು.

ಚಿತ್ರ ಒಂದರಲ್ಲಿ ಪ್ರಮುಖ ಪಾತ್ರವಿತರು ಸೈ, ಪೋಷಕ ಪಾತ್ರವಿದ್ದರು ಸೈ ಅಥವಾ ವಿಲನ್ ಶೈಲಿಯ ಪಾತ್ರವಾಗಿದ್ದರು ಸೈ, ನಾನು ಕಂಡಂತೆ ಬಹುಶಹ ಪ್ರಮೋದ್ ಶೆಟ್ಟಿ ಎಂಬ ಕಲಾವಿದ ಇಲ್ಲಿಯತನಕ ಮಾಡಿದ ಎಲ್ಲ ಸಿನಿಮಾಗಳ ಪಾತ್ರಗಳನ್ನು ನೋಡಿದಾಗ ಈತ ಒಬ್ಬ ಬಹುಮುಖ ಪ್ರತಿಭೆ, ನಾಯಕ ನಟನಾಗಿ ನಟಿಸುವುದರ ಜೊತೆಗೆ ಬಹುತೇಕ ಕನ್ನಡ ಚಿತ್ರಗಳಲ್ಲಿ ನಟಿಸುವ ಪ್ರಮೋದ್ ಶೆಟ್ಟಿ ಅಕೌಂಟಲ್ಲಿ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ ಅದುವೇ “ಬೆಟಾಲಿಯನ್”

“ಬೆಟಾಲಿಯನ್” ಚಿತ್ರಕ್ಕೆ ಮುಹೂರ್ತ
ತರ್ಲೆ ಮಾಡೋ ಹುಡುಗರ ಕಥೆ

ಆಕಾಶ ಪಿಕ್ಚರ್ಸ್ ಮೂಲಕ ಪ್ರಕಾಶ್ ಎಸ್. ಬೂದೂರು ಅವರು ನಿರ್ಮಿಸುತ್ತಿರುವ, ಕೆ.ಎಸ್.ಕೃಷ್ಣಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಬೆಟಾಲಿಯನ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.ಕುಮಾರ ಪಾರ್ಕ್ ನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ಪ್ರಕಾಶ್ ಬಂದೂರು ಅವರು ಆರಂಭ ಫಲಕ ತೋರಿಸಿದರೆ, ಪಿ.ಸಿ. ಶೇಖರ್ ಕ್ಯಾಮೆರಾ ಚಾಲನೆ ಮಾಡಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.


ನಿರ್ದೇಶಕ ಕೃಷ್ಣಕುಮಾರ್ ಮಾತನಾಡುತ್ತ ಕಳರದ 15 ವರ್ಷಗಳಿಂದ ಸಹ, ಸಹಾಯಕ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಲಂಬೋದರ ಎಂಬ ಚಿತ್ರ ನಿರ್ದೇಶಿಸಿದ್ದೆ.‌ ಇದು ಎರಡನೇ ಚಿತ್ರ. ಬೆಟಾಲಿಯನ್ ಅಂದ್ರೆ ಏಳು ಜನ ಹುಡುಗರ ಗ್ಯಾಂಗ್. ಎಮೋಷನಲ್, ಫ್ರೆಂಡ್ ಫಿಪ್ ಕಥೆಯ ಜತೆಗೆ ಹುಡುಗರ ಕಿತ್ತಾಟ ಇದೆಲ್ಲವನ್ನೂ ಇಟ್ಟುಕೊಂಡು ಅವರ ಜರ್ನಿ ಹೇಗಿರುತ್ತೆ ಅಂತ ಹೇಳಹೊರಟಿದ್ದೇವೆ. ಫೋಸ್ಟರ್ ನಲ್ಲಿ ತೋರಿಸಿರುವ ಮನೆ ಆ ಬೆಟಾಲೊಯನ್ ಗಳು ವಾಸವಿರೋ ಜಾಗ. ನಾಳೆಯಿಂದಲೇ ಚಿತ್ರೀಕರಣ ಆರಂಭಿಸಿ ಕಾಸರಗೋಡು, ಕಾರ್ಕಳ, ಗೋವಾ, ಬೆಂಗಳೂರು ಸುತ್ತಮುತ್ತ ಸುಮಾರು 50ದಿನಗಳ ಕಾಲ ಶೂಟಿಂಗ್ ನಡೆಸುವ ಪ್ಲಾನಿದೆ. ಪ್ರಮೋದ್ ಶೆಟ್ಟಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಹನ್, ಮಹಾನಟಿ ಖ್ಯಾತಿಯ ವಂಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ 3 ಹಾಡುಗಳು, ಒಂದು ಆಕ್ಷನ್ ಇದೆ ಎಂದು ಹೇಳಿದರು.


ನಿರ್ಮಾಪಕ ಪ್ರಕಾಶ್ ಬೂದೂರು ಮಾತನಾಡುತ್ತ ಕಳೆದ 20 ವರ್ಷಗಳಿದ ಅಲಯನ್ಸ್ ಯುನಿವರ್ಸಿಟಿ ಎಜುಕೇಶನ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದೇನೆ. ಈಗಾಗಲೇ ಶಿವಣ್ಣ, ವಿಜಯ ರಾಘವೇಂದ್ರ ಅಭಿನಯದ ಮಹಾನ್ ಎಂಬ ಚಿತ್ರ ನಿರ್ಮಿಸಿದ್ದು ಅದು ರಿಲೀಸ್ ಗೆ ರೆಡಿ ಇದೆ. ಇದು ನಮ್ಮ ಎರಡನೇ ಚಿತ್ರ. ಈ ಕಥೆಯನ್ನು ನಿರ್ದೇಶಕರು ಬಂದು ಹೇಳಿದಾಗ ಚೆನ್ನಾಗಿದೆ ಅನಿಸಿತು. ಹೊಸದಾಗಿ ಏನಾದರೂ ಮಾಡಿದಾಗ, ಈಗಿನ ಜನರೇಶನ್ ಇಷ್ಟಪಡುವಂಥ ಒಳ್ಳೆಯ ಸಿನಿಮಾ ಮಾಡಿದಾಗ ಪ್ರೇಕ್ಷಕರು ಖಂಡಿತ ಬರ್ತಾರೆ. ಮನರಂಜನೆ ಅಂದ್ರೆ ಆಲ್ ಎಲಿಮೆಂಟ್ಸ್ ಇರಬೇಕು. 6-8 ತಿಂಗಳಿಂದ ಕಥೆ, ಚಿತ್ರಕಥೆ ರೆಡಿ ಮಾಡಿಕೊಂಡಿದ್ದಾರೆ. ಸ್ನೇಹದಲ್ಲಿ ಖುಷಿ, ಅಸೂಯೆ, ದ್ವೇಶ ಎಲ್ಲಾ ಇರುತ್ತೆ. ಇದೊಂದು ಕಾಮಿಡಿ ಥ್ರಿಲ್ಲರ್ ಸಿನಿಮಾ ಎಂದರು.ನಡ ಪ್ರಮೋದ್ ಶೆಟ್ಟಿ ಮಾತನಾಡಿ ನಿರ್ದೇಶಕರು ಬಂದು ಕಥೆ, ನನ್ನ ಪಾತ್ರ ಹೇಳಿದಾಗ ಇಷ್ಟವಾಯ್ತು. ಹಾಗಾಗಿ ಒಪ್ಪಿದೆ. ಈ ಚಿತ್ರವನ್ನು ಲೋಕಲ್ ಥೇಟರ್ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಮಾಡುತ್ತಿದ್ದೇವೆ ಎಂದರು.

ನಾಯಕನಟ ಆಹನ್ ಮಾತನಾಡಿ ಐದಾರು ವರ್ಷ ರಂಗಭೂಮಿಯಲ್ಲಿದ್ದೇನೆ. ದೇವಸಸ್ಯ ಸೇರಿದಂತೆ 6 ಸಿನಿಮಾ ಮಾಡಿದ್ದೇನೆ. ಇದರಲ್ಲಿ ನನ್ನದು ಸಂತು ಎಂಬ ಪಾತ್ರ. ಇದು 18-20 ವರ್ಷದ ಏಜ್ ಗ್ರೂಪ್ ಹುಡುಗರ ಕಥೆ, ಇಗೋ ಕ್ಲಾಶಸ್ ಎಲ್ಲಾ ಇದೆ ಎಂದರು. ನಾಯಕಿ ವಂಶಿ ಮಾತನಾಡಿ ಎಲ್ಲರಿಗೂ ಕನೆಕ್ಸ್ ಆಗುವಂಥ ಕಥೆಯಿದು. ಈ ಹುಡುಗರ ಗ್ಯಾಂಗ್ ಗೆ ನಾನು ಹೇಗೆ ಎಂಟ್ರಿ ಆಗುತ್ತೇನೆ ಅನ್ನೋದೇ ಕುತೂಹಲ ಎಂದು ಹೇಳಿದರು. ಈ ಚಿತ್ರಕ್ಕೆ ಚೇತನ್ ಅಮ್ಮಯ್ಯ ಅವರ ಸಂಗೀತ ಸಂಯೋಜನೆ, ಅಜಯ್ ಅವರ ಕ್ಯಾಮೆರಾ ವರ್ಕ್ ಇದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.