Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಡಕೋಳದ “ಮಡಿವಾಳಪ್ಪನವರ” ತತ್ವಪದಗಳು :
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕಡಕೋಳದ “ಮಡಿವಾಳಪ್ಪನವರ” ತತ್ವಪದಗಳು :

*ಕಡಕೋಳದ ಮಡಿವಾಳಪ್ಪನವರ ತತ್ವಪದಗಳು : ಮಾಯೆಯ ಮುಸುಕಿನಾಗ ನಂಬಾಳ್ ನೆಡ್-ದೈತಿ,ಯಾವ್ದು ಸ್ಥಿರ ಅಲ್ಲ ಅಂತ ಗೊತ್ತಿದ್ರು, ಗುದ್ದಾಟ ನೆಡ್-ದೈತಿ,ಹೊಲ ಮನಿ ಹೆಂಡ್ತಿ ಮಕ್ಳು ಅಂತ ಬ್ರಾಂತಿ ತುಂಬೈತಿ ಯಾಕ ಮಾಡತಿದಿ ಒಣ ಚಿಂತಿ, ನಿನಗ ಬಡುಕೊಂಡೈತೋ ಒಣ ಭ್ರಾಂತಿ || ಪ ||ಅದಕ ಜೋತುಕೊಂಡು ನೀ ಕುಂತಿ, ನಾಳೆ ಯಮನು ಕೇಳಿದ್ರೆ ಏನಂತಿ || ಅ.ಪ || ಮನೆಯ ಕಟ್ಟಿಸಿದಿ ಮಾಳಿಗಿ, ನಿನಗ ಹೋಗೋದು ಬಂತಲ್ಲೋ ನಾಳಿಗಿಗೊಂಗ್ಡಿದು ಮಾಡ್ಯಾರ ಜೋಳಿಗಿ, ನಿನಗ ಇಟ್ಟು ಬಂದು ಉಣ್ತಾರಲ್ಲೊ ಹೋಳಿಗಿ […]

*ಕಡಕೋಳದ ಮಡಿವಾಳಪ್ಪನವರ ತತ್ವಪದಗಳು :

ಮಾಯೆಯ ಮುಸುಕಿನಾಗ ನಂಬಾಳ್ ನೆಡ್-ದೈತಿ,
ಯಾವ್ದು ಸ್ಥಿರ ಅಲ್ಲ ಅಂತ ಗೊತ್ತಿದ್ರು, ಗುದ್ದಾಟ ನೆಡ್-ದೈತಿ,
ಹೊಲ ಮನಿ ಹೆಂಡ್ತಿ ಮಕ್ಳು ಅಂತ ಬ್ರಾಂತಿ ತುಂಬೈತಿ

ಯಾಕ ಮಾಡತಿದಿ ಒಣ ಚಿಂತಿ, ನಿನಗ ಬಡುಕೊಂಡೈತೋ ಒಣ ಭ್ರಾಂತಿ || ಪ ||
ಅದಕ ಜೋತುಕೊಂಡು ನೀ ಕುಂತಿ, ನಾಳೆ ಯಮನು ಕೇಳಿದ್ರೆ ಏನಂತಿ || ಅ.ಪ ||

ಮನೆಯ ಕಟ್ಟಿಸಿದಿ ಮಾಳಿಗಿ, ನಿನಗ ಹೋಗೋದು ಬಂತಲ್ಲೋ ನಾಳಿಗಿ
ಗೊಂಗ್ಡಿದು ಮಾಡ್ಯಾರ ಜೋಳಿಗಿ, ನಿನಗ ಇಟ್ಟು ಬಂದು ಉಣ್ತಾರಲ್ಲೊ ಹೋಳಿಗಿ || ೧ ||

ಹೆಂಡರು ಮಕ್ಕಳು ಸಂಪತ್ತು, ನೀ ಹುಟ್ಟಿದಾಗ ಅದು ಎಲ್ಲಿತ್ತು
ನಟ್ಟ ನಡುವೆ ಗಂಟು ಬಿಚ್ಚಿಟ್ಟು, ನೀ ತಿಳಿದುನೋಡು ಅದರೊಳು ಕುಂತು || ೨ ||

ಸಂಕಷ್ಟ ಪಡುತಿದಿ ಸಾಯೋದುಕ, ಅದು ಲಟಪಟ ಉಣ್ಣಲ್ಲೋ ಮಾಯೋದುಕ
ದತ್ತಗುರು ಮಹಂತಾನೆ ಬಲ್ಲ, ಅವನ ಹೊರೆತು ಮತ್ಯಾರಿಲ್ಲ || ೩ ||

ಪುರಂದರ ದಾಸರ ಪದ –

ಹಿಗ್ಗುವಿ ಯಾಕೋ ಈ ದೇಹಕ್ಕೆ ಹಿಗ್ಗುವಿ ಯಾಕೊ || ಪ ||
ಹಿಗ್ಗುವ ತಗ್ಗುವ ಮುಗ್ಗುವ ನೆಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ || ಅ.ಪ ||

ಈ ದೇಹಕ್ಕೆ ಯಾಕ ಹಿಗ್ಗತಿಪಾ…ಅಂತ ಪುರಂದರದಾಸರು ಹೇಳುತ್ತಾರೆ.

ಇದು ದೇಹ ಹೆಂಗೆ ಹುಟ್ಟಿದ ಅಂದ್ರೆ
ಸತಿ ಪುರುಷರು ಕೂಡಿ ರತಿ ಕ್ರೀಡೆಗಳನಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ || ೧ ||

ಆಗ-ಭೋಗಗಳನ್ನು ಆಗುಮಾಡುತಲಿಪ್ಪ
ರೋಗಬಂದರೆ ಬಿದ್ದು ಹೋಗುವ ದೇಹಕ್ಕೆ || ೨ ||

ಮತ್ತೆ ನಾವು ಏನು ನಂಬಿವಿ ಅಂದ್ರೆ ಹೆಣ್ಣು ಮಕ್ಕಳು ಅಂತ ನಂಬಿೀರಿ. ಇವರು ಬರೋದು ಅಂದಾರ ಅಂದ್ರು
ಪರರ ಸೇವೆಯ ಮಾಡಿ ನರಕಭಾಜನನಾಗಿ
ಮರಳಿಮರಳಿ ಬಿದ್ದು ಹೋಗುವ ದೇಹಕ್ಕೆ || ೩ ||

ಈ ದೇಹದೊಳಗೆ ಹೆಂಗೈತಿ ಎಂದರೆ
ಸೋರುವದೊಂಬತ್ತು ಬಾಗಿಲದಿಂದಲಿ ಮಲ
ನೀರಿಲ್ಲದಿದ್ದರೆ ನಾರುವ ದೇಹಕ್ಕೆ || ೪ ||

ಯಾಕಂದ್ರೆ ಒಂಬತ್ತು ದ್ವಾರದಿಂದ ಮಲ ಸೂರ್ತದ , ಎರಡು ಕಣ್ಣಿನಿಂದ ಪಿಚ್ಚು ಸೋರ್ತದ,ಮೂಗಿನ ಎರಡು ಹೊಳ್ಳೆಗಳಿಂದ ಸಿಂಬಳ ಸೊರ್ತದ,ಒಂದು ಬಾಯಿಂದ ಜೊಲ್ಲು ಸೋರ್ತದ, ಕಿವಿಯೊಳಗಿಂದ ಕೂಕಣಿ ಸೋರ್ತದ, ಇನ್ನ ಕೆಳಗಡೆ ಎರಡು ಅಂದ್ರೆ ಮಲಮೂತ್ರ ಹಿಂಗ ನವದ್ವಾರಗಳಿಂದ ಯಾವಾಗ್ಲೂ ಸೋರುತಿರುತ್ತದೆ.

ಇದನ್ನೇ ಇದೆಲ್ಲ ನೀರಿನಿಂದ ತೊಳೆದು ಶುದ್ಧಗೊಳಿಸಿದಾಗ ಜರ ನೋಡು ಹಂಗ್ ಆಗ್ತದ.ಮ್ಯಾಲು ಸ್ವಲ್ಪ ಚರ್ಮ ಬಿರಿದಾನೆ ಗುರುನಾಥ ಅದಕ್ಕೆ ಯಾಕೆ ಹಿಗ್ಗ ತಿಪಾ .. ಯಾಕ ಭೇದ ಭಾವ ಮಾಡ್ತಿ.. ನಾ ಆ ಜಾತಿ ಯಾಮಾ ಈ ಜಾತಿ ಯಾವ ಅಂತ ಯಾಕೆ ಜಾತಿಭೇದ ಮಾಡುತ್ತೀರಿ. ಎಲ್ಲಾರ ತೊಗಲು ಒಂದ’ ಮನುಷ್ಯ ಹೊಲಸಿ ನ್ಯಾಗ ಅಂದ್ರ ಮುಟ್ಟಿನ್ಯಾಗ ಹುಟ್ಟಿ ಬಂದಾನ ಜಾತಿ ಅನ್ನೋದು ಎಲ್ಲಿ ಐತಿ ಯಾಕ ಹಿಗ್ಗತಿ ಅಂತಾರ.

ಪುರಂದರ ವಿಟ್ಠಲನ ಚರಣಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ || ೫ ||

ಮುಂದುವರಿಯುತ್ತದೆ . . . . .

ನಾಡಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.