Wednesday, 23 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹನುಮಾನ್ ಅಂಶ್ ರೆಕಾರ್ಡ್
- ಸಿನಿಮಾ

ಹನುಮಾನ್ ಅಂಶ್ ರೆಕಾರ್ಡ್

ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್: ವಿದೇಶಿ ಮಾರುಕಟ್ಟೆಯಲ್ಲಿ ‘ಹನುಮಾನ್ ಅಂಶ್’ ಹೊಸ ದಾಖಲೆ 2026ರ ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ ‘ಹನುಮಾನ್ ಅಂಶ್’; ಜಾಗತಿಕ ವಿತರಣೆಯಲ್ಲಿ ಹೋಂಬಾಳೆ ಓವರ್‌ಸೀಸ್‌ಗೆ ಮತ್ತೊಂದು ದೊಡ್ಡ ಮೈಲಿಗಲ್ಲುಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಸಂದೇಶವನ್ನು ಹೊತ್ತು ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪಿರುವ ‘ಹನುಮಾನ್ ಅಂಶ್’ ಇದೀಗ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಸೆಪ್ಟೆಂಬರ್ 11ರಂದು ವಿದೇಶಗಳಲ್ಲಿ ಬಿಡುಗಡೆಯಾದ ಚಿತ್ರವು ಕೇವಲ 12 ದಿನಗಳಲ್ಲಿ […]

ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್: ವಿದೇಶಿ ಮಾರುಕಟ್ಟೆಯಲ್ಲಿ ‘ಹನುಮಾನ್ ಅಂಶ್’ ಹೊಸ ದಾಖಲೆ

2026ರ ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ ‘ಹನುಮಾನ್ ಅಂಶ್’; ಜಾಗತಿಕ ವಿತರಣೆಯಲ್ಲಿ ಹೋಂಬಾಳೆ ಓವರ್‌ಸೀಸ್‌ಗೆ ಮತ್ತೊಂದು ದೊಡ್ಡ ಮೈಲಿಗಲ್ಲು
ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಸಂದೇಶವನ್ನು ಹೊತ್ತು ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪಿರುವ ‘ಹನುಮಾನ್ ಅಂಶ್’ ಇದೀಗ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ. ಸೆಪ್ಟೆಂಬರ್ 11ರಂದು ವಿದೇಶಗಳಲ್ಲಿ ಬಿಡುಗಡೆಯಾದ ಚಿತ್ರವು ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ಮಾಡುವ ಮೂಲಕ, 2026ರಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಬಿಡುಗಡೆಯಾದ ದಿನದಿಂದಲೇ ವಿದೇಶಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ‘ಹನುಮಾನ್ ಅಂಶ್’, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಚಿತ್ರದಲ್ಲಿರುವ ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಮೌಲ್ಯಗಳು ದೇಶದ ಗಡಿಗಳನ್ನು ಮೀರಿ ಪ್ರೇಕ್ಷಕರೊಂದಿಗೆ ಬೆಸೆದುಕೊಂಡಿವೆ.

ಈ ಅಭೂತಪೂರ್ವ ಯಶಸ್ಸು ಹೋಂಬಾಳೆ ಓವರ್‌ಸೀಸ್‌ನ ಜಾಗತಿಕ ವಿತರಣಾ ಪಯಣಕ್ಕೂ ಮಹತ್ವದ ಮೈಲಿಗಲ್ಲಾಗಿದೆ. ಭಾರತೀಯ ಕಥೆಗಳು ಮತ್ತು ನಮ್ಮ ನೆಲದ ಸಂಸ್ಕೃತಿ, ನಂಬಿಕೆ ಹಾಗೂ ಮೌಲ್ಯಗಳನ್ನು ವಿಶ್ವದ ವಿವಿಧ ಭಾಗಗಳ ಪ್ರೇಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಹೋಂಬಾಳೆ ಓವರ್‌ಸೀಸ್ ತನ್ನ ವಿತರಣಾ ಜಾಲವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ‘ಹನುಮಾನ್ ಅಂಶ್’ನಂತಹ ಕಥೆಯನ್ನು ಅಂತರರಾಷ್ಟ್ರೀಯ ಪ್ರೇಕ್ಷಕರ ಮುಂದೆ ತಲುಪಿಸುವ ಮೂಲಕ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ದೊರೆತಿದೆ.

‘ಹನುಮಾನ್ ಅಂಶ್’ನ ಯಶಸ್ಸು ಹಲವು ಕಾರಣಗಳಿಂದ ವಿಶೇಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಭಕ್ತಿಯ ನೆಲೆಯಿಂದ ಹುಟ್ಟಿದ ಕಥೆಯೊಂದು ವಿದೇಶಿ ಪ್ರೇಕ್ಷಕರಲ್ಲೂ ಇಷ್ಟೊಂದು ದೊಡ್ಡ ಸ್ವೀಕಾರ ಪಡೆಯುತ್ತಿರುವುದು ಚಿತ್ರದ ಮೇಲಿನ ಪ್ರೇಕ್ಷಕರ ನಂಬಿಕೆಯನ್ನು ತೋರಿಸುತ್ತದೆ. ಕೇವಲ 12 ದಿನಗಳಲ್ಲಿ 3.5 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಸಿರುವುದು ಈ ಚಿತ್ರಕ್ಕೆ ದೊರೆತಿರುವ ಅಸಾಧಾರಣ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

ಚಿತ್ರದ ವಿದೇಶಿ ಯಶಸ್ಸಿನ ಕುರಿತು ‘ಹನುಮಾನ್ ಅಂಶ್’ ಚಿತ್ರದ ನಿರ್ಮಾಪಕರು ಮಾತನಾಡಿ,

“ಹನುಮಾನ್‌ಜಿಯ ದೂತರಂತೆ ಹೋಂಬಾಳೆ ಓವರ್‌ಸೀಸ್ ನಮ್ಮ ಜೊತೆ ನಿಂತಿದೆ. ಅವರ ಮೂಲಕ ಸಿನಿಮಾ ಎಂಬ ವಿಶಾಲ ಜಗತ್ತಿನ ಬಾಗಿಲು ನಮಗೆ ತೆರೆದಿದೆ. ಮಹಾರಾಜ್‌ಜಿಯ ಮೌಲ್ಯಗಳನ್ನು ವಿಶ್ವದಾದ್ಯಂತ ತಲುಪಿಸಲು ಅವರು ನೀಡಿದ ಅವಕಾಶಕ್ಕೆ ನಮ್ಮ ಕೃತಜ್ಞತೆ. ‘ವಿಶ್ವ ಆಯ್ಗಾ’ ಎಂದು ಮಹಾರಾಜ್‌ಜಿ ಹೇಳಿದ್ದರು. ಇಂದು ಅದೇ ಮಾತು ನಿಜವಾಗುತ್ತಿರುವುದನ್ನು ನೋಡುತ್ತಿದ್ದೇವೆ. ‘ಹನುಮಾನ್ ಅಂಶ್’ ತಂಡ ಹಾಗೂ ಪ್ರೇಕ್ಷಕರ ಪರವಾಗಿ ಹೋಂಬಾಳೆ ಓವರ್‌ಸೀಸ್‌ಗೆ ಅನಂತ ಧನ್ಯವಾದಗಳು.”

3.5 ಮಿಲಿಯನ್ ಡಾಲರ್‌ಗೂ ಅಧಿಕ ವಿದೇಶಿ ಗಳಿಕೆ ‘ಹನುಮಾನ್ ಅಂಶ್’ನ ಯಶಸ್ಸಿಗೆ ಮತ್ತೊಂದು ಗರಿ ಮೂಡಿಸಿದೆ. ಇದೇ ವೇಳೆ, ಭಾರತೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಹೋಂಬಾಳೆ ಓವರ್‌ಸೀಸ್‌ನ ಪ್ರಯತ್ನಕ್ಕೂ ಈ ಗೆಲುವು ಮತ್ತಷ್ಟು ಬಲ ನೀಡಿದೆ.

ಕೇವಲ 12 ದಿನಗಳ ಈ ಪಯಣ, ನಂಬಿಕೆ ಮತ್ತು ಭಕ್ತಿಯಿಂದ ಹುಟ್ಟಿದ ಒಂದು ಕಥೆ ಭಾಷೆ ಹಾಗೂ ಗಡಿಗಳನ್ನು ಮೀರಿ ವಿಶ್ವದ ಪ್ರೇಕ್ಷಕರನ್ನು ತಲುಪಬಲ್ಲದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.