Wednesday, 21 October 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಂತು ಬಂತು “ವಿಜಯದಶಮಿ”

ಬಂತು ಬಂತು ವಿಜಯದಶಮಿ ವಿಜಯದಶಮಿ ಅಥವಾ ದಸರಾ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. ವಿಜಯದಶಮಿ ಹಬ್ಬ ಭಾರತೀಯ ಸನಾತನ ಧರ್ಮದ ಪುರಾಣಗಳು ಮತ್ತು ಮಹಾಕಾವ್ಯಗಳಲ್ಲಿ ಆಳವಾಗಿ ಬೇರೂರಿದೆ. ‘ವಿಜಯ’ ಎಂದರೆ ಗೆಲುವು ಮತ್ತು ‘ದಶಮಿ’ ಎಂದರೆ ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಆಶ್ವಯುಜ ಮಾಸದ ಹತ್ತನೇ ದಿನ. ಈ ದಿನವು ಮುಖ್ಯವಾಗಿ ಮೂರು ಮಹಾನ್ ಘಟನೆಗಳೊಂದಿಗೆ ನಿಕಟ ನಂಟು ಹೊಂದಿದೆ. 1) ಮಹಿಷಾಸುರ ಎಂಬ ಶಕ್ತಿಶಾಲಿ ರಾಕ್ಷಸನು ತನಗೆ ಯಾವುದೇ ಪುರುಷನಿಂದ […]

ಬಂತು ಬಂತು ವಿಜಯದಶಮಿ

ವಿಜಯದಶಮಿ ಅಥವಾ ದಸರಾ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. ವಿಜಯದಶಮಿ ಹಬ್ಬ ಭಾರತೀಯ ಸನಾತನ ಧರ್ಮದ ಪುರಾಣಗಳು ಮತ್ತು ಮಹಾಕಾವ್ಯಗಳಲ್ಲಿ ಆಳವಾಗಿ ಬೇರೂರಿದೆ. ‘ವಿಜಯ’ ಎಂದರೆ ಗೆಲುವು ಮತ್ತು ‘ದಶಮಿ’ ಎಂದರೆ ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಆಶ್ವಯುಜ ಮಾಸದ ಹತ್ತನೇ ದಿನ. ಈ ದಿನವು ಮುಖ್ಯವಾಗಿ ಮೂರು ಮಹಾನ್ ಘಟನೆಗಳೊಂದಿಗೆ ನಿಕಟ ನಂಟು ಹೊಂದಿದೆ.

  1) ಮಹಿಷಾಸುರ ಎಂಬ ಶಕ್ತಿಶಾಲಿ ರಾಕ್ಷಸನು ತನಗೆ ಯಾವುದೇ ಪುರುಷನಿಂದ ಸಾವು ಬರಬಾರದು ಎಂಬ ವರವನ್ನು ಪಡೆದಿದ್ದನು. ಮಹಿಷಾಸುರನ ದಬ್ಬಾಳಿಕೆ ಮತ್ತು ಅಹಂಕಾರದಿಂದ ಆತ ದೇವಲೋಕವನ್ನು ಆಕ್ರಮಿಸಿ, ದೇವತೆಗಳನ್ನು ಹಿಂಸಿಸಲು ತೊಡಗಿದನು. ಭಯಗೊಂಡು ಅವನನ್ನು ಸಂಹರಿಸಲು ಬ್ರಹ್ಮ, ವಿಷ್ಣು ಮತ್ತು ಶಿವನು ತಮ್ಮ ಶಕ್ತಿಗಳನ್ನು ಒಗೂಡಿಸಿ ಮಹಾಶಕ್ತಿ ಸ್ವರೂಪಿಣಿ ದುರ್ಗಾ ದೇವಿಯನ್ನು ಸೃಷ್ಟಿಸಿದರು. ಈ ಯುದ್ಧ ಒಂಬತ್ತು ದಿನಗಳ ಯುದ್ಧ ನಡೆಯಿತು. ದೇವಿಯು ಸಿಂಹವಾಹಿನಿಯಾಗಿ ಬಂದು ಮಹಿಷಾಸುರನೊಂದಿಗೆ ಸತತ ಒಂಬತ್ತು ದಿನಗಳ ಕಾಲ ಘೋರ ಯುದ್ಧ ಮಾಡಿದಳು. ಅಂತಿಮವಾಗಿ ಹತ್ತನೇ ದಿನದಂದು (ದಶಮಿ) ದೇವಿಯು ಮಹಿಷಾಸುರನನ್ನು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳು. ಈ ವಿಜಯದ ಸಂಕೇತ ಹಾಗೂ ಇತಿಹಾಸದ ನೆನಪಿಗಾಗಿಯೇ ಈ ದಿನವನ್ನು 'ವಿಜಯದಶಮಿ' ಎಂದು ಆಚರಿಸಲಾಗುತ್ತದೆ. ಇದು ದೇವಿ ಭಾಗವತ ಪುರಾಣಕ್ಕೆ ಸಂಬಂಧಿಸಿದ್ದುದಾದ ಘಟನೆಯಾಗಿದೆ.

   2) ಲಂಕೆಯ ರಾಜನಾದ ರಾವಣನು ಸೀತಾಮಾತೆಯನ್ನು ಅಪಹರಿಸಿ ಅಧರ್ಮದ ಹಾದಿ ಹಿಡಿದಿದ್ದನು. ಆಗ ರಾವಣನನ್ನು ಸೋಲಿಸಲು ಶ್ರೀರಾಮನು ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯನ್ನು ಅತ್ಯಂತ ಭಕ್ತಿಯಿಂದ ಪೂಜಿಸಿ, ದೇವಿಯ ಅನುಗ್ರಹ ಮತ್ತು ದಿವ್ಯ ಶಸ್ತ್ರಾಸ್ತ್ರಗಳನ್ನು ಪಡೆದನು. ದೇವಿಯ ಆಶೀರ್ವಾದದ ಬಲದಿಂದ ಶ್ರೀರಾಮನು ವಿಜಯದಶಮಿಯ ದಿನದಂದೇ ರಾವಣನನ್ನು ವಧಿಸಿ, ಸೀತೆಯನ್ನು ಮುಕ್ತಗೊಳಿಸಿದನು. ಉತ್ತರ ಭಾರತದಲ್ಲಿ ಇಂದಿಗೂ ಈ ಇತಿಹಾಸವನ್ನು ಸ್ಮರಿಸಿ ರಾವಣನ ಪ್ರತಿಕೃತಿಯನ್ನು ದಹನ ಮಾಡಲಾಗುತ್ತದೆ. ತ್ರೇತಾಯುಗದಲ್ಲಿ ಶ್ರೀರಾಮನು ಅಧರ್ಮದ ವಿರುದ್ಧ ಸಾಧಿಸಿದ ವಿಜಯದ ಇತಿಹಾಸ ಇದಕ್ಕೆ ಸೇರಿದೆ ಎಂದು ಹೇಳಬಹುದು.

  3) ಪಾಂಡವರು ತಮ್ಮ 12 ವರ್ಷಗಳ ವನವಾಸ ಮತ್ತು 1 ವರ್ಷದ ಅಜ್ಞಾತವಾಸವನ್ನು ವಿರಾಟ ರಾಜನ ಅರಮನೆಯಲ್ಲಿ ಕಳೆಯಬೇಕಿತ್ತು. ಅಜ್ಞಾತವಾಸಕ್ಕೆ ಹೋಗುವ ಮುನ್ನ ಅವರು ತಮ್ಮ ದಿವ್ಯ ಆಯುಧಗಳನ್ನು ಒಂದು ಬನ್ನಿ ಮರದಲ್ಲಿ (ಶಮಿ ವೃಕ್ಷ) ಬಚ್ಚಿಟ್ಟು ಹೋಗಿದ್ದರು.

ಅಜ್ಞಾತವಾಸ ಮುಗಿದ ದಿನವೇ ವಿಜಯದಶಮಿ. ಅಂದು ಪಾಂಡವರು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ತಮ್ಮ ಆಯುಧಗಳನ್ನು ಮರಳಿ ಪಡೆದರು. ಅದೇ ದಿನ ಅರ್ಜುನನು ಕೌರವರ ಬೃಹತ್ ಸೇನೆಯನ್ನು ಏಕಾಂಗಿಯಾಗಿ ಸೋಲಿಸಿ ಗೋವುಗಳನ್ನು ಮುಕ್ತಗೊಳಿಸಿದನು. ಹೀಗಾಗಿ ವಿಜಯದಶಮಿಯಂದು ಆಯುಧ ಪೂಜೆ ಮತ್ತು ಬನ್ನಿ ಪೂಜೆ ಮಾಡುವ ಸಂಪ್ರದಾಯ ನಾಡಿನಾದ್ಯಂತ ನಡೆದುಬಂದಿದೆ. ದ್ವಾಪರ ಯುಗದಲ್ಲಿ ಪಾಂಡವರ ಜೀವನದ ಪ್ರಮುಖ ತಿರುವು ಈ ದಿನದಂದೇ ಸಂಭವಿಸಿತು ಎಂದು ಹೇಳಬಹುದು.

ಈ ಹಬ್ಬದ ಮಹತ್ವ ಮತ್ತು ಆಚರಣೆಗಳು:

ಉತ್ತರ ಭಾರತದಲ್ಲಿ ಶ್ರೀರಾಮನು ರಾವಣನನ್ನು ವಧಿಸಿದ ದಿನವಾಗಿ ಹಾಗೂ ರಾಮಲೀಲಾ ಕಾರ್ಯಕ್ರಮಗಳ ನಂತರ ರಾವಣನ ದಹನ ಮಾಡಲಾಗುತ್ತದೆ.

ದಕ್ಷಿಣ ಭಾರತ ಮತ್ತು ಪೂರ್ವ ಭಾರತದಲ್ಲಿ ದುರ್ಗಾ ದೇವಿಯು ಮಹಿಷಾಸುರನನ್ನು ವಧಿಸಿದ ವಿಜಯದ ದಿನವಾಗಿ ಹಾಗೂ ನವರಾತ್ರಿ/ದುರ್ಗಾ ಪೂಜೆಯ ಮುಕ್ತಾಯವಾಗಿ ಆಚರಿಸಲಾಗುತ್ತದೆ. ಇಲ್ಲಿ ಆಯುಧ ಪೂಜೆ ಮತ್ತು ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ.

ಮೈಸೂರಿನ ದಸರಾವು ಕರ್ನಾಟಕದಲ್ಲಿಯೇ ಅಲ್ಲದೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯು ಅರಮನೆಯಿಂದ ಬನ್ನಿಮಂಟಪದವರೆಗೆ ಅತ್ಯಂತ ವೈಭವದಿಂದ ಜರುಗುತ್ತದೆ.

ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ಇವರನ್ನು ನವದುರ್ಗೆಯರು ಎಂದು ಕರೆಯಲಾಗುತ್ತದೆ. ಪ್ರತಿ ರೂಪಕ್ಕೂ ತನ್ನದೇ ಆದ ಮಹತ್ವ ಮತ್ತು ಪೂಜಾ ವಿಧಾನಗಳಿವೆ.

   ನವದುರ್ಗೆಯರ ಹೆಸರುಗಳು ಮತ್ತು ನವರಾತ್ರಿಯ ದಿನಗಳಲ್ಲಿ ಅವರನ್ನು ಪೂಜಿಸುವ ಸರಳ ವಿಧಾನವು ಹೀಗಿದೆ 

ನವದುರ್ಗೆಯರ ಹೆಸರುಗಳು ಮತ್ತು ಪೂಜಿಸುವ ದಿನಗಳು

  1. ಶೈಲಪುತ್ರಿ (ಮೊದಲನೆಯ ದಿನ) – ಹಿಮಾಲಯ ರಾಜನ ಮಗಳು, ಸ್ಥಿರತೆಯ ಸಂಕೇತ.
  2. ಬ್ರಹ್ಮಚಾರಿಣಿ (ಎರಡನೆಯ ದಿನ) – ತಪಸ್ಸು ಮತ್ತು ಜ್ಞಾನದ ಸ್ವರೂಪಿಣಿ.
  3. ಚಂದ್ರಘಂಟಾ (ಮೂರನೆಯ ದಿನ) – ಧೈರ್ಯ ಮತ್ತು ಶಾಂತಿಯ ಸಂಕೇತ (ಹಣೆ ಮೇಲೆ ಅರ್ಧಚಂದ್ರನಿದ್ದಾರೆ).
  4. ಕೂಷ್ಮಾಂಡ (ನಾಲ್ಕನೆಯ ದಿನ) – ಬ್ರಹ್ಮಾಂಡವನ್ನು ಸೃಷ್ಟಿಸಿದ ದೇವತೆ, ಶಕ್ತಿಯ ಮೂಲ.
  5. ಸ್ಕಂದಮಾತಾ (ಐದನೆಯ ದಿನ) – ಸುಬ್ರಹ್ಮಣ್ಯನ (ಸ್ಕಂದನ) ತಾಯಿ, ವಾತ್ಸಲ್ಯದ ಮೂರ್ತಿ.
  6. ಕಾತ್ಯಾಯಿನಿ (ಆರನೆಯ ದಿನ) – ಕಾತ್ಯಾಯನ ಮಹರ್ಷಿಗಳ ಮಗಳು, ದುಷ್ಟ ಸಂಹಾರಿಣಿ.
  7. ಕಾಲರಾತ್ರಿ (ಏಳನೆಯ ದಿನ) – ಅತ್ಯಂತ ರೌದ್ರ ರೂಪ, ಕತ್ತಲೆ ಮತ್ತು ಭಯ ನಿವಾರಕಳು.
  8. ಮಹಾಗೌರಿ (ಎಂಟನೆಯ ದಿನ) – ಪವಿತ್ರತೆ, ಶಾಂತಿ ಮತ್ತು ಕರುಣೆಯ ಸಂಕೇತ.
  9. ಸಿದ್ಧಿಧಾತ್ರಿ (ಒಂಬತ್ತನೆಯ ದಿನ) – ಸರ್ವ ಸಿದ್ಧಿಗಳನ್ನು ಕರುಣಿಸುವ ದೇವತೆ.

ಪೂಜಾವಿಧಾನ :
ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ. ಒಂದು ಮರದ ಮಣೆ (ಪೀಠ) ಇಟ್ಟು, ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಹೊಸ ಬಟ್ಟೆಯನ್ನು ಹಾಸಿ ಪೀಠದ ಮೇಲೆ ದುರ್ಗಾ ದೇವಿಯ ಮೂರ್ತಿಯನ್ನು ಇರಿಸಿ. ಗಣೇಶನ ಮೂರ್ತಿಯನ್ನೂ ಜೊತೆಗಿಟ್ಟು ಒಂದು ತಾಮ್ರ ಅಥವಾ ಹಿತ್ತಾಳೆಯ ಬಿಂದಿಗೆಗೆ ನೀರು ತುಂಬಿಸಿ, ಅದರಲ್ಲಿ ಅಡಿಕೆ, ನಾಣ್ಯ, ಅಕ್ಷತೆ ಹಾಕಿ. ಬಿಂದಿಗೆಯ ಬಾಯಿಗೆ ವೀಳ್ಯದೆಲೆ ಅಥವಾ ಮಾವಿನ ಎಲೆಗಳನ್ನು ಇಟ್ಟು, ಮೇಲೆ ತೆಂಗಿನಕಾಯಿಯನ್ನು ಇರಿಸಿ ಕಲಶವನ್ನು ಪ್ರತಿಷ್ಠಾಪಿಸುತ್ತಾರೆ. ಇದು ದೇವಿಯ ಸಾನ್ನಿಧ್ಯವನ್ನು ಸೂಚಿಸುತ್ತದೆ. ನಂತರ ಕೈಯಲ್ಲಿ ಅಕ್ಷತೆ ಮತ್ತು ಹೂವುಗಳನ್ನು ಹಿಡಿದು, ನವದುರ್ಗೆಯರನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ, ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಡಲು ಪ್ರಾರ್ಥಿಸುತ್ತಾರೆ.

ಪೂಜೆಯ ವಿಧಾನ :

ದೇವಿಗೆ ನೀರನ್ನು ಪ್ರೋಕ್ಷಣೆ ಮಾಡಿ ಅರಿಶಿನ, ಕುಂಕುಮ, ಶ್ರೀಗಂಧ ಮತ್ತು ಅಕ್ಷತೆಯನ್ನು ಸಮರ್ಪಿಸಿ.ಮಲ್ಲಿಗೆ, ದಾಸವಾಳ ಹೂವು ಹಾರವನ್ನು ಅರ್ಪಿಸಿ ಧೂಪ ದೀಪವನ್ನು ಹಚ್ಚಿ ಆರತಿ ಮಾಡಿ ಪೂಜೆಯ ಸಮಯದಲ್ಲಿ ದುರ್ಗಾ ಅಷ್ಟೋತ್ತರ ಸರಳವಾಗಿ “ಓಂ ದುಂ ದುರ್ಗಾಯೈ ನಮಃ” ಎಂಬ ಮಂತ್ರವನ್ನು ಕನಿಷ್ಠ 21 ಅಥವಾ 108 ಬಾರಿ ಜಪಿಸಿ.ದೇವಿಗೆ ಹಣ್ಣುಗಳು, ಒಣದ್ರಾಕ್ಷಿ-ಗೋಡಂಬಿ ಅಥವಾ ಮನೆಯಲ್ಲಿ ಮಾಡಿದ ಪಾಯಸ, ಕೇಸರಿಬಾತ್, ಕಡಲೆಕಾಳು ಆಯಾ ದಿನದ ಸಂಪ್ರದಾಯದಂತೆ ನೈವೇದ್ಯ ಮಾಡಿ.ಕೊನೆಯಲ್ಲಿ ಕರ್ಪೂರದ ಆರತಿ ಅಥವಾ ತುಪ್ಪದ ದೀಪದ ಆರತಿ ಮಾಡಿ, ಸಾಷ್ಟಾಂಗ ನಮಸ್ಕಾರವನ್ನು ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸುವರು.

ದೇವಿಯು ನಮ್ಮಲ್ಲಿನ ರಕ್ಕಸ ಗುಣ ಕಳೆದು ನಮಗೆಲ್ಲ ಶಿಷ್ಟರನ್ನಾಗಿ ಮಾಡಲಿ ಎಂದು ಹಾರೈಸುವೆನು...

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.