ಇಷ್ಟೆಲ್ಲ ಒಳಗೆ ತುಂಬಿಕೊಂಡು ಶೀಲಾ ಮಾಡುತ್ತಿಯಲ್ಲ. ಈ ಸೂಸಲಾಡುವಂತಹ ದೇಹ ಸೋಸು ಎಲ್ಲವನ್ನು ಸಮಭಾವದಿಂದ ನೋಡು. ಎಲ್ಲರಲ್ಲೂ ಶಿವಾ ಅದಾನ. ಎಲ್ಲರಲ್ಲೂ ಜೀವದ . ಎಲ್ಲರೂ ತನ್ನಂತೆ ನಿನ್ನ ಬಿಟ್ಟು ಬೇರೆ ಏನು ಇಲ್ಲ ಮನಸ್ಸಿನಾಗ ಆ ಗುರುನಾಥನ ನಾಮ ಹಗಲಿಗಳು ನುಡಿಯಬೇಕು. ನಿಂತರು ಆತನ ನಾಮ ಸ್ಮರಣೆ ಮಾಡಬೇಕು.
ಯಾಕಂದ್ರೆ ಕೈ ಕೆಲಸ ಮಾಡ್ತಾವು? ಕಾಲು ಅಡ್ಡಾಡ್ತಾವು. ಆದರೆ ಮನಸ್ಸೇನೂ ಮಾಡುವುದಿಲ್ಲ.ಅದಕ್ಕ ಮನಸ್ಸಿಗೆ ಮಂತ್ರ ಹೇಳು ಕೆಲಸ ಹಚ್ಚಬೇಕು.ಮಂತ್ರ ಹ್ಯಾಂಗಂದ್ರೆ ಕಾಮಧೇನು ಕಲ್ಪವೃಕ್ಷ ಇದ್ದಾಂಗ . ಆ ಮಂತ್ರ ಹರ ನಾಮವನ್ನು ಬಿಡದೆ ಜಪಿಸ ಬಲ್ಲವರ ಭವ ಮರಣ, ಮಾಯ,ಕರ್ಮ , ಮಲಪಾಶ, ಬಂಧ, ಬಹುದುರಿತ , ಸಂಸಾರ, ಸಂತಾಪ, ಸಂಚಯವಳಿದು ವರಭೋಗ ಮೋಕ್ಷವಬಹುದು.
ಆ ಭಗವಂತನ ನಾಮ ಅಂದ್ರೆ ಈಗ ಕುಲಕೊಬ್ಬರು ದೇವರು ಆಧಾರ.ಯಾರಿದ್ದರೂ ದೇವರೊಬ್ಬನೇ.ಎಲ್ಲರೂ ಮನುಷ್ಯರೇ ಆದರೆ ಎಲ್ಲರಿಗೂ ಮನುಷ್ಯರು ಅಂತ ಕರಿಲಾಕ ಬರೋದಿಲ್ಲ.ಹಿಂಗ ದೇವನೊಬ್ಬ ನಾಮ ಹಲವು ಅದಕ್ಕ ಆ ಮನಸ್ಸಿಗೆ ಮಂತ್ರ ಹೇಳ ಕಚ್ಚಿದರೆ ಮೋಕ್ಷ ಸಿಗುತ್ತದೆ ದುರಿತ ದುರ್ಗುಣಗಳು ಹೋಗ್ತಾಾವು ಐಶ್ವರ್ಯ ಸಂಪತ್ತು ಬರ್ತದ ಅಂತ ಮಹಾತ್ಮರು ಸತ್ಯ ಪ್ರಮಾಣ ಮಾಡಿ ಮಾಡಿ ಹೇಳಿ ಯಾರ.ಅದಕ್ಕ ದುರ್ಗುಣ ಅನ್ನುವಂತಹದ್ದು ಅಳಿದು ಮನಸ್ಸು ಮಹದೇವನಲ್ಲಿ ಮುಳುಗಿದರೆ ಮಾತ್ರ ಅದು ಯಾವಾಗಲೂ ಮಾಡಿ ಅಂತ ಕಡಕೋಳದ ಮಡಿವಾಳಪ್ಪನವರು ಹೇಳ್ಯಾರಿ .
ಪ್ರಶ್ನೆ : ತಾಯಿ ಮಕ್ಕಳು ಅಂತೀವಿ ಈ ಶರೀರದೊಳಗೆ ತಂದೆ ಗುರುತು ಏನಾದ. ಲಗ್ನ ಆಗ್ಯದ ಅನಕ್ಕ ತಾಳಿ ನೋಡ್ತೀವಿ ಹಂಗೆ ತಂದೆಯದು ಅನ್ನೋಕ್ಕ ಏನಾದ ?
ಇದು ಲೌಕಿಕ ವ್ಯವಹಾರ ಆಧ್ಯಾತ್ಮಿಕ ಅಲ್ಲ ರೀ ಈ ದೇಹದೊಳಗೆ ತಂದೆ ಗುರುತು ತಾಯಿ ಗುರುತು ಹೇಳಬಹುದು.ಹಂಗ ಲಗ್ನ ಆಗಿದ್ದು ಗುರ್ತು ಹೇಳಂದ್ರೆ ಹೇಳಕ್ಕಾಗೋದಿಲ್ಲ ಅಂಗಸತಿ ಲಿಂಗಪತಿ ಈ ದೇಹ ಸತಿ ಒಳಗಿನ ಜೀವ ಆತ್ಮ ಅದನಲ್ಲ ಅದು ಪತಿ, ತಂದೆ ಗುರುತು ಎಂದರೆ ತಂದೆ ಬಿಂದು ಬೆಳ್ಳಗಾದ . ಎಲುವು ನಾಡಿ ರೋಮ ಯು ತಂದಿ ಗುರುತು. ಮಾಸ ಮಜ್ಯ ರಕ್ತ ಇದೇನು ಹರದಾಡುತ್ತದಲ್ಲ ಇದು ತಾಯಿ ಗುರುತು ಅಂತ ಹೇಳಕ್ಕ ಅದು ಲೌಕಿಕದೊಳದ ಬರ್ತದ. ಅದು ವೈಜ್ಞಾನಿಕ ಅಲ್ಲ ಅದು ತರ್ಕ ವಾದ ಮಾಡುವವರು ಮಾಡುತ್ತಿರುತ್ತಾರೆ ಆಧಾರದೊಂದಿಗೆ ಹೇಳಬೇಕಿಲ್ಲ ಈಗ ವಿಭೂತಿ ಕುಂಕುಮ ಹಚ್ಚುತ್ತಾರೆ ವಿಭೂತಿ ತಂದೆಯದ್ದು ಯಾಕಂದ್ರ ತಂದಿ ಬಿಂದು ಬೆಳಗದ ಕುಂಕುಮ ತಾಯಿಯದ್ದು ತಾಯಿ ರಕ್ತ ಕೆಂಪದ ಯು ತಂದೆ ತಾಯಿಯ ಚಿಹ್ನೆಗಳು.
ಮುಂದುವರೆಯುತ್ತದೆ ….
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

