Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ -“ವಿಜಯ್ ಕುಮಾರ್”
- ವಿಶೇಷ ಸಮಾಚಾರ - ಸಿನಿಮಾ

ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ -“ವಿಜಯ್ ಕುಮಾರ್”

ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ –“ವಿಜಯ್ ಕುಮಾರ್” ಪಾಪ್ ಕಾರ್ನ್ ಮಂಕಿ ಟೈಗರ್,ಬ್ಯಾಡ್ ಮ್ಯಾನರ್ಸ್,ಕಾಗೆ ಬಂಗಾರ ದುನಿಯಾ ಸೂರಿಯವರ ಸಿನಿಮಾದಲ್ಲಿ ನಮ್ಮ ಉತ್ತರ ಕರ್ನಾಟಕದ ಕಲಾವಿದ ವಿಜಯ್ ಕುಮಾರ್ ಇದ್ದೇ ಇರುತ್ತಾರೆ. ಒಬ್ಬ ಕಲಾವಿದನಿಗೆ ನಟನೆಯ ಸಾಮರ್ಥ್ಯವಿರಬಹುದು ಅಥ್ವಾ ಆತನಿಗೆ ಅದ್ಭುತವಾದ ಧ್ವನಿಯಿರಬಹುದು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಪ್ರತಿಭೆಯಿರಬಹುದು. ಪಾತ್ರಕ್ಕೆ ಜೀವ ತುಂಬುವ ಕಲೆಯೂ ಇರಬಹುದು.ಆದರೆ ಈ ಎಲ್ಲ ಗುಣಗಳಿದ್ದರೂ ಅಂತಹ ಕೆಲವರಿಗೆ ಅವಕಾಶ ಸಿಗಬಹುದು / ಸಿಗದೇ ಕೂಡಾ ಇರಬಹುದು. ಆದರೆ,ಉತ್ತರ ಕರ್ನಾಟಕದ,ಬಹುಮುಖ ಪ್ರತಿಭೆ ವಿಜಯ್ […]

ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ –
“ವಿಜಯ್ ಕುಮಾರ್”

ಪಾಪ್ ಕಾರ್ನ್ ಮಂಕಿ ಟೈಗರ್,ಬ್ಯಾಡ್ ಮ್ಯಾನರ್ಸ್,ಕಾಗೆ ಬಂಗಾರ ದುನಿಯಾ ಸೂರಿಯವರ ಸಿನಿಮಾದಲ್ಲಿ ನಮ್ಮ ಉತ್ತರ ಕರ್ನಾಟಕದ ಕಲಾವಿದ ವಿಜಯ್ ಕುಮಾರ್ ಇದ್ದೇ ಇರುತ್ತಾರೆ.

ಒಬ್ಬ ಕಲಾವಿದನಿಗೆ ನಟನೆಯ ಸಾಮರ್ಥ್ಯವಿರಬಹುದು ಅಥ್ವಾ ಆತನಿಗೆ ಅದ್ಭುತವಾದ ಧ್ವನಿಯಿರಬಹುದು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಪ್ರತಿಭೆಯಿರಬಹುದು. ಪಾತ್ರಕ್ಕೆ ಜೀವ ತುಂಬುವ ಕಲೆಯೂ ಇರಬಹುದು.ಆದರೆ ಈ ಎಲ್ಲ ಗುಣಗಳಿದ್ದರೂ ಅಂತಹ ಕೆಲವರಿಗೆ ಅವಕಾಶ ಸಿಗಬಹುದು / ಸಿಗದೇ ಕೂಡಾ ಇರಬಹುದು.

ಆದರೆ,ಉತ್ತರ ಕರ್ನಾಟಕದ,ಬಹುಮುಖ ಪ್ರತಿಭೆ ವಿಜಯ್ ಕುಮಾರ್ ಮಾತ್ರ ಎಲ್ಲ ಬಿಡದ ತ್ರಿವೀಕ್ರಮನಂತೆ ಕಿರು ಚಿತ್ರಗಳನ್ನು ಮಾಡುತ್ತಿದ್ದಾರೆ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ ಹಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಚಿಕ್ಕ ಅವಕಾಶಗಳನ್ನು ಅತ್ಯಂತ ಕರಾರುವಕ್ಕಾಗಿ ಉಪಯೋಗಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಂತಹ ಕಲಾವಿದ ಈ ವಿಜಯ್ ಕುಮಾರ್.

16 ವರ್ಷಗಳ ತಮ್ಮ ಸುಧೀರ್ಘ ಪಯಣದಲ್ಲಿ ಸಿನಿಮಾ,ಸೀರಿಯಲ್, ಕಿರುಚಿತ್ರಗಳು, ವೆಬ್ ಸೀರೀಸ್ಗಳಲ್ಲಿ , ನಟನಾಗಿ ನಿರ್ಮಾಪಕನಾಗಿ ಬರಹಗಾರನಾಗಿ ಕಥಾ ವಿಸ್ತರಣೆಯ ವಿಭಾಗದಲ್ಲೂ ಸಹ ಕೆಲಸ ಮಾಡಿ ಅನುಭವ ಇರುವಂತಹ ಬಹುಮುಖ ಪ್ರತಿಭೆ,ಉತ್ತರ ಕರ್ನಾಟಕದ ಕುಂದಾನಗರಿಯ ಅಪ್ಪಟ ಕಲಾವಿದ ವಿಜಯ್ ಕುಮಾರ್, ಇಲ್ಲಿಯವರೆಗೂ 13 ಚಲನಚಿತ್ರಗಳು ಧಾರಾವಾಹಿಗಳು ನಟಿಸಿ ತಮ್ಮ ನಟನ ಅನುಭವದ ಜರ್ನಿಯನ್ನ ಇಂದಿಗೂ ಮುಂದುವರಿಸುತ್ತಿದ್ದಾರೆ.

ವಿಜಯ್ ಕುಮಾರ್ ಇಲ್ಲಿಯ ತನಕ ಮಾಡಿದ ಪಾತ್ರಗಳ ಬಗ್ಗೆ ಮಾತನಾಡುವುದಾದರೆ,ನಾಯಕ ಅಥವಾ ನಾಯಕಿಯ ತಂದೆಯ ಪಾತ್ರ, ಪೊಲೀಸ್ ಆಫೀಸರ್ ಪಾತ್ರ, ಉದ್ಯಮಿಯ ಪಾತ್ರ, ರಾಜಕಾರಣಿಯ ಪಾತ್ರ, ಖಡಕ್ ರೌಡಿಯ ಪಾತ್ರ, ಹಳ್ಳಿಯ ಮುಗ್ಧನ ಪಾತ್ರ, ಈ ರೀತಿಯಾದಂತಹ ಪಾತ್ರಗಳನ್ನ ಮಾಡಿಕೊಂಡು ಬಂದು ತಮಗೆ ಸಿಕ್ಕ ಅವಕಾಶಗಳನ್ನ ಸದುಪಯೋಗಪಡಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ.

ಇನ್ನೂ ವಿಜಯಕುಮಾರ್ ನಟಿಸಿದ ಪ್ರಮುಖ ಕನ್ನಡ ಚಲನಚಿತ್ರಗಳ ಬಗ್ಗೆ ಗಮನಹರಿಸಿದಾಗ,


ಪವನ್ ಒಡೆಯರ್ ಮತ್ತು ಸಂಗೀತ ಭಟ್ ಮುಖ್ಯ ಭೂಮಿಕೆಯ “ಪ್ರೀತಿ ಗೀತಿ ಇತ್ಯಾದಿ”,ಪಿ ಸಿ ಶೇಖರ್ ನಿರ್ದೇಶನದ “ಅರ್ಜುನ”, ಕ್ರಿಶ್ ಜೋಶಿ ನಿರ್ದೇಶನದ “ಪರಪಂಚ”, “ಕೊನೆಯ ಪುಟ”, ಮನ್ಸೂರೆ ನಿರ್ದೇಶನದ “19.20.21”, ಚಂದ್ರಮೋಹನ್ ನಿರ್ದೇಶನದ “ಫಾರೆಸ್ಟ್”,”ಜೊತೆಯಾಗಿ ಹಿತವಾಗಿ”,ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ “ಬೇಲ್”
ದುನಿಯಾ ಸೂರಿಯವರ “ಪಾಪ್ ಕಾರ್ನ್ ಮಂಕಿ ಟೈಗರ್”, “ಬ್ಯಾಡ್ ಮ್ಯಾನರ್ಸ್” ನಲ್ಲಿ ನಟಿಸಿದ್ದು, ಇತ್ತೀಚಿಗಷ್ಟೇ ಮುಹೂರ್ತ ಕಂಡ ದುನಿಯಾ ಸೂರಿ ರವರ “ಕಾಗೆ ಬಂಗಾರ” ಚಿತ್ರದಲ್ಲೂ ಪ್ರಮುಖ ಪಾತ್ರವನ್ನು ವಿಜಯ್ ಕುಮಾರ್ ಮಾಡುತ್ತಿದ್ದು ಇನ್ನೂ ಕೆಲವು ಚಿತ್ರಗಳ ಮಾತುಕತೆ ನಡೆಯುತ್ತಿದೆ
ಎಂಬ ಮಾಹಿತಿ ನಮಗೆ ಸಿಕ್ಕಿದೆ ಅಷ್ಟೇ ಅಲ್ಲದೆ ಇತ್ತೀಚೆಗೆ ಜಿ5 ಮತ್ತು ತರುಣ್ ಸುಧೀರ್ ಜಂಟಿ ನಿರ್ಮಾಣದಲ್ಲಿ ಬಂದಂತಹ, ಸೋಹನ್ ಶೆಟ್ಟಿ ನಿರ್ದೇಶನದ “ರಾಕ್ಷಸ” ವೆಬ್ ಸೀರೀಸ್ ನಲ್ಲೂ ನಟಿಸಿದ್ದು ಮತ್ತೊಂದು ವಿಶೇಷ.

ಇನ್ನುಳಿದಂತೆ “ಸುವರ್ಣ ವಾಹಿನಿಯಲ್ಲಿ” ಪ್ರಸಾರವಾದ “ಗುಂಡ್ಯಾನ ಹೆಂಡ್ತಿ” ಧಾರವಾಹಿಯಲ್ಲಿ ನಟನೆ,

ಸಿಬಿಲ್ ಸ್ಕೋರ್, ಮೊಗ್ಗು, ವರ ಬೇಕಾಗಿದ್ದಾರೆ ಎಂಬಂತಹ ಸದಭಿ ರುಚಿಯ ಕಿರು ಚಿತ್ರಗಳಲ್ಲೂ ಸಹ ನಟಿಸಿದ್ದಾರೆ.

ತಾನೊಬ್ಬ ಒಳ್ಳೆಯ ನಟನಾಗಿ ಒಳ್ಳೆಯ ಹೆಸರನ್ನು ಮಾಡಬೇಕು ಹಾಗೆ ಉತ್ತರ ಕರ್ನಾಟಕದ ಕಡೆಯಿಂದ ಬಂದ ಅತ್ಯುತ್ತಮ ನಟರಲ್ಲಿ ತಾವು ಒಬ್ಬರಾಗಬೇಕು ಎಂಬ ನಿರಂತರ ಪ್ರಯತ್ನವನ್ನ ವಿಜಯ್ ಕುಮಾರ್ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ರೈತರು ಡೈರೆಕ್ಟರ್ ದುನಿಯಾ ಸೂರಿ ಯವರೊಂದಿಗೆ, ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಲ್ಲಿ ಕಲಾವಿದರಾಗಿ ನಟಿಸುವುದರ ಮೂಲಕ, ಸೂರಿ ಯವರ ಜೊತೆ ಮತ್ತೆ “ಕಾಗೆ ಬಂಗಾರ” ದ ಮೂಲಕ ಸಿನಿ ಜರ್ನಿಯನ್ನು ಕಂಟಿನ್ಯೂ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಎಲ್ಲಾ ಪ್ರತಿಭಾವಂತ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಮತ್ತು ಆಶಯ ಈ ಕಲಾವಿದನದ್ದು, ಕಲೆಯ ಪ್ರತಿಭೆ ಕರ್ನಾಟಕದ ಯಾವುದೇ ಮೂಲೆಯಲ್ಲಿರಲಿ ಅಂತಹ ಎಲ್ಲಾ ಕಲಾವಿದರಿಗೂ ಅವಕಾಶ ಕೊಡಿ ಹಾಗೂ ಬಳಸಿ ಬೆಳಸಿ ಎಂಬುದು ಈ ಲೇಖನದ ಉದ್ದೇಶವಾಗಿದೆ.

ಕಲಾವಿದ ವಿಜಯ್ ಕುಮಾರ್ ರವರ ವೈಯಕ್ತಿಕ ಮಾಹಿತಿ ಇಲ್ಲಿ ಕೊಡಲಾಗಿದ್ದು, ನೀವು ಮಾಡುವಂತಹ ಪ್ರಾಜೆಕ್ಟ್ಗಳಲ್ಲಿ ಇಂತಹ ಪ್ರತಿಭೆಗಳಿಗೆ ಅವಕಾಶ ಇದ್ದರೆ ಖಂಡಿತ ನೀವು ನೇರವಾಗಿ ಇವರನ್ನು ಸಂಪರ್ಕಿಸಿ ಎಂದು ತಿಳಿಸುತ್ತಾ.

ವಿಜಯ್ ಕುಮಾರ್
( ಕಲಾವಿದ )

9845273843

vijaykumarbgm@gmail.com

Bengaluru / Belgaum


MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.