Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮೈಸೂರು ಯುವ “ದಸರಾ”
- ವಿಶೇಷ ಸಮಾಚಾರ

ಮೈಸೂರು ಯುವ “ದಸರಾ”

ಪತ್ರಿಕಾ ಪ್ರಕಟಣೆ ಯುವ ದಸರಾ 2026 – ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮದ ಕುರಿತು ಅಧಿಕೃತ ಪ್ರಕಟಣೆ ಮೈಸೂರು, ಅಕ್ಟೋಬರ್ 16: ಮೈಸೂರು ದಸರಾ 2026ರ ಅಂಗವಾಗಿ ಇಂದು ಸಂಜೆ 4:30 ಗಂಟೆಗೆ (4:30 PM) ಯುವ ದಸರಾ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ನೈಟ್ಸ್ (Sandalwood Nights) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಗಾಯಕಿಯರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲೋಕ್, ಐಶ್ವರ್ಯ ರಂಗರಾಜನ್ ಸೇರಿದಂತೆ ಕನ್ನಡದ ಹಲವು ಪ್ರಸಿದ್ಧ […]

ಪತ್ರಿಕಾ ಪ್ರಕಟಣೆ

ಯುವ ದಸರಾ 2026 – ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮದ ಕುರಿತು ಅಧಿಕೃತ ಪ್ರಕಟಣೆ

ಮೈಸೂರು, ಅಕ್ಟೋಬರ್ 16:

ಮೈಸೂರು ದಸರಾ 2026ರ ಅಂಗವಾಗಿ ಇಂದು ಸಂಜೆ 4:30 ಗಂಟೆಗೆ (4:30 PM) ಯುವ ದಸರಾ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ನೈಟ್ಸ್ (Sandalwood Nights) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಗಾಯಕಿಯರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲೋಕ್, ಐಶ್ವರ್ಯ ರಂಗರಾಜನ್ ಸೇರಿದಂತೆ ಕನ್ನಡದ ಹಲವು ಪ್ರಸಿದ್ಧ ಗಾಯಕರು ಮತ್ತು ಗಾಯಕಿಯರು ಭಾಗವಹಿಸಿ ತಮ್ಮ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇಂದು ಯುವ ದಸರಾ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮ ಮಾತ್ರ ನಡೆಯಲಿದ್ದು, ಯಾವುದೇ ಪೂರಕ (ಫಿಲ್ಲರ್) ಕಾರ್ಯಕ್ರಮಗಳು ಇರುವುದಿಲ್ಲ. ಈ ಕುರಿತು ಸಾರ್ವಜನಿಕರು ಯಾವುದೇ ಅನಧಿಕೃತ ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಪ್ರಕಟಣೆಯನ್ನೇ ಪರಿಗಣಿಸಬೇಕಾಗಿ ವಿನಂತಿಸಲಾಗಿದೆ.

ಮೈಸೂರು ಜಿಲ್ಲಾಡಳಿತದ ನೇತೃತ್ವದಲ್ಲಿ ಹಾಗೂ ಯುವ ದಸರಾ ಉಪಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ಮೈಸೂರಿನ ಸಮಸ್ತ ನಾಗರಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಯುವ ದಸರಾ ಉಪಸಮಿತಿಯು ಮನವಿ ಮಾಡಿದೆ.

ಇಂತಿ,

ಯುವ ದಸರಾ ಉಪಸಮಿತಿ
ಮೈಸೂರು ದಸರಾ 2026

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.