Wednesday, 21 October 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನವೆಂಬರ್ 13ಕ್ಕೆ “ನೀ ನಂಗೆ ಅಲ್ಲವಾ”
- ಸಿನಿಮಾ

ನವೆಂಬರ್ 13ಕ್ಕೆ “ನೀ ನಂಗೆ ಅಲ್ಲವಾ”

ಹಾಡುಗಳ ಮೂಲಕ ಗಮನ ಸೆಳೆದಿರುವ “ನೀ ನಂಗೆ ಅಲ್ಲವಾ” ನವೆಂಬರ್ 13 ರಂದು ಬಿಡುಗಡೆ .‌ ‌‌‌‌‌ ‌‌ ‌ ‌‌ಸುರಮ್ ಮೂವೀಸ್ ಲಾಂಛನದಲ್ಲಿ “ನಿದ್ರಾದೇವಿ ನೆಕ್ಸ್ಟ ಡೋರ್” ಚಿತ್ರವನ್ನು ನಿರ್ಮಿಸಿರುವ, ” ಎಲ್ ಎಸ್ ಡಿ”, “ನಾಕುತಂತಿ”, “ಉಗ್ರಾಯುಧಮ್” ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ ದೇವಸಮುದ್ರ ಅವರು ನಿರ್ಮಿಸಿರುವ ಹಾಗೂ “ಆನ”, “ಮೇರಿ” ಚಿತ್ರಗಳ ನಂತರ ಮನೋಜ್ ಪಿ ನಡಲುಮನೆ ಅವರು ನಿರ್ದೇಶಿಸಿರುವ ಹಾಗೂ ರಾಹುಲ್ ಆರ್ಕಟ್, ಕಾಶಿಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ […]

ಹಾಡುಗಳ ಮೂಲಕ ಗಮನ ಸೆಳೆದಿರುವ “ನೀ ನಂಗೆ ಅಲ್ಲವಾ” ನವೆಂಬರ್ 13 ರಂದು ಬಿಡುಗಡೆ .
‌ ‌‌‌‌‌ ‌‌ ‌ ‌‌
ಸುರಮ್ ಮೂವೀಸ್ ಲಾಂಛನದಲ್ಲಿ “ನಿದ್ರಾದೇವಿ ನೆಕ್ಸ್ಟ ಡೋರ್” ಚಿತ್ರವನ್ನು ನಿರ್ಮಿಸಿರುವ, ” ಎಲ್ ಎಸ್ ಡಿ”, “ನಾಕುತಂತಿ”, “ಉಗ್ರಾಯುಧಮ್” ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ ದೇವಸಮುದ್ರ ಅವರು ನಿರ್ಮಿಸಿರುವ ಹಾಗೂ “ಆನ”, “ಮೇರಿ” ಚಿತ್ರಗಳ ನಂತರ ಮನೋಜ್ ಪಿ ನಡಲುಮನೆ ಅವರು ನಿರ್ದೇಶಿಸಿರುವ ಹಾಗೂ ರಾಹುಲ್ ಆರ್ಕಟ್, ಕಾಶಿಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ ಅಲ್ಲವಾ” ಚಿತ್ರ ನವೆಂಬರ್ 13 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಚಿತ್ರತಂಡ ಈ ವಿಷಯವನ್ನು ತಿಳಿಸಿದೆ.

ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದ್ದು, ಸಮಾಜಕ್ಕೆ ಒಂದೊಳ್ಳೆ ಸಂದೇಶ ಸಹ ಚಿತ್ರದಲ್ಲಿದೆ‌. ಮನೆಮಂದಿಯೆಲ್ಲಾ ಒಟ್ಟಾರೆ ಕುಳಿತು ನೋಡವ ಚಿತ್ರ ಇದಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ರಾಹುಲ್ ಆರ್ಕಟ್, ಕಾಶಿಮಾ, ಆರತಿ ಪಡುಬಿದ್ರಿ, ತಾರಕ್ ಮಾಸ್ಟರ್, ಭಾವನ ಚಂದ್ರ, ರೋಹಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಉದಯ್ ಲೀಲಾ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸೂರಜ್ ಜೋಯಿಸ್ ಸಂಗೀತ ನೀಡಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.