Wednesday, 21 October 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬೆಂಕಿಯಂತಿದೆ “ಗುಡ್ಡದ ಭೂತ” ಟೀಸರ್ !!!
- ಸಿನಿಮಾ

ಬೆಂಕಿಯಂತಿದೆ “ಗುಡ್ಡದ ಭೂತ” ಟೀಸರ್ !!!

ಬೆಂಕಿಯಂತಿದೆಗುಡ್ಡದ ಭೂತಟೀಸರ್ ….!!! ಸ್ಯಾಂಡಲ್ವುಡ್ನ ಭರವಸೆಯ ಯುವ ಪ್ರತಿಭೆ,ಈಗಾಗಲೇ ಗೌರಿ ಮತ್ತು ವೃಷಭ ಚಿತ್ರದ ಮೂಲಕ ತನ್ನ ಅದ್ಬುತ ನಟನಾ ಸಾಮರ್ಥ್ಯವನ್ನು ತೋರಿಸಿರುವ,ಸಮರ್ಜೀತ ಲಂಕೇಶ್, ಸದ್ದು ಗದ್ದಲವಿಲ್ಲದೆ ಮತ್ತೊಂದು ಅಧ್ಬುತ ಕಂಟೆಂಟ್ ಹೊಂದಿರುವ,ಖಡಕ್ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ ಅದರ ಹೆಸರು “ಗುಡ್ಡದ ಭೂತ” “ಗುಡ್ಡದ ಭೂತ” ಟೀಸರ್ ತುಂಬಾ ಪ್ರಾಮಿಸಿಂಗ್ ಆಗಿದೆ, ಭರತ್ ನಾವುಂದ ಮಾಡಿರುವ ಒಂದೊಳ್ಳೆಯ ಕಥೆಯನ್ನು ಎಂ ಆರ್ ಕಾಂತರಾಜ್ ಆಯ್ಕೆ ಮಾಡಿ ಸಿನಿಮಾವಾಗಿ ಮಾಡಿದ್ದಾರೆ, ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟಸಮರ್ಜೀತ ಲಂಕೇಶ್,ಯಾವುದೇ […]

ಬೆಂಕಿಯಂತಿದೆ
ಗುಡ್ಡದ ಭೂತ
ಟೀಸರ್ ….!!!

ಸ್ಯಾಂಡಲ್ವುಡ್ನ ಭರವಸೆಯ ಯುವ ಪ್ರತಿಭೆ,ಈಗಾಗಲೇ ಗೌರಿ ಮತ್ತು ವೃಷಭ ಚಿತ್ರದ ಮೂಲಕ ತನ್ನ ಅದ್ಬುತ ನಟನಾ ಸಾಮರ್ಥ್ಯವನ್ನು ತೋರಿಸಿರುವ,ಸಮರ್ಜೀತ ಲಂಕೇಶ್, ಸದ್ದು ಗದ್ದಲವಿಲ್ಲದೆ ಮತ್ತೊಂದು ಅಧ್ಬುತ ಕಂಟೆಂಟ್ ಹೊಂದಿರುವ,ಖಡಕ್ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ ಅದರ ಹೆಸರು “ಗುಡ್ಡದ ಭೂತ”

“ಗುಡ್ಡದ ಭೂತ” ಟೀಸರ್ ತುಂಬಾ ಪ್ರಾಮಿಸಿಂಗ್ ಆಗಿದೆ, ಭರತ್ ನಾವುಂದ ಮಾಡಿರುವ ಒಂದೊಳ್ಳೆಯ ಕಥೆಯನ್ನು ಎಂ ಆರ್ ಕಾಂತರಾಜ್ ಆಯ್ಕೆ ಮಾಡಿ ಸಿನಿಮಾವಾಗಿ ಮಾಡಿದ್ದಾರೆ,


ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ
ಸಮರ್ಜೀತ ಲಂಕೇಶ್,ಯಾವುದೇ ತರಹದ ಸಂಶಯ ಅಥವಾ ಗೊಂದಲ ಇಲ್ಲದೆ, ಒಪ್ಪಿಕೊಂಡ ಕಥೆ “ಗುಡ್ಡದ ಭೂತ”

ಒಳ್ಳೆಯ ಸಿನಿಮಾಗಳು ಗೆದ್ದಾಗ ಖುಷಿ ಆಗತ್ತೆ,ಇತ್ತೀಚಿಗೆ ಬಂದಂತಹ ಪ್ರೇಮದ ಊರಲಿ ಚಿತ್ರವನ್ನು ನಾನು ಮತ್ತು ಅಪ್ಪ ಇಂದ್ರಜಿತ್ ಲಂಕೇಶ್ ಒಟ್ಟಿಗೆ ಕೂತು ನೋಡಿದೆವು,ತಕ್ಷಣ ಅಪ್ಪ ಪ್ರೇಮದ ಊರಲಿ ನಿರ್ದೇಶಕರಿಗೆ ಫೋನ್ ಮಾಡಿ ಶುಭ ಹಾರೈಸಿದರು.

ಗೌರಿ ನನಗೆ ಒಳ್ಳೇ ಹೆಸರು ತಂದು ಕೊಡ್ತು,ನಂತರ ವೃಷಭ ಮಾಡ್ದೆ ಈಗ “ಗುಡ್ಡದ ಭೂತ” ಇದರಲ್ಲಿ ನಾನು ಪೋಲಿಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ಸಖತ್ ಥ್ರಿಲ್ ಕೊಟ್ಟಿದ್ದು,,ಚಿತ್ರ ನೋಡುವ ವೀಕ್ಷಕರಿಗೆ ಕನೆಕ್ಟ್ ಆಗತ್ತೆ.ಈಗಿನ ಯುವಕ ಯುವತಿಯರಿಗೆ ಸಂಯಮ ಇಲ್ಲ,ಎಲ್ಲರನ್ನೂ ಎರಡುವರೆ ಗಂಟೆ ಹಿಡಿದು ಕೂಡಿಸೋದು ತುಂಬಾ ಕಷ್ಟ ಆದರೆ ನಮ್ಮ ಚಿತ್ರ ಅದೆಲ್ಲವನ್ನು ಕಂಟ್ರೋಲ್ ಮಾಡತ್ತೆ ಅನ್ನೋ ನಂಬಿಕೆ ಇದೆ ಎಂದರು

ನಿರ್ದೇಶಕ ಭರತ್ ನಾವುಂದ,ಮಾತನಾಡಿ.ಗುಡ್ಡದ ಭೂತ ಒಂದು ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟರಿ ಇರೋ ಕಥೆ.ಸತ್ಯ ಘಟನೆಗಳ ಆಧಾರಿತ ಸಿನಿಮಾ ಆಗಿದ್ದು,ಕುಂದಾಪುರದಲ್ಲಿ 1987 ರಲ್ಲಿ ನಡೆದ ಒಂದು ಘಟನೆ,ಆ ಘಟನೆಯಲ್ಲಿ ಮೂರು ಜನರ ಕೊಲೆಯಾಗತ್ತೆ,ಅದು ಹೇಗಾಯ್ತು ?? ಯಾಕಾಯಿತು ?? ಮತ್ತು ಅದಕ್ಕೆ ಕಾರಣ ಏನು ಅನ್ನೋದು ವೆರಿ ಇಂಟ್ರೆಸ್ಟಿಂಗ್ ಆಗಿದೆ ಆ ಘಟನೆ ನನಗೆ ಕಾಡುತ್ತಿತ್ತು,”ಗುಡ್ಡದ ಭೂತ” ಕಥೆ ಮಾಡುವಾಗ ಆ ಘಟನೆ ಸಖತ್ ಪ್ಲೇಸ್ಮೆಂಟ್ ಆಗಿ ಇಲ್ಲಿ ಫಿಟ್ ಆಯ್ತು ಎಂದರು.


ಚಿತ್ರದಲ್ಲಿ ಮೂರು ಹಾಡುಗಳು ಇವೆ,ಒಟ್ಟು ಐದು ಕಾಲಘಟ್ಟದಲ್ಲಿ ನಡೆಯುವಂಥ ಕಥೆ,ಇಪ್ಪತ್ತಾರು ವರ್ಷದ ಹಿಂದಿನ ಘಟನೆಯನ್ನು ಭೇದಿಸಿ ಬರುವ ನಾಯಕನ ಪಾತ್ರವಾಗಿ ಪೊಲೀಸ್ ಆಫೀಸರ್ ಅಲೋಕ್ ಬರ್ತಾರೆ, ಅದುವೇ ಚಿತ್ರಕ್ಕೊಂದು ವೇಗ ಮತ್ತು ಸಸ್ಪೆನ್ಸ್ ಪಾಯಿಂಟ್ ಕೊಡತ್ತೆ,ಕರಾವಳಿ ಭಾಗದ ಕಥೆ, ಶಿರಸಿ ಮತ್ತು ಮಂಚಿಕೇರಿ ಕಡೆ ಚಿತ್ರೀಕರಣ ಮಾಡಿದ್ದೇವೆ,ಎಸ್ ಐ ಅಲೋಕ್ ಪಾತ್ರದಲ್ಲಿ ಸಮರ್ಜೀತ ಲಂಕೇಶ್ ಮಾಡಿದ್ದು, ಇದರಲ್ಲಿ ಅವರಿಗೆ ನಾಯಕಿ ಇಲ್ಲ,ಇದೊಂದು ಕಂಟೆಂಟ್ ಓರಿಯೆಂಟೆಂಟ್ ಸಿನ್ಮಾ ಆಗಿದ್ದು,ಎಲ್ಲರಿಗೂ “ಗುಡ್ಡದ ಭೂತ” ತುಂಬಾ ಇಷ್ಟವಾದ ಚಿತ್ರವಾಗಿ ಪ್ರೇಕ್ಷಕರನ್ನು ತಲುಪತ್ತೆ ಎಂಬ ಭರವಸೆ ಇದೆ ಎಂದರು.

ನಿರ್ಮಾಪಕ ಎಂ ಆರ್ ಕಾಂತರಾಜ್ ಮಾತನಾಡಿ,
ಸುಮಾರು ಆರು ತಿಂಗಳಿಂದ ಸಿನಿಮಾ ಮಾಡಲು ಕಥೆಗಳನ್ನು ಕೇಳ್ತಾ ಬಂದೆ, ಎಲ್ಲದಕ್ಕೂ ಸಮಯ ಬರಬೇಕು ಅನ್ನೋದು ಸತ್ಯ,ನನಗೆ ಸಿಕ್ಕ ಒಂದೊಳ್ಳೆ ಕಥೆಯನ್ನು ಕೊಟ್ಟಿದ್ದು ನಿರ್ದೇಶಕ ಭರತ್.


ನಾಯಕ ನಟ ಸಮರ್ಜೀತ ನಟನೆಯ ಕಮಿಟ್ಮೆಂಟ್ ಬಗ್ಗೆ ಮಾತನಾಡಿದ ಕಾಂತರಾಜ್,ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣದ ಅನುಭವ ಹಂಚಿಕೊಂಡು ಆ ಸಮಯದಲ್ಲಿ ಸಮರ್ಜೀತಗೆ ತುಂಬಾ ಜ್ವರ ಇತ್ತು ಆದ್ರೂ ಸಹ ಒಂದೇ ಒಂದು ದಿನವೂ ಚಿತ್ರೀಕರಣ ನಿಲ್ಲದಂತೆ ನೋಡಿಕೊಂಡು ಚಿತ್ರ ಮುಗಿಸಿಕೊಟ್ಟಿದ್ದಾರೆ, ಸಮರ್ಜೀತ ತುಂಬಾ ದೊಡ್ಡ ಸ್ಟಾರ್ ಆಗಿ ಬೆಳೀತಾನೆ ಎಂದು ಭವಿಷ್ಯ ನುಡಿದರು

ಸಂಗೀತ ನಿರ್ದೇಶಕ
ಶ್ರೀಹರಿ ಮಾತನಾಡಿ, ಇದು ನನ್ನ ನಾಲ್ಕನೇ ಚಿತ್ರ, “ಗುಡ್ಡದ ಭೂತ” ಒಂದು ಗೋಲ್ಡನ್ ಬಾಕ್ಸ್ ತರಹದ ಟೈಟಲ್,ಚಿತ್ರದ ಸಂಪೂರ್ಣ ಭಾಗದ ಸಂಗೀತದ ಕೆಲಸಕ್ಕೆ , ಸಮಯ ತಗೊಂಡಿದ್ದೀನಿ.ನಾನು ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಸ್ಟಡಿ ಮಾಡಿದ್ದೇನೆ ಸೋ ನಮ್ಮ ಚಿತ್ರದ,ಮುಂದಿನ ಒಂದಷ್ಟು ಕೆಲಸ ಅಲ್ಲಿಯೇ ಮಾಡುವ ಯೋಚನೆ ಮಾಡಿದ್ದೇವೆ,ತುಂಬಾ ಚೆನ್ನಾಗ್ ಆಗತ್ತೆ ಅನ್ನೋ ಭರವಸೆ ನನಗಿದೆ ಎಂದರು.

ಒಳ್ಳೆಯ ಕಥೆಗಳು ಸಿನಿಮಾಗಳಾಗಬೇಕು, ಒಳ್ಳೆಯ ಸಿನಿಮಾಗಳು ಗೆಲ್ಲಬೇಕು,ಅಭಿಮಾನಿ ದೇವರುಗಳು ಸಿನಿಮಾಗಳನ್ನು ಥಿಯೇಟರ್ ಗಳಲ್ಲೇ ನೋಡಬೇಕು ಅನ್ನೋದು ನಮ್ಮ ಆಶಯ

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.