Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಲಯ” ಕೋಕಿಲ “ತಾಯ್ತ” ಟ್ರೈಲರ್ “ಲಾಂಚ್”
- ಸಿನಿಮಾ

“ಲಯ” ಕೋಕಿಲ “ತಾಯ್ತ” ಟ್ರೈಲರ್ “ಲಾಂಚ್”

ತಾಯ್ತಟ್ರೈಲರ್ ಲಾಂಚ್ ತಾಯ್ತ,ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಬಾ ಮಾ ಹರೀಶ್,ಲಯ ಕೋಕಿಲ ನನಗೆ ಸುಮಾರು ಮೂವತ್ತೈದು ವರ್ಷಗಳಿಂದ ಸ್ನೇಹಿತ, ತುಂಬಾ ಒಳ್ಳೆಯ ನಟ ಮತ್ತು ಸಂಗೀತ ನಿರ್ದೇಶಕ,ನಿರಂತರ ಪ್ರಯತ್ನ ಮಾಡುವ ವ್ಯಕ್ತಿ ಲಯ ಕೋಕಿಲ, ಅವ್ರ ತಾಯ್ತ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದಹಿರಿಯ ನಟ ಕರಿಸುಬ್ಬು ಮಾತನಾಡಿ,ಲಯ ಕೋಕಿಲ ಮತ್ತು ಸಾಧು ಕೋಕಿಲ ನನ್ನ ಜ್ಯೂನಿಯರ್ಸ್,ಲಯ ನನಗೆ ಸಿಕ್ಕಾಗೆಲ್ಲ ಹೇಳ್ತಾ ಇದ್ದ ಆತನ ನಿರ್ದೇಶನದ”ತಾಯ್ತ” ಚಿತ್ರದ ಬಗ್ಗೆ ಕೇಳಿದ್ದೆ, ಇವತ್ತು […]

ತಾಯ್ತ
ಟ್ರೈಲರ್ ಲಾಂಚ್

ತಾಯ್ತ,ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಬಾ ಮಾ ಹರೀಶ್,ಲಯ ಕೋಕಿಲ ನನಗೆ ಸುಮಾರು ಮೂವತ್ತೈದು ವರ್ಷಗಳಿಂದ ಸ್ನೇಹಿತ, ತುಂಬಾ ಒಳ್ಳೆಯ ನಟ ಮತ್ತು ಸಂಗೀತ ನಿರ್ದೇಶಕ,ನಿರಂತರ ಪ್ರಯತ್ನ ಮಾಡುವ ವ್ಯಕ್ತಿ ಲಯ ಕೋಕಿಲ, ಅವ್ರ ತಾಯ್ತ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದ
ಹಿರಿಯ ನಟ ಕರಿಸುಬ್ಬು ಮಾತನಾಡಿ,ಲಯ ಕೋಕಿಲ ಮತ್ತು ಸಾಧು ಕೋಕಿಲ ನನ್ನ ಜ್ಯೂನಿಯರ್ಸ್,ಲಯ ನನಗೆ ಸಿಕ್ಕಾಗೆಲ್ಲ ಹೇಳ್ತಾ ಇದ್ದ ಆತನ ನಿರ್ದೇಶನದ”ತಾಯ್ತ” ಚಿತ್ರದ ಬಗ್ಗೆ ಕೇಳಿದ್ದೆ, ಇವತ್ತು ಆತನ ಚಿತ್ರದ ಟ್ರೈಲರ್ ಲಾಂಚ್ ಆಗಿದೆ ಆತನಿಗೆ ಒಳ್ಳೇದೆ ಆಗತ್ತೆ ಎಂದರು.

ತಾಯ್ತ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ನಾಯಕಿ ಚೆಂದನವನದ ಸುಂದರಿ ಹರ್ಷಿಕಾ ಪೂಣಚ್ಚ ಮಾತನಾಡಿ,ನನಗೆ ಸಿನಿಮಾ ಮೇಲೆ ಅದೆಷ್ಟು ಪ್ರೀತಿ ಅಂದ್ರೆ,ಕೇವಲ ಹದಿನೈದು ವರ್ಷಕ್ಕೆ ನಾಯಕಿ ಆಗಿ ಎಂಟ್ರಿ ಆದವಳು ನಾನು, ಬಹಳಷ್ಟು ಚಿತ್ರಗಳನ್ನು ಮಾಡಿದ್ದೇನೆ,ಇವತ್ತಿನ ಪ್ರೆಸ್ ಮೀಟ್ ಸಲುವಾಗಿ ನಾನು ಊರಿಂದ ಬಂದೆ,
ಒಂದೊಳ್ಳೆ ಚಿತ್ರ ಎಲ್ಲ ವೀಕ್ಷಕರಿಗೆ ತಲುಪಲು ಕಲಾವಿದರಾದ ನಾವು, ನಮ್ಮ ಪ್ರಯತ್ನ ಮಾಡಬೇಕು,ನನಗೆ ಈಗ ಎರಡು ಮಕ್ಕಳು ಇಬ್ಬರನ್ನು ಆರೈಕೆ ಮಾಡುತ್ತಲೆ ನಟನೆಯ ಕೆಲಸ ಮತ್ತು ನಿರ್ಮಾಣದ ಕೆಲಸವನ್ನು ಸಹ ಮಾಡುತ್ತಿದ್ದೇನೆ,ಸಿನಿಮಾ ಅಂದ್ರೆ ನನಗೆ ಪಂಚಪ್ರಾಣ ಎಂದರು ನಟಿ ಹರ್ಷಿಕಾ ಪೂಣಚ್ಚ.

ನಾಯಕ ರಿಯಾನ್ ಮಾತನಾಡಿ,ಇದು ನನ್ನ ಮೊದಲ ಚಿತ್ರ,
ನಮ್ಮ ಅಣ್ಣಾ ಶಾಹಿದ್ ಬರೆದ ಕಥೆ,ಲಯ ಕೋಕಿಲ ಸರ್ ನಿರ್ದೇಶನ ತುಂಬಾ ಚೆನ್ನಾಗ್ ಮಾಡಿದ್ದಾರೆ.ನಮ್ಮ ತಂಡಕ್ಕೆ ನಿಮ್ಮ ಸಹಕಾರ ಇರ್ಲಿ ಎಂದು ವಿನಂತಿಸಿಕೊಂಡರು ನಂತರ ಮಾತನಾಡಿದ ನಾಯಕ ರಿಯಾನ್ ಅಣ್ಣಾ ನಿರ್ಮಾಪಕ ಶಾಹಿದ್,ನಾನೊಬ್ಬ ಕನ್ನಡ ಸಿನಿಮಾ ಅಭಿಮಾನಿ,ನನ್ನ ಸಹೋದರ ರಿಯಾನ್ ನಾಯಕ ನಟನಾಗಿ ದೊಡ್ಡ ಕಲಾವಿದ ಆಗಬೇಕು ಅನ್ನೋ ಆಸೆ ನನಗಿದೆ,ಹಣ ಹಾಕಿದ್ದೇನೆ ಹಾಗೆ ಒಂದು ಚಿಕ್ಕ ಪಾತ್ರವನ್ನು ಮಾಡಿದ್ದೇನೆ,ಚಿತ್ರ ನೋಡುವ ಪ್ರತಿ ಪ್ರೇಕ್ಷಕ ಖುಷಿ ಪಡ್ತಾನೆ ಎಂದರು

ನಿರ್ದೇಶಕ ಲಯ ಕೋಕಿಲ ಮಾತನಾಡಿ,
ಚಿಕ್ಕ ಬಜೆಟ್ ನಲ್ಲಿ ಶುರು ಮಾಡಿದ ಚಿತ್ರ,ಮಾಡ್ತಾ ಮಾಡ್ತಾ ದೊಡ್ಡ ಬಜೆಟ್ ಆಗಿ ಮೂವ್ ಆಯಿತು.ಇದೊಂದು ನಾರ್ಮಲ್ ಥ್ರಿಲ್ಲಿಂಗ್ ಕಥೆ ಅಂತು ಅಲ್ಲವೇ ಅಲ್ಲ, ಇದೊಂದು ಲವ್ ಸ್ಟೋರಿ,ರಿಯಾನ್ ತನ್ನ ಮೊದಲ ಪ್ರಯತ್ನದಲ್ಲಿ ತುಂಬಾ ಚೆನ್ನಾಗ್ ನಟಿಸಿದ್ದಾರೆ ಅವರ ಜತೆಗೆ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದು,ಮತ್ತೊಂದು ವಿಶೇಷ ಅಂದ್ರೆ “ಬಂಡಿ ಮಹಾಕಾಳಿ” ದೇವತೆಯ ಭಕ್ತ ನಾನು,ತುಂಬಾ ವರ್ಷಗಳಿಂದ ನಾನು ಆ ತಾಯಿಯ ಭಕ್ತ, ದೇವಸ್ಥಾನದ ಒಳಗೆ ಚಿತ್ರೀಕರಣ ಮಾಡೋದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದರು.

ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶನ ಮಾಡಿದ್ದು ಜೊತೆಗೆ ನಟನೆ ಕೂಡಾ ಮಾಡಿದ್ದು,ನನ್ನ ಸಹೋದರ ಸಾಧು ಕೋಕಿಲ ಸಖತ್ ಟ್ವಿಸ್ಟ್ ಅಗೋ ತರಹದ ಪಾತ್ರದಲ್ಲಿ ಮಾಡಿದ್ದಾನೆ,ಆತ ವೆರಿ ಬ್ರಿಲಿಯಂಟ್ ನಟ.ಇನ್ನೂ ಶೋಭರಾಜ್ ಬಗ್ಗೆ ಹೇಳೋ ಮಾತಿಲ್ಲ ,ರಿಯಾನ್ ತುಂಬಾ ಒಳ್ಳೆಯ ಹುಡ್ಗ ತುಂಬಾ ಎಫರ್ಟ್ ಹಾಕಿ ನಟಿಸಿದ್ದಾನೆ,ಸಪೋರ್ಟ್ ಮಾಡಿ ಅಂದ್ರು.

ಹಿರಿಯ ನಟಿ ಪುಷ್ಪ ಸ್ವಾಮಿ ಮಾತನಾಡಿ,ಕಳೆದ 38 ವರ್ಷಗಳಿಂದ ನಾನು ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ,ಇದೊಂದು ಒಳ್ಳೆಯ ಕಂಟೆಂಟ್ ಇರುವ ಚಿತ್ರ ಲಯ ಕೋಕಿಲ ಮೊದಲ ಬಾರಿ ನಿರ್ದೇಹನ ಮಾಡಿರುವ ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರ್ಲಿ ಅಂದ್ರು.

ವೇದಿಕೆಯ ಮೇಲಿದ್ದ ಸಂಪೂರ್ಣ ಚಿತ್ರತಂಡದ ಪರಿಚಯ ಮಾಡಿಕೊಟ್ಟ, ನಿರ್ದೇಶಕ ಲಯ ಕೋಕಿಲ,ಚಿತ್ರವನ್ನು ಇದೆ ಅಕ್ಟೋಬರ್ 30ಕ್ಕೆ ಬಿಡುಗಡೆ ಮಾಡುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಮಾಧ್ಯಮದವರಲ್ಲಿ ವಿನಂತಿಸಿಕೊಂಡರು

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.