ಶ್ರಾವಣ ಸಂಭ್ರಮದಲ್ಲಿ ಶ್ರೀ ಮಾತೆ ವರಮಹಾಲಕ್ಷ್ಮಿ

ಇಂದು ದೇಶಾದ್ಯಂತ ಜಗನ್ಮಾತೆ ಮಹಾಶಕ್ತಿ ವರಮಹಾಲಕ್ಷ್ಮಿಯ ವಿಶೇಷ ಪೂಜೆಯನ್ನ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಮಾಡಲಾಗುತ್ತದೆ,
ಅದರಲ್ಲೂ ಇಂದು ವಿಶೇಷವಾಗಿ ಕರ್ನಾಟಕದ ಪ್ರತಿಯೊಂದು ಮನೆಯಲ್ಲಿಯೂ ಮಹಾ ಸಂಭ್ರಮದ ವಾತಾವರಣ,

ಜ್ಞಾನದ ದೇವತೆ ಶ್ರೀಮಾತೆ ಶಾರದಾದೇವಿ,
ಸಕಲ ಸಂಪತ್ತುಗಳ ದೇವತೆ ಶ್ರೀಮಾತೆ ಮಹಾಲಕ್ಷ್ಮಿ ಮಾತೆ ಹಾಗೂ ಶಕ್ತಿ ದೇವತೆ ಶ್ರೀಮಾತೆ ದುರ್ಗಾದೇವಿ ಈ ಮೂರು ಅವತಾರಗಳ ತ್ರಿವಳಿ ಸಂಗಮವಾದಂತಹ ಶ್ರೀಮಾತೆ ಗಾಯತ್ರಿದೇವಿಯ ಕೃಪೆಗೆ ನಾವೆಲ್ಲರೂ ಪಾತ್ರರಾಗೋಣ,ಹಾಗೇ ಮಾತೆ ವರಮಹಾಲಕ್ಷ್ಮಿಯ ಪ್ರೀತಿಯ ವರಪ್ರಸಾದ ಸಕಲ ಭಕ್ತರಿಗೂ ಸಿಗಲಿ ಎಂದು ಜಗನ್ಮಾತೆಯಲ್ಲಿ ಕೇಳುತ್ತಾ,
ಎಲ್ಲರಿಗೂ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಸಿಹಿ ಶುಭಾಶಯಗಳು..

