Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಪಾಪವೂ ನಾನಲ್ಲ – ಪುಣ್ಯವು ನಾನಲ್ಲ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಪಾಪವೂ ನಾನಲ್ಲ – ಪುಣ್ಯವು ನಾನಲ್ಲ

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖ0ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಅಹಂ ಭೋಜನಂ ನೈವ ನ ಭೋಕ್ತಾಚಿದಾನಂದ ರೂಪ ಶಿವೋಹಂ ಶಿವೋಹಂ II ಪ II ಅರ್ಥ -ಪುಣ್ಯವು ನಾನಲ್ಲ,ಪಾಪವೂ ನಾನಲ್ಲ, ಸುಖ ನಾನಲ್ಲ, ದುಃಖಗಳು ನಾನಲ್ಲ, ಮಂತ್ರ ತೀರ್ಥ ವೇದ ಶಾಸ್ತ್ರ ಯಜವು ನಾನಲ್ಲ,ನಾನು ಕೊಡುತ್ತೇನೆ ಹೋಗ್ತಾ ಅಂದ್ರೆ ಅದನ್ನು ಅನುಭವಿಸುತ್ತೇನೆ ಅಂತ ಅನ್ನುವವನು ನಾನಲ್ಲ. ಅನುಭವವಲ್ಲ. ಅನುಭವಿಸಿದನನೂ ನಾನಲ್ಲ. ನಾನು ಯಾರು ಅಂದ್ರ ನಾನು ಕೇವಲ […]

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖ0
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞ
ಅಹಂ ಭೋಜನಂ ನೈವ ನ ಭೋಕ್ತಾ
ಚಿದಾನಂದ ರೂಪ ಶಿವೋಹಂ ಶಿವೋಹಂ II ಪ II

ಅರ್ಥ -ಪುಣ್ಯವು ನಾನಲ್ಲ,
ಪಾಪವೂ ನಾನಲ್ಲ, ಸುಖ ನಾನಲ್ಲ, ದುಃಖಗಳು ನಾನಲ್ಲ, ಮಂತ್ರ ತೀರ್ಥ ವೇದ ಶಾಸ್ತ್ರ ಯಜವು ನಾನಲ್ಲ,ನಾನು ಕೊಡುತ್ತೇನೆ ಹೋಗ್ತಾ ಅಂದ್ರೆ ಅದನ್ನು ಅನುಭವಿಸುತ್ತೇನೆ ಅಂತ ಅನ್ನುವವನು ನಾನಲ್ಲ. ಅನುಭವವಲ್ಲ. ಅನುಭವಿಸಿದನನೂ ನಾನಲ್ಲ. ನಾನು ಯಾರು ಅಂದ್ರ ನಾನು ಕೇವಲ (ಶಿವ) ಚಿದಾನಂದ ರೂಪನು.

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದ:
ಪಿತಾ ನೈವ ಮೇ ನೈವ ಮಾತಾ ಚ ಜನ್ಮ:
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ:
ಚಿದಾನಂದ ರೂಪ : ಶಿವೋಹಂ ಶಿವೋಹಂ || ಪ ||

ಅರ್ಥ – ಮೃತ್ಯುನೂ ನಾನಲ್ಲ.ಯಾಕಂದ್ರೆ ಮೃತ್ಯು ದೇಹಕ್ಕಾದ . ಅಲ್ಲಮಪ್ರಭುಗಳು ಹೇಳುತ್ತಾರೆ ತೋಟವ ಬಿತ್ತಿದರೆಮ್ಮವರು ಕಾಹಕೊಟ್ಟರು ಜವನವರು, ನಿತ್ಯವಲ್ಲದ ಸಂಸಾರ ವ್ರಥಾ ಹೋಯಿತಲ್ಲ ಗುಹೇಶ್ವರನಿಕ್ಕಿದ ಕಿಚ್ಚು ಹೊತ್ತಿಕ್ಕಲುಂಟು, ಅಟ್ಟುಣವಿಲ್ಲ. ಭಗವಂತ ವಿಶ್ವ ಅನ್ನುವಂತಹ ತೋಟ ಬಿತ್ತಿದ. ತಾನೇನು ಹೊರತಾಗಿಲ್ಲ. ಅದರಾಗ ಅದಾನ. ಬಿತ್ಯಾನ ಬಿತ್ತಿ ತಾ ಇದ್ದು ಇಲ್ಲದಂಗ ಅದಾನ. ಕಾಲನ ಸ್ಪರ್ಶ ಮಾಡಿದ. ಯಮನ ಸ್ಪರ್ಶ ಮಾಡಿದ. 84 ಲಕ್ಷ ಜೀವ ರಾಶಿಗಳಿಗೆ ಅವನ ಸ್ಪರ್ಶ ಆಯಿತು ಅದಕ್ಕ ನಾ
ಮೃತ್ಯುಶಂಕಾ ‘ ಶಂಖ ಅಂದ್ರೆ ಸಂಶಯ ಸಂಶಯವು ನಾನಲ್ಲ. ನ ಮೇ ಜಾತಿಭೇದ ಜಾತಿ ಮಾಡೋವ್ನು ನಾನಲ್ಲ. ನೈವ ಮೆ ನೈವ ಮಾತಾ, ನ ಜನ್ಮ : ತಂದೆನು ನಾನಲ್ಲ ತಾಯಿಯೂ ನಾನಲ್ಲ.

ತಾಯಿಯ ಜನ್ಮನೂ ನಾನಲ್ಲ ನ ಬಂಧುರ್ನ ಮಿತ್ರಂ ಗುರುನೈವ ಶಿಷ್ಯ: ಬಂದು ಬಳಗ ನಾನಲ್ಲ , ಗುರು ಶಿಷ್ಯನು ನಾನಲ್ಲ, ಎಲ್ಲಾ ಅಲ್ಲಿ ಹೋಗಿ ನಿಂತಾರಿ. ವ್ಯವಹಾರಿಕವಾಗಿ ಗುರು ಶಿಷ್ಯರು ಬೇಕು. ಎಲ್ಲಾ ಮರೆತು ಬೆರೆತು ಒಂದಾದಾಗ ಮರೆತಾಗ ಅಲ್ಲಿ ಗುರು ಅವಶ್ಯವಿಲ್ಲ. ಶಿಷ್ಯ ಅವಶ್ಯವಿಲ್ಲ. ನಾ ಗುರು ಅಂತ ಹೇಳಿಕೊಳ್ಳುವುದು ಬೇಡ. ಗುರುನು ನಾನಲ್ಲ, ಶಿಷ್ಯನು ನಾನಲ್ಲ ,ಇದು ಯಾವಾಗ ಅಂದ್ರೆ ಜ್ಞಾನ ಪ್ರತಿಪಾದನಾ ಸ್ಥಳಕ್ಕೆ ಹೋದಾಗ. ನಾನು ಯಾರು ?ಅಂದ್ರೆ ಕೇವಲ ಮಂಗಳಕರನಾದ ಚಿದಾನಂದ ರೂಪ (ಶಿವ).

ಅಹಂ ನಿರ್ವಿಕಲ್ಪಿ ನಿರಾಕಾರ ರೂಪಿ
ವಿಭುರ್ವ್ಯಾಪಿ ಸರ್ವತ್ರ ಸರ್ವೆಂದ್ರಿಯಾಣಾಂ
ನ ಚ ಸಂಗತ ನೈವ ಮುಕ್ತಿರ್ನ ಬಂಧ
ಚಿದಾನಂದ ರೂಪಹ ಶಿವೋಹಂ ಶಿವೋಹಂ || ಪ||

ಅರ್ಥ – ನಾನು ಹೇಗೆ ಅದಿನಿ ಅಂದ್ರೆ ನೀರ್ವಿಕಲ್ಪಿ ಅದೀನಿ.ನಾನು ಏನು ಕಲ್ಪಿಸಲಿಕ್ಕೆ ಬರದಂಗ ಅದೇನೆ ನಿರಾಕಾರ ರೂಪ ಅದೀನಿ ಆಕಾಶದ ತುಂಬಾ ವ್ಯಾಪಿಸಿನಿ. ಸರ್ವತ್ರ ಸರ್ವೇಂದ್ರಿಯಾನಿ ಇಂದ್ರಿಯಗಳನ್ನೊಳಗೊಂಡಂತಹ ಸಕಲ ಪ್ರಾಣಿಗಳಲ್ಲಿಯೂ ನಾನು ಅದಿನಿ ಯಾವ ಸಂಘದೊಳಗೂ ನಾನಿಲ್ಲ ಬಂದ ಇಲ್ಲ ಮುಕ್ತಿ ಇಲ್ಲ ನನಗೇನು ಇಲ್ಲ ನಾ ಯಾವಾಗಲೂ ಮುಕ್ತ ಇದೀನಿ ಯಾವಾಗಲೂ ನಾನು ಮುಕ್ತನಾಗಿರುವುದರಿಂದ ನನಗೆ ಮುಕ್ತ ಅಂತ ಹೇಳು ಅವಶ್ಯಕತೆಯೂ ಇಲ್ಲ ನಾನು ಮಂಗಳಕರನಾದ ಶಿವ ಅಂದ್ರೆ ಚಿದಾನಂದ ರೂಪನು.

ಮುಂದುವರಿಯುತ್ತದೆ …..

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.