Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸಧ್ಯದಲ್ಲೇ ಬರತ್ತೆ – ರಮೇಶ್ ಅರವಿಂದ್ “ದೈಜಿ”
- ಸಿನಿಮಾ

ಸಧ್ಯದಲ್ಲೇ ಬರತ್ತೆ – ರಮೇಶ್ ಅರವಿಂದ್ “ದೈಜಿ”

ರಮೇಶ್ ಅರವಿಂದ್ ಅವರ 106ನೇ ಚಿತ್ರ ‘ದೈಜಿ’ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ; ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟ ಶಿವಶ್ರೀ ಸ್ಕಂದ ಗಾಯನ, ಡಾಲಿ ಧನಂಜಯ್ ಸಾಹಿತ್ಯ, ಸೋನು ನಿಗಮ್ ಧ್ವನಿ ಚಿತ್ರದ ವಿಶೇಷ ಆಕರ್ಷಣೆ ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ‘ದೈಜಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತ ತಲುಪಿವೆ. ಸದ್ಯ ಸೌಂಡ್ ಮಿಕ್ಸಿಂಗ್ ಹಾಗೂ ವಿಎಫ್‌ಎಕ್ಸ್‌ನ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. […]

ರಮೇಶ್ ಅರವಿಂದ್ ಅವರ 106ನೇ ಚಿತ್ರ ‘ದೈಜಿ’ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ; ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟ

ಶಿವಶ್ರೀ ಸ್ಕಂದ ಗಾಯನ, ಡಾಲಿ ಧನಂಜಯ್ ಸಾಹಿತ್ಯ, ಸೋನು ನಿಗಮ್ ಧ್ವನಿ ಚಿತ್ರದ ವಿಶೇಷ ಆಕರ್ಷಣೆ

ರಮೇಶ್ ಅರವಿಂದ್ ಅಭಿನಯದ ಬಹುನಿರೀಕ್ಷಿತ ‘ದೈಜಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತ ತಲುಪಿವೆ. ಸದ್ಯ ಸೌಂಡ್ ಮಿಕ್ಸಿಂಗ್ ಹಾಗೂ ವಿಎಫ್‌ಎಕ್ಸ್‌ನ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ರಮೇಶ್ ಅರವಿಂದ್ ಅವರ ವೃತ್ತಿಜೀವನದ 106ನೇ ಚಿತ್ರ ಎಂಬುದು ‘ದೈಜಿ’ಯ ವಿಶೇಷತೆ.

ರವಿ ಕಶ್ಯಪ್ ಹಾಗೂ ಸುಧಾ ಕಶ್ಯಪ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ಮಾಪಕ ರವಿ ಕಶ್ಯಪ್ ಅವರು ತಿಳಿಸಿರುವ ನೈಜ ಘಟನೆಗಳನ್ನು ಆಧರಿಸಿ ಚಿತ್ರದ ಕಥೆ ಹಾಗೂ ಚಿತ್ರಕಥೆಯನ್ನು ಅಭಿಜಿತ್ ವೈ.ಆರ್. ಮತ್ತು ಆಕಾಶ್ ಶ್ರೀವತ್ಸ ರಚಿಸಿದ್ದಾರೆ. ನೈಜ ಘಟನೆಗಳ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ ‘ದೈಜಿ’ ವಿಭಿನ್ನ ನಿರೂಪಣೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದೆ.

ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಬಿ.ಎಂ. ಗಿರಿರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅಲೆಕ್ಸಾಂಡರ್ ಟೈಲರ್, ಸ್ಯಾಂಡಿ ಹಿಗಿನ್ಸ್ ಸೇರಿದಂತೆ ವಿದೇಶಿ ಕಲಾವಿದರೂ ಚಿತ್ರದ ಭಾಗವಾಗಿದ್ದಾರೆ.

ಮೂವರು ಸಂಗೀತ ನಿರ್ದೇಶಕರಿಂದ ವಿಭಿನ್ನ ಸಂಗೀತದ ಅನುಭವ

‘ದೈಜಿ’ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಸಂಗೀತವೂ ಒಂದು. ಜುಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಈ ಚಿತ್ರದ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದ ಕೆಲಸವೂ ಪೂರ್ಣಗೊಂಡಿದೆ. ಹಾರರ್ ಚಿತ್ರಗಳಿಗೆ ಹಾಲಿವುಡ್ ಶೈಲಿಯಲ್ಲಿ ನೀಡುವ ಸೌಂಡ್ ಟ್ರೀಟ್‌ಮೆಂಟ್ ಅನ್ನು ಕನ್ನಡದ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವನ್ನು ಜುಡಾ ಸ್ಯಾಂಡಿ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವಿಶಿಷ್ಟ ಧ್ವನಿ ಅನುಭವ ನೀಡುವುದು ಚಿತ್ರತಂಡದ ಉದ್ದೇಶವಾಗಿದೆ.

ಜುಡಾ ಸ್ಯಾಂಡಿ ಸಂಗೀತ ಸಂಯೋಜನೆಯಲ್ಲಿ ವಿಶೇಷ ಇಂಗ್ಲಿಷ್ ಹಾಡೊಂದನ್ನು ರೂಪಿಸಲಾಗಿದೆ. ನಿರ್ಮಾಪಕ ರವಿ ಕಶ್ಯಪ್ ಅವರ ಪುತ್ರಿ ವಿಭಾ ಕಶ್ಯಪ್ ಈ ಹಾಡಿನ ಮೂಲಕ ಮೊದಲ ಬಾರಿಗೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ವೆಸ್ಟರ್ನ್ ಕ್ಲಾಸಿಕಲ್ ಸಂಗೀತದಲ್ಲಿ ತರಬೇತಿ ಪಡೆದಿರುವ ವಿಭಾ ಅವರ ವಿಭಿನ್ನ ಧ್ವನಿಯನ್ನು ಗಮನದಲ್ಲಿಟ್ಟುಕೊಂಡು ಈ ಹಾಡನ್ನು ಸಿದ್ಧಪಡಿಸಲಾಗಿದೆ.

‘ಕಾಂತಾರ’ ಖ್ಯಾತಿಯ ಅಬಿ ವಿ. ಅವರು ಚಿತ್ರದ ದೈವಿಕ ಭಾವವನ್ನು ಬಿಂಬಿಸುವ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಬೆಂಗಳೂರಿನಲ್ಲಿ ಭಕ್ತಿಗೀತೆಗಳು ಹಾಗೂ ಡಿವೋಷನಲ್ ರ‌್ಯಾಪ್ ಮೂಲಕ ಗಮನ ಸೆಳೆದಿರುವ ಹರ್ಷ ಧ್ವನಿ ಕೂಡ ಚಿತ್ರದಲ್ಲಿ ವಿಶೇಷ ಹಾಡೊಂದನ್ನು ಹಾಡಿದ್ದಾರೆ.

ಇನ್ನೊಂದು ವಿಶೇಷವೆಂದರೆ, ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಅವರು ‘ದೈಜಿ’ ಚಿತ್ರಕ್ಕೆ ಶಾಸ್ತ್ರೀಯ ಶೈಲಿಯ ಹಾಡೊಂದನ್ನು ಹಾಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ ಈ ಹಾಡು ಚಿತ್ರಕ್ಕೆ ವಿಶೇಷ ಮೆರುಗು ನೀಡಲಿದೆ. ಚಿತ್ರದ ಕಥಾವಸ್ತು ಇಷ್ಟವಾದ ಕಾರಣ ಶಿವಶ್ರೀ ಸ್ಕಂದ ಅವರು ಈ ಹಾಡನ್ನು ಹಾಡಲು ಒಪ್ಪಿಕೊಂಡಿದ್ದಾರೆ ಎಂಬುದು ಗಮನಾರ್ಹ.

ಸೋನು ನಿಗಮ್–ರಮೇಶ್ ಅರವಿಂದ್ ಕಾಂಬಿನೇಷನ್ ಮತ್ತೆ

‘ದೈಜಿ’ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ನಟ ಡಾಲಿ ಧನಂಜಯ್ ಅವರ ಸಾಹಿತ್ಯ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳಿಗೆ ಧನಂಜಯ್ ಸಾಹಿತ್ಯ ರಚಿಸಿದ್ದಾರೆ. ಈ ಎರಡೂ ಹಾಡುಗಳು ಚಿತ್ರದ ಸಂಗೀತದ ವಿಶೇಷತೆ ಹೆಚ್ಚಿಸಲಿವೆ.

ಈ ಹಾಡುಗಳಲ್ಲಿ ಒಂದಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಧ್ವನಿಯಾಗಿದ್ದಾರೆ. ರಮೇಶ್ ಅರವಿಂದ್ ಅಭಿನಯದ ‘ಆಕ್ಸಿಡೆಂಟ್’ ಚಿತ್ರದ ಜನಪ್ರಿಯ ‘ಬಾ ಮಳೆಯೇ ಬಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಸೋನು ನಿಗಮ್–ರಮೇಶ್ ಅರವಿಂದ್ ಕಾಂಬಿನೇಷನ್ ಇದೀಗ ‘ದೈಜಿ’ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ. ಈ ಹಿಂದೆ ಜನಪ್ರಿಯವಾಗಿದ್ದ ಈ ಜೋಡಿಯ ಗಾಯನದ ಮೋಡಿ ಮತ್ತೆ ಮರುಕಳಿಸುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಸಚಿನ್ ಬಸ್ರೂರ್ ಅವರು ಸಂಗೀತ ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ, ತಮ್ಮದೇ ಧ್ವನಿಯಲ್ಲಿ ಮತ್ತೊಂದು ಹಾಡನ್ನು ಹಾಡಿದ್ದಾರೆ.

ತಾಂತ್ರಿಕವಾಗಿ ಶ್ರೀಮಂತವಾಗಿರುವ ‘ದೈಜಿ’

ಚಿತ್ರಕ್ಕೆ ಶ್ರೀಶ ಕುದುವಳಿ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಸುನಯನ ಅವರು ಕಾಸ್ಟಿಂಗ್ ನಿರ್ದೇಶಕರಾಗಿ ಹಾಗೂ ಲಕ್ಷ್ಮೀ ಕೃಷ್ಣ ಅವರು ವಸ್ತ್ರ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಚಿತ್ರದ ಅಂತಿಮ ಹಂತದ ಸೌಂಡ್ ಮಿಕ್ಸಿಂಗ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತಿವೆ. ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲು ಚಿತ್ರತಂಡ ಯೋಜಿಸಿದೆ. ವಿಭಿನ್ನ ಕಥಾವಸ್ತು, ಅಂತರಾಷ್ಟ್ರೀಯ ಕಲಾವಿದರ ಬಳಗ, ಖ್ಯಾತ ಗಾಯಕರ ಗಾಯನ ಹಾಗೂ ಹಾಲಿವುಡ್ ಶೈಲಿಯ ಧ್ವನಿ ವಿನ್ಯಾಸದೊಂದಿಗೆ ‘ದೈಜಿ’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ನೀಡುವ ನಿರೀಕ್ಷೆಯಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.