ಲಾರ್ಡ್ ಗಾಗಾ,ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಅನ್ನಿಸಿದ್ದು,ಇದೊಂದು ಅಲ್ಟಿಮೇಟ್ ಪ್ರಯತ್ನದ ಚಿತ್ರ ಅಂತಾ. ಪೋಸ್ಟರ್ ಗಳನ್ನು ನೋಡಿದಾಗ ಚಿತ್ರ ನೋಡುವ ಪ್ರೇಕ್ಷಕನಿಗೆ ಒಂದು ಹಂತದ ಕಥೆ ಹಿಂಟ್ ಸಿಗುತ್ತದೆ,ಮಾನವನ ಮೆದುಳು ಆ ಮೆದುಳಿನ ಮೇಲೆ,ಗಂಡಸಿನ ಒಂದು ಚಪ್ಪಲ್ ಇನ್ನೊಂದು ಕಡೆ ಹೆಂಗಸಿನ ಒಂದು ಚಪ್ಪಲ್ ಇರುವ ಇಮೇಜ್ ನೋಡಿದಾಗ, ಒಂದು ಹೊಸ ಫೀಲ್ ಆಗದೆ ಇರದು,ಇಂದು ಬಿಡುಗಡೆಯಾದ “ಲಾರ್ಡ್ ಗಾಗಾ” ಕೂಡಾ ಅದೇ ರೀತಿಯ ಮೈಂಡ್ ಸೆಟ್ ನಲ್ಲಿ ನೋಡುಗರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
ಚಿತ್ರದ ನಿರ್ದೇಶಕ ವೈ ಕೆ ಮಾತನಾಡಿ ಲಾರ್ಡ್ ಅಂದ್ರೆ ದೇವರು,ಗಾಗಾ ಅಂದ್ರೆ ಒಂಥರಾ ಬೈಗುಳ.,ನಾವು ಉಪ್ಪಿ ಮತ್ತು ರಿಷಭ್ ಫ್ಯಾನ್ಸ್.,ಸ್ಪೆಷಲೀ ಉಪ್ಪಿ ಬಗ್ಗೆ ಮಾತಾಡೋದು ಅಂದಾಗ,ನಾವೆಲ್ಲ ತಂತ್ರಜ್ಞರು ಹೆಮ್ಮೆ ಪಡ್ತೀವಿ,ಅಂಥದೊಂದು ಬೇರೆ ರೀತಿಯ ಡೈಮೆನ್ಶನ್ ಕೊಟ್ಟ ನಿರ್ದೇಶಕ ಉಪ್ಪಿ.
ಆಲೋಚನೆಗಳಿಗೆ ನಾವು,ಇಡುವ ಹೆಜ್ಜೆ ತುಂಬಾ ಮ್ಯಾಟರ್ ಆಗತ್ತೆ..ಸೈಕಾಲಾಗಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಶೈಲಿಯ ನಿರೂಪಣೆ ಇದರಲ್ಲಿ ಇರತ್ತೆ,ಹಾಗೆ ಇಲ್ಲಿಯ ತನಕ
ಮೂರು ಸಾವಿರ ಸಿನಿಮಾ ಪ್ರೇಕ್ಷಕರು ನಮ್ಮ ಕಂಟೆಂಟ್ ನೋಡಿ,ಇದೊಂದು ಜಗತ್ತಿನ ಬೆಸ್ಟ್ ಕಲ್ಟ್ ಚಿತ್ರವಾಗಲಿದೆ ಅಂತಾ ಹೇಳಿದ್ದು ನಮಗೆ ಹೆಮ್ಮೆ ಮತ್ತು ಭರವಸೆ ತಂದಿದೆ ಎಂದರು,
ಗೋಕರ್ಣದ ಸುತ್ತಮುತ್ತ ಶೂಟಿಂಗ್ ಮಾಡಲಾಗಿದ್ದು
,ಕಾಲಘಟ್ಟವನ್ನು ಮೀರಿ ಉಳಿಯುವ ಚಿತ್ರ ಇದಾಗತ್ತೆ.
ಇನ್ನು ಕಲಾವಿದರ ಆಯ್ಕೆ ಬಗ್ಗೆ ಮಾತನಾಡಿದ ನಿರ್ದೇಶಕ,
ಬರಹಗಾರ,ನಿರ್ದೇಶಕ,ಶೂನ್ಯ ನನ್ನೇ ನಾವು ಆಯ್ಕೆ ಮಾಡಿದ್ದು ಯಾಕೆಂದರೆ,ಆತ ಬಂಡಲ್ ಆಫ್ ನಾಲೆಜ್ ಇರೋ ವ್ಯಕ್ತಿ ಹೀಗಾಗಿ ಇದೊಂದು ಡಿಫರೆಂಟ್ ಕಥೆ..
ನಿರ್ಮಾಪಕ.ಮುಖಿ ಮಾತನಾಡಿ,ತುಂಬಾ ದೊಡ್ಡ ಬಜೆಟ್ ನಲ್ಲಿ ಸಿದ್ಧವಾದ ಸಿನ್ಮಾ ಇದು,ಕಥೆ ಮೇಲೆ ನಂಬಿಕೆ ಇದೆ,ಕರ್ನಾಟಕ ಮೀರಿ ಇಡೀ ದೇಶವೇ ಹೆಮ್ಮೆ ಪಡುವಂತಹ ಕಥೆ ಇದು, ನಮ್ಮ ಚಿತ್ರದ ಬಗ್ಗೆ ಇನ್ನೂ ಗಟ್ಟಿಯಾದ ಕಂಟೆಂಟ್, ಮುಂದಿನ ದಿನಗಳಲ್ಲಿ ಮಾಧ್ಯಮದವರಿಗೆ ಮತ್ತು ಪ್ರೇಕ್ಷಕರಿಗೆ ತೋರಿಸುತ್ತೇವೆ, ಎಲ್ಲರಿಂದ ಮೆಚ್ಚುಗೆ ಪಡುವಂತಹ ಚಿತ್ರ ನಮ್ಮದಾಗಲಿದೆ ಎಂಬ ಭರವಸೆ ನನಗಿದೆ ಎಂದರು.
ನಾಯಕನಟ ಶೂನ್ಯ ಮಾತನಾಡಿ, ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೂ ಸಹ ಸಿನಿಮಾ ನೋಡುವಪ್ರೇಕ್ಷಕರು ಯಾವತ್ತೂ ಕಮ್ಮಿ ಆಗಿಲ್ಲ. ಸಿನಿಮಾ ಮಾಡುವವರ ಸಂಖ್ಯೆ ಜಾಸ್ತಿ ಆಗಬೇಕು ಅದರಲ್ಲೂ ಒಳ್ಳೆ ನಿರ್ದೇಶಕರು ಗೆದ್ದು ಬರಬೇಕು ಎಂದರು.
ಲಾರ್ಡ್ ಗಾಗಾ ಚಿತ್ರಕ್ಕಾಗಿ ಒಟ್ಟು
ಎಂಬತ್ತು ದಿನ ಶೂಟಿಂಗ್ ಮಾಡಲಾಗಿದ್ದು, ನನ್ನ ಪಾತ್ರದ ಬಗ್ಗೆ ಏನೂ ಮಾತಾಡಲ್ಲ.ನಟನಾಗಿ ಕೆಲಸ ಮಾಡಬೇಕು ಅಂತಾ ಆಸೆ ಇತ್ತು,ನಲವತ್ತೈದು ಕಥೆಗಳನ್ನು ಕೇಳಿದ್ದೇನೆ,ಎರಡು ಓಕೇ ಆಗಿವೆ,ಅದರಲ್ಲಿ ಒಂದು ಚಿತ್ರ ಲಾರ್ಡ್ ಗಾಗಾ ಕಂಪ್ಲೀಟ್ ಆಗಿದೆ.

“ನಟಿ ದಿಶಾ ಮಾತನಾಡಿ”
ಇದಕ್ಕೂ ಮುಂಚೆ ನಾನು ಪೃಥ್ವಿ ಅಂಬರ ನಾಯಕತ್ವದ ಮತ್ಸ್ಯಗಂಧ ಚಿತ್ರದಲ್ಲಿ ನಟಿಸಿದ್ದೆ, ಇಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪಾತ್ರವನ್ನು ಮಾಡುತ್ತಿದ್ದೇನೆ, ತುಂಬಾ ಇಂಟೆನ್ಸ್ ಆದಂತಹ ತುಂಬಾ ಕುತೂಹಲ ಹುಟ್ಟಿಸುವ ಪಾತ್ರ ನನ್ನದಾಗಿದ್ದು, ಮುಂದಿನ ದಿನಗಳಲ್ಲಿ ನನ್ನ ಪಾತ್ರದ ಬಗ್ಗೆ ವಿವರಿಸುತ್ತೇನೆ ಎಂದು ಹೇಳಿದರು.
ರವೀ ಸಾಸನೂರ್
MasterNews365.Com

