ಮುಕಿ ರೆಗುನಾಥನ್ ಬ್ರಿಲಿಯಂಟ್ ಮೈಂಡ್
ನಾನು ಬರೆದ ಕಥೆ ಸಿನಿಮಾ ವಾಗಬೇಕು, ನನ್ನ ಸಿನಿಮಾದಲ್ಲಿ ಇಂತಹ ಎಲ್ಲ ಕಲಾವಿದರ ದೊಡ್ಡ ಬಳಗ ಇರಬೇಕು, ಇಂತಹ ಜಾಗಗಳಲ್ಲಿ ಚಿತ್ರಿಕರಣವಾಗಬೇಕು, ಈ ದಿನದಲ್ಲಿ ಚಿತ್ರಿಕರಣ ಮುಗಿಸಬೇಕು, ಇಂತಹ ದಿನಾಂಕದಂದು ನನ್ನ ಸಿನಿಮಾ ಬಿಡುಗಡೆಯಾಗಬೇಕು,ಇತ್ಯಾದಿ ಇತ್ಯಾದಿ ಕನಸುಗಳನ್ನು ಕಂಡಂತಹ ಅನೇಕರು ಬೆಂಗಳೂರು ಎಂಬ ಮಾಯಾನಗರದ ಗಾಂಧಿನಗರದ ಎಂಬ ಸಿನಿಮಾ ಜಾಗಕ್ಕೆ ಬರುತ್ತಾರೆ.
ಕೆಲವರ ಶ್ರಮ ಪರಿಶ್ರಮ ದೇವರ ಆಶೀರ್ವಾದದಿಂದ ಅವರ ಕಥೆಗೆ ತಕ್ಕ ನಿರ್ಮಾಪಕರು ಸಿಗುತ್ತಾರೆ ಸಿನಿಮಾ ಮಾಡುತ್ತಾರೆ, ಕೆಲವರು ಗೆಲ್ಲುತ್ತಾರೆ ಕೆಲವರು ಸುಮಾರಾಗಿ ಯಶಸ್ವಿಯಾಗುತ್ತಾರೆ ಕೆಲವರು ಸೋಲು ಕೂಡ ಅನುಭವಿಸುತ್ತಾರೆ,
ಆದರೆ ತಮ್ಮ ಗಮನಕ್ಕೆ ಬಿದ್ದ ಒಳ್ಳೆಯ ಕಥೆಯೊಂದು, ಸಿನಿಮಾವಾಗಿ ಮಾಡಲೇಬೇಕು ಎಂಬ ಪ್ರೀತಿ ಮತ್ತು ಹಟದೊಂದಿಗೆ ಹೆಜ್ಜೆ ಇಟ್ಟ ನಿರ್ಮಾಪಕ ಮುಕಿ ರೆಗುನಾಥನ್,
ಒಂದು ಸಿನಿಮಾ ಹುಟ್ಟುವ ಮೊದಲು ಅದು ನಿರ್ದೇಶಕನ ಕಲ್ಪನೆ, ಕಥೆಗಾರನ ಕಥೆ ಅಥವಾ ನಟನ ಕನಸಾಗಿರಬಹುದು. ಆದರೆ ಆ ಕಲ್ಪನೆಯನ್ನು ಪರದೆಯ ಮೇಲೆ ತರುವ ಜವಾಬ್ದಾರಿಯನ್ನು ಹೊರುವ ಪ್ರಮುಖ ವ್ಯಕ್ತಿ ನಿರ್ಮಾಪಕ,ನಿರ್ಮಾಪಕ ಇಲ್ಲದೆ ಹೋದರೆ ಕಥೆ ಕಥೆಯಾಗಿಯೇ ಉಳಿಯುತ್ತದೆ,
ಒಳ್ಳೆಯ ಕಥೆ ಸಿಕ್ಕಾಗ ಅದನ್ನು ಅಷ್ಟೇ ನೀಟ್ ಆಗಿ ಪ್ರಮೋಶನಲ್ ಪ್ಲಾನ್ ಮಾಡಿ ಪ್ರೇಕ್ಷಕರಿಗೆ ತಲುಪಿಸುವ ಮಹಾ ಕೆಲಸಕ್ಕೆ ಕೈ ಹಾಕಿರುವ ಮತ್ತು ಸಖತ್ ಎನರ್ಜಿಯ ಮಾತುಗಳಿಂದ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿರುವ ನಿರ್ಮಾಪಕ,ಲಾರ್ಡ್ ಗಾಗ ಮುಕಿ ರೆಗುನಾಥನ್,ಎನ್ನುವುದು ಚಿತ್ರತಂಡದ ಮಾತು.
ಪತ್ರಿಕಾಗೋಷ್ಠಿ ಶುರುವಾಗುವುದಕ್ಕೂ ಮುಂಚೆ, ತಮ್ಮ ಚಿತ್ರದ ಬಗ್ಗೆ ಚಿತ್ರತಂಡದ ಬಗ್ಗೆ ಪ್ರಾಪರ್ ಪ್ಲಾನ್ ನೊಂದಿಗೆ, ಎಲ್ಲರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿ ಒಂದು ಕಾರ್ಪೊರೇಟ್ ಶೈಲಿಯಲ್ಲಿ, ಪತ್ರಕರ್ತರನ್ನ ಹಾಗೂ ಪತ್ರಿಕಾಗೋಷ್ಠಿಯಲ್ಲಿದ್ದ ಎಲ್ಲಾ ಸಿನಿ ರಸಿಕರನ್ನು, ತನ್ನತ್ತ ಸೆಳೆದಿದ್ದು ನಿರ್ಮಾಪಕ ಮುಖ್ಯ ಎಂದರೆ ತಪ್ಪಿಲ್ಲ.
ಕಥೆ, ಕಲಾವಿದರು, ತಂತ್ರಜ್ಞರು, ಚಿತ್ರೀಕರಣ, ಸ್ಥಳ, ಉಪಕರಣಗಳು, ಪೋಸ್ಟ್ ಪ್ರೊಡಕ್ಷನ್, ಪ್ರಚಾರ ಸೇರಿದಂತೆ ಸಿನಿಮಾದ ಪ್ರತಿಯೊಂದು ಹಂತಕ್ಕೂ ಹಣದ ಅಗತ್ಯವಿರುತ್ತದೆ ಇದು ಸತ್ಯ ಆದರೆ ಹಣವೇ ಎಲ್ಲವೂ ಅಲ್ಲ, ನಾನು ಕೇಳಿದ ಕಥೆ ಮಾಡಿಕೊಂಡ ಕಲ್ಪನೆ ಈಗ ಸಂಪೂರ್ಣ ಚಿತ್ರವಾಗಿ ಕಣ್ಮುಂದೆ ಬಂದಿದೆ ಎಂಬ ಭರವಸೆ ನಿರ್ಮಾಪಕ ಮುಕಿ ರೆಗುನಾಥನ್, ಯವರಿಗಿದೆ.
ನಾವು ಮಾಡಿಕೊಂಡಿರುವ ಅತ್ಯುತ್ತಮವಾದ ಪ್ರಾಡಕ್ಟ್, ಸಿನಿಮಾ ಉತ್ಸಾಹಿಗಳಿಗೆ ತಲುಪಬೇಕು ಎಂದರೆ ಅದಕ್ಕೆ ಅದರದೇ ಆದ ಲೆಕ್ಕಾಚಾರ ಇರುತ್ತದೆ,ನಾನು ಬಹಳಷ್ಟು ವರ್ಷಗಳಿಂದ ಸಿನಿಮಾ ಉದ್ಯಮವನ್ನು ನೋಡಿದ್ದೇನೆ, ಕನ್ನಡ ಚಲನಚಿತ್ರರಂಗದ ಅನೇಕ ನಟರು ನನ್ನ ಆತ್ಮೀಯ ಸ್ನೇಹಿತರಾಗಿದ್ದಾರೆ, ಮಾಡಿದರೆ ಒಂದೊಳ್ಳೆಯ ಸಿನಿಮ ಮಾಡಬೇಕು ಎನ್ನುವ ನನ್ನ ಕನಸು ಲಾರ್ಡ್ ಗಾಗ ಮೂಲಕ ನೆರವೇರಿದೆ ಎಂದರು ನಿರ್ಮಾಪಕ ಮುಕಿ ರೆಗುನಾಥನ್,

ಲಾರ್ಡ್ ಗಾಗ ಚಿತ್ರಕ್ಕೆ ಸಂಬಂಧಪಟ್ಟ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾದ ನಂತರ ಅದರ ಬಗ್ಗೆ ಬಹಳ ದೊಡ್ಡ ಚರ್ಚೆ ಶುರುವಾಗಿದೆ,ತುಂಬಾ ಗಂಭೀರವಾದಂತಹ ಅಷ್ಟೇ ಇಂಟೆನ್ಸ್ ಆದಂತಹ ಕಥೆಯೊಂದನ್ನು, ಸಿನಿಮಾ ವಾಗುವಲ್ಲಿ , ನಿರ್ದೇಶಕ ವೈಕೆ ಮತ್ತು ನಾಯಕ ನಟ ಶೂನ್ಯ ರವರ ಜೊತೆಗೆ ಗಟ್ಟಿಯಾಗಿ ನಿಂತಿರುವ ನಿರ್ಮಾಪಕ ಮುಕಿ ರೆಗುನಾಥನ್,
ಮುಂದಿನ ದಿನಗಳಲ್ಲಿ ಚಿತ್ರದ ಕುರಿತ ಮತ್ತಷ್ಟು ಗಟ್ಟಿ ಕಂಟೆಂಟ್ ನ್ನ ತೋರಿಸುತ್ತೇವೆ ನಿಮ್ಮ ಸಹಕಾರವಿರಲಿ ಎಂದು ಮಾಧ್ಯಮದವರಲ್ಲಿ ಕೇಳಿಕೊಂಡರು
ರವೀ ಸಾಸನೂರ್
MasterNews365.Com

