ಮಾಫಿಯಾ ಸುತ್ತ ಕಲುಷ..
ಪುನೀತ್ ರಾಜಕುಮಾರ್,ದೈಹಿಕವಾಗಿ ನಮ್ಮೆಲ್ಲರನ್ನು ಆಗಲಿದ್ದರು, ಅವರ ಮೇಲಿನ ಪ್ರೀತಿ ಅಭಿಮಾನ ಗೌರವ ಯಾವತ್ತೂ ಕಮ್ಮಿ ಆಗುವುದಿಲ್ಲ, ಕನ್ನಡದಲ್ಲಿ ಬರುವ ಬಹುತೇಕ ಚಲನಚಿತ್ರಗಳ ಮೊದಲ ಪ್ರೇಮ್ ನಲ್ಲಿಯೇ ಅಪ್ಪು ಅವರ ಮುದ್ದಾದ ನಗುವಿನ ಫೋಟೋ ಇದ್ದೇ ಇರುತ್ತದೆ ಹಾಗೂ ಕೆಲವು ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು, ನಮಸ್ಕರಿಸಿ ಕಾರ್ಯಕ್ರಮವನ್ನು ಮಾಡುವುದು ಇವತ್ತಿಗೂ ನಡೆಯುತ್ತಿದೆ ಮುಂದೆಯೂ ಕೂಡ ನಡೆಯುತ್ತದೆಅದು ಪುನೀತ್ ರಾಜಕುಮಾರ್ ಅವರಿಗೆ ಕೊಡುವ ಗೌರವ, ಇಂಥದ್ದೇ ಪ್ರಸಂಗ ಕಲುಷ ಚಿತ್ರತಂಡದ ಪತ್ರಿಕಾಗೋಷ್ಠಿಯ ಮುಂಚೆಯೂ ನಡೆಯಿತು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಗುಮುಖದ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ನಮಸ್ಕರಿಸುವ ಮೂಲಕ ಕಲುಷ ಚಿತ್ರದ ಪತ್ರಿಕಾಗೋಷ್ಠಿ ಶುರುವಾಯಿತು.
2010 ರಿಂದ 2013 ತನಕ ಐಟಿ ಯಲ್ಲಿ ಕೆಲಸ ಮಾಡ್ತಿದ್ದೆ.
ದರ್ಶನ್ ಅವ್ರ ರಾಬರ್ಟ್ ನಲ್ಲಿ ಕಲಾವಿದನಾಗಿ ಕೆಲಸ ಮಾಡಿದ್ದೆ,ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಬೇಕು ಎಂಬ ಹಂಬಲ ಆವತ್ತೇ ಇತ್ತು,ಆದರೆ ಸಮಯ ಕೂಡಿ ಬಂದಿರಲಿಲ್ಲ,ಈಗ ಎಲ್ಲವೂ ಸರಾಗವಾಗಿ ಆಗಿದೆ ಎಂದರು ನಟ ಯುವಾನ್ ಪ್ರತಾಪ್.
ಸಡನ್ ಆಗಿ ಕೆಲವು ಜನ ಮಿಸ್ ಆಗ್ತಾ ಇರ್ತಾರೆ,ಕಲುಷ ಒಂದು ಗಟ್ಟಿ ಕಂಟೆಂಟ್ ಹೊಂದಿರೋ ಕಥೆ,
ನನಗೆ ಗೊತ್ತಿರೋ ಪೊಲೀಸ್ ಇಲಾಖೆ ಜೊತೆಗೆ ಮಾತಾಡಿದ ನಂತರ,ಗೊತ್ತಾಗಿದ್ದು ಈ ತರಹ ಕಥೆ ನಡೆದಿರಬಹುದು ಅಥವಾ ಮುಂದೆ ನಡೆಯಬಹುದು.
ಇದೊಂದು ಮೆಡಿಕಲ್ ಮಾಫಿಯ ಮೇಲೆ ಆಧಾರಿತ ಕಥೆ,ಇದರಲ್ಲಿ ನಾನು ಸತ್ತು ಹೋಗಿರುವ ಬಾಡಿಯ ಪೋಸ್ಟ್ ಮಾರ್ಟಂ ಮಾಡುವ ವ್ಯಕ್ತಿ ಪಾತ್ರ ಮಾಡಿದ್ದೇನೆ,ಬೆಂಗಳೂರಿನ ಮಾರ್ಕೆಟ್ ಬಳಿಯಿರುವ ಆಸ್ಪತ್ರೆಗೆ ಹೋಗಿ,ಕೆಲವು ಸತ್ಯಾಂಶ ತಿಳಿದುಕೊಂಡು ಬಂದೇ ಎಂದು ತಮ್ಮ ಪರಿಚಯ ಹಾಗೂ ಪಾತ್ರದ ಮಾಡಿಕೊಂಡರು,ಚಿತ್ರದ ನಾಯಕ,ಯುವಾನ್ ಪ್ರತಾಪ್.
ನಾಯಕಿ ಮಾತನಾಡಿ.ಈಗಾಗಲೇ ನಾನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದೇನೆ,ಇದೊಂದು ಎಮೋಷನಲ್ ಡ್ರಾಮಾ,ಈಗಲೇ ನನ್ನ ಪಾತ್ರದ ಬಗ್ಗೆ ಬಿಟ್ಟು ಕೊಡುವುದಿಲ್ಲ ಎಂದರು.
ಕಲುಷ ಪತ್ರಿಕಾ ಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿದ್ದ ,
ಐಶ್ವರ್ಯ ನಾಗ್ ಮಾತನಾಡಿ,
ತುಂಬಾ ಒಳ್ಳೆಯ ಕಂಟೆಂಟ್ ಕಲುಷ,ಮೆಡಿಕಲ್ ಮಾಫಿಯ ಅನ್ನೋ ವಿಷ್ಯ ತುಂಬಾ ಗಂಭೀರವಾದ ಸಮಸ್ಯೆ ಆಗಿದ್ದು,ಇತ್ತೀಚಿಗೆ ಚಿಕ್ಕ ಆಸ್ಪತ್ರೆಗಳು ಹಾಗೂ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಇಂತಹ ಪ್ರಾಬ್ಲಂ ನಡೀತಾ ಇದೇ,ಕಲುಷ ಒಂದೊಳ್ಳೆ ಸಿನ್ಮಾ ಆಗಲಿದೆ ಎಂದು ಶುಭ ಹಾರೈಸಿದರು.ಸಧ್ಯದಲ್ಲೇ ತಾವು ನಟಿಸ್ತಾ ಇರುವ ಕೆಲವು ಕನ್ನಡ ಚಿತ್ರಗಳ ಕೆಲಸ ನಡೀತಾ ಇದೇ,ನಿಮಗೆ ಅಪ್ಡೇಟ್ ಕೊಡ್ತೀನಿ ಜೊತೆಗೆ ನನ್ನ ಅಭಿಮಾನಿಗಳಿಗೆ ನಾನು ಒಳ್ಳೆಯ ಚಿತ್ರಗಳನ್ನು ಮಾಡುವುದರ ಮೂಲಕ,ಅವರ ಪ್ರೀತಿಗೆ ಗೌರವ ಕೊಡುವ ಪ್ರಯತ್ನ ಮಾಡುತ್ತೇನೆ,ಎಂದು ಹೇಳಿದರು.
ಚಿತ್ರತಂಡಕ್ಕೆ ಶುಭ ಹಾರೈಸಿಲೂ ಬಂದಿದ್ದ ಹಿರಿಯ ಸ್ನೇಹಿತರಾದ ಜಾಧವ ಮಾತನಾಡಿ,ಇತ್ತೀಚಿಗೆ ಮೆಡಿಕಲ್ ಮಾಫಿಯ ಅನ್ನೋ ಪ್ರಾಬ್ಲಂ ತುಂಬಾ ಗಂಭೀರ ಸ್ವರೂಪ ತಾಳಿದ್ದು,ಇಂತಹ ಸಂದರ್ಭದಲ್ಲಿ ಕಲುಷ ಎಲ್ಲರ ಕುತೂಹಲದ ಚಿತ್ರವಾಗಲಿದೆ ಎಂದರು.

ಕನ್ನಡ ಚಿತ್ರಗಳ ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿದಂತೆ ಇನ್ನಿತರ ಉಪಯೋಗಕಾರಿ ಕೆಲಸಗಳು ಮಾಡ್ತಾ ಇರುವ,
ಓಟಿಟಿ ಮಾರ್ಕೆಟಿಂಗ್ ಕೋ ಆರ್ಡಿನೇಟರ್ ಅಶೋಕ್ ಮಾತನಾಡಿ,ಕಲುಷ ಒಳ್ಳೆಯ ಚಿತ್ರ,ಸಧ್ಯದಲ್ಲೇ ಅದರದು ಕೂಡಾ ಒಳ್ಳೆಯ ರೇಟ್ ನಲ್ಲಿಯೇ ಮಾಡಿಕೊಡುತ್ತೇವೆ, ಹಾಗೂ ಇತ್ತೀಚಿಗೆ ಪ್ರೇಮದ ಊರಲಿ ಚಿತ್ರ,ಹಿಟ್ ಆದನಂತರ ಮತ್ತೇ ಬಾಂಬೆಯಲ್ಲಿ ಕನ್ನಡ ಚಿತ್ರಗಳ ಮಾರ್ಕೆಟ್ ರೀ ಓಪನ್ ಆಗಿದೆ,ಇನ್ಮುಂದೆ ಪ್ರತಿ ತಿಂಗಳು ಮಿನಿಮಮ್ ಹದಿನೈದು ಚಿತ್ರಗಳು ಬೇಕು ಎಂಬ ಮಾತು ಕೇಳಿ ಬಂದಿದೆ,ಇದೊಂದು ಒಳ್ಳೆಯ ಬೆಳವಣಿಗೆ ಎಂದರು.
ಕಲುಷ ಚಿತ್ರದ ಕುರಿತಾಗಿ ಇನ್ನಷ್ಟು ಮಾಹಿತಿ ಮತ್ತೇ ನೀಡುತ್ತೇವೆ ಎಂದರು
ರವೀ ಸಾಸನೂರ್
MasterNews365.Com

