ಶಬರಿ
ಟ್ರೈಲರ್ ಲಾಂಚ್
ಒರಟ ಐ ಲವ್ ಯು ಖ್ಯಾತಿಯ ಒರಟ ಶ್ರೀ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಫ್ಯಾಮಿಲಿ ಡ್ರಾಮಾ ಕಥೆ ಶಬರಿ.
ಈಗಾಗಲೇ ಬಿಡುಗಡೆ ಯಾಗಿರುವ “ತಂದಾನೆ ತಾನೂ, ನಿನ್ನಾ ಹೆತ್ತವರು ಯಾರು” ಎಂಬ ಅದ್ಭುತ ಸಾಲುಗಳಿರುವ ಹಾಡು,ಎಮೋಷನಲಿ ತುಂಬಾ ದೊಡ್ಡ ಹಿಟ್ ಆಗಿದ್ದು,ಚಿತ್ರ ತಂಡಕ್ಕೆ ಶಕ್ತಿ ಬಂದಂತಾಗಿದೆ.
ಶಬರಿ ಟ್ರೈಲರ್ ನಲ್ಲಿ,ಅಪ್ಪ – ಅಮ್ಮ ನ ಎಮೋಷನ್ ಕಾಣ್ತಾ ಇದೆ,ಮಕ್ಕಳ ಜೊತೆಗಿನ ಬಾಂಧವ್ಯ,ಹಳ್ಳಿ ಪರಿಸರ,ಒಂದಷ್ಟು ರೌಡಿಸಂ ಕಂಟೆಂಟ್ ಜೊತೆಗೆ,ತುಂಬಾನೇ ಕಾಡುವ ಹಾಡುಗಳು ಚಿತ್ರದಲ್ಲಿ ಇವೆ ಎಂಬ,ಅಂಶ ಕಾಣುತ್ತಿದ್ದು,ಸಮರ್ಥ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಒರಟ ಶ್ರೀ ಮಾತನಾಡಿ,
ಚಿತ್ರಬ್ರಹ್ಮ ಎಸ್ ಆರ್ ಪುಟ್ಟಣ್ಣ ಕಣಗಾಲ್ ಸರ್, ಕೆ ವಿ ರಾಜು ಸರ್, ರವಿ ಶ್ರೀವತ್ಸ ರಂತಹ ದಿಗ್ಗಜರು, ನಮ್ಮಂತಹ ನಿರ್ದೇಶಕರಿಗೆ ದೊಡ್ಡ ಪ್ರೇರಣೆ.,ಲೆಜೆಂಡರಿ ನಿರ್ದೇಶಕರ ಹೆಜ್ಜೆ ಗುರುತುಗಳು,ಅವ್ರು ಮಾಡಿದ ಚಿತ್ರಗಳು,ಬಿಟ್ಟು ಹೋದ ಕ್ಲಾಸಿಕ್ ಚಿತ್ರಗಳು ನಮಗೆಲ್ಲ ದೊಡ್ಡ ಅಡಿಪಾಯ ಹಾಗೇ ಎಲ್ಲ ಚಿತ್ರಗಳನ್ನು ನೋಡಿ ಗೆಲ್ಲಿಸುವ ಅಭಿಮಾನಿಗಳು ನಮಗೆ ಅತ್ಯಂತ ಮುಖ್ಯ ಅನ್ನಿಸುತ್ತೆ.
ಒರಟ ಐ ಲವ್ ಯು ಚಿತ್ರ ಮಾಡಿದ್ದ ನಾನು, ಮತ್ತೇ ಒಂದೊಳ್ಳೆ ಕಥೆ ಮಾಡಬೇಕು ಅಂದಾಗ,ಶಬರಿ ಚಿತ್ರ ಮಾಡಿದ್ದರ ಬಗ್ಗೆ ಹೆಮ್ಮೆ ಪಡ್ತೀನಿ,ಇದೊಂದು ಅಪ್ಪ ಮಗಳ ಬಾಂಧವ್ಯದ ಕಥೆ ಎನ್ನಬಹುದು.
ಶಬರಿ ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದ ರವಿ ಶ್ರೀವತ್ಸ,
2000 ಇಸವಿಯಿಂದ ನಾನು ನೋಡ್ತಾ ಇದ್ದ ಕೆಲವು ಅದ್ಬುತ ಕಲಾವಿದರಲ್ಲಿ,ಇಂದು ತುಂಬಾ ಜನ ಕಾಣ್ತಾ ಇಲ್ಲ,ಆದ್ರೆ ಕೆಲವರು ಉಳಿದಿದ್ದಾರೆ, ಅದರಲ್ಲಿ ಬದ್ರಿ ಕೂಡಾ ಒಬ್ಬ.
ತುಂಬಾ ಶ್ರಮ ಜೀವಿ, ಸಿನಿಮಾಗಾಗಿ ಆತ ಪಟ್ಟ ಕಷ್ಟ ನಷ್ಟ ನೋವು ನಲಿವು ಎಲ್ಲವನ್ನೂ ನಾನು ಬಲ್ಲೆ, ಆತ ಶಬರಿ ಚಿತ್ರಕ್ಕೆ ಒಬ್ಬ ನಿರ್ಮಾಪಕ ಕೂಡಾ ಹೌದು,ಆತನಿಗೆ ಗೆಲುವು ಸಿಗತ್ತೆ ಎಂದರು.
ನಂತರ ಒರಟ ಪ್ರಶಾಂತ್,ಒರಟ ಶ್ರೀ ನಮ್ ನಿರ್ದೇಶಕ.ತುಂಬಾ ಸೆನ್ಸಿಬಲ್ ಆದಂತಹ ತಂತ್ರಜ್ಞ ಒಳ್ಳೆಯ ಕಥೆಯನ್ನು,ತುಂಬಾ ಅಟೆಂಟಿಕ್ ಆಗಿ ಚಿತ್ರ ಮಾಡುವುದರಲ್ಲಿ ಒರಟಶ್ರೀ ಸದಾ ಮುಂದೆ ಇರ್ತಾರೆ ಎಂದರು,ನಾವೆಲ್ಲರೂ ಒಂದೇ ಗ್ಯಾಂಗ್,ನಮ್ಮವರು ಏನೇ ಒಳ್ಳೆ ಪ್ರಯತ್ನ ಮಾಡಿದ್ರು ನಮಗ್ ಖುಷಿ,ಶಬರಿ ಜೊತೆಗೆ ನಾವು ಇರ್ತೀವಿ ಎಂದರು. ಇನ್ನು ಕಲಾವಿದರಾದ,ಕೋಟೆ ಪ್ರಭಾಕರ,ಪ್ರವೀಣ್ ಮಾತನಾಡಿ ಶಬರಿ ಕಂಟೆಂಟ್ ನಲ್ಲಿ ಬಹುಶಃ,ಲವ್,ಸೆಂಟಿಮೆಂಟ್, ಕುತೂಹಲ ಎಲ್ಲವೂ ಇದೆ,ಒರಟ ಶ್ರೀ ನಿರ್ದೇಶನ ಅಂದಾಗ ಖುಷಿ ಆಯ್ತು, ಎನ್ನುತ್ತ ನಿರ್ದೇಶಕರ ಶ್ರಮಕ್ಕೆ ಗೆಲುವು ಸಿಗಲಿ ಎಂದರು.
ಶಬರಿ ಚಿತ್ರದ ನಿರ್ಮಾಪಕ ರಮೇಶ್ ಮಾತನಾಡಿ.
ನನ್ನ ಮಗ ನಾಯಕ ನಟನಾಗಿ ನಟಿಸ್ತಾ ಇರುವ ಶಬರಿ ತುಂಬಾ ಚೆನ್ನಾಗ್ ಮೂಡಿ ಬಂದಿದೆ. ಸಮರ್ಥ,ತುಂಬಾ ಎಫರ್ಟ್ ಹಾಕಿದ್ದಾನೆ,ಅವನನ್ನು ಗೆಲ್ಲಿಸಿ ಎಂದು ವಿನಂತಿಸಿಕೊಂಡರು.
ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ನಾಯಕ ನಟನಾಗಿ ಪಾದಾರ್ಪಣೆ ಮಾಡಿರುವ,ಸಮರ್ಥ,ಎಂಟು ವರ್ಷದ ಶ್ರಮ,ಎಂಟು ವರ್ಷದ ಕನಸು,ಎಂಟು ವರ್ಷದ ಭಾವನೆ,ಈಗ ನನಸಾಗ್ತಾ ಇದೆ.
ಒಂದೊಳ್ಳೆ ಕಥೆ ಸಿನ್ಮಾ ಆಗಬೇಕು ಅಂದಾಗ ಅದಕ್ಕೆ ದೇವರ ಆಶೀರ್ವಾದ ಬೇಕು,ನಮಗೆ ಅದು ಸಿಕ್ಕಿದೆ,ಶಬರಿ ನೋಡುವ ಪ್ರೇಕ್ಷಕರು ಗ್ಯಾರಂಟಿ ಸಹ ಖುಷಿ ಪಡ್ತಾರೆ ಎಂಬ ಭರವಸೆ ವ್ಯಕ್ತ ಪಡಿಸಿದರು.
ನಾಯಕಿ ಕೃತಿಕಾ ಗೌಡ,ನಾನು ಮಾಡಿದ ಕಿರಾತಕಿ,ಕಿರುಚಿತ್ರ ನೋಡಿದ, ಶ್ರೀ ಸರ್,ನನಗೆ ಅವಕಾಶ ಕೊಟ್ಟರು.ಸ್ಮಾಲ್ ಪರದೆಯಿಂದ ದೊಡ್ಡ ಪರದೆಗೆ ಭಡ್ತಿ ಪಡೆದಿದ್ದೇನೆ,ಖುಷಿ ಆಗ್ತಿದೆ ಎಂದರು.
ಇನ್ನೊಬ್ಬ ನಿರ್ಮಾಪಕ ಮತ್ತು ಕಲಾವಿದ ಬದ್ರಿ ಮಾತನಾಡಿ,
ನಾನ್ಯಾಕೆ ಓಂಪ್ರಕಾಶ್ ರಾವ್ ಮತ್ತು ರವಿ ಶ್ರೀವತ್ಸ ರವರ ಕಾಲಿಗೆ ಬೀಳುತ್ತೇನೆ ಅಂದ್ರೆ,ಅವ್ರು ನನಗೆ ಕೆಲಸ ಕೊಟ್ಟ ನಿರ್ದೇಶಕರು,ಅನ್ನಕ್ಕೆ ದಾರಿ ಮಾಡಿಕೊಟ್ಟ
ಅನ್ನದಾತರು,ನೋಡಿದವರು ತಪ್ಪು ತಿಳಿಯಬೇಡಿ ಎನ್ನುವ ಮೂಲಕ,ತಮ್ಮ ಗುರುಭಕ್ತಿಯನ್ನು ತೋರಿಸಿದರು.ನಂತರ ಮಾತನಾಡಿದ ಬದ್ರಿ,
ನಾನೊಬ್ಬ ನಟನಾಗಿ ಸುಮಾರು ಮೂವತ್ತು ವರ್ಷಗಳಿಂದ ಕೆಲಸ ಮಾಡ್ತಾ ಇದ್ದೀನಿ, ಕನ್ನಡ,ಕರ್ನಾಟಕ,ಕನ್ನಡಿಗರ ಅನ್ನದ ಋಣ ನನ್ನ ಮೇಲಿದೆ,ಹೀಗಾಗಿ ಕನ್ನಡದಲ್ಲಿ ಒಂದೊಳ್ಳೆ ಚಿತ್ರವನ್ನು ಶಬರಿ ಮೂಲಕ ಮಾಡಿದ್ದೇನೆ.ಈ ಚಿತ್ರ ಗೆಲ್ಲುತ್ತದೆ ಎಂಬ ನಂಬಿಕೆ, ಮತ್ತೇ ಮತ್ತೇ ನಾನು ಕನ್ನಡ ಚಿತ್ರಗಳನ್ನು ಮಾಡುತ್ತೇನೆ ಎಂಬ ಆಶಯ ವ್ಯಕ್ತ ಪಡಿಸಿದರು.

ಬಾಲನಟಿ ಧಾನ್ವಿ,ಚಿತ್ರದಲ್ಲಿ,ನನ್ನ ಹೆಸರು ಶಬರಿ.ನಾನು ಸೀರಿಯಲ್ಸ್ ಮಾಡಿದ್ದೇನೆ,ಆದ್ರೆ ಈ ಶಬರಿ ತುಂಬ ಎಮೋಷನಲ್ ಕಥೆ,ತುಂಬಾ ವರ್ಷ ಜನರ ಮನಸ್ಸಲ್ಲಿ ಉಳಿಯುವ ಕಥೆ ಎಂದರು.
ಶಬರಿ ಇದೇ ಅಕ್ಟೋಬರ್ 23ಕ್ಕೆ ಬಿಡುಗಡೆ ಆಗ್ತಾ ಇದೆ,ನೋಡಿ ಹರಸಿ ಎಂದು ನಿರ್ಮಾಪಕರು ಮತ್ತು ನಿರ್ದೇಶಕರು ಕೇಳಿಕೊಂಡರು
ರವೀ ಸಾಸನೂರ್
MasterNews365.Com

