Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಜೈಲರ್2” – ಚೇತನ್ ಡಿಸೋಜಾ
- ಸಿನಿಮಾ

“ಜೈಲರ್2” – ಚೇತನ್ ಡಿಸೋಜಾ

ಉಡುಪಿಯಿಂದ ರಜನಿಕಾಂತ್ ‘ಜೈಲರ್ 2’ವರೆಗೆ ಚೇತನ್ ಡಿಸೋಜಾ ಸಾಹಸ ನಿರ್ದೇಶನದ ಪಯಣ . ಬಹು ನಿರೀಕ್ಷಿತ “ಜೈಲರ್ 2” ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಈ ಕನ್ನಡದ ಪ್ರತಿಭೆಯದೆ ಸಾಹಸ ನಿರ್ದೇಶನ(ಸಿಂಗಲ್ ಕಾರ್ಡ್) ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅಕ್ಟೋಬರ್15 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ ಬರಲಿದ್ದು, ಚಿತ್ರಕ್ಕೆ ಚೇತನ್ ಡಿಸೋಜ ಅವರದ್ದು ಸಿಂಗಲ್ […]

ಉಡುಪಿಯಿಂದ ರಜನಿಕಾಂತ್ ‘ಜೈಲರ್ 2’ವರೆಗೆ ಚೇತನ್ ಡಿಸೋಜಾ ಸಾಹಸ ನಿರ್ದೇಶನದ ಪಯಣ .

ಬಹು ನಿರೀಕ್ಷಿತ “ಜೈಲರ್ 2” ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಈ ಕನ್ನಡದ ಪ್ರತಿಭೆಯದೆ ಸಾಹಸ ನಿರ್ದೇಶನ(ಸಿಂಗಲ್ ಕಾರ್ಡ್)

ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅಕ್ಟೋಬರ್15 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ ಬರಲಿದ್ದು, ಚಿತ್ರಕ್ಕೆ ಚೇತನ್ ಡಿಸೋಜ ಅವರದ್ದು ಸಿಂಗಲ್ ಕಾರ್ಡ್ ಆಕ್ಷನ್ ಕ್ರೆಡಿಟ್. ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಚೇತನ್ ಅವರೆ ಸಾಹಸ ಸಂಯೋಜನೆ ಮಾಡಿದ್ದಾರೆ.

ಶಾಲಾ ದಿನಗಳಲ್ಲಿ ಕರಾಟೆ ಕಲಿಯಲು ಆರಂಭಿಸಿದ ಚೇತನ್, ನಂತರ ಜಿಮ್ನಾಸ್ಟಿಕ್ಸ್, ಕ್ಯಾಲಿಸ್ಥೆನಿಕ್ಸ್ ಸೇರಿದಂತೆ ವಿವಿಧ ಮೂವ್‌ಮೆಂಟ್ ಆರ್ಟ್ಸ್‌ಗಳಲ್ಲಿ ಪರಿಣತಿ ಪಡೆದರು. 12ನೇ ತರಗತಿಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಬಾರಿ ರಾಜ್ಯ ಮಟ್ಟದ ಗ್ರ್ಯಾಂಡ್ ಚಾಂಪಿಯನ್ ಆಗಿದ್ದಾರೆ.
‌‌
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಬಳಿಕ, 2007ರಲ್ಲಿ ಬೆಂಗಳೂರಿಗೆ ಬಂದು ಅಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದರು. ಉದ್ಯೋಗದ ಜೊತೆಗೆ ಜಿಮ್ನಾಸ್ಟಿಕ್ಸ್ ಅಭ್ಯಾಸವನ್ನು ಮುಂದುವರಿಸಿ ‘Wrong Move’ ಎಂಬ ಕಿರುಚಿತ್ರವನ್ನು ನಿರ್ಮಿಸಿದರು. ಈ ಕಿರುಚಿತ್ರ ನಿರ್ದೇಶಕ ಪವನ್ ಕುಮಾರ್ ಅವರ ಗಮನ ಸೆಳೆಯಿತು. ಬಳಿಕ ‘U Turn’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು.
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಹಕಾರದಿಂದ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದು ಸಾಹಸ ನಿರ್ದೇಶಕರಾಗಿ ಮುಂದುವರಿದರು. ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ಚೇತನ್ ಡಿಸೋಜ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. “ಭಘೀರ”, “UI”, “45”, “ಭೈರತಿ ರಣಗಲ್”, “ಮ್ಯಾಕ್ಸ್” ಚೇತನ್ ಡಿಸೋಜ ಸಾಹಸ ಸಂಯೋಜಿಸಿರುವ ಪ್ರಮುಖ ಕನ್ನಡ ಚಿತ್ರಗಳು.

‘Dhoomam’ ಚಿತ್ರದ ಸಂದರ್ಭದಲ್ಲಿ ನಟ ಫಹಾದ್ ಫಾಸಿಲ್ ಅವರ ಪರಿಚಯದ ಮೂಲಕ ‘Aavesham’ ಚಿತ್ರಕ್ಕೆ ಅವಕಾಶ ದೊರೆಯಿತು. 2024ರಲ್ಲಿ ಬಿಡುಗಡೆಯಾದ ‘Aavesham’ನ ಆಕ್ಷನ್ ದೃಶ್ಯಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದವು. ಇದೇ ಕೆಲಸ ‘Jailer 2’ ತಂಡದ ಗಮನ ಸೆಳೆಯಲು ಕಾರಣವಾಯಿತು.
‘Jailer 2’ಗಾಗಿ ಮೊದಲಿಗೆ 2025ರ ಜನವರಿಯಲ್ಲಿ ಬಿಡುಗಡೆಯಾದ ಮೊದಲ ಟೀಸರ್‌ ನ ಆಕ್ಷನ್ ವಿನ್ಯಾಸ ಮಾಡಿದ ಚೇತನ್ ಡಿಸೋಜ, ಬಳಿಕ ಇಡೀ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಜನಿಕಾಂತ್ ಅವರಂತಹ ದಿಗ್ಗಜ ನಟರೊಂದಿಗೆ ಕೆಲಸ ಮಾಡುವುದು ವಿಭಿನ್ನ ಅನುಭವ ಎಂದು ಚೇತನ್ ಡಿಸೋಜ ಹೇಳುತ್ತಾರೆ.

ಜೂನಿಯರ್ ಎನ್‌ಟಿಆರ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘Dragon’, ಪ್ರಭಾಸ್ ಅಭಿನಯದ ‘Fauzi’ ಹಾಗೂ ಸೂರ್ಯ ಅಭಿನಯದ ಜಿತು ಮಾಧವನ್ ನಿರ್ದೇಶನದ ‘Scene’ ಚೇತನ್ ಡಿಸೋಜ ಸಾಹಸ ನಿರ್ದೇಶನದ ಪ್ರಮುಖ ಚಿತ್ರಗಳು. ‘Scene’ ಚಿತ್ರಕ್ಕೂ ಚೇತನ್ ಅವರಿಗೆ ಸಿಂಗಲ್ ಕಾರ್ಡ್ ಆಕ್ಷನ್ ಕ್ರೆಡಿಟ್ ದೊರೆತಿದೆ.

ಚೇತನ್ ಅವರು CF Action Design ಸಂಸ್ಥೆಯ ಸ್ಥಾಪಕರಾಗಿದ್ದು, ಬೆಂಗಳೂರಿನ ಸ್ಟಂಟ್ ತರಬೇತಿ ಕೇಂದ್ರ Chaos Faktoryಯ ಸಹ-ಸ್ಥಾಪಕರಾಗಿದ್ದಾರೆ. ಫಹಾದ್ ಫಾಸಿಲ್, ಕಾರ್ತಿ, ವಿಜಯ್ ದೇವರಕೊಂಡ, ಶ್ರೀಮುರಳಿ ಹಾಗೂ ಯುವ ರಾಜ್‌ಕುಮಾರ್ ಸೇರಿದಂತೆ ಹಲವು ನಟರಿಗೆ ಅವರು ಆಕ್ಷನ್ ತರಬೇತಿ ನೀಡಿದ್ದಾರೆ.

22 ವರ್ಷಕ್ಕೂ ಹೆಚ್ಚು ಕಾಲ ಮಾರ್ಷಲ್ ಆರ್ಟ್ಸ್ ಮತ್ತು ಮೂವ್‌ಮೆಂಟ್ ಆರ್ಟ್ಸ್‌ನಲ್ಲಿ ಅನುಭವ ಹೊಂದಿರುವ ಚೇತನ್, ಕನ್ನಡ ಸೇರಿದಂತೆ ಏಳು ಭಾಷೆಗಳ ಚಿತ್ರರಂಗಗಳಲ್ಲಿ 68ಕ್ಕೂ ಹೆಚ್ಚು ಸ್ಟಂಟ್ ಕ್ರೆಡಿಟ್‌ಗಳನ್ನು ಹೊಂದಿದ್ದಾರೆ. ಸಾಫ್ಟ್‌ವೇರ್ ಉದ್ಯೋಗದಿಂದ ಚಿತ್ರರಂಗದ ಪ್ರಮುಖ ಸಾಹಸ ನಿರ್ದೇಶಕರಾಗಿರುವ ಅವರ ಪಯಣ, ಉಡುಪಿ ಮೂಲದ ಯುವ ಪ್ರತಿಭೆಯ ಯಶೋಗಾಥೆಯಾಗಿ ಗಮನ ಸೆಳೆದಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.