ಸರ್ಕಾರದ ಆಸ್ತಿ ನಮ್ಮ ಆಸ್ತಿ,ವಿಧಾನ ಸೌಧದಲ್ಲಿ ನನಗೂ ಪಾಲು ಬೇಕೇ ಬೇಕು..!!
ಕಾಮನ್ ಮ್ಯಾನ್ ಅಂದ್ರೆ ನೀವು ಹೇಳಿದಕ್ಕೆಲ್ಲ, ತಲೆ ಅಲ್ಲಾಡಿಸಿಕೊಂಡು ಅನ್ನಕ್ಕೆ ನಮ್ಮನ್ನೇನೋ ದಡ್ಡ ನನ್ ಮಕ್ಕಳು ಅನ್ಕೊಂಡಿದ್ದೀರಾ ??
ಕುಮಾರ್ ಕಂಸಾಳೆ ಎಂಬ ಹೆಸರಿನವನಾದ ನಾನು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತೇನೆ,
ಇಂತಹ ಪಕ್ಕಾ ಮಾಸ್ ಕಮರ್ಷಿಯಲ್ ಡೈಲಾಗ್ಸ್ ಗಳು ಆಂಗ್ರಿ ಯಂಗ್ ಮ್ಯಾನ್ ಗೌರಿಶಂಕರ್ ನಟಿಸುತ್ತಿರುವ ಕಾಮನ್ ಮ್ಯಾನ್ ಚಿತ್ರದ ಪ್ರಮುಖ ಸಂಭಾಷಣೆಗಳು, ಇದಕ್ಕೂ ಮೀರಿದ ಸಂಭಾಷಣೆಗಳು ಕಾಮನ್ ಮ್ಯಾನ್ ಟ್ರೈಲರ್ ನಲ್ಲಿ ನಿಮಗೆ ಕಾಣಸಿಗುತ್ತವೆ.
ನಾನು ಇಂಡಸ್ಟ್ರಿಗೆ ಬಂದಿದ್ದು ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ,2010 ಹತ್ತರಲ್ಲಿ ನನ್ನ ನಾಯಕತ್ವದ ಮೊದಲ ಚಿತ್ರ ಜೋಕಾಲಿ ಬಿಡುಗಡೆಯಾಗುತ್ತೆ, ನಂತರ ರಾಜಹಂಸ, ಕೆರೆಬೇಟೆ ಈಗ ಕಾಮನ್ ಮ್ಯಾನ್.
ನನ್ನ ಜೊತೆಗೆ ಕೇರಿಯರ್ ಶುರು ಮಾಡಿದಂತಹ ಬಹಳಷ್ಟು ಜನರಲ್ಲಿ ಕೆಲವರು ಸೂಪರ್ ಸ್ಟಾರ್ ಆಗಿದ್ದಾರೆ ಕೆಲವರು ರಿಟೈರ್ಮೆಂಟ್ ಹೊಂದಿದ್ದಾರೆ ಇನ್ನೂ ಕೆಲವರು ತಮ್ಮ ಹೋರಾಟ ಮಾಡುತ್ತಲೇ ಇದ್ದಾರೆ ನಾನು ಕೂಡ ಅದೇ ಟ್ರ್ಯಾಕ್ ನಲ್ಲಿ ಇದ್ದೀನಿ ಮುಂದೇನು ಇರ್ತೀನಿ, ಇಂತಹ ಭರವಸೆಯ ಮಾತುಗಳನ್ನು ಹೇಳಿದ್ದು ಕಾಮನ್ ಮ್ಯಾನ್ ಚಿತ್ರದ ನಾಯಕನಟ ಗೌರಿ ಶಂಕರ್.
ಕಾಮನ್ ಮ್ಯಾನ್ ಚಿತ್ರದ ಬಗ್ಗೆ ಈಗಾಗಲೇ ಬಹಳಷ್ಟು ಮಾತನಾಡಿದ್ದೇವೆ, ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಪ್ರತಿರುವಂತಹ ಕಾಮನ್ ಮ್ಯಾನ್ ಚಿತ್ರ ನೋಡಿದಾಗ ನೀವೆಲ್ಲ ಖುಷಿ ಪಡುತ್ತೀರಿ,106 ಚಿತ್ರಗಳ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ನಮ್ಮ ಚಿತ್ರಕ್ಕೆ ಅತಿ ದೊಡ್ಡ ಶಕ್ತಿ, ಅವರ ಎನರ್ಜಿ ಯೋಚನೆ ತಾಳ್ಮೆ ಸಣ್ಣವರಿಗೆ ಕೊಡುವ ಗೌರವ ಇದು ನನ್ನಂತಹ ಬಹಳ ಜನರಿಗೆ ಒಂದು ದೊಡ್ಡ ಪಾಠ, ನಾನು ಈ ಸಿನಿಮ ಉದ್ಯಮಕ್ಕೆ ಹಳಬ ಎಲ್ಲರಿಗೂ ನಾನ್ಯಾರು ಅಂತ ಗೊತ್ತು ನಿಮ್ಮಂತ ಹೊಸಬರು ನಿಮ್ಮಂತ ಪ್ರತಿಭೆಗಳು ಮುಂದೆ ಬರಬೇಕು ಎಂದು ನನ್ನನ್ನು ಸದಾ ಪುಶ್ ಮಾಡುತ್ತಲೇ ಇರುವ ಗುರು ಸಮಾನರಾದ ಓಂ ಸಾಯಿ ಪ್ರಕಾಶ್ ರವರಿಗೆ ಗೌರಿಶಂಕರ್ ಕೃತಜ್ಞತೆ ಸಲ್ಲಿಸಿದರು.
ಕಾಮನ್ ಮ್ಯಾನ್ ಚಿತ್ರದ ಟ್ರೈಲರ್ ಲಾಂಚ್ ಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಹಿರಿಯ ನಿರ್ದೇಶಕರಾದ ಬಿ ರಾಮಮೂರ್ತಿ ಮಾತನಾಡಿ,
ಟ್ರೈಲರ್ ನಲ್ಲಿ ತಾವು ಕಂಡಂತಹ ಮ್ಯೂಸಿಕ್ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸಂಗೀತ ನಿರ್ದೇಶಕ ವಿನಯ್ ಚಂದ್ರ ಮಾಡಿರುವ ಕೆಲಸದ ಬಗ್ಗೆ ಹೊಗಳಿ, ಚಿತ್ರಕ್ಕೆ ಶುಭ ಕೋರಿದರು.
ಕಾಮನ್ ಮ್ಯಾನ್ ಚಿತ್ರದ ಟ್ರೈಲರ್ ಲಾಂಚಲಿ ಬಂದಿದ್ದ ಮತ್ತೊಬ್ಬ ಅತಿಥಿ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್ ಮಾತನಾಡುತ್ತಾ, ಕಾಮನ್ ಮ್ಯಾನ್ ಚಿತ್ರಕ್ಕೆ ಸಂಗೀತ ಕೊಟ್ಟ ವಿನಯ್ ಚಂದ್ರನನ್ನ ನಾನು ತುಂಬಾ ಚಿಕ್ಕ ಹುಡುಗನಾಗಿದ್ದ ಸಮಯದಿಂದಲೂ ನೋಡಿದ್ದೇನೆ, ಅವರ ತಂದೆ ಮತ್ತು ನಾವು ಸಹೋದ್ಯೋಗಿಗಳು, ಇಲ್ಲಿ ಇರುವವರೆಲ್ಲ ನಮ್ಮವರೇ,ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವಂತೆ ಮೊಟ್ಟಮೊದಲ ಅವಕಾಶ ಕೊಟ್ಟಿದ್ದು ರಾಮಮೂರ್ತಿಯವರು ಆದರೆ ಅದು ಆಗಲಿಲ್ಲ ಎಂದು ಹಳೆಯ ನೆನಪು ನೆನಪಿಸಿಕೊಂಡು,
ಕಾಮನ್ ಮ್ಯಾನ್ ಚಿತ್ರದ ನಿರ್ಮಾಪಕ ನಿಜವಾಗಲೂ CM ಅಂದ್ರೆ ಚಿನ್ನದ ಮನುಷ್ಯ, ಇವರ 10 ಬೆರಳುಗಳಲ್ಲಿ ಚಿನ್ನದ ಉಂಗುರ ಇವೆ, ಚಿತ್ರ ಶುರು ಮಾಡಿ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ ಯಾವೊಂದು ಉಂಗುರವು ಸ್ಟಾರ್ ಬ್ಲಾಕ್ ನಲ್ಲಿ ಮಾಯವಾಗಿಲ್ಲ,ಇದು ತುಂಬಾ ಒಳ್ಳೆಯದು, ಎಂದು ತಮಾಷೆಯ ಜೋಕ್ ಮಾಡಿದರು.
ಕಾಮನ್ ಮ್ಯಾನ್ ಚಿತ್ರದಲ್ಲಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡದ ಲೆಜೆಂಡರಿ ನಟ ಸುಂದರ್ ಕೃಷ್ಣ ಅರಸ ರವರ ಮಗ ನಾಗೇಂದ್ರ ಅರಸ್ ಮಾತನಾಡಿ,ಜನಸಾಮಾನ್ಯನೊಬ್ಬ ಪ್ರಶ್ನೆಯನ್ನು ಎತ್ತಿದರೆ, ಪ್ರಶ್ನೆ ಎತ್ತುವ ಮನಸ್ಸು ಮಾಡಿದರೆ ಆತನಿಂದ ದೊಡ್ಡ ಕೆಲಸವಾಗುತ್ತದೆ ಎಂಬುದು, ಕಾಮನ್ ಮ್ಯಾನ್ ಚಿತ್ರ ಹೇಳುತ್ತದೆ ಎಂದರು..

ಇನ್ನು ಯಾರೆಲ್ಲಾ ಕಾಮನ್ ಮ್ಯಾನ್ ಚಿತ್ರದ ಟ್ರೈಲರ್ ನೋಡಿಲ್ಲವೋ,ಒಮ್ಮೆ ನೋಡಿ.
ಇದೇ ಸೆಪ್ಟೆಂಬರ್ 25ಕ್ಕೆ ರಾಜ್ಯಾದ್ಯಂತ ಬರ್ತಾ ಇದೆ ನಿಮ್ಮ ನಮ್ಮೆಲ್ಲರ ಒಳಗಿನ ಕಾಮನ್ ಮ್ಯಾನ್
ರವೀ ಸಾಸನೂರ್
MasterNews365. Com

