Tuesday, 22 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಚಂದ್ರಹಾಸ ಟ್ರೈಲರ್ ಲಾಂಚ್…!!
- ಸಿನಿಮಾ

ಚಂದ್ರಹಾಸ ಟ್ರೈಲರ್ ಲಾಂಚ್…!!

ಚಂದ್ರಹಾಸ ಚಿತ್ರದಕೇಳೇ ಮಂದಾರವೇ ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲತಿ ಸುಧೀರ್.ನಿಜ ಜೀವನದಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಕಾಣದ,ಅನಾಥನಾಗಿ ಬೆಳೆದು.ಒಬ್ಬ ಕಲಾವಿದನಾಗಿ ತನ್ನ ಭವಿಷ್ಯ ಕಟ್ಟಿಕೊಂಡ ಈತ,ತನ್ನ ವಿಭಿನ್ನ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದಾನೆ ಎಂದು ಹೊಗಳಿದರು. ಸಾಮಾನ್ಯವಾಗಿ ಯಾವುದೇ ಕಲಾವಿದರ ಹಾಡುಗಳಾಗಲಿ, ಟೀಸರ್ ಆಗಲಿ ಅಥವಾ ಟ್ರೈಲರ್ ಇತ್ಯಾದಿ ಏನೇ ಬಿಡುಗಡೆ ಮಾಡುವಾಗಲೂ ಆಯಾ ಮುಖ್ಯ ಅತಿಥಿಗಳು ಮತ್ತು ಸ್ಟಾರ್ ನಟರು ಅಥವಾ ಆಯಾ ಕಲಾವಿದರು ಆಯಾ ಕಂಟೆಂಟ್ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನದಿಂದ […]

ಚಂದ್ರಹಾಸ ಚಿತ್ರದ
ಕೇಳೇ ಮಂದಾರವೇ ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲತಿ ಸುಧೀರ್.ನಿಜ ಜೀವನದಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಕಾಣದ,ಅನಾಥನಾಗಿ ಬೆಳೆದು.ಒಬ್ಬ ಕಲಾವಿದನಾಗಿ ತನ್ನ ಭವಿಷ್ಯ ಕಟ್ಟಿಕೊಂಡ ಈತ,ತನ್ನ ವಿಭಿನ್ನ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದಾನೆ ಎಂದು ಹೊಗಳಿದರು.

ಸಾಮಾನ್ಯವಾಗಿ ಯಾವುದೇ ಕಲಾವಿದರ ಹಾಡುಗಳಾಗಲಿ, ಟೀಸರ್ ಆಗಲಿ ಅಥವಾ ಟ್ರೈಲರ್ ಇತ್ಯಾದಿ ಏನೇ ಬಿಡುಗಡೆ ಮಾಡುವಾಗಲೂ ಆಯಾ ಮುಖ್ಯ ಅತಿಥಿಗಳು ಮತ್ತು ಸ್ಟಾರ್ ನಟರು ಅಥವಾ ಆಯಾ ಕಲಾವಿದರು ಆಯಾ ಕಂಟೆಂಟ್ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನದಿಂದ ಮಾತಾಡಿ ಶುಭ ಹಾರೈಸುವ ಬಗ್ಗೆ ಎಲ್ಲರಿಗೂ ಗೊತ್ತು.ಆದರೆ ಈ ಹಾಡನ್ನು ರಿಲೀಸ್ ಮಾಡುವಾಗಲೇ ಮಾಲತಿ ಸುಧೀರ್ ಸ್ವಲ್ಪ ಎಮೋಷನಲ್ ಆಗಿದ್ರು.

ಒಳ್ಳೇ ಮನುಷ್ಯ ಅಂತಾನೆ ಫೇಮಸ್ ಆಗಿರುವ
ಹರೀಶ್ ಹಿರಿಯೂರು, ಮಾತನಾಡಿ,ನನ್ನಲ್ಲಿರುವ ನಟನನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ,ಪ್ರತಿಯೊಂದು ಫ್ರೇಮ್ ನಲ್ಲಿಯೂ ನಟಿಸಿದ ಪ್ರತಿಯೊಬ್ಬರು ಹೀರೋ ತರಹವೇ ನಟಿಸಿದ್ದಾರೆ, ಇದಕ್ಕಿಂತ ಮುಂಚೆ ನಾವು ಮಾಡಿದ್ದ “ಕುಂಟ ಕೋಣ ಮೂಕ ಜಾಣ” ಎನ್ನುವ ಚಿತ್ರ ಇನ್ನೂ ರಿಲೀಸ್ ಆಗಿಲ್ಲ ಆದರೆ ಈ ಚಿತ್ರ ಮಾತ್ರ ಬೇಗ ಶುರುವಾಗಿ ಬೇಗ ಮುಗಿತು,ಈಗಾಗಲೇ ತೆರೆ ಕಾಣೋದಕ್ಕೆ ಸಿದ್ಧವಾಗಿದೆ ಅನ್ನೋದು ನನಗೆ ಹೆಮ್ಮೆ ಅನ್ನಿಸ್ತು ಎಂದರು.

ಬಸನಗೌಡ ಪಾಟೀಲ್ ನಿರ್ಮಾಣದ,ಬಸಣ್ಣ ಕಮಟರ್ ಸಹ ನಿರ್ಮಾಣದ,ಆನಂದ್ ಎಸ್ ಕಳಕಮಂಡಿ ನಿರ್ದೇಶನದ ಚಿತ್ರ ಚಂದ್ರಹಾಸ ಚಿತ್ರದಲ್ಲಿನ.ಯಾಕಾರ್ ಹುಟ್ಟಿಧ್ಯೋ,ಯಾಕಾರ್ ಬದುಕಿಧ್ಯೋಅನ್ನೋ ವಿಶೇಷ ಹಾಡೊಂದನ್ನು ತೋರಿಸಿದರು ಈ ಹಾಡು ಸಿನಿಮಾದಲ್ಲಿ ಮಾತ್ರ ಇರತ್ತೆ,ಈ ಹಾಡು ಸ್ವತಃ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರೇ ಬರೆದಿದ್ದು ವಿಶೇಷ.

ಚಂದ್ರ ಅನ್ನೋದು ಒಬ್ಬ ಗೆಳೆಯ,ಹಾಸ ಅನ್ನೋದು ನಗು.
ಜೀವನದಲ್ಲಿ ಎಂಥವರ ಸಹವಾಸ ಮಾಡ್ಬೇಕು ಅನ್ನೋದು ಕಥೆಯ ಎಳೆ.ಚಂದ್ರಹಾಸ ಚಿತ್ರಕ್ಕಾಗಿ,ಎರಡು ಹಾಡುಗಳು ಯೋಗರಾಜ್ ಭಟ್ಟರು,ಒಂದು ವಾಸುಕಿ ವೈಭವ,ಇನ್ನೊಂದು ಪೂರ್ಣಚಂದ್ರ ತೇಜಸ್ವಿ ಯವರು ಬರೆದಿದ್ದಾರೆ ಎಂದು ನಿರ್ದೇಶಕರು ಮಾಹಿತಿ ಕೊಟ್ಟರು.

ನಿರ್ಮಾಪಕರು ಬಸವಂತಗೌಡ ಪಾಟೀಲ್ ಮಾತನಾಡಿ,ನಾನೊಬ್ಬ ರೈಟರ್ ಕೆಲವು ಕಥೆಗಳನ್ನು ಬರೆದಿದ್ದೇನೆ,ನಿರ್ದೇಶಕ ಆನಂದ್ ನನಗೆ ಆತ್ಮೀಯ ಗೆಳೆಯ,ಗೆಳೆಯನನ್ನು ನಿರ್ದೇಶಕನನ್ನಾಗಿ ಮಾಡುವ ಪ್ರಯತ್ನ, ಆತ ಮಾಡಿದ ಕಥೆ ಚೆನ್ನಾಗಿತ್ತು,ಇದಕ್ಕೆ ನನ್ನ ಇನ್ನೊಬ್ ಗೆಳೆಯ ಬಸಣ್ಣ ಕಮಟರ್ ಕೂಡಾ ಕೈ ಜೋಡಿಸಿದ್ದಾನೆ ಎಂದರು.

ನಾಯಕಿ ಛಾಯಶ್ರೀ ಮಾತನಾಡಿ,
ಮೈಸೂರು ನನ್ನ ಮೂಲ,ಮೈಸೂರಿನ ನಟನಾ ರಂಗ ಭೂಮಿಯಲ್ಲಿ ಅಭಿನಯ ಕಲಿತಿದ್ದೇನೆ,ಮಂಡ್ಯ ರಮೇಶ್ ನಮ್ಮ ಗುರುಗಳು,ಈಗಾಗಲೇ ಕೆಲವು ಸಿನಿಮಾಗಳನ್ನು ಮಾಡಿದ್ದೇನೆ,ಅದರಲ್ಲೂ ಚಂದ್ರಹಾಸ ಅನ್ನೋ ಚಿತ್ರ ನನಗೆ ಒಳ್ಳೆ ಪಾಠ ಕಲಿಸಿದೆ,ಇದರಲ್ಲಿ ಶ್ರೀದೇವಿ ಅನ್ನೋ ಪಾತ್ರ ,ತುಂಬಾ ಕ್ಲಾರಿಟಿ ಇಟ್ಕೊಂಡು ಮಾಡಿದ ಚಿತ್ರ, ಫ್ಯಾಮಿಲಿ ಆಡಿಯನ್ಸ್ ಗೆ ಕನೆಕ್ಟ್ ಆಗತ್ತೆ ಎಂದರು.

ಬಿಗ್ ಬಾಸ್ ನ ಮಾಜಿ ಸ್ಪರ್ಧಿ
ನವಾಜ್ ಮಾತನಾಡಿ,ಸಿನ್ಮಾ ಅನ್ನೋದು ಅಷ್ಟು ಈಜಿಯಲ್ಲ, ಆದ್ರೂ ಕಂಡ ಕನಸು ನನಸು ಮಾಡೋ ಪ್ರಯತ್ನ ಈ ಚಂದ್ರಹಾಸ ಎಂದು ಹೇಳಿ,ಯಥಾ ಪ್ರಕಾರ ತಮ್ಮದೇ ಸ್ಟೈಲ್ ನಲ್ಲಿ ಚಿತ್ರಕ್ಕೆ ಶುಭ ಕೋರಿದರು

ಚಂದ್ರಹಾಸ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ,
ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆ ಪೃಥ್ವಿ ಶ್ಯಾಮನೂರು, ಮತ್ತೊಬ್ಬ ಪ್ರತಿಭಾವಂತ ನಟ ಹುಲಿ ಕಾರ್ತಿಕ್ ಮತ್ತು ನಿರ್ಮಾಪಕರು ಸೇರಿ ಟ್ರೈಲರ್ ಲಾಂಚ್ ಮಾಡಿದರು..

ಟ್ರೈಲರ್ ನೋಡಿದಾಗ,ನನಗೆ ಅನ್ನಿಸಿದ್ದು,
ಇದೊಂದು ಫ್ಯಾಮಿಲಿ ಡ್ರಾಮಾ ಆಗಿದ್ದು,,ಹಣವಿಲ್ಲದ ಹಾಗೂ ಜೀವನವನ್ನು ತುಂಬಾ ಈಜಿಯಾಗಿ ತೆಗೆದುಕೊಂಡಿದ್ದ ಸೋಮಶೇಖರ್ ಅಲಿಯಾಸ್ ಸೋಮ,
ಮದುವೆಯಾಗದ ತನ್ನ ಮಗನನ್ನು ಮದ್ವೆ ಆಗಲು ಹೇಳುವ ಮದುವೇ ಅಮ್ಮ,ನಂತರ ಸೋಮನ ಹೆಂಡತಿಯಾಗಿ ಬಂದ ನಾಯಕಿ ಒಂದಷ್ಟು ಗೊಂದಲು ಫೈನಲಿ ಸೋಮನ ಜೀವನ ಹೇಗಿರತ್ತೆ ಮತ್ತಷ್ಟು ಮುಂತಾದ ವಿಚಾರಗಳ ಮೇಲೆ ಬದುಕು ಚೆಲ್ಲುವ ಕಥೆ ಅನ್ನಿಸುತ್ತೆ.

ಹರೀಶ್ ಹಿರಿಯೂರು ಉತ್ತರ ಕರ್ನಾಟಕ ರಂಗಭೂಮಿ..
ನಾವು ಮಲೆನಾಡು ಕಡೆಯವರು.
ಯಾರ ಸಹವಾಸವೂ ಮಾಡಿ ಯಾರು ಹಾಳಾಗಲ್ಲ,ನಮಗೆ ನಮ್ಮ ಕರ್ತವ್ಯದ ಪ್ರಜ್ಞೆ ಇರಬೇಕು ಹಾಗೂ ಜವಾಬ್ದಾರಿ ಏನೂಂತ ಗೊತ್ತಿರಬೇಕು,ಎಂದು ಹಾರೈಸಿದ್ದು ಹುಲಿ ಕಾರ್ತಿಕ್.

ಪ್ರತಿಭಾವಂತ ಉದಯೋನ್ಮುಖ ನಟ,ಪೃಥ್ವಿ ಶ್ಯಾಮನೂರು ಹೇಳಿದ್ದು,ಹಿರಿಯ ಅಣ್ಣನಂತಿರುವ
ಹರೀಶ್ ಹಿರಿಯೂರು,ಒಂತರ ಹೀರೋ ಟು ಹೀರೋ,ನಮ್ಮ ಉಡಾಳ ಸಿನ್ಮಾ ಒಳಗ ಹರೀಶ್ ಅಣ್ಣಾ ವಿಲನ್ ಪಾತ್ರ ಮಾಡಿದ್ರು,ಒಬ್ಬ ಕಲಾವಿದ ತನ್ನ ಶ್ರಮವನ್ನು ಹಾಕಿ ಬೆಳೆದು ನಿಂತಾಗ ಅಂತವರು ಮಾತ್ರ ತುಂಬಾ ವರ್ಷ ಇರ್ತಾರೆ ಎಂದರು

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.