Tuesday, 22 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಳಗಾನೂರಕ್ಕೆ ಹೋದಾಗಿನ ಘಟನೆ…..!!
- ಸಿನಿಮಾ

ಬಳಗಾನೂರಕ್ಕೆ ಹೋದಾಗಿನ ಘಟನೆ…..!!

“ಒಮ್ಮೆ ಬಳಗ ನೂರಕ್ಕೆ ಹೋಗಿದ್ದೇವು.ಅಲ್ಲಿ ಬಿಡ್ದೆ ಮೂರು ವರ್ಷ ಭಜನಾ ಮಾಡಿಸಿದರು 3 ವರ್ಷ ನಮ್ಮ ಕೈ ಕೊಟ್ರು ಹಿಂಗಾಗಿ ನಾವು ಮೂರು ವರ್ಷ ಹೋದಿವಿ.ಅಲ್ಲಿ ಅನುಭವಿಗಳು ಅದರಲ್ಲಿ ನಾವು ನಿಜಗುಣರು ಪದ ಹಾಡಿ ಬಿಡಿಸಿ ಹೇಳುತ್ತಿದ್ದೆವು ಅದನ್ನು ಕೇಳಿ ಊರ್ ಮಂದಿಗೆ ಬಹಳ ಆನಂದ ಆಗ್ತಿತ್ತು ಆಗುತ್ತಿತ್ತು. ” ” ಮರು ವರ್ಷ ನನಗೆ ಆರಾಮಿದ್ದಿಲ್ರಿ ಅವಾಗ ನಾನು ಬಾ ಊರಿಗೆ ಅವರು ಕಾಯಿ ಕೊಡಕ್ಕ ನಮ್ಮ ಹಳ್ಳಿ ಹಳ್ಳೂರಿಗೆ ಬಂದಾರ ನಮ್ಮ ಹಳ್ಳೂರಾಗ ದಮಡಿ […]

        "ಒಮ್ಮೆ ಬಳಗ ನೂರಕ್ಕೆ ಹೋಗಿದ್ದೇವು.ಅಲ್ಲಿ ಬಿಡ್ದೆ ಮೂರು ವರ್ಷ ಭಜನಾ ಮಾಡಿಸಿದರು 3 ವರ್ಷ ನಮ್ಮ ಕೈ ಕೊಟ್ರು ಹಿಂಗಾಗಿ ನಾವು ಮೂರು ವರ್ಷ ಹೋದಿವಿ.ಅಲ್ಲಿ ಅನುಭವಿಗಳು ಅದರಲ್ಲಿ ನಾವು ನಿಜಗುಣರು ಪದ ಹಾಡಿ ಬಿಡಿಸಿ ಹೇಳುತ್ತಿದ್ದೆವು ಅದನ್ನು ಕೇಳಿ ಊರ್ ಮಂದಿಗೆ ಬಹಳ ಆನಂದ ಆಗ್ತಿತ್ತು ಆಗುತ್ತಿತ್ತು. "

      " ಮರು ವರ್ಷ ನನಗೆ ಆರಾಮಿದ್ದಿಲ್ರಿ ಅವಾಗ ನಾನು ಬಾ ಊರಿಗೆ ಅವರು ಕಾಯಿ ಕೊಡಕ್ಕ ನಮ್ಮ ಹಳ್ಳಿ ಹಳ್ಳೂರಿಗೆ ಬಂದಾರ ನಮ್ಮ ಹಳ್ಳೂರಾಗ ದಮಡಿ ಬಾರಿ ಸೋಮ ದಮಡಿ ಬಾರಿಸಾಮ ತಳವಾರ ಹುಸೇನಪ್ಪ ಅಂತ ಅದನ ಅವನಿಗೆ ಭೇಟಿಯಾಗಿ ನನ್ನ ಕೇಳಾರ್ರಿ. "

       " ಹುಸನಪ್ಪ ಅಣ್ಣ ಬಸವಂತ ಎಲ್ಲಿ ಅದಾನ ನಾವಿಬ್ಬರ ಕಾಯಿ ಕೊಡಕ ಬಂದಿವಿ ಅಂದಾನ • "

        "ಊರಾಗ ಬಸ್ವಂತಿಲ್ಲ (ಬಸಪ್ಪ )ಹಿಂಗಾಗಿ ನಾವು ಕಾಯಿ ಹಿಡಿಯುವುದಿಲ್ಲ ಅಂದಾನ • ಅದಕ್ಕೆ ಕಾಯಿ ಕೊಡಕ್ಕ ಬಂದವರು ಏನು ಅಂದಾರ ಅಂದ್ರೆ , ಇಲ್ಲ ನಾ  ಬಸಪ್ಪ ಮಾವಗ ಕರ್ಕೊಂಡು ಬರ್ತೀನಿ ನಮ್ಮೂರು ಬಾವೂರ್ನ್ಯಾಗ ಅದಾನ ಅಂತ ಹೇಳ್ಯಾನ್ರಿ.
  
     "ಅಂದ್ರ ನೀ ಔಾಂಗ ಕರಕೊಂಡ ಬರ್ತಿನಿ ಅಂದ್ರ ಕಾಯಿ ಹಿಡಿತೀನಿ ಇಲ್ಲಂದ್ರ ನಾವು ಕಾಯಿ ಹಿಡಿಯಲ್ಲಂತ ಹುಸೇನಪ್ಪ ಅಂದಾನ. "

       "ಇಲ್ಲ ಔಂಗ ಕರ್ಕೊಂಡು ಬರೂ ಜವಾಬ್ದಾರಿ ನಂದು ಅಂತ ಹೇಳಿ ಒಪ್ಪಿಸಿ ಕಾಯಿ ತಳವಾರ ಹುಸೇನಪ್ಸ ಕೈಯಾಗ ಕೊಟ್ಟ ಹೋಗ್ಯಾನ್ರಿ . ಈ ಸುದ್ದಿ ಬಂದ ನನಗ ಹೇಳಿದ್ರು. ಅದಕ್ಕೆ ನಾ ಅಂದೆ-  "

       ಇಲ್ಲಪ್ಪ ನನಗೆ ಆರಾಮ ತಪ್ಪೇದ. ನನಗೂ ನಡೆಯೋಕೆ ಆಗೋದಿಲ್ಲದು. ಅದಾರ ಅವುರ ಕಡೆಯಿಂದ ಹಾಡಿಸಿ ಬಿಡ್ರಿ ಅಂತ ಹೇಳಿ.ಅಲ್ಲಿ ಬಜನಾಪದ ಹಾಡೋರು ಅದರ ಅವರ ಕಡೆಯಿಂದ ಹಾಡಿಸ್ರಿ ಅಂತ ಹೇಳಿ ನಾನು ಹೋಗೋದು ಬಿಟ್ನ್ರಿ . ಆಮೇಲೆ ಅವರೆಲ್ಲ ಹೋದರು. 

    ಅಲ್ಲಿ ಏನಾಗಿದೆ ಅಂದ್ರೆ 8-10 ಭಜನಾ ಮೇಳ ನಾ ಮೇಲು ನೀ ಮೇಲು ಅನ್ನಾವ್ರು ಬಂದಾರ. ಆ ಜಾತ್ರೆಗೆ ಊರ ಮಂದಿ ಪಟ್ಟಿ ಕೊಡುತ್ತದೆ.ಹಿಂಗಾಗಿ ಜಾತ್ರೆ ಭೇಫಾಮ್(ಅದ್ದೂರಿ) ಮಾಡ್ತಾರ ರಿ . ಆ ಮ್ಯಾಳ ನೋಡಿದ ಮಂದಿ ಏನಂದ್ರು ಅಂದ್ರ, ನೀವು ಯಾರಿಗೆ ಕರೆಸಿದರು ಹಳ್ಳೂರು ಬಸಪ್ಪ ಶರಣಾಗ ಬಿಡಬಾರದಿತ್ತು ಅಂದಾರ. ಅವರು ಏನಂದಾರ -
 
   "ಹಳ್ಳೂರ ಶರಣರಿಗೂ ಕಾಯಿ ಕೊಟ್ಟಿವಿ. ಆರಾಮ ಇಲ್ಲ ಅಂತ ನಮ್ಮ ಭಜನಾದವರು ಅಂದಾರ. "

    "ಎಲ್ಲ ದಾನ ವಸಂತ ಅಂತ ಅಂತ ಅಲ್ಲಿ ಬಂದವರು ಕೇಳಿಯಾರ, ಹಿಂಗ ಇಂತಲ್ಲಿ ಅದಾನ. "

       ಬಾವುರ್ ಮಂದಿಗೆ " ಏನು ಮಂದಪ್ಪ ? ಅಲ್ಲ ಹಿಂತಿಂತಾ ಮಂದಿ ಕೂಡ್ಯಾರ.. ಹಾಡು ತಾಕತ್ತು ಅವ್ನ್ ಬಿಟ್ರ ಇವರಿಗೆ ಐತೇನ್ರಿ ? ಅಂದಾ ಸಿಟ್ಟಿಗೆರಿ ಹುಸೇನಪ್ಪಾ ಎಲ್ಲರಿಗೂ ಬೈದಾನ್ರಿ” 

        ಹಿಂದುಗಡೆ ನನಗೊಬ್ಬ ಜೋಡು ಮಾಡ್ರಿ ನಾನು ಕರ್ಕೊಂಡು ಬರ್ತೀನಿ ಅಂದಾನ. ಬಳಗಾನೂರ ಹಾಗೂ ಸಮೀಪ  ಬಹಳ ಅಂದ್ರೆ ಮೂರು ಕಿಲೋಮೀಟರ್ ಆಗಬಹುದು. ಒಂದು ಸೈಕಲ್ ಜುಡಾವು ಮಾಡಿಕೊಟ್ಟರು. ಆ ಸೈಕಲ್ ತಗೊಂಡು ಇನ್ನೊಬ್ಬರಿಗೆ ಜೋಡ್ ಮಾಡಿಕೊಂಡು ನನಗೆ ಕರೆಯಾಕ್ ರಾಥೋರಾತ್ರಿ ಬಂದ್ರು. ನಾನು ಹೊರಗ ಕಟ್ಟಿ ಮ್ಯಾಗ್ ಮಲಗಿದ್ದೆ. ರಾತ್ರಿ ಎದ್ದು ಕಾಲ್ ಮಡದು ಕುಂದ್ರುಕ ನನ್ನ ಕರೀಲಕ್ ಬಂದ್ಬಿಟ್ರು. "

      "ಅಬ್ಬಬ್ಬಾ.... ಯಾಕ್ ಬಂದ್ರಪ್ಪ ಅಂದೆ, ಏನ್ರೀ 

ಕಂಡಾಪಟ್ಟಿ ಭಜನಾದವರೂ ಕೂಡ್ಯಾರ.. ಆ ಹುಸನಪ್ಪಣ್ಣ ಬೈಕ್ ಹತ್ತಿ ಬೈಲಿಕ್ಕೆ ಹತ್ಯಾನಂದ ಹೇಳಿದರು. “

     " ಆತು ನಡಿರಪ್ಪ ಅಂತ ಅಂಗಿ ಹಾಕೊಂಡು ತಯಾರಾದನಿರೀ.  ನನಗೆ ಸೈಕಲ್ ಹೊಡೆಯೋಕೆ ಬರುವುದಿಲ್ಲ. ಮ್ಯಾಲ ಕುಂದ್ರಲಕ್ಕೂ ಬರೂದಿಲ್ಲ. ಅಲ್ಲಿ ನೋಡುತ್ತೀರಾ ದಾರಿಯಾಗ ಮಳೆ ಬಂದು ಹೆಸರು ತುಂಬಿಕೊಂಡು ಬಿಟ್ಟದ . ಎಲ್ಲಿ ಬೇಕಲ್ಲಿ ದಾರಿ ಒಳಗೆ ಕುಣಚಿ (ತಗ್ಗಲು)ಬಿದ್ದು ಬಿಟ್ಟಾವು "

      "ನನಗೆ ನಡೆಯುವುದು ಆಗುವುದಿಲ್ಲ ಅಂತ ಹಂಗ ಹಿಂಗ ಮಾಡಿ ಸೈಕಲ್ ಮೇಲೆ ಕುಂದರಿಸಿದ್ರು ಒಬ್ಬವ ಸೈಕಲ್ ಮುಂದೆ ಹಿಡ್ಕೊಂಡ. ಇನ್ನೊಬ್ಬ ಸೈಕಲ್ ಹಿಂದ ಒತ್ತಾಕ್ಕ ಹತ್ತಿದ. ನಾ ಸೈಕಲ್ ನಡುವೆ ಕುಂತೆ . ಬಳಗಾನೂರ ಸಮೀಪದ ಒಂದು ಹಳ್ಳ ಆದ .. ಕೂಚಬಾಳ ರಸ್ತಾದ ಮುಂದೆ ಬರ್ತದ.ಆ ಹಳ್ಳದಾಗ ಹಾದು ಹೋದೆವು. ಆವಾಗ ಯಾಳವಾರ ಎಲ್ಲಪ್ಪ ಮಹಾರಾಜರು ಬಜನಾಪದ ಹಾಡಕ್ ಹತ್ತಿದ್ರು - "

“ಅಂತ ಮದುವೆ ಮಾಡ್ಕೊಂಡೆ ಕೇಳಿರಯ್ಯ
ಈ ಹಂದರದಾಗ ಬಂದವರೆಲ್ಲ ಬರೀ ಬೋಳೆರಕ್ಕಯ್ಯ
ನನ್ನ ಮದುವೆ ಸಡಗರ ನೋಡ್ರವ್ವ
ನಾ ಎಂಥಾ ಮದುವಿ ಮಾಡ್ಕೊಂಡಿನಿ
ಮತ್ತು ನನ್ನ ಮದುವೆಗೆ ಹೆಂತವರು ಬಂದಿದ್ದರು ಅಂದ್ರ
ಕುಡುಕರು ಕುಂಟರು ತೋಂಟರು 8 ಮಂದಿ ಬೀಗರು ಬಂದಾರಕೈಯ …
ಸೊಂಟ ಮುರುಕ ಬೀಗ ಬೀಗತಿ ಹೊರಗ ನಿಂತಾರಕೈಯ ..
ಸುಂಟರಗಾಳಿ ಬಂದ ಮನೆಗೆ ಬೆಂಕಿ ಹತ್ತಿಯ ಹತ್ತಿ ತ್ತಕ್ಕಯ್ಯ …
ನನ್ನ ಮದುವೆಸಡಗರ ಕೇಳ್ರವ್ವ ಅಂತ ಅನ್ನಾವ ಮತ್ತು ಹಾಡಾವಾ….”

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.