Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಭಾವಾಂತರ REVIEW…!!
- ರಿವ್ಯೂ - ಸಿನಿಮಾ

ಭಾವಾಂತರ REVIEW…!!

ಭಾವಾಂತರ ರಿವ್ಯೂ ರೇಟಿಂಗ್ : 3.5 / 5 ಚಿತ್ರ : ಭಾವಾಂತರ ನಿರ್ದೇಶನ : ಕಾರ್ತಿಕ್ ಶರ್ಮಾ ಕಲಾವಿದರು: ತನ್ವೀ ರಾವ್,,ಪ್ರಣವ್ ಶ್ರೀಧರ್,,ಶ್ರೀ ವೈಷ್ಣವ..ವೇದಾ ರಾವ್..ಕಾರ್ತಿಕ್ ಶರ್ಮಾ,, ___________________________________ ರಾಧಾ ( ತನ್ವಿ ರಾವ್ ) ದೊಡ್ಡ ಕನಸು ಕಾಣೋ ಹುಡುಗಿ, ತುಂಬಾ ಒಳ್ಳೆಯ ಡಾನ್ಸರ್, ವೃತ್ತಿಯಲ್ಲಿ ಈಕೆ ಡಾಕ್ಯುಮೆಂಟರಿ ನಿರ್ದೇಶಕಿ,ಕಲೆಯನ್ನ ಪ್ರೀತಿಸಬೇಕು.ತುಂಬಾ ಒಳ್ಳೆಯ ಪ್ರಾಜೆಕ್ಟ್ಗಳನ್ನ ಮಾಡಬೇಕು ಎಂಬ ಮಹದಾಸೆಯಲ್ಲಿ ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡು,ಕಂಟೆಂಟ್ ರೈಟರ್, ಛಾಯಾಗ್ರಾಹಕ, ಸಹಾಯಕೀ ಸೇರಿದಂತೆ ಈ ಎಲ್ಲರ […]

ಭಾವಾಂತರ ರಿವ್ಯೂ

ರೇಟಿಂಗ್ : 3.5 / 5

ಚಿತ್ರ : ಭಾವಾಂತರ

ನಿರ್ದೇಶನ : ಕಾರ್ತಿಕ್ ಶರ್ಮಾ

ಕಲಾವಿದರು: ತನ್ವೀ ರಾವ್,,ಪ್ರಣವ್ ಶ್ರೀಧರ್,,ಶ್ರೀ ವೈಷ್ಣವ..ವೇದಾ ರಾವ್..ಕಾರ್ತಿಕ್ ಶರ್ಮಾ,,

___________________________________

ರಾಧಾ ( ತನ್ವಿ ರಾವ್ ) ದೊಡ್ಡ ಕನಸು ಕಾಣೋ ಹುಡುಗಿ, ತುಂಬಾ ಒಳ್ಳೆಯ ಡಾನ್ಸರ್, ವೃತ್ತಿಯಲ್ಲಿ ಈಕೆ ಡಾಕ್ಯುಮೆಂಟರಿ ನಿರ್ದೇಶಕಿ,ಕಲೆಯನ್ನ ಪ್ರೀತಿಸಬೇಕು.ತುಂಬಾ ಒಳ್ಳೆಯ ಪ್ರಾಜೆಕ್ಟ್ಗಳನ್ನ ಮಾಡಬೇಕು ಎಂಬ ಮಹದಾಸೆಯಲ್ಲಿ ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡು,ಕಂಟೆಂಟ್ ರೈಟರ್, ಛಾಯಾಗ್ರಾಹಕ, ಸಹಾಯಕೀ ಸೇರಿದಂತೆ ಈ ಎಲ್ಲರ ಸಹಾಯದೊಂದಿಗೆ ಲೈಫ್ನಲ್ಲಿ ಮೂವ್ ಆಗ್ತಾ ಇರ್ತಾಳೆ.

ರಾಧಾಳ ಜೊತೆ ಕೆಲಸ ಮಾಡುವ ಅಭಿಗೆ ( ಪ್ರಣವ್ ಶ್ರೀಧರ್ ) ರಾಧಾಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಒಂಥರಾ ಕಾಳಜಿ ವಿಶೇಷವಾದ ಆಸಕ್ತಿ, ಇದನ್ನು ಗಮನಿಸುವ ರಾಧಾ,ತನಗೆ ಪ್ರೀತಿ ಪ್ರೇಮ ಇದೆಲ್ಲದರ ಮೇಲೆ ಆಸಕ್ತಿ ಇಲ್ಲ ಎಂಬ ಉತ್ತರ.

ಇದರ ನಡುವೆಯೇ ರಾಧಾಳ ತಾಯಿಗೆ, ಮಗಳು ಮದುವೆಯಾಗಬೇಕು ಚೆನ್ನಾಗಿರಬೇಕು ಎಂಬ ಆತಂಕ,ಮದುವೆಯನ್ನು ನಯವಾಗಿಯೇ ತಿರಸ್ಕರಿಸುವ ರಾಧಾ.

ರಾಧಾ ಯಾವ ಕಾರಣಕ್ಕೆ ಮದುವೆಯನ್ನ ತಿರಸ್ಕರಿಸುತ್ತಾಳೆ, ಎಂಬುದಕ್ಕೆ ಒಂದು ಗಟ್ಟಿಯಾದ ಫ್ಲಾಶ್ ಬ್ಯಾಕ್ ಇದೆ ಅದೇ ಚಿತ್ರದ ಪ್ರಮುಖ ಹೈಲೈಟ್.

ತಾನು ಒಪ್ಪಿಕೊಂಡಿದ್ದ ಡಾಕ್ಯುಮೆಂಟರಿ ಪ್ರಾಜೆಕ್ಟ್ ಮುಗಿದ ಮೇಲೆ ಹೊಸದೊಂದು ಪ್ರಾಜೆಕ್ಟ್ ಮಾಡೋಣ ಎಂಬ ಚರ್ಚೆಯಲ್ಲಿ ಸಹೋದ್ಯೋಗಿ ಅಭಿ ಕೊಟ್ಟ ಸಲಹೆ ಪ್ರಕಾರ,
ಮಂಗಳಮುಖಿಯರ ಜೀವನ ಕುರಿತಾದ ಸಂದರ್ಶನ ಸಹಿತ ಡಾಕ್ಯುಮೆಂಟರಿ ಮಾಡೋಣ ಎಂಬ ಮಾತಿಗೆ ಮೊದಲು ಒಪ್ಪದ ರಾಧಾ ನಂತರ ಒಪ್ಪಿಕೊಂಡು, ಕರ್ನಾಟಕದಿಂದ ಬೇರೊಂದು ರಾಜ್ಯ ತಮಿಳುನಾಡಿನತ್ತ ಪ್ರಯಾಣ ಬೆಳೆಸುತ್ತಾರೆ.

ತಮಿಳುನಾಡಿನ ಒಂದು ಊರಿನಲ್ಲಿ ಕೆಲವು ಮಂಗಳಮುಖಿಯರನ್ನ ಸಂದರ್ಶನ ಮಾಡಿ,
ಇನ್ನೇನು ತಾವು ಅಂದುಕೊಂಡ ಕೆಲಸ ಆಯ್ತು ಎಂದು ವಾಪಸ್ ಹೊರಡುವ ಸಮಯದಲ್ಲಿ,ರಾಧಾಳ ಕಣ್ಣಿಗೆ ಮಾಧವಿ ಎಂಬ ವ್ಯಕ್ತಿ ಕಾಣಿಸುತ್ತಾರೆ.

ಇಲ್ಲಿಂದ
ಭಾವಾಂತರ ಚಿತ್ರದ ಕಥೆಯ ಸ್ವರೂಪವೇ ಬದಲಾಗಿ ಹೋಗುತ್ತದೆ, ಅಷ್ಟೇ ಯಾಕೆ ಮೊದಲ ದೃಶ್ಯದಿಂದ ಇಲ್ಲಿಯ ತನಕ ವೀಕ್ಷಕರ ನೋಡಿದ ಸಿನಿಮಾ ಕಥೆ, ಸಂಪೂರ್ಣವಾಗಿ ಬದಲಾಗಿ ಭಾವನಾತ್ಮಕ ಲೋಕಕ್ಕೆ ಎಲ್ಲರನ್ನ ಕರೆದೊಯ್ಯುತ್ತದೆ.

ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ನಿರ್ದೇಶಕ ಕಾರ್ತಿಕ್ ಶರ್ಮಾ ಮಾಡಿದ ಪಾತ್ರ.

ಕಾರ್ತಿಕ್ ಶರ್ಮಾ ಮಾಡಿದ ಪಾತ್ರವೇನು ??

ತಮಿಳುನಾಡಿನ ಆ ಊರಿನಲ್ಲಿ ಯಾಕೆ ಅಷ್ಟು ಜನ ಮಂಗಳಮುಖಿಯರು ಇದ್ದರು ??

ರಾಧಾಳ ಹಿನ್ನಲೆ ಏನು ??

ಅಭಿ ಜೊತೆಗೆ ರಾಧಾಳ ಮದುವೆ ಆಗುತ್ತದೆಯೋ ಇಲ್ಲವೋ ??

ಅಷ್ಟಕ್ಕೂ ಆ ಮಂಗಳಮುಖಿ ಮಾಧವಿ ಯಾರು ??

ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ “ಭಾವಾಂತರ” ಚಿತ್ರ ಕೊಡುತ್ತದೆ

ನಾಯಕಿಯಾಗಿ ನಟಿಸಿದ ತನ್ವೀರಾವ್ ಮೊದಲ ಪ್ರೇಮದಿಂದ ಕೊನೆಯ ಪ್ರೇಮ್ ತನಕ ಎಲ್ಲರನ್ನ, ತಮ್ಮ ನಟನೆಯಿಂದ ಹಿಡಿದಿಟ್ಟುಕೊಳ್ಳುತ್ತಾರೆ, ಹಾಗೆ ಶನಿ ಧಾರಾವಾಹಿ ಖ್ಯಾತಿಯ ಪ್ರಣವೂ ಕೂಡ ಇಷ್ಟವಾಗುತ್ತಾರೆ, ಇನ್ನು ನಿರ್ದೇಶಕ ಕಾರ್ತಿಕ್ ಶರ್ಮ ಮಾಡಿದ ಪಾತ್ರದ ಹೆಸರನ್ನು ನಾನು ಹೇಳಲಾರೆ, ಕಾರ್ತಿಕ್ ಶರ್ಮಾ ಅಭಿನಯಕ್ಕೆ ಭೇಷ್ ಎನ್ನಬಹುದು.

ಚಿತ್ರದ ಮಧ್ಯ ಬರುವಂತಹ ಒಂದು ಸೋಲೋ ನೃತ್ಯದಲ್ಲಿ ತನ್ವೀ ರಾವ್ ಸಿಂಗಲ್ ಟೇಕ್ನ ಆ ಶಾರ್ಟಲ್ಲಿ ಅಭಿನಯಿಸಿದ್ದು ಗ್ರೇಟ್,

ಒಂದು ವಿಶೇಷವಾದ ಕಥೆಯೊಂದಿಗೆ ಬಂದಂತಹ ಭಾವಾಂತರ ಚಿತ್ರ ಒಂದೊಳ್ಳೆಯ ಅಟ್ಟೆಂಪ್ಟ್ ಎನ್ನಬಹುದು.

ನಿರ್ದೇಶನ ಸೇರಿದಂತೆ ಎಲ್ಲ ತಂತ್ರಜ್ಞರ ಕೆಲಸ ಹಾಗೂ ಎಲ್ಲ ಕಲಾವಿದರ ಅಭಿನಯ ನ್ಯಾಯಬದ್ಧವಾಗಿದೆ.

ಭಾವಾಂತರ ಚಿತ್ರವನ್ನ ಒಮ್ಮೆ,ಕೂಲ್ ಆಗಿ ನೋಡಬಹುದು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.