ರಜನಿ – ಕಮಲ್ ಜೊತೆಗೆ, “ಶ್ರೀಲೀಲಾ ಧರ್ಮನ್”
ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಧರ್ಮನ್’ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಪ್ರಮುಖ ಪಾತ್ರಕ್ಕಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ. ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಹಾಗೂ ಟರ್ಮರಿಕ್ ಮೀಡಿಯಾ ಬ್ಯಾನರ್‌ಗಳ ಅಡಿಯಲ್ಲಿ ಕಮಲ್ ಹಾಸನ್ ಮತ್ತು ಆರ್. […]









