Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ದೇವರು ಸೃಷ್ಟಿ ಮಾಡಿದ ಸುಂದರ ಹೂದೂಟವೇ ಈ ಪ್ರಪಂಚ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ದೇವರು ಸೃಷ್ಟಿ ಮಾಡಿದ ಸುಂದರ ಹೂದೂಟವೇ ಈ ಪ್ರಪಂಚ

ಪ್ರಪಂಚ ವಿಶಾಲವಾಗಿದೆ, ಪ್ರಪಂಚದ ತುಂಬೆಲ್ಲ ಲೆಕ್ಕ ಸಿಗದಷ್ಟು ಭಾಷೆಗಳಿವೆ,ಕಲೆ ಸಂಸ್ಕೃತಿ ಆಚಾರ ವಿಚಾರ ಧರ್ಮ ಆಧ್ಯಾತ್ಮ, ಹೀಗೆ ನಾನಾ ಬಗೆಯ ವಿಷಯಗಳು ನಮ್ಮ ಕಣ್ಣಿಗೆ ಕಾಣುತ್ತವೆ, ಅದೇ ರೀತಿಯಾಗಿ ನಾನಾ ಬಗೆಯ ತಿಂಡಿ ತಿನಿಸುಗಳು ನಮಗೆ ಕಾಣಿಸುತ್ತದೆ,ಚಿತ್ರ ವಿಚಿತ್ರವಾದಂತಹ ಜನರು ನಮ್ಮ ಕಣ್ಣೆದುರು ಗೋಚರಿಸುತ್ತಾರೆ.. ದೇಶ ಯಾವುದೇ ಆಗಿರಲಿ, ಪ್ರಾಂತ್ಯ ಯಾವುದೇ ಆಗಿರಲಿ, ವಲಯ ಯಾವುದೇ ಆಗಿರಲಿ, ಎಲ್ಲ ಕಡೆಯ ಆಯಾ ನೆಲೆಗಟ್ಟಿನ ಒಂದು ಗಟ್ಟಿ ಅಸ್ತಿತ್ವದ ಸಂಕೇತವೇ ಧರ್ಮ.. ಧರ್ಮ ಎಂದರೆ ಅದೊಂದು ಅನುಭವ, ಅದೊಂದು […]

ಪ್ರಪಂಚ ವಿಶಾಲವಾಗಿದೆ, ಪ್ರಪಂಚದ ತುಂಬೆಲ್ಲ ಲೆಕ್ಕ ಸಿಗದಷ್ಟು ಭಾಷೆಗಳಿವೆ,ಕಲೆ ಸಂಸ್ಕೃತಿ ಆಚಾರ ವಿಚಾರ ಧರ್ಮ ಆಧ್ಯಾತ್ಮ, ಹೀಗೆ ನಾನಾ ಬಗೆಯ ವಿಷಯಗಳು ನಮ್ಮ ಕಣ್ಣಿಗೆ ಕಾಣುತ್ತವೆ, ಅದೇ ರೀತಿಯಾಗಿ ನಾನಾ ಬಗೆಯ ತಿಂಡಿ ತಿನಿಸುಗಳು ನಮಗೆ ಕಾಣಿಸುತ್ತದೆ,ಚಿತ್ರ ವಿಚಿತ್ರವಾದಂತಹ ಜನರು ನಮ್ಮ ಕಣ್ಣೆದುರು ಗೋಚರಿಸುತ್ತಾರೆ..

ದೇಶ ಯಾವುದೇ ಆಗಿರಲಿ, ಪ್ರಾಂತ್ಯ ಯಾವುದೇ ಆಗಿರಲಿ, ವಲಯ ಯಾವುದೇ ಆಗಿರಲಿ, ಎಲ್ಲ ಕಡೆಯ ಆಯಾ ನೆಲೆಗಟ್ಟಿನ ಒಂದು ಗಟ್ಟಿ ಅಸ್ತಿತ್ವದ ಸಂಕೇತವೇ ಧರ್ಮ..

ಧರ್ಮ ಎಂದರೆ ಅದೊಂದು ಅನುಭವ, ಅದೊಂದು ಅನುಭೂತಿ, ಅದೊಂದು ಅಸ್ತಿತ್ವ, ಅದೊಂದು ಅಸ್ಮಿತೆ, ಅದೊಂದು ಭಾವನಾಲೋಕ,
ಅಷ್ಟೇ ಅಲ್ಲದೆ ಧರ್ಮ ಎಂದರೆ ನಮ್ಮೆಲ್ಲರನ್ನು ರಕ್ಷಿಸಲು ನಿಂತ ಪ್ರಪಂಚದ ಅತ್ಯಂತ ಗಟ್ಟಿಯಾದ ಶ್ರೇಷ್ಠವಾದ ಆಯುಧ ಎಂದರೆ ತಪ್ಪಿಲ್ಲ,.


ಅದರಲ್ಲಿ ವಿಶೇಷವಾಗಿ ಹಿಂದೂ ಸನಾತನ ಧರ್ಮ ಎಂದರೆ ಮೈಮನ ಜುಮ್ ಎನ್ನುತ್ತದೆ, ಮೈ ನವಿರೆಳುತ್ತದೆ, ಪ್ರತಿಯೊಬ್ಬ
ಭಾರತೀಯರ ರಕ್ತದ ಕಣ ಕಣದಲ್ಲೂ ಧರ್ಮದ ಜಾಗೃತಿ ಮೂಡುತ್ತದೆ, ಧರ್ಮಕ್ಕಾಗಿ ತೊಡೆತಟ್ಟಿ ನಿಲ್ಲುವ, ಆಶಾ ಭಾವನೆ ಮೂಡುತ್ತದೆ ಅದುವೇ ಭಾರತೀಯ ಸನಾತನ ಧರ್ಮ ಇರುವ ಶ್ರೇಷ್ಠ ಶಕ್ತಿ..

ಭಾರತ ಎಂದರೆ ಶ್ರೀರಾಮ, ಭಾರತ ಎಂದರೆ ಶ್ರೀ ಕೃಷ್ಣ, ಭಾರತ ಎಂದರೆ ಸಿಂಧೂ ನದಿ,ಭಾರತ ಎಂದರೆ ಪರಮ ಪವಿತ್ರ ಅನುಭವ..ಭಾರತ ಒಂದು ಜಾತ್ಯಾತೀತ ರಾಷ್ಟ್ರ, ಇಡೀ ಪ್ರಪಂಚಕ್ಕೆ ವಿಶ್ವ ಗುರುವಾಗಿ ನಿಂತಿರುವ ಹೆಮ್ಮೆ ನಮ್ಮ ಭಾರತದ್ದು, ಮತ್ತು ನಮ್ಮ ಭಾರತೀಯರದ್ದು,

ನಮ್ಮ ಪರಮ ಪವಿತ್ರ ಭರತ ಭೂಮಿಯ ಇತಿಹಾಸದಲ್ಲಿ, ಶ್ರೀರಾಮ ಸೀತೆಯಿದ್ದಾರೆ, ಕೃಷ್ಣನಿದ್ದಾನೆ, ಹನುಮ ಭೀಮರಿದ್ದಾರೆ,ಅಲ್ಲಮ ಪ್ರಭುದೇವರು,ಭಗವಾನ್ ಬುದ್ಧ,ಶಂಕರರು, ರಮಾನುಜರು, ಮಧ್ವಾಚಾರ್ಯರು, ಪೈಗಂಬರರು,ಏಸು ಕ್ರಿಸ್ತರು,ರಾಘವೇಂದ್ರ ಸ್ವಾಮಿಗಳು ಇವರೆಲ್ಲರ ಶಾಶ್ವತ ಇರುವಿಕೆಯಿಂದ,
ಭಾರತೀಯರ ಆಧ್ಯಾತ್ಮ ಚಿಂತನೆ ಮೇರು ಪರ್ವತದಂತೆ ಇರುತ್ತಿದೆ ಅದು ಎಂದಿಗೂ ಇಳಿಯುವುದಿಲ್ಲ

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.