Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಭಾರತೀಯ” ಚಿತ್ರರಂಗದಲ್ಲೇ “ಮೊದಲು”
- ಸಿನಿಮಾ

“ಭಾರತೀಯ” ಚಿತ್ರರಂಗದಲ್ಲೇ “ಮೊದಲು”

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು! ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರೆಗ್ಯುಲರ್‌ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್‌ಗೆ ಪ್ರಮುಖ ಪಾತ್ರ ನೀಡಿ ಚಿತ್ರೀಕರಿಸಿರುವುದು […]

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು!

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರೆಗ್ಯುಲರ್‌ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್‌ಗೆ ಪ್ರಮುಖ ಪಾತ್ರ ನೀಡಿ ಚಿತ್ರೀಕರಿಸಿರುವುದು ಈ ಸಿನಿಮಾದ ಹೆಗ್ಗಳಿಕೆಯಾಗಿದೆ. ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರವು ಇದೇ ನವೆಂಬರ್ 13ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

ಈ ವೈಜ್ಞಾನಿಕ ಕಥೆಗೆ ಜೀವ ತುಂಬಲು ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆ ‘ಮಚಾನಿ ರೋಬೋಟಿಕ್ಸ್’ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’ಳನ್ನು ಬಳಸಿಕೊಳ್ಳಲಾಗಿದೆ. ಯಾವುದೇ ಡಿಜಿಟಲ್ ಎಫೆಕ್ಟ್ಸ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್‌ನ ಹಂಗಿಲ್ಲದೆ, ಜಿಯಾ ನೇರವಾಗಿ ಚಿತ್ರೀಕರಣದ ಸೆಟ್‌ನಲ್ಲೇ ರಿಯಲ್‌ ಟೈಮ್‌ನಲ್ಲೇ ಪಾತ್ರ ನಿರ್ವಹಿಸಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನವು ನಟನಾ ಕ್ಷೇತ್ರವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಪ್ರಯೋಗ ಸಾಕ್ಷಿಯಾಗಿದೆ.

ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುವ ‘ಲಂಬೋದರ 2.0’ ಇಂದಿನ ಆನ್‌ಲೈನ್ ಬದುಕಿನ ಸಂಕೀರ್ಣ ಮುಖಗಳನ್ನು ಅನಾವರಣಗೊಳಿಸುವ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಆಗಿದೆ. ಸದಾ ಸ್ಕ್ರೀನ್ ಟೈಮ್‌ನಲ್ಲಿ ಮುಳುಗಿರುವ, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಅದೃಶ್ಯ ಡಿಜಿಟಲ್ ಕಣ್ಗಾವಲಿನಲ್ಲಿ ಸಿಲುಕಿರುವ ಇಂದಿನ ಡಿಜಿಟಲ್ ಜಗತ್ತಿನ ಹಾಗೂಜೀವನದಲ್ಲಿನ ಸಂತೋಷದ ಮಹತ್ವ ಎದುರಿಸುವ ಮಾನಸಿಕ ತುಮುಲಗಳ ಸುತ್ತ ಕಥೆ ಹೆಣೆಯಲಾಗಿದೆ.

ಜೊತೆಗೆ ‘ರಂಗ್ ದೇ ಬಸಂತಿ’, ‘ಡಾನ್ 2’ ಖ್ಯಾತಿಯ ಬಾಲಿವುಡ್ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಪಾತ್ರವೇ ಕಥೆಗೆ ದೊಡ್ಡ ತಿರುವು ನೀಡಲಿದೆ. ಮೇಘನಾ ಗಾವಂಕರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ರಹಸ್ಯವಾಗಿರುವ ಕೃಷ್ಣನ ಪಾತ್ರವೊಂದಿದ್ದು, ಅದರ ಸುತ್ತ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ. ಬಾಲಿವುಡ್‌ನ ಖ್ಯಾತ ಮಹಾವೀರ್ ಜೈನ್ ಫಿಲಮ್ಸ್ ಈ ಸಿನಿಮಾಗೆ ಸಾಥ್ ನೀಡಿದ್ದು, ಕುತೂಹಲ ಕೆರಳಿಸಿರುವ ಟ್ರೇಲರ್ ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.