Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಅಣ್ಣ From ಮೆಕ್ಸಿಕೋ”
- ಸಿನಿಮಾ

“ಅಣ್ಣ From ಮೆಕ್ಸಿಕೋ”

ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಪವರ್‌ಫುಲ್ ಮಾಸ್ ಸಾಂಗ್ ರಿಲೀಸ್ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದಿರುವ ‘ಪುಟ್ಟಮಲ್ಲಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ ಸೂಪರ್ ಹಿಟ್ ಸಾಲಿಗೆ ಸೇರಿದೆ. ಇದರ ಬೆನ್ನಲ್ಲೇ ಚಿತ್ರತಂಡವೀಗ ಡಾಲಿ ಅಭಿಮಾನಿಗಳಿಗೆ ಭರ್ಜರಿ ಕಿಕ್ ಕೊಡುವಂತಹ ಹೈ-ವೋಲ್ಟೇಜ್ ಮಾಸ್ ಸಾಂಗ್ ಒಂದನ್ನು ರಿಲೀಸ್ ಮಾಡಿ […]

ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಪವರ್‌ಫುಲ್ ಮಾಸ್ ಸಾಂಗ್ ರಿಲೀಸ್

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದಿರುವ ‘ಪುಟ್ಟಮಲ್ಲಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ ಸೂಪರ್ ಹಿಟ್ ಸಾಲಿಗೆ ಸೇರಿದೆ. ಇದರ ಬೆನ್ನಲ್ಲೇ ಚಿತ್ರತಂಡವೀಗ ಡಾಲಿ ಅಭಿಮಾನಿಗಳಿಗೆ ಭರ್ಜರಿ ಕಿಕ್ ಕೊಡುವಂತಹ ಹೈ-ವೋಲ್ಟೇಜ್ ಮಾಸ್ ಸಾಂಗ್ ಒಂದನ್ನು ರಿಲೀಸ್ ಮಾಡಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

“ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೇ, ಮಾಸ್ಟರು ಅಣ್ಣನೇ ಬ್ಲಾಸ್ಟರ್ರೂ ಅಣ್ಣನೇ, ಮಾರ್ನಿಂಗು ಅಣ್ಣನೇ ಇವ್ನಿಂಗ್‌ ಅಣ್ಣನೇ…” ಎಂಬ ಹುಚ್ಚೆದ್ದು ಕುಣಿಯುವ ಸಾಲುಗಳ ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಪ್ರತಿಭಾವಂತ ಸಾಹಿತಿ ನಾಗಾರ್ಜುನ್ ಶರ್ಮಾ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಜನಪ್ರಿಯ ಗಾಯಕರಾದ ಆಂಟೋನಿ ದಾಸನ್ ಮತ್ತು ನಕಾಶ್ ಅಜೀಜ್ ತಮ್ಮ ವಿಶಿಷ್ಟ ಕಂಠಸಿರಿಯಲ್ಲಿ ಹಾಡಿ ಜೀವ ತುಂಬಿದ್ದಾರೆ. ಯುವ ಸಂಗೀತ ಮಾಂತ್ರಿಕ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಮಾಸ್ ಬೀಟ್‌ಗಳ ಮೂಲಕ ಸಿನಿರಸಿಕರನ್ನು ತಲೆದೂಗುವಂತೆ ಮಾಡಿದ್ದಾರೆ.

ಈ ಚಿತ್ರಕ್ಕೆ ಪ್ರತಿಭಾವಂತ ನಿರ್ದೇಶಕ ಶಂಕರ್ ಗುರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ‘ಬಡವ ರಾಸ್ಕಲ್’ ಚಿತ್ರದ ಯಶಸ್ವಿ ಕಾಂಬಿನೇಷನ್ ಆದ ಡಾಲಿ ಮತ್ತು ಶಂಕರ್ ಗುರು ಮತ್ತೊಮ್ಮೆ ಒಂದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ಚಿತ್ರದಲ್ಲಿ ಧನಂಜಯ್ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಉಳಿದಂತೆ ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಗಣವೇ ಸಾಥ್ ನೀಡಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಚಿತ್ರಕ್ಕಿದೆ.

ಐರಾ ಫಿಲಂಸ್ ಮತ್ತು ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಹಾಗೂ ಜಾನ್ವಿ ರಾಯಲ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಎ ಜೆ ಶೆಟ್ಟಿ ಮತ್ತು ಎಸ್. ಕೆ. ರಾವ್ ಛಾಯಾಗ್ರಹಣ ಮಾಡಿದ್ದು, ನಿರಂಜನ್ ದೇವರಮನೆ ಹಾಗೂ ಅಜಯ್ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮಾಸ್ ಅವತಾರದಲ್ಲಿ ಮಿಂಚುತ್ತಿರುವ ಡಾಲಿ ಧನಂಜಯ್ ಅವರ ಈ ಹೊಸ ಹಾಡು ಅಭಿಮಾನಿಗಳ ವಲಯದಲ್ಲಿ ಸಂಚಲನ ಮೂಡಿಸಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಡಿಸೆಂಬರ್‌ 24ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.