Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸುಂಟರ ಗಾಳಿಗೆ ಸಿಗದೆ…..
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಸುಂಟರ ಗಾಳಿಗೆ ಸಿಗದೆ…..

ಎಂಟು ಗುಣಗಳು ತೊಳೆದು ಕುಂತಾತನೋಎಂಟು ಗುಣಗಳು ತೊಳೆದು ಕುಂತಾತನೋಸುಂಟರ ಗಾಳಿಗೆ ಸಿಗದೆ ಲೋಕದಾಸುಂಟರ ಗಾಳಿಗೆ ಸಿಗದೆ ಲೋಕದಾಸಂತಸದೊಳಗ ಕಾಲನಿಡದಸಂತಸದೊಳಗ ಕಾಲನಿಡದಸಾಧು ನೋಡಲು ಇವನು ಸಾಧು ನೋಡಲುಸಾಧು ನೋಡಲು ಇವನು ಸಾಧು ನೋಡಲು II ಆಸೆಯನಳಿದು ಕರ್ಮಪಾಶ ಕಳೆದನುಆಸೆಯನಳಿದು ಕರ್ಮಪಾಶ ಕಳೆದನುವಸುಮತಿಗೆ ನೆಲ ಗುಡ್ಡದಿ ನೆಲೆಸಿಹವಸುಮತಿಗೆ ನೆಲ ಗುಡ್ಡದಿ ನೆಲೆಸಿಹಆತುರ ಶಿಶುವಿನಾಳದೀಶಗೊಲಿದಆತುರ ಶಿಶುವಿನಾಳದೀಶಗೊಲಿದ ಸಾಧು ನೋಡಲು ಇವನು ಸಾಧು ನೋಡಲುಸಾಧು ನೋಡಲು ಇವನು ಸಾಧು ನೋಡಲು II ಪ II ಆಶೀರ್ವಾದ ಮಾಡಿ ಕಾಯಿ ಕೊಡಪ್ಪ ಅಂತ ಕೇಳಿದರಂತೆ […]

ಎಂಟು ಗುಣಗಳು ತೊಳೆದು ಕುಂತಾತನೋ
ಎಂಟು ಗುಣಗಳು ತೊಳೆದು ಕುಂತಾತನೋ
ಸುಂಟರ ಗಾಳಿಗೆ ಸಿಗದೆ ಲೋಕದಾ
ಸುಂಟರ ಗಾಳಿಗೆ ಸಿಗದೆ ಲೋಕದಾ
ಸಂತಸದೊಳಗ ಕಾಲನಿಡದ
ಸಂತಸದೊಳಗ ಕಾಲನಿಡದ
ಸಾಧು ನೋಡಲು ಇವನು ಸಾಧು ನೋಡಲು
ಸಾಧು ನೋಡಲು ಇವನು ಸಾಧು ನೋಡಲು II

ಆಸೆಯನಳಿದು ಕರ್ಮಪಾಶ ಕಳೆದನು
ಆಸೆಯನಳಿದು ಕರ್ಮಪಾಶ ಕಳೆದನು
ವಸುಮತಿಗೆ ನೆಲ ಗುಡ್ಡದಿ ನೆಲೆಸಿಹ
ವಸುಮತಿಗೆ ನೆಲ ಗುಡ್ಡದಿ ನೆಲೆಸಿಹ
ಆತುರ ಶಿಶುವಿನಾಳದೀಶಗೊಲಿದ
ಆತುರ ಶಿಶುವಿನಾಳದೀಶಗೊಲಿದ

ಸಾಧು ನೋಡಲು ಇವನು ಸಾಧು ನೋಡಲು
ಸಾಧು ನೋಡಲು ಇವನು ಸಾಧು ನೋಡಲು II ಪ II

ಆಶೀರ್ವಾದ ಮಾಡಿ ಕಾಯಿ ಕೊಡಪ್ಪ ಅಂತ ಕೇಳಿದರಂತೆ ಅದಕ್ಕೆ ಅವರು ಕಾಯಿ ಮೇಲೆ ಕೈ ಇಟ್ಟು
ಈ ಕಾಯಿ ತೊಗೊಳಪ್ಪ ಅಂದ್ರಂತೆ.
ಇಂಥ ಆಶೀರ್ವಾದ ಬ್ಯಾಡ ನನಗೆ.
ಮತ್ತೆ ಹೆಂಗ್ ಮಾಡುವುದು?

ಕಾಯಿ ಒಳಗ ಏನೂ ಉಳಿಯ ಬಾರದು ಅಂದ್ರ ಕಾಯಿಯೊಳಗ ಖೊಬ್ರಿ ಉಳಿಬಾರದು, ನೀರೂ ಉಳಿಬಾರದು ಹಂಗ ಮಾಡಿ ಕೊಡು ಅಂದ್ರಂತ.
ಶರೀಫಾ ನೀ ದೇವಿ ಉಪಾಸಕಪಾ … ಅದು ನನಗಲ್ಲ ನಿನಗ ಸಾಧ್ಯಪಾ ಅಂದ್ರಂತ.

ಸಿದ್ಧಾರೂಢರು ಹೇಳಿದಾಂಗ ಶರೀಫ ಎರಡೂ ಕಾಯಿ ತಗೊಂಡ ಮ್ಯಾಲ ತೂರಿಬಿಟ್ಟಂತ . ಒಂದು ಕಾಯಿ ಹೋಗಿದ್ದು ಮೇಲೆಯೇ ಹೋಯ್ತು ಅದು ಹೊರಳಿ ಬರಲಿಲ್ಲ. ಇನ್ನೊಂದು ಕಾಯಿ ಮರಳಿ ಬಂದು ಕೆಳಗೆ ಬಿತ್ತು . ಅದನ್ನು ಒಡೆದು ನೋಡಿದರೆ ಅದರ ಒಳಗ ಕಾಯೀನು ಇಲ್ಲ ನೀರು ಇಲ್ಲ.

ಅಲ್ಲಿ ಕಂಡ ಪಟ್ಟಿ ಭಕ್ತ ಜನರು ಕುಂತಿದ್ರು ಈ ದೃಷ್ಟಾಂತವನ್ನು ಕಣ್ಣು ತುಂಬಿಕೊಳ್ಳಕತ್ತಿದ್ರು.ಇಬ್ಬರೂ ಸುಮ್ಮನಾಗಿ ಬಿಟ್ಟರು. ಸಿದ್ದಾರೂಢರು ಗಪ್ಪಾದರು ,ಶರೀಫರು ಗಪ್ಪಾದರು .

ಎಪ್ಪಾ ಇದು ಹೆಂಗ ? ಇಬ್ಬರು ಗಪ್ಪಾದ್ರಲ್ಲ. ಒಂದು ಕಾಯಿ ಬರಲೇ ಇಲ್ಲ, ಇನ್ನೊಂದು ನೋಡಿದ್ರ ಖೊಬ್ರಿನು ಇಲ್ಲ ನೀರು ಇಲ್ಲ ಹ್ಯಾಂಗಿದು ?

ಸಿದ್ಧಾರೂಢರು ಹೇಳ್ತಾರ- ಅದು ಕಾಯಿ ಹೆಂಗ ಸ್ವಚ್ಛದ ಅದೇ ತರಹ ಶರೀಫನು ಸ್ವಚ್ಛ ಅಧಾನ . ಮತ್ತ ಮ್ಯಾಲ ಹೋದ ಕಾಯಿ ಮರಳಿ ಬರ್ಲಿಲ್ಲ ಅದು ಹೆಂಗ್ರಿ ?
ಎಂದು ಕೇಳಲಾಗಿ ಸ್ವಾಮಿಗಳು ಹೇಳಿದರು –

ಇದು ಶರೀಷನ ಕಡೆ ಜನ್ಮ ಅದ.ಶರೀಫರ ಮರುಜನ್ಮವಿಲ್ಲ ಅಂದು ಆ ಪ್ರಸಂಗವನ್ನು ಬಿಡಿಸಿ ಹೇಳಿದರು.

ಹಂಗ ಕಾಯಿ ಬಂದಂಗ ನಾವು ಈ ಕಾಯಿ ಸಾರ್ಥಕ ಮಾಡಿಕೊಳ್ಳಬೇಕು. ಮತ್ತು ನಾವು ಅನ್ಯಾಯ ಅನೀತಿ, ಅಸೂಯೆ ಮಾಡಿದರೂ ಉಪಯೋಗವಿಲ್ಲ. ಅದಕ್ಕಾಗಿಯೇ ಶರೀಫರು ಏನ್ ಕೊಡ ಏನ್ ಕೊಡವ ಎಂದು ಪದವನ್ನು ಬರೆದು ಹಾಡಿದರು.

ಏನು ಕೊಡ ಏನು ಕೊಡವ್ವ ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ ll

ತಿಕ್ಕಿಲ್ಲ ಬೆಳಗಿಲ್ಲ ಥಳ ಥಳ ಹೊಳಿತದ
ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂಚುತದ
ತಿಕ್ಕಿಲ್ಲ ಬೆಳಗಿಲ್ಲ ಥಳ ಥಳ ಹೊಳಿತದ
ಕಂಚಲ್ಲ ತಾಮ್ರಲ್ಲ ಮಿರಿಮಿರಿ ಮಿಂಚುತದ ll

ಏನು ಕೊಡ ಏನು ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ

ಆರು ಮಂದಿ ಅಕ್ಕತಂಗಿಯರು
ಮೀರಿ ಮಿಂಚಿದ ಕೊಡ
ಆರು ಮಂದಿ ಅಕ್ಕತಂಗಿಯರು
ಮೀರಿ ಮಿಂಚಿದ ಕೊಡ
ಮೂರು ಮಂದಿ ಮುತ್ತೈದೆರು
ಲೋಲಾಡಿದ ಕೋಡ
ಮೂರು ಮಂದಿ ಮುತ್ತೈದೆರು
ಲೋಲಾಡಿದ ಕೋಡ ll

ಏನು ಕೊಡ ಏನು ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ ll

ಮಳ್ಳು ಬಜಾರದಲ್ಲಿ ಬಾಳಿ
ಹೋದಂತಹ ಕೊಡ
ಮಳ್ಳು ಬಜಾರದಲ್ಲಿ ಬಾಳಿ
ಹೋದಂತಹ ಕೊಡ
ಜರ್ರನೆ ಜಾರಿಬಿದ್ದು ಸಿಗದೆ
ಹೋತವ್ವ ಕೋಡ
ಜರ್ರನೆ ಜಾರಿಬಿದ್ದು ಸಿಗದೆ
ಹೋತವ್ವ ಕೋಡ ll

ಏನು ಕೊಡ ಏನು ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ. ll

ಶಿಶುನಾಳಧೀಶನೆ
ತಿದ್ದಿ ಮಾಡಿದ ಕೊಡ
ಶಿಶುನಾಳಧೀಶನೆ
ತಿದ್ದಿ ಮಾಡಿದ ಕೊಡ
ಬುದ್ಧಿವಂತರು ತಿಳಿದು
ನೋಡಬೇಕಾದ ಕೊಡ
ಬುದ್ಧಿವಂತರು ತಿಳಿದು
ನೋಡಬೇಕಾದ ಕೊಡ ll

ಏನು ಕೊಡ ಏನು ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ II

ಏನು ಕೊಡ ಏನು ಕೊಡವ್ವ
ಹುಬ್ಬಳ್ಳಿಮಾಟ ಎಂಥಾ
ಚೆಂದುಳ್ಳ ಕೊಡವ್ವ
ಹುಬ್ಬಳ್ಳಿಮಾಟ ಎಂಥಾ…
ಚೆಂದುಳ್ಳ ಕೊಡವ್ವ II

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.